ಕನ್ನಡ ಸುದ್ದಿ  /  Entertainment  /  Sandalwood News Crazy Star Ravichandran Son Vikram Mudhol Movie Update Sanjana Anand Heroine Pcp

ಕ್ರೇಜಿಸ್ಟಾರ್ ರವಿಚಂದ್ರನ್‌ ಮಗನ ಸಿನಿಮಾಕ್ಕೆ ಸಂಜನಾ ಆನಂದ್‌ ನಾಯಕಿ; ಮುಧೋಳ್ ಹೀರೋಯಿನ್‌ ಸಖತ್‌ ಬಿಝಿ

ಸ್ಯಾಂಡಲ್‌ವುಡ್‌ನ ಹೊಸ ಸಿನಿಮಾ ಮುಧೋಳ್‌ಗೆ ನಾಯಕಿಯಾಗಿ ಸಂಜನಾ ಆನಂದ್‌ ಆಯ್ಕೆಯಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್‌ ಮಗ ವಿಕ್ರಮ್‌ನ ಮುಂಬರುವ ಸಿನಿಮಾದಲ್ಲಿ ಸಂಜನಾ ನಟಿಸಲಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್‌ ಮಗನ ಸಿನಿಮಾಕ್ಕೆ ಸಂಜನಾ ಆನಂದ್‌ ನಾಯಕಿ
ಕ್ರೇಜಿಸ್ಟಾರ್ ರವಿಚಂದ್ರನ್‌ ಮಗನ ಸಿನಿಮಾಕ್ಕೆ ಸಂಜನಾ ಆನಂದ್‌ ನಾಯಕಿ

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್‌ ಮಗ ವಿಕ್ರಮ್‌ ನಟನೆಯ ಮುಧೋಳ್‌ ಸಿನಿಮಾ ತಂಡದಿಂದ ಹೊಸ ಅಪ್‌ಡೇಟ್‌ ಬಂದಿದೆ. ಸ್ಯಾಂಡಲ್ ವುಡ್ ನ್ಯೂ ಕ್ರಶ್ ಎನಿಸಿಕೊಂಡಿರುವ ಸಂಜನಾ ಆನಂದ್ ಈಗ ಮುಧೋಳ್ ಬಳಗ ಸೇರಿಕೊಂಡಿದ್ದಾರೆ. ಸಹಜ ಅಭಿನಯ, ಸರಳ‌ ಸೌಂದರ್ಯದಿಂದಲೇ ಸಿನಿಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಸಂಜನಾ ಎಂಟ್ರಿ ನೀಡಿದ್ದರು. ಈಗ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಬೇಡಿಕೆ ಪಡೆದುಕೊಂಡಿದ್ದಾರೆ.

ಸಂಜನಾ ಕಡಿಮೆ‌ ಅವಧಿಯಲ್ಲಿ ಸ್ಟಾರ್ ಹೀರೋ ಜೊತೆ ತೆರೆಹಂಚಿಕೊಳ್ಳುವ ಅವಕಾಶಗಿಟ್ಟಿಸಿಕೊಂಡರು. ದುನಿಯಾ ವಿಜಯ್ ಸಾರಥ್ಯದ‌ ಸಲಗ‌ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಈ ಬ್ಯೂಟಿ ಟಾಲಿವುಡ್ ಕೂಡ ಪ್ರವೇಶಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು ಅಂಗಳದಲ್ಲಿಯೂ ಬ್ಯುಸಿಯಾಗಿರುವ ಸಂಜನಾ ಆನಂದ್ ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಜತೆ ನಟಿಸಲಿದ್ದಾರೆ.

'ತ್ರಿವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ವಿಕ್ರಮ್‌ ಈಗ ಎರಡನೇ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಮುಧೋಳ್ ಮೂಲಕ ಸಖತ್‌ ಮಾಸ್ ಅವತಾರ ತಾಳಿರುವ ವಿಕ್ಕಿಗೆ ನಾಯಕಿಯಾಗಿ ರಾಯಲ್ ಹುಡುಗಿ ನಟಿಸುತ್ತಿದ್ದಾರೆ.‌ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಈ ಸಿನಿಮಾಕ್ಕೆ ಸಂಜನಾ ನಾಯಕಿ ಎಂಬ ವಿಷ್ಯ ಹರಿದಾಡಿತ್ತು. ಆದ್ರೆ ಚಿತ್ರತಂಡ ಮಾತ್ರ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಸಲಗ ಸುಂದರಿ ಹುಟ್ಟುಹಬ್ಬದ ವಿಶೇಷವಾಗಿ‌‌ ಇಂದು ಚಿತ್ರತಂಡ ಸಮಾಚಾರವನ್ನು ಅಧಿಕೃತಗೊಳಿಸಿದೆ.

ವಿಕ್ರಮ್ ಮುಧೋಳ್ ಸಿನಿಮಾದ ನಾಯಕಿಯಾಗಿರುವ ಸಂಜನಾ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ.‌ ಇಲ್ಲಿವರೆಗೂ ಅವರು ನಟಿಸಿದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಧೋಳ್‌ ಸಿನಿಮಾಕ್ಕೆ ಕಾರ್ತಿಕ್‌ ರಾಜನ್‌ ಡೈರೆಕ್ಟರ್‌. ಇವರು ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಜನಪ್ರಿಯತೆ ಪಡೆದಿದ್ದಾರೆ. ಧನ್ವೀರ್ ಗೌಡ ನಟಿಸುತ್ತಿರುವ ಹಯಗ್ರೀವ್ ಸಿನಿಮಾಕ್ಕೂ ಸಂಜನಾ ಆನಂದ್‌ ನಾಯಕಿ.

ಸಂಜನಾ ಆನಂದ್‌ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸಲಗ, ಕೆಮೆಸ್ಟ್ರಿ ಆಪ್‌ ಕರಿಯಪ್ಪ, ವಿಂಡೋಸೀಟ್‌ ಮುಂತಾದ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಹನಿಮೂನ್‌ ಸೀರೀಸ್‌ ಎಂಬ ಒಟಿಟಿ ಸರಣಿಯಲ್ಲೂ ಸಂಜನಾ ನಟಿಸಿದ್ದಾರೆ. ನೇನು ಮೀಕು ಬಾಗ ಕವಲ್ಸಿನವಾಡಿನಿ ಎಂಬ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ. ಶೋಕಿವಾಲಾ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ.

ಮಾರ್ಚ್‌ 29ರಂದು ರಿಲೀಸ್‌ ಆಗುವ ಸಿನಿಮಾಗಳು

ಸ್ಯಾಂಡಲ್‌ವುಡ್‌ನಲ್ಲಿ ಈ ಶುಕ್ರವಾರ ಯುವ ಮತ್ತು ತಾರಿಣಿ ಎಂಬ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾ ಸದ್ಯ ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರೇಜ್‌ ಹುಟ್ಟುಹಾಕಿದೆ. ಸಿನಿಮಾ ಬಿಡುಗಡೆಯಾದ ಬಳಿಕ ಇದರ ವಿಮರ್ಶೆ, ಜನರ ಅಭಿಪ್ರಾಯಗಳು ಹೇಗಿದೆ ಎನ್ನುವುದರ ಮೇಲೆ ಯುವ ಸಕ್ಸಸ್‌ ನಿಂತಿದೆ. ಇದೇ ಸಮಯದಲ್ಲಿ ತೆಲುಗಿನಲ್ಲಿ ಟಿಲ್ಲೂ ಸ್ಕ್ವೇರ್ ಎಂಬ ಸಿನಿಮಾ ರಿಲೀಸ್‌ ಆಗುತ್ತಿದೆ. ದಿ ಗೋಟ್‌ ಲೈಫ್‌ ಅಥವಾ ಆಡುಜೀವಿತಂ ಎಂಬ ಸಿನಿಮಾವು ರಿಲೀಸ್‌ ಆಗಿದೆ. ಈ ಚಿತ್ರದ ವಿಮರ್ಶೆಯನ್ನು ಈಗಾಗಲೇ ಹಿಂದೂಸ್ತಾನ್‌ ಟೈಮ್ಸ್‌ ಪ್ರಕಟಿಸಿದೆ. ಕಲಿಯುಗ ಪಟ್ಟಣಂಲು, ಗಾಡ್ಜಿಲ್ಲಾ ವರ್ಸಸ್ ಕಾಂಗ್: ದಿ ನ್ಯೂ ಎಂಪೈರ್, ದಿ ಯುಪಿ ಫೈಲ್ಸ್‌ (ಹಿಂದಿ), ಯಸ್‌ ಪಪ್ಪಾ (ಹಿಂದಿ), ಬೆಂಗಾಲ್‌ 1947 (ಹಿಂದಿ), 3ರ್ಡ್‌ ಅಕ್ಟೋಬರ್‌ (ಹಿಂದಿ), ಏಲಿಯನ್‌ ಫ್ರಾಂಕ್‌ (ಹಿಂದಿ) ಹೀಗೆ ನಾಳೆ 27 ಸಿನಿಮಾಗಳು ರಿಲೀಸ್‌ ಆಗುತ್ತಿವೆ.