ಕನ್ನಡ ಸುದ್ದಿ  /  ಮನರಂಜನೆ  /  ‘ಮಂಗಳಸೂತ್ರದ ಮೇಲೆ ಬಿದ್ದಿದೆ ಮಹಾ ಪ್ರಭುಗಳ ಕೆಂಗಣ್ಣು’; ಪ್ರಧಾನಿ ಮೋದಿಗೆ ಪಂಚ‌ ಪ್ರಶ್ನೆ ಕೇಳಿದ ನಟ ಪ್ರಕಾಶ್‌ ರಾಜ್

‘ಮಂಗಳಸೂತ್ರದ ಮೇಲೆ ಬಿದ್ದಿದೆ ಮಹಾ ಪ್ರಭುಗಳ ಕೆಂಗಣ್ಣು’; ಪ್ರಧಾನಿ ಮೋದಿಗೆ ಪಂಚ‌ ಪ್ರಶ್ನೆ ಕೇಳಿದ ನಟ ಪ್ರಕಾಶ್‌ ರಾಜ್

ನಟ ಪ್ರಕಾಶ್‌ ರಾಜ್‌, ಪ್ರಧಾನಿ ಮೋದಿ ಅವರ ಇತ್ತೀಚಿನ ಹೇಳಿಕೆಯ ಬಗ್ಗೆ ಕೊಂಚ ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಸಂಬಂಧ ಪೋಸ್ಟ್‌ ಹಂಚಿಕೊಂಡ ಅವರು, ಮೂರೂ ಬಿಟ್ಟ ಮಹಾಪ್ರಭುಗಳ ಕೆಂಗಣ್ಣು ಮಂಗಳಸೂತ್ರದ ಮೇಲೆ ಬಿದ್ದಿದೆ ಎಂದಿದ್ದಾರೆ.

‘ಮಂಗಳಸೂತ್ರದ ಮೇಲೆ ಬಿದ್ದಿದೆ ಮಹಾ ಪ್ರಭುಗಳ ಕೆಂಗಣ್ಣು’; ಪ್ರಧಾನಿ ಮೋದಿಗೆ ಪಂಚ‌ ಪ್ರಶ್ನೆ ಕೇಳಿದ ನಟ ಪ್ರಕಾಶ್‌ ರಾಜ್
‘ಮಂಗಳಸೂತ್ರದ ಮೇಲೆ ಬಿದ್ದಿದೆ ಮಹಾ ಪ್ರಭುಗಳ ಕೆಂಗಣ್ಣು’; ಪ್ರಧಾನಿ ಮೋದಿಗೆ ಪಂಚ‌ ಪ್ರಶ್ನೆ ಕೇಳಿದ ನಟ ಪ್ರಕಾಶ್‌ ರಾಜ್

Prakash Raj on PM Modi: ಬಿಜೆಪಿ ಸರ್ಕಾರವನ್ನು ಟೀಕಿಸುವ ಕೆಲಸದಲ್ಲಿರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌, ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತಷ್ಟು ಬಿರುಸಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕೊಂಚ ಖಾರವಾಗಿಯೇ ಪ್ರಧಾನಿ ಮೋದಿ ಮತ್ತು ಕೇಂದ್ರ ಬಿಜೆಪಿ ಸರ್ಕಾರವನ್ನೇ ಗುರಿಯನ್ನಾಗಿಸಿಕೊಂಡು ಟೀಕಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಈಗ ಮೂರು ಬಿಟ್ಟ ಮಹಾಪ್ರಭು ಎಂದು ಶುರುಮಾಡಿ, ಪ್ರಂಚ ಪ್ರಶ್ನೆಗಳನ್ನು ಅವರ ಮುಂದಿಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊನ್ನೆಯಷ್ಟೇ ಹುಬ್ಬಳಿಯ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಪ್ರಕಾಶ್‌ ರಾಜ್‌, "ಬಿಜೆಪಿಯವ್ರು ಹೆಣದ ರಾಜಕಾರಣ ಈ ಹಿಂದಿನಿಂದಲೇ ಮಾಡುತ್ತ ಬಂದವರಲ್ಲವೇ. ಇವರಿಗೆ ಹೆಣದ ರಾಜಕೀಯ ಬೇಕೇ ಬೇಕು. ಇವರಿಗೆ ಅಂತಃಕರಣ ಎಂಬುದೇ ಇಲ್ಲ. ಇದು ಒಂದು ಧರ್ಮದ ಮೇಲೆ ನಡೆದ ಅತ್ಯಾಚಾರ ಎಂದು ಬಿಂಬಿಸುತ್ತಾರೆಯೇ ಹೊರತು, ಹೆಣ್ಣಿನ ಮೇಲೆ ನಡೆದಿದೆ ಎಂಬುದು ಅವರಿಗೆ ಬೇಕಾಗಿಲ್ಲ" ಎಂದು ಹರಿಹಾಯ್ದಿದ್ದರು.

ಮುಂದುವರಿದು, ತಪ್ಪು ಮಾಡಿದವನು ಯಾವುದೇ ಜನಾಂಗದವನಾಗಲಿ, ಅಥವಾ ಯಾವುದೇ ಧರ್ಮದವನಾಗಲಿ, ಆತ ಅಮಾನವೀಯ, ಅಮಾನುಷ ವ್ಯಕ್ತಿ. ಅವನಿಗೆ ಶಿಕ್ಷೆ ಕೊಡಲೇಬೇಕು. ಇಂಥ ಕೃತ್ಯಗಳಿಗೆ ಧರ್ಮದ ಲೇಪನ ಕೊಡುವುದು ಬಿಜೆಪಿಯವರಿಗೆ ಅಭ್ಯಾಸವಾಗಿಬಿಟ್ಟಿದೆ. ಏನೇ ಆದ್ರೂ ಅದು ಧರ್ಮವೇ ಆಗಬೇಕು. ಜಾತಿಯನ್ನು ಮುಂದೆ ತರಬೇಕು. ರಾಜಕಾರಣದಲ್ಲಿ ಗೆಲ್ಲಬೇಕು ಎಂಬುದಷ್ಟೇ ಅವರ ಮನೋಭಾವ" ಎಂದಿದ್ದರು ಪ್ರಕಾಶ್‌ ರಾಜ್.‌

ಈಗ ಇದೇ ಪ್ರಕಾಶ್‌ ರಾಜ್‌ ಪ್ರಧಾನಿ ಮೋದಿ ಅವರ ಇತ್ತೀಚಿನ ಹೇಳಿಕೆಯ ಬಗ್ಗೆ ಕೊಂಚ ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಸಂಬಂಧ ಪೋಸ್ಟ್‌ ಹಂಚಿಕೊಂಡ ಅವರು, ಮೂರೂ ಬಿಟ್ಟ ಮಹಾಪ್ರಭುಗಳ ಕೆಂಗಣ್ಣು ಮಂಗಳಸೂತ್ರದ ಮೇಲೆ ಬಿದ್ದಿದೆ, ಆಯ್ತು ಮಂಗಳಸೂತ್ರದ ಬಗ್ಗೆಯೇ ಮಾತಾಡೋಣ ಎನ್ನುತ್ತ ದೇಶದಲ್ಲಿ ನಡೆದ ಐದು ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಪ್ರಕಾಶ್‌ ರಾಜ್‌ ಪಂಚ ಪ್ರಶ್ನೆ

- ಪುಲ್ವಾಮಾದ 40 ಸೈನಿಕರ ಮಡದಿಯರ ಮಂಗಳಸೂತ್ರ ಕಿತ್ತವರು ಯಾರು?

- ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತ ನೂರಾರು ರೈತರ ಸಾವಾಯ್ತಲ್ಲ, ಆ ಮನೆಗಳ ಮಂಗಳಸೂತ್ರ ಕಿತ್ತವರು ಯಾರು?

- ಲಾಕ್'ಡೌನ್ ಮಹಾವಲಸೆಯಲ್ಲಿ ರಸ್ತೆಯಲ್ಲೇ ಪ್ರಾಣ ಬಿಟ್ಟ ಲೆಕ್ಕವಿಕ್ಕದಷ್ಟು ಕಾರ್ಮಿಕರ ಪತ್ನಿಯರ ಮಂಗಳಸೂತ್ರ ಕಿತ್ತವರು ಯಾರು?

- ನೋಟ್ ಬ್ಯಾನ್ ನಿಂದ ATM ಕ್ಯೂನಲ್ಲೇ ಪ್ರಾಣ ಕಳೆದುಕೊಂಡ ಮನೆಗಳ ಮಂಗಳಸೂತ್ರ ಕಿತ್ತವರು ಯಾರು?

- ಮಣಿಪುರದ ಗಲಭೆಯಲ್ಲಿ ಹತ್ಯೆಯಾದ ಮನೆಗಳ ಮಂಗಳಸೂತ್ರ ಕಿತ್ತವರು ಯಾರು?

ಪ್ರಧಾನಿ ಮೋದಿ ಹೇಳಿದ್ದೇನು?

ಇತ್ತೀಚೆಗೆ ರಾಜಸ್ತಾನದ ಜೈಪುರ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಗೆದ್ದರೆ ದೇಶದ ಮಾತೆಯರ, ಸೋದರಿಯರ ಚಿನ್ನವನ್ನು ಜಪ್ತಿ ಮಾಡಲಿದೆ. ಚಿನ್ನದ ತಾಳಿ ಕಿತ್ತುಕೊಳ್ಳಲಿದೆ. ಅದನ್ನು ಹರಿದು ಹಂಚಲಿದೆ. ಯಾರಿಗೆ ಹಂಚಲಾಗುತ್ತದೆ? ಯಾರಿಗೆ ಹೆಚ್ಚು ಮಕ್ಕಳಿವೆಯೋ ಅವರಿಗೆ. ಅಂದರೆ ಒಳನುಸುಳುಕೋರರಿಗೆ ನಿಮ್ಮ ಸಂಪತ್ತು ಹೋಗಲಿದೆ. ಇದನ್ನು ನೀವು ಒಪ್ಪುತ್ತೀರಾ? ಎಂದಿದ್ದರು ಮೋದಿ. ಈಗ ಇದೇ ಮಾತಿಗೆ ಪ್ರಕಾಶ್‌ ರಾಜ್‌ ತಿರುಗೇಟು ನೀಡಿದ್ದಾರೆ.

ಪುಲ್ವಾಮಾದ 40 ಸೈನಿಕರ ಮಡದಿಯರ ಮಂಗಳಸೂತ್ರ ಕಿತ್ತವರು ಯಾರು? ಎಂದು ಪ್ರಶ್ನೆ ಮಾಡಿರುವ ಪ್ರಕಾಶ್‌ ರಾಜ್, ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತ ನೂರಾರು ರೈತರ ಸಾವಾಯ್ತಲ್ಲ, ಆ ಮನೆಗಳ ಮಂಗಳಸೂತ್ರ ಕಿತ್ತವರು ಯಾರು? ಲಾಕ್'ಡೌನ್ ಮಹಾವಲಸೆಯಲ್ಲಿ ರಸ್ತೆಯಲ್ಲೇ ಪ್ರಾಣ ಬಿಟ್ಟ ಲೆಕ್ಕವಿಕ್ಕದಷ್ಟು ಕಾರ್ಮಿಕರ ಪತ್ನಿಯರ ಮಂಗಳಸೂತ್ರ ಕಿತ್ತವರು ಯಾರು? ನೋಟ್ ಬ್ಯಾನ್ ನಿಂದ ATM ಕ್ಯೂನಲ್ಲೇ ಪ್ರಾಣ ಕಳೆದುಕೊಂಡ ಮನೆಗಳ ಮಂಗಳಸೂತ್ರ ಕಿತ್ತವರು ಯಾರು? ಮಣಿಪುರದ ಗಲಭೆಯಲ್ಲಿ ಹತ್ಯೆಯಾದ ಮನೆಗಳ ಮಂಗಳಸೂತ್ರ ಕಿತ್ತವರು ಯಾರು? ಎಂದಿದ್ದಾರೆ.

IPL_Entry_Point