ಕನ್ನಡ ಸುದ್ದಿ  /  ಮನರಂಜನೆ  /  Kabzaa Namaami Song Out: ‘ಕಬ್ಜ’ ಚಿತ್ರದಿಂದ ಮಹಾಶಿವರಾತ್ರಿಗೆ ಶಿವನ ಆರಾಧಿಸುವ ನಮಾಮಿ ಹಾಡು ಬಿಡುಗಡೆ

Kabzaa Namaami Song Out: ‘ಕಬ್ಜ’ ಚಿತ್ರದಿಂದ ಮಹಾಶಿವರಾತ್ರಿಗೆ ಶಿವನ ಆರಾಧಿಸುವ ನಮಾಮಿ ಹಾಡು ಬಿಡುಗಡೆ

ಇಂದು (ಫೆ. 18) ಮಹಾಶಿವರಾತ್ರಿ. ಆ ನಿಮಿತ್ತ ಶಿವನನ್ನು ಕೊಂಡಾಡುವ ಹಾಡನ್ನೇ ‘ಕಬ್ಜ’ ಚಿತ್ರತಂಡ ಬಿಡುಗಡೆ ಮಾಡಿದೆ.

‘ಕಬ್ಜ’ ಚಿತ್ರದಿಂದ ಮಹಾಶಿವರಾತ್ರಿಗೆ ಶಿವನ ಆರಾಧಿಸುವ ನಮಾಮಿ ಹಾಡು ಬಿಡುಗಡೆ
‘ಕಬ್ಜ’ ಚಿತ್ರದಿಂದ ಮಹಾಶಿವರಾತ್ರಿಗೆ ಶಿವನ ಆರಾಧಿಸುವ ನಮಾಮಿ ಹಾಡು ಬಿಡುಗಡೆ

Kabzaa Namaami Song Out: ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ಕಿಚ್ಚ ಸುದೀಪ್‌ ನಟಿಸಿರುವ ‘ಕಬ್ಜ’ ಸಿನಿಮಾ ಈಗಾಗಲೇ ಪ್ರಚಾರ ಕೆಲಸದಲ್ಲಿ ನಿರತವಾಗಿದೆ. ಟೀಸರ್‌, ಹಾಡು ಹೀಗೆ ಪ್ರೇಕ್ಷಕನನ್ನು ಸೆಳೆಯುವ ಕೆಲಸ ಆರಂಭಿಸಿದೆ. ಆರ್‌. ಚಂದ್ರು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿರುವ ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಆ ನಿಮಿತ್ತ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಸಿನಿಮಾ ಹಾಡಿನ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಚೆನ್ನೈನಲ್ಲಿಯೂ ಹೊಸದೊಂದು ಹಾಡನ್ನು ಹೊರತಂದಿದೆ.

ಟ್ರೆಂಡಿಂಗ್​ ಸುದ್ದಿ

ಇಂದು (ಫೆ. 18) ಮಹಾಶಿವರಾತ್ರಿ. ಆ ನಿಮಿತ್ತ ಶಿವನನ್ನು ಕೊಂಡಾಡುವ ಹಾಡನ್ನೇ ಚಿತ್ರತಂಡ ಬಿಡುಗಡೆ ಮಾಡಿದೆ. ಚೆನ್ನೈನಲ್ಲಿ ನಡೆದ ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳು ಸಿನಿಮಾರಂಗದ ಕೆಲವರು ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಇದೇ ವೇಳೆ ಅತಿಥಿಗಳ ಸಮ್ಮುಖದಲ್ಲಿ ಕಬ್ಜ ಚಿತ್ರದ ಎರಡನೇ ಹಾಡು ʼನಮಾಮಿ ನಮಾಮಿ..ʼ ಬಿಡುಗಡೆ ಆಗಿದೆ. ಅಷ್ಟೇ ಸುಮಧುರವಾಗಿ ಹಾಡೂ ಸಹ ಮೂಡಿಬಂದಿದೆ.

ನಮಾಮಿ ನಮಾಮಿ.. ಹಾಡಿಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದು, ಕಿನ್ನಾಳ್ ರಾಜ್‌ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಗಾಯಕಿ ಐಶ್ವರ್ಯ ರಂಗರಾಜನ್ ಸುಶ್ರಾವ್ಯವಾಗಿ ಹಾಡಿದ್ದಾರೆ. ನಟಿ ಶ್ರೀಯಾ ಸರಣ್ ಈ ಹಾಡಿನಲ್ಲಿ ರಾಣಿಯಾಗಿ ನಟಿಸಿದ್ದಾರೆ. ಸದ್ಯ ಈ ಹಾಡು ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಆಗಿದೆ.

ಚಿತ್ರ ಸಾಗಿ ಬಂದ ಬಗ್ಗೆ ಹಾಗೂ ಹಾಡಿನ ಕುರಿತು ಮಾಹಿತಿ ನೀಡಿದ ನಿರ್ದೇಶಕ ಆರ್ ಚಂದ್ರು, ಕಬ್ಜ ಚಿತ್ರದ ಹಾಡುಗಳನ್ನು ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಹೋದ ಕಡೆ ಚಿತ್ರದ ಕುರಿತು ಕೇಳಿಬರುತ್ತಿರುವ ಪ್ರಶಂಸನೀಯ ಮಾತುಗಳಿಗೆ ಮನ ತುಂಬಿ ಬಂದಿದೆ. ನನ್ನ ತಂಡಕ್ಕೆ ಹಾಗೂ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳುʼ ಎಂದರು.

‘ಕಬ್ಜ’ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಶಿವನನ್ನು ಆರಾಧಿಸುವ ಈ ಹಾಡು ಬಹಳ ಮಧುರವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಪ್ರೋತ್ಸಾಹ ನೀಡಿ" ಎಂಬುದು ಶ್ರೀಯಾ ಸರಣ್.

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ‘ಕಬ್ಜ’ ಚಿತ್ರದ ಟೀಸರ್ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಇದೇ ಚಿತ್ರದ ಕಮರ್ಷಿಯಲ್ ಹಾಡೊಂದು ಲೋಕಾರ್ಪಣೆಯಾಗಲಿದೆ.

ಪುನೀತ್‌ ಬರ್ತ್‌ಡೇಗೆ ಕಬ್ಜ ಬಿಡುಗಡೆ

ಇನ್ನುಳಿದಂತೆ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನವಾದ ಮಾರ್ಚ್‌ 17ರಂದು ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಒಟ್ಟು ಏಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರದ ಟೀಸರ್​ ಬಿಡುಗಡೆಯಾದ ಮೇಲೆ ಚಿತ್ರದ ಮೇಲಿನ ನಿರೀಕ್ಷೆಗಳು ಇಮ್ಮಡಿಯಾಗಿವೆ. ಕರ್ನಾಟಕ ಮಾತ್ರವಲ್ಲ, ಬೇರೆ ಭಾಷೆಗಳಲ್ಲೂ ಈ ಚಿತ್ರಕ್ಕಾಗಿ ಬೇಡಿಕೆ ಹೆಚ್ಚಾಗಿದೆ.

ಈಗಾಗಲೇ ಹಿಂದಿ ವರ್ಷನ್‌ ಹಕ್ಕುಗಳನ್ನು ಬಾಲಿವುಡ್​ ಜನಪ್ರಿಯ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್​​ ಪಡೆದುಕೊಂಡಿದೆ. ಇತರ ಭಾಷೆಯ ಹಕ್ಕುಗಳಿಗೂ ಬೇಡಿಕೆ ಹೆಚ್ಚಿದೆ. ಚಿತ್ರದಲ್ಲಿ ಉಪೇಂದ್ರಗೆ ಶ್ರೀಯಾ ಸರನ್‌ ನಾಯಕಿಯಾಗಿ ನಟಿಸಿದ್ದಾರೆ. ಸುದೀಪ್‌ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಕಬೀರ್‌ ಸಿಂಗ್‌ ದುಹಾನ್‌, ದಾನಿಶ್‌ ಅಖ್ತರ್‌ ಸೈಫಿ, ನವಾಬ್‌ ಶಾ, ಪೊಸಾನಿ ಮುರಳಿ ಕೃಷ್ಣ, ಮುರಳಿ ಶರ್ಮಾ ಸೇರಿ ಅನೇಕ ಹೆಸರಾಂತ ಕಲಾವಿದರಿದ್ದಾರೆ.

ಚೆನ್ನೈನಲ್ಲಿ ಕಬ್ಜ ಚಿತ್ರತಂಡ
ಚೆನ್ನೈನಲ್ಲಿ ಕಬ್ಜ ಚಿತ್ರತಂಡ
IPL_Entry_Point