ಕನ್ನಡ ಸುದ್ದಿ  /  ಮನರಂಜನೆ  /  Sarath Kumar: ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, 150 ವರ್ಷಗಳ ಕಾಲ ಬದುಕುವ ರಹಸ್ಯ ಹೇಳಿಕೊಡುತ್ತೇನೆ; Aismk ಸಂಸ್ಥಾಪಕ ಶರತ್‌ ಕುಮಾರ್

Sarath Kumar: ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, 150 ವರ್ಷಗಳ ಕಾಲ ಬದುಕುವ ರಹಸ್ಯ ಹೇಳಿಕೊಡುತ್ತೇನೆ; AISMK ಸಂಸ್ಥಾಪಕ ಶರತ್‌ ಕುಮಾರ್

ಶರತ್‌ ಕುಮಾರ್‌ ಮಾತುಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್‌ ಹರಿದಾಡುತ್ತಿವೆ. ಒಬ್ಬ ಸೆಲೆಬ್ರಿಟಿಯಾಗಿ ನೀವು ಮುಖ್ಯಮಂತ್ರಿ ಪಟ್ಟಕ್ಕೆ ಏರಲು ಇಂತಹ ನಗೆಪಾಟಲಿನ ಹೇಳಿಕೆಗಳನ್ನು ನೀಡಬಾರದು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ತಮಿಳು ನಟ , AISMK ಸಂಸ್ಥಾಪಕ ಶರತ್‌ ಕುಮಾರ್‌‌
ತಮಿಳು ನಟ , AISMK ಸಂಸ್ಥಾಪಕ ಶರತ್‌ ಕುಮಾರ್‌‌

ತಮಿಳು ನಟ ಶರತ್‌ ಕುಮಾರ್‌ ಮಲಯಾಳಂ, ತೆಲುಗು, ಕನ್ನಡ ಭಾಷೆಗಳಲ್ಲಿ ಕೂಡಾ ನಟಿಸಿದ್ದಾರೆ. ಸಿನಿಮಾ ಜೊತೆಗೆ ರಾಜಕೀಯದಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಅಖಿಲ ಭಾರತ ಸಮತುವ ಮಕ್ಕಳ್‌ ಕಚ್ಚಿ ಪಕ್ಷವನ್ನು ಶರತ್‌ ಸಂಸ್ಥಾಪಿಸಿದ್ದು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇತ್ತೀಚೆಗೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟ ಶರತ್‌, ''ನಾನು 150 ವರ್ಷಗಳ ಕಾಲ ಬದುಕುತ್ತೇನೆ'' ಎಂದು ಹೇಳಿದ್ದು, ಈ ಮಾತುಗಳು ಈಗ ಚರ್ಚೆಗೆ ಕಾರಣವಾಗಿದೆ. ತಮಿಳುನಾಡಿನ ಮಧುರೈನಲ್ಲಿ ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಶರತ್‌, ''ನನಗೆ ಈಗ 69 ವರ್ಷ ವಯಸ್ಸು, ಆದರೂ ನಾನು 25 ವರ್ಷದ ಯುವಕ ಇದ್ದತೆ. ನಾನು150 ವರ್ಷಗಳವರೆಗೂ ಬದುಕುತ್ತೇನೆ. ಇದರ ತಂತ್ರ ಏನೆಂದು ನಾನು ಕಲಿತಿದ್ದೇನೆ, 2026ರ ಚುನಾವಣೆಯಲ್ಲಿ ನನ್ನನ್ನು ನೀವು ತಮಿಳುನಾಡಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರೆ, ನಿಮ್ಮೆಲ್ಲರಿಗೂ ನಾನು 150 ವರ್ಷಗಳ ಕಾಲ ಬದುಕುವುದು ಹೇಗೆ ಎಂಬ ರಹಸ್ಯವನ್ನು ಹೇಳಿಕೊಡುತ್ತೇನೆ'' ಎಂದು ಶರತ್‌ ಕುಮಾರ್‌ ಹೇಳಿದ್ದಾರೆ.

ನಟ ಶರತ್‌ ಕುಮಾರ್‌ ಅವರ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಉಳಿದವರು ನಗುತ್ತಿದ್ದಾರೆ. ಶರತ್‌ ಕುಮಾರ್‌ ಮಾತುಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್‌ ಹರಿದಾಡುತ್ತಿವೆ. ಒಬ್ಬ ಸೆಲೆಬ್ರಿಟಿಯಾಗಿ ನೀವು ಮುಖ್ಯಮಂತ್ರಿ ಪಟ್ಟಕ್ಕೆ ಏರಲು ಇಂತಹ ನಗೆಪಾಟಲಿನ ಹೇಳಿಕೆಗಳನ್ನು ನೀಡಬಾರದು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಶರತ್‌ ಕುಮಾರ್‌ ದಕ್ಷಿಣ ಭಾರತದ ಕಲಾವಿದರ ಸಂಘವಾದ ನಾಡಿಗರ್‌ ಸಂಗಮ್‌ನಲ್ಲಿ 2006 ರಿಂದ 2015ವರೆಗೆ ಮೂರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತಮಿಳುನಾಡಿನ ತೆಂಕಶಿ ಕ್ಷೇತ್ರದ ಮಾಜಿ ಶಾಸಕ ಕೆ ಕಾಮರಾಜ್‌ ಅವರ ಬೆಂಬಲಿಗರಾದ ಶರತ್‌ ಕುಮಾರ್‌ 2007ರಲ್ಲಿ AISMK ಪಕ್ಷವನ್ನು ಸ್ಥಾಪಿಸಿದರು.

ಶರತ್‌ ಕುಮಾರ್‌ ಸಿನಿಮಾಗಳ ಬಗ್ಗೆ ಹೇಳುವುದಾರೆ ಒಂದು ಮಲಯಾಳಂ , 4 ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಕನ್ನಡದಲ್ಲಿ ಸಾರಥಿ, ಮೈನಾ, ಸಂತೆಯಲ್ಲಿ ನಿಂತ ಕಬೀರ, ರಾಜಕುಮಾರ, ಸೀತಾರಾಮ ಕಲ್ಯಾಣ, ರೇಮೋ ಸಿನಿಮಾಗಳಲ್ಲಿ ಶರತ್‌ ನಟಿಸಿದ್ದಾರೆ. ಶರತ್‌ ಪತ್ನಿ ರಾಧಿಕಾ, ಪುತ್ರಿ ಮಹಾಲಕ್ಷ್ಮಿ ಕೂಡಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕ, ನಿರ್ದೇಶಕ, ಬರಹಗಾರನಾಗಿ ಕೂಡಾ ಶರತ್‌ ಹೆಸರಾಗಿದ್ದಾರೆ. ಕೆಲವೊಂದು ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ.

IPL_Entry_Point