ಕನ್ನಡ ಸುದ್ದಿ  /  ಮನರಂಜನೆ  /  Amruthadhaare Story: ಹುಟ್ಟುಹಬ್ಬದ ಖುಷಿಯಲ್ಲಿ ಡುಮ್ಮ ಸರ್‌; ಅಪ್ಪಿ-ಪಾರ್ಥನ ಟ್ರಿಪ್‌ಗೆ ಬ್ರೇಕ್‌̧ ಜೀವನ್‌ ಸಮಸ್ಯೆಗೂ ಭೂಮಿಕಾ ಪರಿಹಾರ

Amruthadhaare Story: ಹುಟ್ಟುಹಬ್ಬದ ಖುಷಿಯಲ್ಲಿ ಡುಮ್ಮ ಸರ್‌; ಅಪ್ಪಿ-ಪಾರ್ಥನ ಟ್ರಿಪ್‌ಗೆ ಬ್ರೇಕ್‌̧ ಜೀವನ್‌ ಸಮಸ್ಯೆಗೂ ಭೂಮಿಕಾ ಪರಿಹಾರ

Amruthadhaare Serial Story: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಶುಕ್ರವಾರದ ಸಂಚಿಕೆಯಲ್ಲಿ ಡುಮ್ಮ ಸರ್‌ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಜೀವನ್‌ಗೆ ಬಂಗಾರ ಅಡವಿಟ್ಟು ಭೂಮಿಕಾ ಹಣ ಹೊಂದಿಸಿಕೊಟ್ಟಿದ್ದಾರೆ. ಪಾರ್ಥ ಮತ್ತು ಅಪೇಕ್ಷಾಳ ಟ್ರಿಪ್‌ಗೂ ಶಕುಂತಲಾದೇವಿ ಕಲ್ಲು ಹಾಕಿದ್ದಾರೆ.

ಅಮೃತಧಾರೆ ಸೀರಿಯಲ್‌ ನಿನ್ನೆಯ ಸಂಚಿಕೆ
ಅಮೃತಧಾರೆ ಸೀರಿಯಲ್‌ ನಿನ್ನೆಯ ಸಂಚಿಕೆ

ಅಮೃತಧಾರೆ ಸೀರಿಯಲ್‌ ನಾಯಕಿ ಭೂಮಿಕಾ ಆನಂದ್‌ರನ್ನು ಭೇಟಿಯಾಗುತ್ತಾರೆ. ತವರು ಮನೆಯಲ್ಲಿ ಸಮಸ್ಯೆ ಇದೆ. ಜೀವನ್‌ ಕೆಲಸ ಹೋಗಿದೆ. ಅದಕ್ಕೆ ನನ್ನ ಒಡವೆಗಳನ್ನು ಗಿರವಿ ಇಡಲು ನೆರವಾಗಬೇಕೆಂದು ಕೇಳುತ್ತಾಳೆ. ಜೀವನ್‌ಗೆ ನಾನು ಒಡವೆಗಳನ್ನು ಕೊಟ್ಟರೆ ಅವನು ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಬ್ಯಾಂಕ್‌ನಲ್ಲಿಟ್ಟು ಹಣ ತೆಗೆದುಕೊಳ್ಳೋಣ ಅನ್ನುತ್ತಾಳೆ. ಹೀಗೆ ಆನಂದ್‌ ಜತೆ ಬ್ಯಾಂಕ್‌ಗೆ ಹೋಗುತ್ತಾಳೆ. ಬ್ಯಾಂಕ್‌ನಿಂದ ಹಣ ತರುತ್ತಾಳೆ. ಈ ವಿಷಯವನ್ನು ಗೌತಮ್‌ ಬಳಿ ಹೇಳಬೇಡಿ ಎಂದು ಹೇಳುತ್ತಾರೆ ಭೂಮಿಕಾ. ಒಲ್ಲದ ಮನಸ್ಸಿನಿಂದ ಆನಂದ್‌ ಒಪ್ಪಿಕೊಳ್ಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಇನ್ನೊಂದೆಡೆ ಶಕುಂತಲಾದೇವಿ ಗೌತಮ್‌ನನ್ನು ಭೇಟಿಯಾಗುತ್ತಾಳೆ. ಹುಟ್ಟುಹಬ್ಬದ ಪ್ಲ್ಯಾನ್‌ ಏನು ಎಂದು ಕೇಳುತ್ತಾಳೆ. ಈ ವರ್ಷ ಸಿಂಪಲ್‌ ಆಗಿ ಹುಟ್ಟುಹಬ್ಬ ಆಚರಿಸೋಣ ಎಂದುಕೊಳ್ಳುತ್ತಾಳೆ. ಭೂಮಿಕಾಳಿಗೆ ಹುಟ್ಟುಹಬ್ಬದ ಬಗ್ಗೆ ಹೇಳಬೇಡಿ ಎಂದು ಗೌತಮ್‌ ಕೇಳಿಕೊಳ್ಳುತ್ತಾನೆ. ಆಕೆಗೆ ಸರ್‌ಪ್ರೈಸ್‌ ಕೊಡೋಣ ಎಂದಾಗ ಓಕೆ ಎಂದು ಹೇಳುತ್ತಾರೆ ಶಕುಂತಲಾ. ಗೌತಮ್‌ ಹೋದ ಬಳಿಕ ಶಕುಂತಲಾ ಮತ್ತು ಮಾವ ಅಸೂಯೆಯ ಮಾತುಗಳನ್ನಾಡುತ್ತಾರೆ. "ಇದೆಲ್ಲ ತುಂಬಾ ದಿನ ನಡೆಯೋಲ್ಲ" ಎಂಬ ಮಾತುಕತೆ ನಡೆಯುತ್ತದೆ. ಟ್ರಿಪ್‌ ಕ್ಯಾನ್ಷನ್‌ ಮಾಡುವ ಕುರಿತು ಪಾರ್ಥ ಮಾತನಾಡುತ್ತಾನೆ. ಅಪೇಕ್ಷಾಳಿಗೆ ಬೇಸರವಾಗುತ್ತದೆ. ಕೊನೆಗೆ ಟ್ರಿಪ್‌ ಕ್ಯಾನ್ಷಲ್‌ ಮಾಡಲು ಒಪ್ಪುತ್ತಾರೆ.

ಇನ್ನೊಂದೆಡೆ ಅಪೇಕ್ಷಾ ಮತ್ತು ಪಾರ್ಥ ಔಟಿಂಗ್‌ನಲ್ಲಿದ್ದಾರೆ. ಅಡ್ವೆಂಚರ್‌ ಗೇಮ್‌ನಲ್ಲಿದ್ದಾಗ ಶಕುಂತಲಾದೇವಿ ಕಾಲ್‌ ಮಾಡುತ್ತಾರೆ. "ನೀನು ಹೀಗೆ ಮಾಡಬಾರದಿತ್ತು ಪಾರ್ಥ" ಎಂದೆಲ್ಲ ಶಕುಂತಲಾದೇವಿ ಮಾತನಾಡಿದಾಗ ಪಾರ್ಥ ಟೆನ್ಷನ್‌ ಆಗುತ್ತಾನೆ. "ನಾಳೆ ಗೌತಮ್‌ ಬರ್ತ್‌ಡೇ. ನೀನು ಹುಟ್ಟುಹಬ್ಬ ಮಿಸ್‌ ಮಾಡಿಕೊಳ್ತಾ ಇದ್ದೀಯ" ಎಂದು ಸುಮ್ಮನೆ ಹೇಳುತ್ತಾರೆ. ಈ ಮೂಲಕ ಶಕುಂತಲಾದೇವಿಯು ಅಪೇಕ್ಷಾ ಮತ್ತು ಪಾರ್ಥ ತಿರುಗಾಟಕ್ಕೆ ಬ್ರೇಕ್‌ ಹಾಕುತ್ತಾರೆ.

ಇನ್ನೊಂದೆಡೆ ಭೂಮಿಕಾ ಜೀವನ್‌ನನ್ನು ಭೇಟಿಯಾಗಿ ಹಣ ನೀಡಲು ಪ್ರಯತ್ನಿಸುತ್ತಾಳೆ. ಆರಂಭದಲ್ಲಿ ಬೇಡ ಎನ್ನುತ್ತಾನೆ. ಬಲವಂತದಿಂದ "ಸಾಲ ಎಂದು ಹೇಳಿ" ಹಣ ನೀಡುತ್ತಾಳೆ. ಅಣ್ಣ ತಮ್ಮ ಸಂಬಂಧ ಅನುಬಂಧದ ಮಾತುಗಳು ನಡೆಯುತ್ತವೆ.

ಇನ್ನೊಂದೆಡೆ ಗೌತಮ್‌ ಮನೆಯಲ್ಲಿದ್ದಾರೆ. ಹೊರಗಿನಿಂದ ಭೂಮಿಕಾ ಬರುತ್ತಾಳೆ. ಎಲ್ಲಿ ಹೋಗಿದ್ರಿ ಎಂದಾಗ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದೆ ಎನ್ನುತ್ತಾಳೆ. "ನೀವು ಸಹಜ ಸುಂದರಿ" ಎಂದೆಲ್ಲ ಡುಮ್ಮ ಸರ್‌ ಹೊಗಳುತ್ತಾರೆ. ನಾಳೆ ನೀವು ಫ್ರೀನಾ ಎಂದು ಕೇಳುತ್ತಾರೆ. ಇಲ್ಲ ಅನ್ನುತ್ತಾರೆ ಭೂಮಿಕಾ. ಈ ಮೂಲಕ ಬರ್ತ್‌ಡೇ ವಿಷಯ ನೆನಪಿಲ್ಲದಂತೆ ನಾಟಕಾಡುತ್ತಾರೆ. ಆಕೆಯೂ ಗೌತಮ್‌ಗೆ ಸರ್‌ಪ್ರೈಸ್‌ ನೀಡಲು ಕಾಯುತ್ತ ಇದ್ದಾರೆ. ಇದಾದ ಬಳಿಕ ನಾನು ಕುಕ್ಕಿಂಗ್‌ ಕ್ಲಾಸ್‌ಗೆ ಸೇರುತ್ತೇನೆ ಎಂದು ಹೇಳುತ್ತಾರೆ ಭೂಮಿಕಾ. ಈ ಸಂಭಾಷಣೆಯ ವಿಡಿಯೋ ಈ ಕೆಳಗೆ ಇದೆ ನೋಡಿ.

ಮನೆಗೆ ಬಂದ ಜೀವನ್‌ 5 ಲಕ್ಷ ರೂಪಾಯಿ ನೀಡುತ್ತಾನೆ. ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಮಹಿಮಾ ಕೇಳುತ್ತಾಳೆ. ಯಾವ ಕಂಪನಿಯಲ್ಲೂ ಇಷ್ಟೊಂದು ಕ್ಯಾಷ್‌ ಕೊಡೋದಿಲ್ಲ ಅಲ್ವ ಎನ್ನುತ್ತಾಳೆ. ಹೇಗೋ ಒಪ್ಪಿಸಲು ಯತ್ನಿಸುತ್ತಾನೆ. ಸಾಲದ ಹಣ ನೀಡಲು ಉಪಯೋಗವಾಯಿತು ಎಂದು ಅಮ್ಮ ಹೇಳುತ್ತಾರೆ. ಈ ರೀತಿ ಅಮೃತಧಾರೆ ಸೀರಿಯಲ್‌ನಲ್ಲಿ ಒಂದೆಡೆ ಜೀವನ್‌ ಕೆಲಸದ ಸಮಸ್ಯೆ ಬಗೆಹರಿಯದೆ ಇದ್ದರೂ ಹಣಕಾಸಿನ ಸಮಸ್ಯೆ ಬಗೆಹರಿದಿದೆ. ಅಪೇಕ್ಷಾ ಪಾರ್ಥನ ಟ್ರಿಪ್‌ ಅರ್ಧಕ್ಕೆ ಕ್ಯಾನ್ಸಲ್‌ ಆಗಿದೆ. ಮತ್ತೊಂದೆಡೆ ಡುಮ್ಮ ಸರ್‌ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಸೀರಿಯಲ್‌ ಮುಂದುವರೆದಿದೆ. 

IPL_Entry_Point