Amruthadhaare: ಆಮಿ ತೊಮಾಕೆ ಭಾಲೊಬಾಸಿ, ಭೂಮಿಕಾಗೆ ಐ ಲವ್‌ ಯು ಅಂದ್ರು ಡುಮ್ಮ ಸರ್‌; ಅಮೃತಧಾರೆ ಸೀರಿಯಲ್‌ನಲ್ಲಿ ಒಲವಧಾರೆ-television news amruthadhaare serial story goutham says ami tomake bhalobashi to bhumika jeevan jobless story revealed p ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಆಮಿ ತೊಮಾಕೆ ಭಾಲೊಬಾಸಿ, ಭೂಮಿಕಾಗೆ ಐ ಲವ್‌ ಯು ಅಂದ್ರು ಡುಮ್ಮ ಸರ್‌; ಅಮೃತಧಾರೆ ಸೀರಿಯಲ್‌ನಲ್ಲಿ ಒಲವಧಾರೆ

Amruthadhaare: ಆಮಿ ತೊಮಾಕೆ ಭಾಲೊಬಾಸಿ, ಭೂಮಿಕಾಗೆ ಐ ಲವ್‌ ಯು ಅಂದ್ರು ಡುಮ್ಮ ಸರ್‌; ಅಮೃತಧಾರೆ ಸೀರಿಯಲ್‌ನಲ್ಲಿ ಒಲವಧಾರೆ

Amruthadhaare Serial Story: ಅಮೃತಧಾರೆ ಸೀರಿಯಲ್‌ನ ಮಂಗಳವಾರದ ಸಂಚಿಕೆಯಲ್ಲಿ ಗೌತಮ್‌ ದಿವಾನ್‌ ಬಂಗಾಳಿ ಕ್ಲಯೆಂಟ್‌ಗಳ ಜತೆ ಸಂವಹನ ಮಾಡುವ ಸಲುವಾಗಿ ಬಂಗಾಳಿ ಭಾಷೆಯ ಕೆಲವೊಂದು ವಾಕ್ಯಗಳನ್ನು ಕಲಿಯುತ್ತಿದ್ದಾನೆ. ಈ ಸಂದರ್ಭದಲ್ಲಿ ಗೊತ್ತಿಲ್ಲದೆ ಭೂಮಿಕಾಳಿಗೆ ಐ ಲವ್‌ ಯು ಎಂದು ಹೇಳಿದ್ದಾರೆ ಡುಮ್ಮ ಸರ್‌.

ಭೂಮಿಕಾಗೆ ಐ ಲವ್‌ ಯು ಅಂದ್ರು ಡುಮ್ಮ ಸರ್‌
ಭೂಮಿಕಾಗೆ ಐ ಲವ್‌ ಯು ಅಂದ್ರು ಡುಮ್ಮ ಸರ್‌

ಅಮೃತಧಾರೆ ಸೀರಿಯಲ್‌ನಲ್ಲಿ ಹಲವು ಘಟನೆಗಳು ನಡೆಯುತ್ತಿವೆ. ಒಂದು ಕಡೆ ಭೂಮಿಕಾಳಿಗೆ ಗೌತಮ್‌ ಅವರು ಗೊತ್ತಿಲ್ಲದೆ ಐ ಲವ್‌ ಯು ಎಂದು ಹೇಳಿದ್ದಾರೆ. ಇನ್ನೊಂದೆಡೆ ಜೀವನ್‌ಗೆ ಕೆಲಸ ಹೋಗಿರುವ ವಿಷಯ ತಾಯಿ ಮಂದಾಕಿನಿಗೆ ತಿಳಿದಿದೆ. ಇಷ್ಟು ಮಾತ್ರವಲ್ಲ ಝೀ ಕನ್ನಡ ವಾಹಿನಿಯು ಬಿಡುಗಡೆ ಮಾಡಿರುವ ಪ್ರಮೋದ ಪ್ರಕಾರ ಈ ವಿಷಯ ಭೂಮಿಕಾ ಕಣ್ಣಿಗೂ ಬೀಳುತ್ತದೆ. ಮಾಲ್‌ಗೆ ಡೆಲಿವರಿ ಕೊಡುವ ಸಂದರ್ಭದಲ್ಲಿ ಅದೇ ಮಾಲ್‌ಗೆ ಬಂದಿದ್ದ ಭೂಮಿಕಾ ಅಲ್ಲಿ ಡೆಲಿವರಿ ಬಾಯ್‌ ಡ್ರೆಸ್‌ನಲ್ಲಿದ್ದ ಜೀವನನ್ನು ನೋಡುತ್ತಾರೆ. ಈ ಮೂಲಕ ಕೆಲಸ ಕಳೆದುಕೊಂಡಿರುವ ಜೀವನ್‌ ಕಥೆ ಎಲ್ಲರಿಗೂ ತಿಳಿಯುವಂತಹ ಸಂದರ್ಭ ಬರುತ್ತದೆ.

ಭೂಮಿಕಾಗೆ ಐ ಲವ್‌ಯು ಅಂದ್ರು ಗೌತಮ್‌ ದಿವಾನ್‌

ದಿ ಗ್ರೇಟ್‌ ಬಿಸ್ನೆಸ್‌ಮ್ಯಾನ್‌ ಗೌತಮ್‌ ದಿವಾನ್‌ಗೆ ಪ್ರಮುಖ ಮೀಟಿಂಗ್‌ ಇದೆ. ಬಂಗಾಳದ ಕ್ಲಯೆಂಟ್‌ ಜತೆ ಮೀಟಿಂಗ್‌ ಅರೇಂಜ್‌ ಆಗಿದೆ. ಗೆಳೆಯ ಆನಂದ್‌ ನೆರವಿನಿಂದ ಕೆಲವೊಂದು ಬಂಗಾಳಿ ವಾಕ್ಯಗಳನ್ನು ಕಲಿಯುತ್ತಿದ್ದಾನೆ. ಕ್ಲಯೆಂಟ್‌ಗಳನ್ನು ಸ್ವಾಗತಿಸುವುದು, ಕ್ಲಯೆಂಟ್‌ಗಳ ಜತೆ ಕೆಲವೊಂದು ಮಾತುಗಳನ್ನು ಹೇಗೆ ಹೇಳಬೇಕೆಂದು ಪ್ರ್ಯಾಕ್ಟೀಸ್‌ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಭೂಮಿಕಾ ಬರುತ್ತಾರೆ. ಇಷ್ಟೊಂದು ಮೀಟಿಂಗ್‌ ಅಟೆಂಡ್‌ ಆಗಿರುವ ನೀವು ಪ್ರ್ಯಾಕ್ಟಿಸ್‌ ಮಾಡುವುದ ಎಂದು ಅಚ್ಚರಿ ಪಡುತ್ತಾರೆ. ಬಳಿಕ ಮೀಟಿಂಗ್‌ ಇರುವುದು ಬಂಗಾಳಿ ಕ್ಲಯೆಂಟ್‌ಗಳ ಜತೆ ಎಂದು ತಿಳಿದಾಗ ಇಂತಹ ಪ್ರ್ಯಾಕ್ಟೀಸ್‌ ಅಗತ್ಯವಿದೆ ಎಂದು ಅವರಿಗೆ ಮನವರಿಕೆ ಆಗುತ್ತದೆ.

ಬಳಿಕ ಕೀಟಲೆಗೆ ಭೂಮಿಕಾ ಬಂಗಾಳಿ ಭಾಷೆಯಲ್ಲಿ ಹೇಗೆ ಹೇಳುವುದು ಎಂದು ಕೆಲವೊಂದು ಕೊಶ್ಚನ್‌ ಕೇಳುತ್ತಾರೆ. ಅದಕ್ಕೆ ಗೌತಮ್‌ ದಿವಾನ್‌ ಸರಿಯಾಗಿಯೇ ಉತ್ತರಿಸುತ್ತಾರೆ. ನೀವು ನಮಗೆ ಇಷ್ಟ ಇತ್ಯಾದಿ ವಾಕ್ಯಗಳನ್ನು ಬಂಗಾಳಿಯಲ್ಲಿ ಕೇಳಿದಾಗ ಗೌತಮ್‌ಗೆ ಅದು ಗೊತ್ತಿರುವುದಿಲ್ಲ. ಆತ ಆನಂದ್‌ ಬಳಿ ಕೇಳುತ್ತಾನೆ. ಆನಂದ್‌ ಹೇಳಿಕೊಡುತ್ತಾನೆ. ಅತ್ತಿಗೆ ಈ ರೂಟ್‌ನಲ್ಲಿ ಬರುತ್ತಿದ್ದಾರೆ ಎಂದು ತಿಳಿದ ಆನಂದ್‌ ಒಂದು ಬಾರಿ "ಆಮಿ ತೊಮಕೆ ಭಾಲೊಬಾಸಿ(Ami Tomake Bhalobasi) ಎಂದು ಹೇಳಿಕೊಡುತ್ತಾನೆ. ಅದೇ ರೀತಿ ಗೌತಮ್‌ ಭೂಮಿಕಾಳಿಗೆ ಹೇಳುತ್ತಾನೆ. ಇದಾದ ಬಳಿಕ ಹೀಗಂದ್ರೆ "ಐ ಲವ್‌ ಯು ಎಂದು ಅರ್ಥ" ಎಂದು ಆನಂದ್‌ ಹೇಳುತ್ತಾನೆ. ಇದನ್ನು ಕೇಳಿ ಭೂಮಿಕಾ ನಗುತ್ತಾರೆ. ಡುಮ್ಮ ಸರ್‌ ನಾಚಿಕೊಳ್ಳುತ್ತಾರೆ. ಈ ಮೂಲಕ ಅಮೃತಧಾರೆಯಲ್ಲಿ ಒಂದಿಷ್ಟು ಒಲವಧಾರೆ ಸುರಿದಿದೆ.

ಜೀವನ್‌ ಕೆಲಸ ಕಳೆದುಕೊಂಡ ಕಥೆ

ಇನ್ನೊಂದೆಡೆ ಜೀವನ್‌ ಫೋನ್‌ನಲ್ಲಿ ಯಾರದ್ದೋ ಜತೆ ಮಾತನಾಡುತ್ತ ಇರುತ್ತಾನೆ. ಈ ಸಂದರ್ಭದಲ್ಲಿ ತಾನು ಕೆಲಸ ಕಳೆದುಕೊಂಡಿರುವ ಬಗ್ಗೆ ಮಾತನಾಡುತ್ತಾನೆ. ಅಲ್ಲೇ ಹಿಂದಿದ್ದ ತಾಯಿ ಮಂದಾಕಿನಿಗೆ ಈ ವಿಷಯ ತಿಳಿಯುತ್ತದೆ. ಝೀ ಕನ್ನಡ ವಾಹಿನಿ ಇನ್ನೊಂದು ಪ್ರಮೋ ಬಿಡುಗಡೆ ಮಾಡಿದೆ. ಅದರಲ್ಲಿ ಜೀವನ್‌ ಮಾಲ್‌ವೊಂದಕ್ಕೆ ಡೆಲಿವರಿ ಮಾಡಲು ಹೋಗಿರುತ್ತಾನೆ. ಅಲ್ಲಿನ ಗ್ರಾಹಕ ಜೀವನ್‌ ಜತೆ ಕೆಟ್ಟದಾಗಿ ಮಾತನಾಡುತ್ತ ಇರುತ್ತಾನೆ. ಅದೇ ಸಂದರ್ಭದಲ್ಲಿ ಭೂಮಿಕಾಳಿಗೆ ಅಲ್ಲಿ ಜೀವನ್‌ ಇರುವುದು ಕಾಣಿಸುತ್ತದೆ. ಜೀವನ್‌ ಯಾಕೆ ಹೀಗೆ ಮಾಡುತ್ತಿದ್ದಾನೆ ಎಂದು ವಿಚಾರಿಸುತ್ತಾನೆ. ಈ ಮೂಲಕ ಕೆಲಸ ಕಳೆದುಕೊಂಡ ಜೀವನ್‌ ಕಥೆ ಭೂಮಿಕಾ ಮತ್ತು ಮಂದಾಕಿನಿಗೆ ತಿಳಿಯುತ್ತದೆ.

ಕಂಪನಿಯಲ್ಲಿ ಪ್ರಮೋಷನ್‌ ನಿರೀಕ್ಷೆಯಲ್ಲಿರುವ ಜೀವನ್‌ಗೆ ಉದ್ಯೋಗ ಕಡಿತದ ಶಾಕ್‌ ದೊರಕಿರುತ್ತದೆ. ಆದರೆ, ಕೆಲಸ ಕಳೆದುಕೊಂಡ ಸಂಗತಿಯನ್ನು ಆತ ಮನೆಯಲ್ಲಿ ತಿಳಿಸಿರುವುದಿಲ್ಲ. ಪ್ರಮೋಷನ್‌ ಆಗಿದೆ ಎಂದು ಎಲ್ಲರಿಗೂ ಪಾರ್ಟಿ ಕೊಟ್ಟಿರುತ್ತಾನೆ. ಬಳಿಕ ಎಷ್ಟೇ ಪ್ರಯತ್ನಪಟ್ಟರೂ ರಿಸೆಷನ್‌ ಟೈಮ್‌ ಆಗಿರುವ ಕಾರಣ ಕೆಲಸ ಸಿಕ್ಕಿರುವುದಿಲ್ಲ. ಕೆಲಸ ಸಿಗುವ ತನಕ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಲು ಬಯಸುತ್ತಾನೆ. ಯುವ ಸಿನಿಮಾದಲ್ಲಿ ಯುವ ರಾಜ್‌ಕುಮಾರ್‌ ಮಾಡಿದಂತೆ ಈತನೂ ಫುಡ್‌ ಡೆಲಿವರಿ ಬಾಯ್‌ ಆಗುತ್ತಾನೆ. ಈ ವಿಷಯ ಯಾರಿಗೂ ತಿಳಿದಿರುವುದಿಲ್ಲ. ಈಗ ಮಂದಾಕಿನಿ ಮತ್ತು ಭೂಮಿಕಾಳಿಗೆ ತಿಳಿದಿದೆ. ಬಹುಶಃ ಜೀವನ್‌ಗೆ ಹೊಸ ಕೆಲಸ ದೊರಕಿಸಿಕೊಡಲು ಭೂಮಿಕಾ ಯಾವುದಾದರೂ ಪ್ರಯತ್ನ ಮಾಡಬಹುದೆಂಬ ನಿರೀಕ್ಷೆಯಲ್ಲಿ ಸೀರಿಯಲ್‌ ಪ್ರೇಕ್ಷಕರು ಇದ್ದಾರೆ.

mysore-dasara_Entry_Point