ಕಿರುತೆರೆ ವೀಕ್ಷಕರೇ ಗಮನಿಸಿ; ಲಕ್ಷ್ಮಿ ನಿವಾಸ, ಶ್ರೀರಸ್ತು ಶುಭಮಸ್ತು, ಸತ್ಯ ಸೇರಿದಂತೆ ಹಲವು ಧಾರಾವಾಹಿಗಳ ಪ್ರಸಾರ ಸಮಯದಲ್ಲಿ ಬದಲಾವಣೆ
- Kannada Serials: ಕನ್ನಡ ಕಿರುತೆರೆಯಲ್ಲಿ ಹಲವು ಸೀರಿಯಲ್‌ಗಳು ಆರಂಭವಾಗಿವೆ. ಕಲರ್ಸ್ ಕನ್ನಡದಲ್ಲಿ ಚುಕ್ಕಿತಾರೆ ಆರಂಭ, ಇದೇ ರೀತಿ ಝೀ ಕನ್ನಡ ವಾಹಿನಿಯಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಎಂಬ ಸೀರಿಯಲ್ ಆರಂಭವಾದ ಕಾರಣ ಲಕ್ಷ್ಮಿ ನಿವಾಸ, ಶ್ರೀರಸ್ತು ಶುಭಮಸ್ತು, ಸತ್ಯ ಸೀರಿಯಲ್‌ಗಳ ಪ್ರಸಾರ ಸಮಯ ಬದಲಾಗಿದೆ.
- Kannada Serials: ಕನ್ನಡ ಕಿರುತೆರೆಯಲ್ಲಿ ಹಲವು ಸೀರಿಯಲ್‌ಗಳು ಆರಂಭವಾಗಿವೆ. ಕಲರ್ಸ್ ಕನ್ನಡದಲ್ಲಿ ಚುಕ್ಕಿತಾರೆ ಆರಂಭ, ಇದೇ ರೀತಿ ಝೀ ಕನ್ನಡ ವಾಹಿನಿಯಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಎಂಬ ಸೀರಿಯಲ್ ಆರಂಭವಾದ ಕಾರಣ ಲಕ್ಷ್ಮಿ ನಿವಾಸ, ಶ್ರೀರಸ್ತು ಶುಭಮಸ್ತು, ಸತ್ಯ ಸೀರಿಯಲ್‌ಗಳ ಪ್ರಸಾರ ಸಮಯ ಬದಲಾಗಿದೆ.
(1 / 9)
ಕನ್ನಡ ಕಿರುತೆರೆಯಲ್ಲಿ ಹಲವು ಸೀರಿಯಲ್‌ಗಳು ಆರಂಭವಾಗಿವೆ. ಕಲರ್ಸ್ ಕನ್ನಡದಲ್ಲಿ ಚುಕ್ಕಿತಾರೆ ಆರಂಭ, ಇದೇ ರೀತಿ ಝೀ ಕನ್ನಡ ವಾಹಿನಿಯಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಎಂಬ ಸೀರಿಯಲ್ ಆರಂಭವಾದ ಕಾರಣ ಹಲವು ಸೀರಿಯಲ್‌ಗಳ ಪ್ರಸಾರ ಸಮಯ ಬದಲಾಗಿದೆ. ಬದಲಾದ ಸಮಯವನ್ನು ಗಮನದಲ್ಲಿಟ್ಟುಕೊಂಡು ವೀಕ್ಷಕರು ತಮ್ಮ ನೆಚ್ಚಿನ ಸೀರಿಯಲ್ ನೋಡಬಹುದು.
(2 / 9)
ಸೀರಿಯಲ್ ವೀಕ್ಷಕರು ಯಾವುದಾದರೂ ಒಂದು ಅಥವಾ ಸೀರಿಯಲ್‌ಗಳನ್ನು ಪ್ರತಿನಿತ್ಯ ತಪ್ಪದೇ ನೋಡುವ ಅಭ್ಯಾಸ ಬೆಳೆಸಿಕೊಂಡಿರಬಹುದು. ಪ್ರತಿನಿತ್ಯ ಈ ರೀತಿ ವೀಕ್ಷಿಸುವ ಸೀರಿಯಲ್‌ಗಾಗಿ ಸಮಯದ ಹೊಂದಾಣಿಕೆಯನ್ನೂ ಮಾಡಿರಬಹುದು. ಅಂದರೆ, ರಾತ್ರಿ ಎಲ್ಲರ ಊಟವಾದ ಬಳಿಕ ಸೀರಿಯಲ್ ನೋಡಬಹುದು. ರಾತ್ರಿ ಊಟ ಮಾಡುತ್ತ ಸೀರಿಯಲ್ ನೋಡಬಹುದು. ಇನ್ನಿತರ ಕೆಲಸ ಮುಗಿಸಿ ಸೀರಿಯಲ್ ನೋಡಬಹುದು.
(3 / 9)
ಈ ರೀತಿ ನೀವು ಝೀ ಕನ್ನಡ ವಾಹಿನಿಯ ಲಕ್ಷ್ಮಿ ನಿವಾಸ, ಶ್ರೀರಸ್ತು ಶುಭಮಸ್ತು, ಸತ್ಯ ಧಾರಾವಾಹಿ ನೋಡುತ್ತಿದ್ದರೆ, ಈ ಸೀರಿಯಲ್‌ಗಳ ಸಮಯ ಬದಲಾಗಿರುವುದನ್ನು ಗಮನಿಸಿ. ಈ ಸೀರಿಯಲ್‌ಗಳು ಯಾವ ಸಮಯದಲ್ಲಿ ಪ್ರಸಾರಗೊಳ್ಳುತ್ತದೆ ಎಂದು ತಿಳಿದುಕೊಂಡು ಆ ಸಮಯ ಬಿಡುವು ಮಾಡಿಕೊಳ್ಳಬೇಕಿದೆ.
(4 / 9)
ಝೀ ಕನ್ನಡದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಆರಂಭವಾಗುತ್ತಿದೆ. ಮಾರ್ಚ್ 18 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಉಳಿದ ಸೀರಿಯಲ್‌ಗಳ ಪ್ರಸಾರ ಸಮಯ ಬದಲಾಗಲು ಇದು ಪ್ರಮುಖ ಕಾರಣವಾಗಿದೆ. ಜತೆಗೆ, ಪಾರು ಮತ್ತು ಹಿಟ್ಲರ್ ಸೀರಿಯಲ್‌ಗಳು ಮುಗಿದಿರುವುದು ಕೂಡ ಸಮಯ ಬದಲಾವಣೆಗೆ ಕಾರಣವಾಗಿದೆ.
(5 / 9)
ಇದೇ ಸಮಯದಲ್ಲಿ ಝೀ ಕನ್ನಡ ವಾಹಿನಿಯ ಎರಡು ಅಮೋಘ ಧಾರಾವಾಹಿಗಳಾದ ಪಾರು ಮತ್ತು ಹಿಟ್ಲರ್ ಕಲ್ಯಾಣ ಶುಭವಿದಾಯವನ್ನು ಹೇಳಲಾಗಿದೆ.
(6 / 9)
ಸತ್ಯ ಸೀರಿಯಲ್ ಪ್ರಸಾರ ಸಮಯ ಬದಲಾವಣೆ: ಈಗಾಗಲೇ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿಯು ಬದಲಾದ ಸಮಯವಾದ 6 ಗಂಟೆಗೆ ಪ್ರಸಾರವಾಗಲಿದೆ. ಸತ್ಯ ಸೀರಿಯಲ್ ನೋಡುತ್ತಿದ್ದವು ಸಂಜೆ ಆರು ಗಂಟೆಗೆ ಬಿಡುವು ಮಾಡಿಕೊಳ್ಳಬೇಕಿದೆ.
(7 / 9)
ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರಸಾರ ಸಮಯ: 8.30 ಗಂಟೆಗೆ ಪ್ರಸಾರವಾಗುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಬದಲಾದ ಸಮಯವಾದ 6.30 ಕ್ಕೆ ಪ್ರಸಾರವಾಗಲಿದೆ.
(8 / 9)
ಲಕ್ಷ್ಮೀ ನಿವಾಸ ಪ್ರಸಾರ ಸಮಯ: ಇತ್ತೀಚೇಗಷ್ಟೆ ಪ್ರಸಾರ ಶುರುಮಾಡಿ ಝೀ ಕನ್ನಡದ ನಂ.1 ಧಾರಾವಾಹಿ ಪಟ್ಟ ಅಲಂಕರಿಸಿರುವ ಲಕ್ಷ್ಮೀ ನಿವಾಸ ಧಾರಾವಾಹಿಯು, ಇನ್ನು ಮುಂದೆ ಪ್ರತಿದಿನ ರಾತ್ರಿ 8 ರಿಂದ 9 ಗಂಟೆಯ ತನಕದ ಸುದೀರ್ಘ ಸಂಚಿಕೆಯನ್ನ ಪ್ರಸಾರಮಾಡಲಿದೆ.
ಇತರ ಗ್ಯಾಲರಿಗಳು