ಕನ್ನಡ ಸುದ್ದಿ  /  ಮನರಂಜನೆ  /  Kbc 16: ಕೌನ್‌ ಬನೇಗಾ ಕರೋಡ್‌ಪತಿ ಕ್ವಿಜ್‌ ಶೋಗೆ ಅರ್ಜಿ ಸಲ್ಲಿಕೆ ಆರಂಭ; ಕೋಟ್ಯಧಿಪತಿಯಾಗಲು ಬಯಸುವವರು ಹೀಗೆ ಅರ್ಜಿ ಸಲ್ಲಿಸಿ

KBC 16: ಕೌನ್‌ ಬನೇಗಾ ಕರೋಡ್‌ಪತಿ ಕ್ವಿಜ್‌ ಶೋಗೆ ಅರ್ಜಿ ಸಲ್ಲಿಕೆ ಆರಂಭ; ಕೋಟ್ಯಧಿಪತಿಯಾಗಲು ಬಯಸುವವರು ಹೀಗೆ ಅರ್ಜಿ ಸಲ್ಲಿಸಿ

Kaun Banega Crorepati 16: ಕೌನ್‌ ಬನೇಗಾ ಕರೋಡ್‌ಪತಿ ಸೀಸನ್‌ 16ಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಬಿಸಿ 16ಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್‌ 26ರಿಂದ ಆರಂಭವಾಗಿದೆ. ಕೌನ್‌ ಬನೇಗಾ ಕರೋಡ್‌ಪತಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.

KBC 16: ಕೌನ್‌ ಬನೇಗಾ ಕರೋಡ್‌ಪತಿ ಕ್ವಿಜ್‌ ಶೋಗೆ ಅರ್ಜಿ ಸಲ್ಲಿಕೆ ಆರಂಭ
KBC 16: ಕೌನ್‌ ಬನೇಗಾ ಕರೋಡ್‌ಪತಿ ಕ್ವಿಜ್‌ ಶೋಗೆ ಅರ್ಜಿ ಸಲ್ಲಿಕೆ ಆರಂಭ

ಕೌನ್‌ ಬನೇಗಾ ಕರೋಡ್‌ಪತಿಯು ಭಾರತದ ಕಿರುತೆರೆಯ ಪ್ರಮುಖ ಕ್ವಿಜ್‌ ರಿಯಾಲಿಟಿ ಶೋ. ಅಮಿತಾಬ್‌ ಬಚ್ಚನ್‌ ನಡೆಸುವ ಕೌನ್‌ ಬನೇಗಾ ಕರೋಡ್‌ಪತಿಗೆ ಆಯ್ಕೆಯಾಗಿ ಲಕ್ಷಾಂತರ ರೂಪಾಯಿ (ಅದೃಷ್ಟವಿದ್ದರೆ ಕೋಟಿ ರೂಪಾಯಿ) ಗೆಲ್ಲುವ ಬಯಕೆ ಬಹುತೇಕರಿಗೆ ಇದೆ. ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ಈ ರಿಯಾಲಿಟಿ ಶೋನಲ್ಲಿ ನೀವೂ ಕೂಡ ಪಾಲ್ಗೊಳ್ಳಬಹುದು. ಈ ಕ್ವಿಜ್‌ ಶೋನಲ್ಲಿ ಭಾಗವಹಿಸಲು ಬಯಸುವವರಿಗೆ ಅಮಿತಾಬ್‌ ಬಚ್ಚನ್‌ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ. "ಇದೀಗ ಮತ್ತೆ ಕೌನ್‌ ಬನೇಗಾ ಕರೋಡ್‌ಪತಿ ಬಂದಿದೆ. ನೀವು ಈ ಶೋನಲ್ಲಿ ಪಾಲ್ಗೊಳ್ಳಲು ಬಯಸಿದರೆ ಹೆಸರು ನೋಂದಣಿ ಮಾಡಿಕೊಳ್ಳಿ" ಎಂದು ಅವರು ಸೂಚಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೌನ್‌ ಬನೇಗಾ ಕರೋಡ್‌ಪತಿಗೆ ನೋಂದಣಿ ಹೇಗೆ?

ಇಂದು ರಾತ್ರಿ 9 ಗಂಟೆಯಿಂದ ಕೌನ್‌ ಬನೇಗಾ ಕರೋಡ್‌ಪತಿ ಸೀಸನ್‌ 16ಕ್ಕೆ ನೋಂದಣಿ ಆರಂಭವಾಗಿದೆ. ಸೋನಿ ಎಂಟರ್‌ಟೇನ್‌ಮೆಂಟ್‌ ಟಿವಿಯಲ್ಲಿ ಕೇಳುವ ಪ್ರಶ್ನೆಗೆ ಆಸಕ್ತರು ಉತ್ತರಿಸಿ ತಮ್ಮ ವಿವರವನ್ನು ಸಲ್ಲಿಸಬೇಕು. ಆಸಕ್ತರು ಎಸ್‌ಎಂಎಸ್‌ ಮೂಲಕ ಅಥವಾ ಸೋನಿಲಿವ್‌ ಆಪ್‌ ಮೂಲಕ ಈ ಪ್ರಶ್ನೆಗೆ ಉತ್ತರ ಸಲ್ಲಿಸಬಹುದು. ಅದೃಷ್ಟವಂತರು ಈ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವ ಅವಕಾಶ ಪಡೆಯುತ್ತಾರೆ. ಈ ರೀತಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಒಂದಿಷ್ಟು ಜನರು ಈ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಕೆಲವು ವರದಿಗಳ ಪ್ರಕಾರ ಜುಲೈ ತಿಂಗಳ ಕೊನೆಯ ವಾರ ಅಥವಾ ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ಆರಂಭವಾಗಲಿದೆಯಂತೆ.

ಅಮಿತಾಬ್‌ ಬಚ್ಚನ್‌ ಈ ಶೋ ಕುರಿತು ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಾರಿನೊಳಗೆ ಪ್ರವೇಶಿಸುವ ಫೋಟೋವನ್ನು ಹಂಚಿಕೊಂಡಿದ್ದು "ಕಾರಿನೊಳಗೆ ಊಟ ಮಾಡಿದೆ. ಈಗ ಬ್ರೇಕ್‌ ತೆಗೆದುಕೊಳ್ಳಲು ಸಮಯವಿಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.

ನೀವೂ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಪಾಲ್ಗೊಳ್ಳಿ

ಇಂದು ಸೋನಿ ಎಂಟರ್‌ಟೇನ್‌ಮೆಂಟ್‌ ಚಾನೆಲ್‌ನಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸಿ. ಇಂದು ರಾತ್ರಿ ಒಂಬತ್ತು ಗಂಟೆಯಿಂದ ಈ ನೋಂದಣಿ ಆರಂಭವಾಗಲಿದೆ. ಸೋನಿಲಿವ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಈ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು.

ಕೌನ್‌ ಬನೇಗಾ ಕರೋಡ್‌ಪತಿ ಬಗ್ಗೆ

ಕೌನ್‌ ಬನೇಗಾ ಕರೋಡ್‌ಪತಿ ಯಾವಾಗ ಆರಂಭವಾಯಿತು ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು. ವೂ ವಾಂಟ್ಸ್‌ ಟು ಬಿ ಎ ಮಿಲಿಯನೇರ್‌ ಎಂಬ ವಿದೇಶಿ ಟಿವಿ ಗೇಮ್‌ ಶೋ ಸ್ಪೂರ್ತಿಯಿಂದ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ಆರಂಭಿಸಲಾಗಿತ್ತು. 2000ರಲ್ಲಿ ಮೊದಲ ಸೀಸನ್‌ ಪ್ರಸಾರವಾಗಿತ್ತು. ಆಗ ಆ ಕಾರ್ಯಕ್ರಮವನ್ನು ಅಮಿತಾಬ್‌ ಬಚ್ಚನ್‌ ನಡೆಸಿಕೊಟ್ಟಿರಲಿಲ್ಲ. ಆ ಮೊದಲ ಸೀಸನ್‌ ಅನ್ನು ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ ನಿರೂಪಣೆ ಮಾಡಿದ್ದರು. 7ನೇ ಸೀಸನ್‌ನಲ್ಲಿ ಗರಿಷ್ಠ ಮೊತ್ತವನ್ನು 7 ಕೋಟಿ ರೂಪಾಯಿ ಹಾಗೂ 14ನೇ ಸೀಸನ್‌ನಲ್ಲಿ 7.5 ಕೋಟಿ ರೂಪಾಯಿಗೆ ಬಹುಮಾನ ನಿಗದಿ ಮಾಡಲಾಗಿತ್ತು. ಇದೀಗ ಕೌನ್‌ ಬನೇಗಾ ಕರೋಡ್‌ಪತಿ 16ನೇ ಸೀಸನ್‌ ಆರಂಭವಾಗುತ್ತಿದ್ದು, ಹೆಸರು ನೋಂದಾಯಿಸಿ. ಶುಭವಾಗಲಿ.

IPL_Entry_Point