ಕನ್ನಡ ಸುದ್ದಿ  /  Entertainment  /  Sandalwood News Guess The Celebrity From Their Childhood Photo Kannada Famous Actress Sapta Sagaradache Ello Heroine Pcp

Movie Quiz: ಈ ಚಿತ್ರದಲ್ಲಿರುವ ಮಗು ಯಾರೆಂದು ಹೇಳಿ ನೋಡೋಣ, ಈಕೆ ಕನ್ನಡದ ಈಗಿನ ಜನಪ್ರಿಯ ನಟಿ, ಸುಳಿವು- ಸಪ್ತ ಸಾಗರ

Movie Quiz: ಈ ಚಿತ್ರದಲ್ಲಿರುವ ಪುಟ್ಟ ಮಗು ಈಗ ಕನ್ನಡದ ಜನಪ್ರಿಯ ನಟಿ. ಸ್ಯಾಂಡಲ್‌ವುಡ್‌ನ ಈಗಿನ ಜನಪ್ರಿಯ ನಟಿಯರೆಂದರೆ ಸಾಕಷ್ಟು ನಟಿಯರು ಕಣ್ಣಮುಂದೆ ಬರಬಹುದು. ಇವರು ಇತ್ತೀಚೆಗೆ ರಕ್ಷಿತ್‌ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು. ಯಾರಿವರು? ಚೈತ್ರಾ ಜೆ ಆಚಾರ ಅಂದುಕೊಂಡಿದ್ದೀರಾ? ನಿಮ್ಮ ಉತ್ತರ ತಪ್ಪು.

Movie Quiz: ಈ ಚಿತ್ರದಲ್ಲಿರುವ ಮಗು ಯಾರೆಂದು ಹೇಳಿ ನೋಡೋಣ, ಈಕೆ ಕನ್ನಡದ ಜನಪ್ರಿಯ ನಟಿ
Movie Quiz: ಈ ಚಿತ್ರದಲ್ಲಿರುವ ಮಗು ಯಾರೆಂದು ಹೇಳಿ ನೋಡೋಣ, ಈಕೆ ಕನ್ನಡದ ಜನಪ್ರಿಯ ನಟಿ

ಬೆಂಗಳೂರು: ಈ ಫೋಟೋ ನೋಡಿದರೆ ಯಾರು ನೆನಪಾಗ್ತಾರೆ? ಆ ಗಂಡಿನ ಫೋಟೋ ಅಲ್ಲ. ಪುಟ್ಟ ಮಗುವಿನ ಫೋಟೋ ನೋಡಿ. ಈ ಮಗು ಈಗ ಕನ್ನಡದ ಜನಪ್ರಿಯ ನಟಿ. ಹಲವು ಸಿನಿಮಾಗಳಲ್ಲಿ ತನ್ನ ಪ್ರತಿಭೆ ತೋರಿಸಿ ಪಕ್ಕದ ಟಾಲಿವುಡ್‌ನಲ್ಲೂ ಅವಕಾಶ ಪಡೆದಿದ್ದಾರೆ. ಇವರು ಯಾರೆಂದು ಇನ್ನೂ ತಿಳಿಯದೆ ಇರುವವರಿಗೆ ಒಂದು ಸುಳಿವು ನೀಡಬಹುದು. ಇವರು ರಕ್ಷಿತ್‌ ಶೆಟ್ಟಿ ಜತೆಗೆ ಇತ್ತೀಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದಲ್ಲ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಇವರು ಯಾರೆಂದು ಎಲ್ಲರಿಗೂ ಗೊತ್ತಾಗಿರಬಹುದು. ಅವರೇ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಚೆಲುವೆ.

ಸಪ್ತ ಸಾಗರವೆಂಬ ಸುಳಿವು ನೀಡಿದಾಗ ನಿಮ್ಮ ಕಣ್ಣ ಮುಂದೆ ಇಬ್ಬರು ಹೀರೋಯಿನ್‌ಗಳು ಬರಬಹುದು. ಒಬ್ಬರು ಚೈತ್ರಾ ಜೆ ಆಚಾರ್‌. ಇನ್ನೊಬ್ಬರು ರುಕ್ಮಿಣಿ ವಸಂತ್‌. ಮುಖದಲ್ಲಿ ಎಲ್ಲಾದರೂ ಮಚ್ಚೆ ಕಾಣಿಸುತ್ತದೆಯೇ? ಎಂದು ಹುಡುಕುತ್ತಿದ್ದಿರಾ? ಮಚ್ಚೆ ಇಲ್ಲ ತಾನೇ, ಹೀಗಾಗಿ ಇವರು ಚೈತ್ರಾ ಆಚಾರ್‌ ಅಲ್ಲ. ಇವರು ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿಯಲ್ಲಿ ನಟಿಸಿರುವ ರುಕ್ಮಿಣಿ ವಸಂತ್‌.

ತಂದೆಯ ಜತೆಗಿರುವ ರುಕ್ಮಿಣಿ ವಸಂತ್‌ರ ಈ ಫೋಟೋ ಎಲ್ಲಿ ಸಿಗ್ತು ಅನ್ತಿರಾ? ಇಂದು ರುಕ್ಮಿಣಿ ವಸಂತ್‌ ತಂದೆಯ ಹುಟ್ಟುಹಬ್ಬ. ಅಪ್ಪನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಈ ಫೋಟೋವನ್ನು ರುಕ್ಮಿಣಿ ವಸಂತ್‌ ಸೋಷಿಯಲ್‌ ಮೀಡಿಯದಲ್ಲಿ ಹಂಚಿಕೊಂಡಿದ್ದಾರೆ. "ಹುಟ್ಟು ಹಬ್ಬದ ಶುಭಾಶಯ ಅಪ್ಪ. ಪ್ರೀತಿಯ ಅಪ್ಪ. ಧನ್ಯವಾದ ಈ ಫೋಟೋ ಹಂಚಿಕೊಂಡಿರುವುದಕ್ಕೆ" ಎಂದು ಬಿಲಿಗಿರಿ ಕದಂಬಿಗೆ ಧನ್ಯವಾದ ಹೇಳಿದ್ದಾರೆ. ಈ ಫೋಟೋ ನೋಡಿ ರುಕ್ಮಿಣಿ ವಸಂತ್‌ ಗೆಳತಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ನಟಿ ಚೈತ್ರಾ ಜೆ ಆಚಾರ್‌ "ಇದು ಅತ್ಯುತ್ತಮವಾಗಿದೆ" ಎಂದು ಲವ್‌ ಇಮೋಜಿ ಹಾಕಿದ್ದಾರೆ.

ಸಾಕಷ್ಟು ಜನರು ಇನ್‌ಸ್ಟಾಗ್ರಾಂನಲ್ಲಿ ರುಕ್ಮಿಣಿ ವಸಂತ್‌ ತಂದೆಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. ಹುಟ್ಟುಹಬ್ಬದ ಶುಭಾಶಯ ಎಸಿಪಿ ವಸಂತ್‌ ವೇಣುಗೋಪಾಲ್‌, ಹ್ಯಾಪಿ ಬರ್ತ್‌ಡೇ ಕಮಾಂಡರ್‌ ವಸಂತ್‌ ವೇಣುಗೋಪಾಲ್‌ ಎಂದೆಲ್ಲ ವಿಶ್‌ ಮಾಡಿದ್ದಾರೆ. "ಹ್ಯಾಪಿ ಬರ್ತ್‌ಡೇ ಅಂಕಲ್‌, ಕನ್ನಡ ಚಿತ್ರರಂಗಕ್ಕೆ ಈ ಕ್ಯೂಟಿಯನ್ನು ನೀಡಿರುವುದಕ್ಕೆ ಧನ್ಯವಾದ" ಎಂದು ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಈಕೆಯ ಬಾಲ್ಯದ ಚೂಟಿ ಮುಖದ ಫೋಟೋ ನೋಡಿ "ರೌಡಿ ಬೇಬಿ" ಎಂದಿದ್ದಾರೆ. "ನಿಮ್ಮ ತಂದೆ ರೂಪೇಶ್‌ ಶೆಟ್ಟಿ ರೀತಿ ಕಾಣಿಸ್ತಾರೆ" "ನೀವು ಸೇಮ್‌ ನಿಮ್ಮ ತಂದೆ ರೀತಿಯೇ ಇದ್ದೀರಿ" "ಅಶೋಕ್‌ ಚಕ್ರ ವಸಂತ್‌ ಕುಮಾರ್‌" "ಆಗ್ಲೇ ನೀವು ಆಕ್ಟಿಂಗ್‌ ಮಾಡ್ತಾ ಇದ್ದೀರಿ" "ಭಾರತದ ಧೈರ್ಯಶಾಲಿ ತಂದೆಯ ಹೆಮ್ಮೆಯ ಮಗಳು" ಹೀಗೆ ವೈವಿಧ್ಯಮಯವಾಗಿ ಅಭಿಮಾನಿಗಳ ಕಾಮೆಂಟ್‌ಗಳು ಬಂದಿವೆ.

ಯುವ ಸಿನಿಮಾಕ್ಕೆ ರುಕ್ಮಿಣಿ ವಸಂತ್‌ ನಾಯಕಿ

ರುಕ್ಮಿಣಿ ವಸಂತ್‌ ನಟನೆಯ ಯುವ ಸಿನಿಮಾ ಇದೇ ವಾರ ಅಂದರೆ ಮಾರ್ಚ್‌ 25ರಂದು ಬಿಡುಗಡೆಯಾಗುತ್ತಿದೆ. ಯುವ ರಾಜ್‌ಕುಮಾರ್‌ ನಟನೆಯ ಈ ಸಿನಿಮಾ ಮಾತ್ರವಲ್ಲದೆ ರುಕ್ಮಿಣಿ ವಸಂತ್‌ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುರಳಿ ನಾಯಕ ನಟನಾಗಿರುವ ಬಘೀರ ಸಿನಿಮಾಕ್ಕೆ ರುಕ್ಮಿಣಿ ವಸಂತ್‌ ನಾಯಕಿಯಾಗಿದ್ದಾರೆ. ಬೈರತಿ ರಣಗಲ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ಗೆ ರುಕ್ಮಿಣಿ ವಸಂತ್‌ ನಾಯಕಿಯಾಗಿದ್ದಾರೆ. ಹೀಗೆ ಇವರ ಕೈಯಲ್ಲಿ ಹಲವು ಕನ್ನಡ ಪ್ರಾಜೆಕ್ಟ್‌ಗಳೂ ಇವೆ. ಜತೆಗೆ, ಪರಭಾಷೆಗಳಲ್ಲಿ ನಟಿಸುವ ಅವಕಾಶಗಳನ್ನೂ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶಿವಕಾರ್ತಿಕೇಯನ್‌ ಚಿತ್ರಕ್ಕೆ( ಎಸ್‌ಕೆ 23) ರುಕ್ಮಿಣಿ ವಸಂತ್‌ ನಾಯಕಿಯಾಗಿ ಆಯ್ಕೆಯಾಗಿದ್ದರು.

ಬೆಂಗಳೂರು ಮೂಲದ ರುಕ್ಮಿಣಿ ವಸಂತ್‌ ಅವರು ನಟನಾ ತರಬೇತಿ ಕೋರ್ಸ್‌ ಅನ್ನು ಲಂಡನ್‌ನಲ್ಲಿ ಪಡೆದಿದ್ದಾರೆ. 2019ರಲ್ಲಿ ಬೀರಬಲ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಇವರ ಅಭಿನಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಇವರು ಗೋಲ್ಡನ್‌ ಸ್ಟಾರ್‌ ಗಣೇಶ್‌ ಜತೆ ಬಾನದಾರಿಯಲ್ಲಿ ಚಿತ್ರದಲ್ಲೂ ನಟಿಸಿದ್ದರು.

ಮುರಳಿ ನಾಯಕ ನಟನಾಗಿರುವ ಬಘೀರ ಚಿತ್ರಕ್ಕೂ ರುಕ್ಮಿಣಿ ನಾಯಕಿ. ಬೈರತಿ ರಣಗಲ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ಗೆ ರುಕ್ಮಿಣಿ ವಸಂತ್‌ ನಾಯಕಿ. ಇವರ ಕೈಯಲ್ಲಿ ಕನ್ನಡ ಪ್ರಾಜೆಕ್ಟ್‌ಗಳೂ ಇವೆ. ಜತೆಗೆ, ಪರಭಾಷೆಗಳ ಅವಕಾಶಗಳನ್ನೂ ಒಪ್ಪಿಕೊಳ್ಳುತ್ತಿದ್ದಾರೆ.