Bollywood News: ಕೌನ್ ಬನೇಗಾ ಕರೋಡ್‌ಪತಿ ಸೀಸನ್ 15 ಶುಭಾರಂಭ; ವಾಹಿನಿ, ಸಮಯ ಹೊಸ ಲೈಫ್‌ಲೈನ್ ಬಗ್ಗೆ ಇಲ್ಲಿದೆ ಮಾಹಿತಿ
ಕೌನ್ ಬನೇಗಾ ಕರೋಡ್‌ಪತಿ 15ನೇ ಸೀಸನ್‌ನಲ್ಲಿ 'ಸೂಪರ್ ಸಂಡೂಕ್' ಎಂಬ ಹೊಸ ಅಂಶ ಸೇರ್ಪಡೆ ಆಗಿದ್ದು ಈ ಹಂತದ ಮೂಲಕ ಸ್ಪರ್ಧಿಗಳು ನಮ್ಮ ನಷ್ಟವನ್ನು ಮರು ಪಡೆಯಲು ಅವಕಾಶವಿದೆ. ಜೊತೆಗೆ 'ದೇಶ್ ಕಾ ಸವಾಲ್' ಹೆಸರಿನ ವಿಡಿಯೋ ಕಾಲ್ ಹಾಗೂ 'ಡಬಲ್ ಡಿಪ್' ಎಂಬ ಹೊಸ ಲೈಫ್ ಲೈನ್ ಸೇರ್ಪಡೆ ಮಾಡಲಾಗಿದೆ.
ಮನರಂಜನೆ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಕೌನ್ ಬನೇಗಾ ಕರೋಡ್‌ಪತಿ ವೀಕ್ಷಕರಿಗೆ ಬಹಳ ಇಷ್ಟವಾದ ಕಾರ್ಯಕ್ರಮ. ಕನ್ನಡದಲ್ಲಿ ಈ ಕಾರ್ಯಕ್ರಮವನ್ನು ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿದ್ದರು. ಆದರೆ ಅವರು ನಿಧನರಾದಾಗಿನಿಂದ ಇದುವರೆಗೂ ಕನ್ನಡದಲ್ಲಿ ಈ ಕಾರ್ಯಕ್ರಮ ಆರಂಭವಾಗಿಲ್ಲ.
ಇನ್ನು ಹಿಂದಿಯಲ್ಲಿ ಈಗಾಗಲೇ 14 ಸೀಸನ್ ಮುಗಿದಿವೆ. 15ನೇ ಸೀಸನ್ 2 ದಿನಗಳ ಹಿಂದಷ್ಟೇ ಆರಂಭವಾಗಿದೆ. ಒಂದು ಸೀಸನ್ ಶಾರುಖ್ ಖಾನ್ ನಡೆಸಿಕೊಟ್ಟಿದ್ದನ್ನು ಬಿಟ್ಟರೆ ಇದುವರೆಗಿನ ಎಲ್ಲಾ ಸೀಸನ್‌ಗಳನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಂಡು ಬರುತ್ತಿದ್ದಾರೆ. ಆಗಸ್ಟ್ 14 ರಿಂದ ಹೊಸ ಸೀಸನ್ ಆರಂಭವಾಗಿದೆ. ಪ್ರತಿ ದಿನ ರಾತ್ರಿ 9 ಗಂಟೆಗೆ ಸೋನಿ ಎಂಟರ್ಟೈನ್ಮೆಂಟ್ ವಾಹಿನಿಯಲ್ಲಿ ಆಸಕ್ತರು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವನ್ನು ವೀಕ್ಷಿಸಬಹುದು. ಪ್ರತಿ ವಾರ ಸೋಮವಾರದಿಂದ ಶುಕ್ರವಾರದವರೆಗೂ ಕೆಬಿಸಿ ಪ್ರಸಾರವಾಗುತ್ತದೆ.
ಹೊಸ ಲೈಫ್‌ಲೈನ್ ಸೇರ್ಪಡೆ
ಕೌನ್ ಬನೇಗಾ ಕರೋಡ್‌ಪತಿ 15ನೇ ಸೀಸನ್‌ನಲ್ಲಿ 'ಸೂಪರ್ ಸಂಡೂಕ್' ಎಂಬ ಹೊಸ ಅಂಶ ಸೇರ್ಪಡೆ ಆಗಿದ್ದು ಈ ಹಂತದ ಮೂಲಕ ಸ್ಪರ್ಧಿಗಳು ನಮ್ಮ ನಷ್ಟವನ್ನು ಮರು ಪಡೆಯಲು ಅವಕಾಶವಿದೆ. ಜೊತೆಗೆ 'ದೇಶ್ ಕಾ ಸವಾಲ್' ಹೆಸರಿನ ವಿಡಿಯೋ ಕಾಲ್ ಹಾಗೂ 'ಡಬಲ್ ಡಿಪ್' ಎಂಬ ಹೊಸ ಲೈಫ್ ಲೈನ್ ಸೇರ್ಪಡೆ ಮಾಡಲಾಗಿದೆ. ಈ ಹೊಸ ಸೀಸನ್ ನೋಡಲು ಕಿರುತೆರೆ ವೀಕ್ಷಕರು ಉತ್ಸುಕರಾಗಿದ್ದಾರೆ.
Who Wants to Be a Millionaire ಅಂತಾರಾಷ್ಟ್ರೀಯ ಟಿವಿ ಗೇಮ್ ಶೋ ಸ್ಪೂರ್ತಿಯಿಂದ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. 2000ರಲ್ಲಿ ಮೊದಲ ಸೀಸನ್ ಪ್ರಸಾರವಾಯ್ತು. ಕಾರಣಾಂತರಗಳಿಂದ 3ನೇ ಸೀಸನನ್ನು ಅಮಿತಾಬ್ ಬಚ್ಚನ್ ನಡೆಸಿಕೊಡಲು ಸಾಧ್ಯವಾಗಲಿಲ್ಲ, ಆ ಸೀಸನನ್ನು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ನಿರೂಪಣೆ ಮಾಡಿದ್ದರು. 7ನೇ ಸೀಸನ್‌ನಲ್ಲಿ ಗರಿಷ್ಠ ಮೊತ್ತವನ್ನು 7 ಕೋಟಿ ರೂಪಾಯಿ ಹಾಗೂ 14ನೇ ಸೀಸನ್‌ನಲ್ಲಿ 7.5 ಕೋಟಿ ರೂಪಾಯಿಗೆ ಬಹುಮಾನ ನಿಗದಿ ಮಾಡಲಾಗಿತ್ತು.
ನನ್ನ ಜೀವನದ ಅವಿಭಾಜ್ಯ ಅಂಗ
''ಕೆಬಿಸಿ, ನನ್ನ ಜೀವನದ ಒಂದು ಅವಿಭಾಗ್ಯ ಅಂಗವಾಗಿದೆ. ಜನರೊಂದಿಗೆ ಸಂಪರ್ಕ ಸಾಧಿಸಲು ಇದು ನನಗೆ ಉತ್ತಮ ವೇದಿಕೆ ಆಗಿದೆ. ಜೀವನದಲ್ಲಿ ಬದಲಾವಣೆ ಕಾಣಲು ಬಯಸುವವರಿಗೆ, ತಮಗೆ ಇರುವ ಜ್ಞಾನದಿಂದ ತಮ್ಮ ಮಹತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಬಯಸುವವರಿಗೆ ಈ ಕಾರ್ಯಕ್ರಮ ಸ್ಪೂರ್ತಿಯಾಗಿದೆ'' ಎಂದು ಅಮಿತಾಬ್ ಬಚ್ಚನ್ ಕೆಬಿಸಿ ಜೊತೆಗಿನ ತಮ್ಮ ಅನುಬಂಧವನ್ನು ಹೇಳಿಕೊಂಡಿದ್ದಾರೆ.