The Magic of Shiri Review: ಕುಟುಂಬದ ಜವಾಬ್ದಾರಿ ಜೊತೆಗೆ ಮ್ಯಾಜಿಶಿಯನ್ ಆಗಬೇಕೆಂಬ ಕನಸು ನನಸಾಗಿಸಲು ಗೃಹಿಣಿಯ ಹೋರಾಟವಿದು
ಕನ್ನಡ ಸುದ್ದಿ  /  ಮನರಂಜನೆ  /  The Magic Of Shiri Review: ಕುಟುಂಬದ ಜವಾಬ್ದಾರಿ ಜೊತೆಗೆ ಮ್ಯಾಜಿಶಿಯನ್ ಆಗಬೇಕೆಂಬ ಕನಸು ನನಸಾಗಿಸಲು ಗೃಹಿಣಿಯ ಹೋರಾಟವಿದು

The Magic of Shiri Review: ಕುಟುಂಬದ ಜವಾಬ್ದಾರಿ ಜೊತೆಗೆ ಮ್ಯಾಜಿಶಿಯನ್ ಆಗಬೇಕೆಂಬ ಕನಸು ನನಸಾಗಿಸಲು ಗೃಹಿಣಿಯ ಹೋರಾಟವಿದು

ತಾನು ಕಂಡ ವಿಭಿನ್ನವಾದ ಕನಸನ್ನು ನನಸು ಮಾಡಿಕೊಳ್ಳಲು ಗೃಹಿಣಿಯೊಬ್ಬಳು ಕುಟುಂಬದ ಜವಾಬ್ದಾರಿಯ ಜೊತೆ ಜೊತೆಗೆ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಪಯಣವೇ ದಿ ಮ್ಯಾಜಿಕ್ ಆಫ್ ಶಿರಿ. ವಿವಾದಗಳ ನಡುವೆಯೂ ಒಟಿಟಿಗೆ ಬಂದಿರುವ ಈ ವೆಬ್ ಸೀರೀಸ್ ನ ವಿಮರ್ಶೆ ಇಲ್ಲಿದೆ.

ದಿ ಮ್ಯಾಜಿಕ್ ಆಫ್ ಶಿರಿ ವೆಬ್ ಸರಣಿ ಒಟಿಟಿಗೆ ಬಂದಿದೆ. ತನ್ನ ಕನಸನ್ನು ನನಸು ಮಾಡಿಕೊಳ್ಳಲು ಗೃಹಿಣಿಯ ಹೋರಾಟದ ಕಥೆ ಇಲ್ಲಿದೆ.
ದಿ ಮ್ಯಾಜಿಕ್ ಆಫ್ ಶಿರಿ ವೆಬ್ ಸರಣಿ ಒಟಿಟಿಗೆ ಬಂದಿದೆ. ತನ್ನ ಕನಸನ್ನು ನನಸು ಮಾಡಿಕೊಳ್ಳಲು ಗೃಹಿಣಿಯ ಹೋರಾಟದ ಕಥೆ ಇಲ್ಲಿದೆ.

ತನ್ನ ಗುರಿಯನ್ನು ತಲುಪಲು ಮಹಿಳೆಯರು ನಡೆಸುವ ಹೋರಾಟಗಳ ಬಗ್ಗೆ ಈವರೆಗೆ ಹಲವಾರು ಸಿನಿಮಾಗಳು, ನಾಟಕಗಳು ಬಂದಿವೆ. ಕುಟುಂಬದ ಜವಾಬ್ದಾರಿಯ ಜೊತೆಗೆ ವಿಭಿನ್ನವಾದ ಕನಸನ್ನು ನನಸು ಮಾಡಿಕೊಳ್ಳಲು ಹೊರಟ ದಿವ್ಯಾಂಕಾ ತ್ರಿಪಾಠಿ ಅವರ ಪಾತ್ರ ದಿ ಮ್ಯಾಜಿಕ್ ಆಫ್ ಶಿರಿ ವೆಬ್ ಸರಣಿಯಲ್ಲಿ ವಿಶೇಷವಾಗಿದೆ. ಸರಣಿಯಲ್ಲಿ ಸವಾಲುಗಳ ಪಾತ್ರಗಳನ್ನೇ ತುಂಬಿರುವ ದಿ ಮ್ಯಾಜಿಕ್ ಆಫ್ ಶಿರಿ ಬಿಡುಗಡೆಗೆ ಈ ಹಿಂದೆ ಅಡ್ಡಿ ಆತಂಕಗಳನ್ನು ಎದುರಿಸಿತ್ತು. ದಿವ್ಯಾಂಕಾ ತ್ರಿಪಾಠಿ ಮತ್ತು ಜಾವೇದ್ ಜಾಫ್ರಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ವೆಬ್ ಸೀರೀಸ್ ಬಿಡುಗಡೆಗೆ ಜೈನ ಸಮುದಾಯ ವಿರೋಧ ವ್ಯಕ್ತಪಡಿಸಿತ್ತು. ಎಲ್ಲಾ ವಿವಾದಗಳು, ಸವಾಲುಗಳನ್ನು ಮೆಟ್ಟಿನಿಂತು ದಿ ಮ್ಯಾಜಿಕ್ ಆಫ್ ಶಿರಿ ವೆಬ್ ಸರಣಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

10 ಎಪಿಸೋಡ್ ಗಳ ವೆಬ್ ಸರಣಿ ಜಿಯೊ ಸಿನಿಮಾ ಪ್ರಿಮಿಯಂನಲ್ಲಿ ಸ್ಟೀಮಿಂಗ್ ಆಗುತ್ತಿದೆ. ಜಾದೂಗಾರ ಆಗಬೇಕೆಂಬ ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳಲು ಗೃಹಿಣಿಯೊಬ್ಬರು ನಡೆಸುವ ಹೋರಾಟದ ಪ್ರಯಾಣವಾಗಿದೆ. ಭಾವನಾತ್ಮಕ ಮತ್ತು ಸಶಕ್ತ ಪಾಠಗಳನ್ನು ಇಲ್ಲಿ ಒಟ್ಟಿಗೆ ಕಾಣಬಹುದು. ದಿವ್ಯಾಂಕಾ ತ್ರಿಪಾಠಿ, ಜಾವೇದ್ ಜಾಫೇರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ ನಮಿತ್ ದಾಸ್ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

2000 ರ ದಶಕದ ಆರಂಭದಲ್ಲಿನ ಕಥೆಯನ್ನು ದಿ ಮ್ಯಾಜಿಕ್ ಆಫ್ ಶಿರಿ ವಿವರಿಸುತ್ತದೆ. ಶಿರಿ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ ಮ್ಯಾಜಿಕ್ ನಲ್ಲಿ ಅಸಾಮಾನ್ಯ ಉತ್ಸಾಹವನ್ನು ಹೊಂದಿರುತ್ತಾರೆ. ಜಾದೂಗಾರ ಕಲೆಯನ್ನು ಹೇಗಾದರೂ ಮಾಡಿ ದೊಡ್ಡ ಮಟ್ಟದಲ್ಲಿ ಪ್ರದರ್ಶಿಸಬೇಕು. ಪ್ರೇಕ್ಷಕರ ಎದುರಿ ತಮ್ಮ ಮ್ಯಾಜಿಕ್ ಕಲೆಯನ್ನು ಪ್ರದರ್ಶಿಸಬೇಕೆಂಬ ಕನಸನ್ನು ಕಾಣುತ್ತಾರೆ. ತನ್ನ ಮಕ್ಕಳಿಗೆ ಸ್ವಯಂ ಪ್ರೇರಿತವಾಗಿ ಕಲಿಸಿದ ತಂತ್ರಗಳನ್ನು ಬಳಸಿ ಮ್ಯಾಜಿಕ್ ಕಲೆಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುತ್ತಾ ಸಾಗುತ್ತಾರೆ.

ಶಿರಿಯ ಕನಸನ್ನು ನನಸು ಮಾಡಲು ಶಿರಿಯ (ದಿವ್ಯಾಂಕಾ ತ್ರಿಪಾಠಿ) ಮಾರ್ಗದರ್ಶಕರಾಗಿ ಅನುಭವಿ ಜಾದೂಗಾರ ಸಲೀಂ ಜಾದುಗಾರ್ (ಜಾವೇದ್ ಜಾಫೇರ್) ನೆರವಾಗುತ್ತಾರೆ. ಶಿರಿಯ ಈ ಪ್ರಯಾಣವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಕುಟುಂಬದ ನಿರೀಕ್ಷೆಗಳು, ಸಾಮಾಜಿಕ ಒತ್ತಡಗಳನ್ನು ಕಣ್ಕಟ್ಟು ಮಾಡಲು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಈ ವೆಬ್ ಸರಣಿಯಲ್ಲಿ ವೈಯಕ್ತಿಕ ಕನಸುಗಳನ್ನು ಸಾಮಾಜಿಕ ಮಾನದಂಡಗಳೊಂದಿಗೆ ಸಮತೋಲಗೊಳಿಸಲು ಇರುವ ಸವಾಲುಗಳನ್ನು ಅಚ್ಚುಕಟ್ಟಾಗಿ ವಿವರಿಸಲಾಗಿದೆ.

ಸರಣಿಗೆ ಶಿರಿ ಪಾತ್ರ ಜೀವಾಳವಾಗಿದೆ. ದಿವ್ಯಾಂಕಾ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತನ್ನ ದೇಶಿಯ ಪಾತ್ರವನ್ನು ಮೀರಿ ಕನಸು ಕಾಣುವ ಧೈರ್ಯದ ಮಹಿಳೆಯ ಭಾವನಾತ್ಮಕ ಆಳವನ್ನು ಪ್ರದರ್ಶಿಸಿದ್ದಾರೆ. ಇನ್ನೂ ಶಿರಿಯ ಮಾರ್ಗದರ್ಶಕರಾಗಿರುವ ಜಾವೇದ್ ಜಾಫರ್ ಅವರು ಸಲೀಂ ಜಾದೂಗಾರ್ ಪಾತ್ರದ ತೂಕವನ್ನು ಹೆಚ್ಚಿಸಿದ್ದಾರೆ. ಪರಿಶ್ರಮ ಮತ್ತು ಸ್ವಯಂ ನಂಬಿಕೆಯ ಬಗ್ಗೆ ಜೀವನದ ಪಾಠಗಳನ್ನು ನೀಡಿದ್ದಾರೆ. ಶಿರಿಯ ವಿಚ್ಛೇದಿತ ಪತಿಯಾಗಿ ನಮಿತ್ ದಾಸ್ ನಟಿಸಿದ್ದಾರೆ. ಬಿರ್ಸಾ ದಾಸ್ ಗುಪ್ತಾ ನಿರ್ದೇಶಿಸಿರುವ ದಿ ಮ್ಯಾಜಿಕ್ ಆಫ್ ಶಿರಿ ವಿಶಿಷ್ಟವಾಗಿ ಮೋಡಿ ಮಾಡಿದೆ.

Whats_app_banner