ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರಿನ ಕೊರತೆ ನೀಗಿಸಲು ಜಲಮಂಡಳಿ ಮತ್ತೊಂದು ನಿರ್ಧಾರ; ದೊಡ್ಡ ಗ್ರಾಹಕರ ನೀರು ಬಳಕೆಗೆ ಕತ್ತರಿ -Bengaluru Water Crisis

ಬೆಂಗಳೂರು ನೀರಿನ ಕೊರತೆ ನೀಗಿಸಲು ಜಲಮಂಡಳಿ ಮತ್ತೊಂದು ನಿರ್ಧಾರ; ದೊಡ್ಡ ಗ್ರಾಹಕರ ನೀರು ಬಳಕೆಗೆ ಕತ್ತರಿ -Bengaluru Water Crisis

ಬೆಂಗಳೂರು ನೀರಿನ ಸಮಸ್ಯೆಗೆ ಜಲಮಂಡಳಿ ಮತ್ತೊಂದು ಪರಿಹಾರವನ್ನು ಹುಡುಕಿಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ನೀರು ಬಳಸುವ ಗ್ರಾಹಕರಿಗೆ ನೀರನ್ನ ಕಡಿತ ಮಾಡಲಿದೆ. ಇದರಿಂದ ನಿತ್ಯ 60 ಎಂಎಲ್‌ಡಿ ನೀರು ಉಳಿಸುವ ಗುರಿ ಹೊಂದಿದೆ.

ಬೆಂಗಳೂರಿನ ಕೆಲವು ಭಾಗಗಳಲ್ಲಿ ಕಳದೊಂದು ತಿಂಗಳಿನಿಂದ ನೀರಿನ ಕೊರತೆ ಉಂಟಾಗಿದೆ. ಜಲಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದೆ. (ಫೋಟೊ ಸಂಗ್ರಹ)
ಬೆಂಗಳೂರಿನ ಕೆಲವು ಭಾಗಗಳಲ್ಲಿ ಕಳದೊಂದು ತಿಂಗಳಿನಿಂದ ನೀರಿನ ಕೊರತೆ ಉಂಟಾಗಿದೆ. ಜಲಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದೆ. (ಫೋಟೊ ಸಂಗ್ರಹ)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore Water Crisis) ಕಳೆದ ಹಲವು ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದೆ. ನಗರದ ಕೆಲವೊಂದು ಭಾಗಗಳಲ್ಲಿ ಈ ಕೊರತೆ ಮುಂದುವರಿದಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಲವು ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಇದರ ಭಾಗವಾಗಿ ಇದೀಗ ದೊಡ್ಡ ಪ್ರಮಾಣದಲ್ಲಿ ಬಳಸುತ್ತಿರುವ ಗ್ರಾಹಕರಿಗೆ ನೀರಿನ ಕಡಿತಕ್ಕೆ ಮುಂದಾಗಿದೆ. ಇದರಿಂದ ಪ್ರತಿ ನಿತ್ಯ 60 ಎಂಎಲ್‌ಡಿ ನೀರನ್ನು ಉಳಿಸುವ ಗುರಿಯನ್ನು ಹಾಕಿಕೊಂಡಿದೆ. ಹಾಗಾದರೆ ದೊಡ್ಡ ಪ್ರಮಾಣದಲ್ಲಿ ನೀರು ಬಳಸುವವರು ಯಾರು, ಎಷ್ಟು ಪ್ರಮಾಣದಲ್ಲಿ ನೀರು ಬಳಸುತ್ತಾರೆ ಎಂಬುದರ ವಿವರವನ್ನು ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಬೇಸಿಗೆ ಆರಂಭವಾಗಿನಿಂದಲೂ ಬೆಂಗಳೂರಿನಲ್ಲಿ ಪ್ರತಿದಿನ 500 ಎಂಎಲ್‌ಡಿ (ಶೇಕಡಾ 12) ನೀರಿನ ಕೊರತೆ ಇದೆ ಎಂಬುದನ್ನು ಜಲಮಂಡಳಿ ಒಪ್ಪಿಕೊಂಡಿದೆ. ಹೀಗಾಗಿ ದೊಡ್ಡ ಗ್ರಾಹಕರ ನೀರಿನ ಬಳಕೆಯನ್ನು ಅಲ್ಪ ಪ್ರಮಾಣದಲ್ಲಿ ಕಡಿತ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ದೊಡ್ಡ ಗ್ರಾಹಕರನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ. ಬೃಹತ್ ಬಳಕೆದಾರರು (ದಿನಕ್ಕೆ 2 ಕೋಟಿ ಲೀಟರ್‌ಗಿಂತ ಹೆಚ್ಚು ನೀರು ಬಳಸುವವರು), ದೊಡ್ಡ ಗ್ರಾಹಕರು (ದಿನಕ್ಕೆ 40 ಲಕ್ಷದಿಂದ 2 ಕೋಟಿ ಲೀಟರ್ ನೀರು ಬಳಸುವವರು ಹಾಗೂ ದಿನಕ್ಕೆ 20 ಲಕ್ಷದಿಂದ 40 ಲಕ್ಷ ಲೀಟರ್ ನೀರು ಬಳಸುವ ಗ್ರಾಹಕರು. ಈ ಮೂರು ವರ್ಗದವರು ದಿನಕ್ಕೆ 525 ಮಿಲಿಯನ್ ಲೀಟರ್ (ಎಂಎಲ್‌ಡಿ) ಬಳಸುತ್ತಾರೆ. ಇದು ಬೆಂಗಳೂರು ನಗರಕ್ಕೆ ಪ್ರತಿದಿನ ಪಡೆಯುವ ಕಾವೇರಿ ನೀರಿನ ಶೇಕಡಾ 36 ರಷ್ಟು ಆಗಿದೆ.

ದೊಡ್ಡ ಗ್ರಾಹಕರಿಗೆ ನೀರಿನ ಕಡಿತ ಇದೇ ಮೊದಲಲ್ಲ. ಜಲಮಂಡಳಿ ಕಳೆದ ಮಾರ್ಚ್ 15 ರಂದು ಹಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ನೀರಿನ ಪೂರೈಕೆಯಲ್ಲಿ ಕಡಿತ ಮಾಡಿದೆ. ರಕ್ಷಣಾ ಸಂಸ್ಥೆಗಳು, ಎಚ್‌ಎಎಲ್, ಬಯೋಕಾನ್, ನಿಮ್ಹಾನ್ಸ್, ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ 38 ಬೃಹತ್ ಬಳಕೆದಾರರಿಗೆ ಶೇಕಡಾ 20 ರಷ್ಟು ನೀರಿನ ಕಡಿತವನ್ನು ಘೋಷಣೆ ಮಾಡಿತ್ತು. ಇದರಿಂದ ಪ್ರತಿ ದಿನ ಸುಮಾರು 12 ಎಂಎಲ್‌ಡಿ ನೀರಿನ ಉಳಿತಾಯ ಮಾಡಲಾಗುತ್ತಿದೆ. ಆದರೆ ನೀರಿನ ಕಡಿತದಿಂದ ಆಸ್ಪತ್ರೆಗಳಿಗೆ ವಿನಾಯಿತಿ ನೀಡಲಾಗಿದೆ.

ಜಲಮಂಡಳಿಯಷ್ಟೇ ಅಲ್ಲ ನೀರು ಉಳಿಸಲು ಗ್ರಾಹಕರೂ ಕೈಜೋಡಿಸಬೇಕು

ಇದೀಗ ನೀರಿನ ಕಡಿತವನ್ನು ಬೃಹತ್ ಪ್ರಮಾಣದ ಬಳಕೆದಾರರಿಗೆ ವಿಸ್ತರಿಸಲಾಗುತ್ತಿದೆ. ದೊಡ್ಡ ದೊಡ್ಡ ವಾಣಿಜ್ಯ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ಗಳ ಕಾಂಪ್ಲೆಕ್ಸ್‌ಗಳು, ಕೈಗಾರಿಕೆಗಳಿಗೆ ನೀರಿನ ಕಡಿತವಾಗಲಿದೆ. ಇಂತಹ ಸುಮಾರು 20 ಸಾವಿರ ಗ್ರಾಹಕರು ಬೆಂಗಳೂರಿನಲ್ಲಿದ್ದಾರೆ ಎಂದು ಜಲಮಂಡಳಿ ತಿಳಿಸಿದೆ. ದಿನಕ್ಕೆ 40 ಲಕ್ಷದಿಂದ 2 ಕೋಟಿ ಲೀಟರ್‌ಗಳ ನಡುವಿನ ಬಳಕೆದಾರರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಏಪ್ರಿಲ್ 4 ರಂದು 20 ಲಕ್ಷದಿಂದ 40 ಲಕ್ಷ ಲೀಟರ್‌ ನೀರು ಬಳಸುವ ಗ್ರಾಹಕರೊಂದಿಗೆ ಮಾತುಕತೆ ನಡೆಸಿದ್ದೇವೆ. ಈ ಬಳಕೆದಾರರರು 475 ಎಂಎಲ್‌ಡಿ ನೀರನ್ನು ಬಸುತ್ತಿದ್ದಾರೆ. ಮೊದಲ ಹಂತವಾಗಿ ಏಪ್ರಿಲ್‌ನಲ್ಲಿ ಶೇಕಡಾ 10 ರಷ್ಟು ದೊಡ್ಡ ಗ್ರಾಹಕರಿಗೆ ನೀರಿನ ಪೂರೈಕೆಯನ್ನು ಕಡಿತಗೊಳಿಸುತ್ತಿದ್ದೇವೆ. ಇದರಿಂದ ಪ್ರತಿನಿತ್ಯ ಸುಮಾರು 50 ಎಂಎಲ್‌ಡಿ ನೀರನ್ನು ಉಳಿಸುವ ಗುರಿ ಇದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ನೀರಿನ ಪರಿಸ್ಥಿತಿಯನ್ನು ನೋಡಿಕೊಂಡು ಎರಡನೇ ಹಂತಕ್ಕೆ ಹೋಗಲಿದ್ದೇವೆ. ನೀರು ಸಂರಕ್ಷಣಾ ತಂತ್ರಗಳನ್ನು ಅಳವಡಿಸಿಕೊಂಡರೆ ಜಲಮಂಡಳಿಗೆ ಶೇಕಡಾ 10 ರಿಂದ 20 ರಷ್ಟು ನೀರು ಉಳಿಸಿದಂತಾಗುತ್ತದೆ. ಉದಾಹರಣೆಗೆ ಟ್ಯಾಪ್‌ಗಳಿಗೆ ನೀರಿನ ಹರಿವನ್ನು ನಿಯಂತ್ರಿಸಲು ಏರೇಟರ್‌ಗಳನ್ನು ಅಳವಡಿಸಿಕೊಂಡರೆ ಕನಿಷ್ಠ 30 ರಷ್ಟು ನೀರನ್ನು ಉಳಿಸಬಹುದು ಎಂದು ಹೇಳಿದ್ದಾರೆ.

IPL_Entry_Point