ಕನ್ನಡ ಸುದ್ದಿ  /  Karnataka  /  Education News Karnataka Sslc Result 83.88 Percent Students Passed Check Result Online At Karresults Website Pcp

SSLC Result Out: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಈ ಬಾರಿ ಶೇಕಡ 83.88 ಫಲಿತಾಂಶ

Karnataka SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ (KSEAB SSLC results 2023) ಪ್ರಕಟವಾಗಿದೆ. ಈ ಬಾರಿ ಶೇಕಡ 83.88 ಫಲಿತಾಂಶ ದಾಖಲಾಗಿದೆ. ಒಟ್ಟು 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ ಪಡೆದಿದ್ದಾರೆ.

SSLC Result Out: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಈ ಬಾರಿ ಶೇಕಡ 83.88 ಫಲಿತಾಂಶ
SSLC Result Out: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಈ ಬಾರಿ ಶೇಕಡ 83.88 ಫಲಿತಾಂಶ (HT_PRINT)

ಬೆಂಗಳೂರು: ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ (KSEAB SSLC results 2023) ಪ್ರಕಟವಾಗಿದೆ. ಈ ಬಾರಿ ಶೇಕಡ 83.88 ಫಲಿತಾಂಶ ದಾಖಲಾಗಿದೆ. ಒಟ್ಟು 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 96.08ರಷ್ಟು ಫಲಿತಾಂಶ ದಾಖಲಾಗಿದೆ. ಎರಡನೇ ಸ್ಥಾನವನ್ನು ಮಂಡ್ಯ ಜಿಲ್ಲೆ ಮತ್ತು ಮೂರನೇ ಸ್ಥಾನವನ್ನು ಹಾಸನ ಜಿಲ್ಲೆ ಪಡೆದಿದೆ. ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಪಡೆದಿದ್ದಾರೆ. ನಾಲ್ವರು ವಿದ್ಯಾರ್ಥಿಗಳು ಶೇಕಡ 100 ಫಲಿತಾಂಶ ಪಡೆದಿದ್ದಾರೆ. ಭೂಮಿಕಾ ಪೈ, ಯಶಸ್‌ ಗೌಡ, ಅನುಮಮಾ ಶ್ರೀಶೈಲ, ಭೀಮನಗೌಡ ಹನುಮಂತಗೌಡ ಬಿರಾದಾರ ಪಾಟೀಲ ಶೇಕಡ 100 ಫಲಿತಾಂಶ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧ್ಯಕ್ಷ ಆರ್ ರಾಮಚಂದ್ರ, ಪರೀಕ್ಷಾಂಗ ನಿರ್ದೇಶಕ ಎಚ್ ಗೋಪಾಲಕೃಷ್ಣ ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ಅವರು ಬೆಂಗಳೂರಿನಲ್ಲಿಂದು ಫಲಿತಾಂಶ ಪ್ರಕಟಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಿಕ್ಷಣ ಸಚಿವ ಬಿಸಿ ನಾಗೇಶ್‌ ಅವರು ಫಲಿತಾಂಶ ಪ್ರಕಟಿಸಲು ಮುಂದಾಗಿಲ್ಲ.

ಹೆಚ್ಚು ಫಲಿತಾಂಶ ಪಡೆದ ಜಿಲ್ಲೆಗಳು

ಜಿಲ್ಲಾವಾರು ಫಲಿತಾಂಶದಲ್ಲಿ ಚಿತ್ರದುರ್ಗ (ಶೇ 96.8) ಪ್ರಥಮ ಸ್ಥಾನ ಪಡೆದಿದೆ. ಶೇ 96.74 ಪಡೆದ ಮಂಡ್ಯ, ಶೇ 96.68 ಪಡೆದ ಹಾಸನ ನಾಲ್ಕನೇ ಸ್ಥಾನ ಪಡೆದಿದೆ.

ಬಾಲಕಿಯರ ಮೇಲುಗೈ

ಈ ಬಾರಿಯೂ ಬಾಲಕಿಯರೇ ಮೇಲುಗೈ ಪಡೆದಿದ್ದಾರೆ. 5,59,51 ಬಾಲಕಿಯರು ಮತ್ತು 3,41,108 ಉತ್ತೀರ್ಣರಾಗಿದ್ದಾರೆ.

ಶೇಕಡ 100 ಫಲಿತಾಂಶ ಪಡೆದ ನಾಲ್ವರು ವಿದ್ಯಾರ್ಥಿಗಳು

1) ಭೂಮಿಕಾ ಪೈ: ಬೆಂಗಳೂರಿನ ನ್ಯೂಮೆಕಾಲೆ ಇಂಗ್ಲಿಷ್ ಹೈಸ್ಕೂಲ್ ವಿದ್ಯಾರ್ಥಿನಿ

2) ಯಶಸ್ ಗೌಡ: ಬಾಲಗಂಗಾದರನಾಥ ಪ್ರೌಢಶಾಲೆ, ಚಿಕ್ಕಬಳ್ಳಾಪುರ

3) ಅನುಪಮಾ ಶ್ರೀಶೈಲ: ಕುಮಾರೇಶ್ವರ ಹೈಸ್ಕೂಲ್, ಸವದತ್ತಿ, ಬೆಳಗಾವಿ

4) ಭೀಮನಗೌಡ ಹನುಮಂತಗೌಡ ಬಿರಾದಾರ ಪಾಟೀಲ: ಆಕ್ಸ್‌ಫರ್ಡ್‌ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ನಾಗರಬೆಟ್ಟ, ಮುದ್ದೆಬಿಹಾಳ

ಪೂರಕ ಪರೀಕ್ಷೆ ವೇಳಾಪಟ್ಟಿ ಮುಂದಿನ ವಾರ ಪ್ರಕಟವಾಗಲಿದೆ.

ಯಾದಗಿರಿ, ಬೀದರ್‌, ಬೆಂಗಳೂರು ದಕ್ಷಿಣ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದ ಮೂರು ಜಿಲ್ಲೆಗಳಾಗಿವೆ. ಈ ಮೂರು ಜಿಲ್ಲೆಗಳು ಕ್ರಮವಾಗಿ ಶೇ 75.49, ಶೇಕಡ 78.73 ಮತ್ತು ಶೇಕಡ 78.95 ಪಡೆದಿವೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ: ರಿಸಲ್ಟ್ ಹೀಗೆ ನೋಡಿ, ಡೈರೆಕ್ಟ್ ಲಿಂಕ್ ಇಲ್ಲಿದೆ

ಇಂದು 11 ಗಂಟೆಯ ಬಳಿಕ https://karresults.nic.in ಮತ್ತು https://kseab.karnataka.gov.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ವೀಕ್ಷಿಸಬಹುದು. ಸೋಮವಾರ ಮಧ್ಯಾಹ್ನ ಆಯಾ ಶಾಲೆಗಳಲ್ಲಿಯೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ನಂಬರ್‌ಗಳಿಗೆ ಎಸ್‌ಎಂಎಸ್‌ ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ.

ಇದನ್ನೂ ಓದಿ: ಕಮಲ್‌ ಹಾಸನ್‌ರಿಂದ ಆಮೀರ್‌ ಖಾನ್‌ವರೆಗೆ; ಎಸ್ಸೆಸೆಲ್ಸಿಯಲ್ಲಿ ಫೇಲ್‌ ಆಗಿ ಜೀವನದಲ್ಲಿ ಗೆದ್ದು ಬೀಗಿದ ಸಿನಿಮಾ ತಾರೆಯವರಿವರು

ಎಸ್‌ಎಸ್‌ಎಲ್‌ಸಿ ಮುಖ್ಯಪರೀಕ್ಷೆಯು 2023ರ ಮಾರ್ಚ್‌ 31ರಿಂದ ಏಪ್ರಿಲ್‌ 15ರವರೆಗೆ ನಡೆದಿತ್ತು. 7,94,611 ಶಾಲಾ ವಿದ್ಯಾರ್ಥಿಗಳು, 20,750 ಪುನರಾವರ್ತಿತ ವಿದ್ಯಾರ್ಥಿಗಳು, 18,272 ಖಾಸಗಿ ವಿದ್ಯಾರ್ಥಿಗಳು, 8,859 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ರಾಜ್ಯದ 15,498 ಪ್ರೌಢಶಾಲೆಗಳ ವಿದ್ಯಾರ್ಥಿಗಳು 3,305 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. 63 ಸಾವಿರ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಪಿಯುಸಿಯಲ್ಲಿ ಆರ್ಟ್ಸ್, ಸೈನ್ಸ್, ಕಾಮರ್ಸ್‌ ಆರಿಸಿಕೊಳ್ಳುವ ಮೊದಲು ಈ 10 ಅಂಶಗಳು ನಿಮ್ಮ ಗಮನದಲ್ಲಿರಲಿ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಶೇಕಡ 35 ಅಂಕ ಪಡೆಯಬೇಕು. ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 85.63 ರಷ್ಟು ಫಲಿತಾಂಶ ದಾಖಲಾಗಿತ್ತು. 145 ವಿದ್ಯಾರ್ಥಿಗಳು ಶೇಕಡ 100 ಅಂಕ ಗಳಿಸಿದ್ದು ದೊಡ್ಡ ಸುದ್ದಿಯಾಗಿತ್ತು.

ಏಪ್ರಿಲ್‌ 21ರಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿತ್ತು. ದ್ವಿತೀಯ ಪಿಯುಸಿಯಲ್ಲಿ ಒಟ್ಟಾರೆ ಶೇಕಡ 74.67 ಫಲಿತಾಂಶ ದಾಖಲಾಗಿದೆ. ಶೇಕಡ 80.72ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರು. ಶೇಕಡ 69.05 ಬಾಲಕರು ಉತ್ತೀರ್ಣರಾಗಿದ್ದರು.

IPL_Entry_Point