ಕನ್ನಡ ಸುದ್ದಿ  /  ಕರ್ನಾಟಕ  /  Heart-shaped Traffic Light: ಬೆಂಗಳೂರಲ್ಲಿ ಹೃದಯದಾಕಾರದ ಟ್ರಾಫಿಕ್‌ ಲೈಟ್‌ ಗಮನಿಸಿದ್ದೀರಾ? ಏನದು!

Heart-shaped traffic light: ಬೆಂಗಳೂರಲ್ಲಿ ಹೃದಯದಾಕಾರದ ಟ್ರಾಫಿಕ್‌ ಲೈಟ್‌ ಗಮನಿಸಿದ್ದೀರಾ? ಏನದು!

Heart-shaped traffic light: ಹೃದಯಾಕಾರದ ಟ್ರಾಫಿಕ್ ಲೈಟ್‌ ಫೋಟೋ ಇಂಟರ್‌ನಟ್‌ ಜಗತ್ತನ್ನು ಬೆರಗುಗೊಳಿಸಿವೆ. ಅನೇಕರು ಈ ಹೊಸ ಸಿಗ್ನಲ್‌ ಫೋಟೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಏನಿದು? ಯಾಕೆ ಈ ರೀತಿ - ಇಲ್ಲಿದೆ ವಿವರ.

ಬೆಂಗಳೂರಲ್ಲಿ ಹೃದಯದಾಕಾರದ ಟ್ರಾಫಿಕ್‌ ಲೈಟ್‌
ಬೆಂಗಳೂರಲ್ಲಿ ಹೃದಯದಾಕಾರದ ಟ್ರಾಫಿಕ್‌ ಲೈಟ್‌ (Twitte/@_waabi_saabi_)

ಬೆಂಗಳೂರಿನ ಟ್ರಾಫಿಕ್‌ನಲ್ಲಿ ನೀವು ಸಂಚರಿಸುತ್ತಿದ್ದರೆ ಕೆಲವೆಡೆಯಾದರೂ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಈ ರೀತಿ ಸಂಕೇತ ನೋಡಿಯೇ ಇರುತ್ತೀರಿ. ರೆಡ್‌ಲೈಟ್‌ನ ಆಕಾರದಲ್ಲಿನ ವ್ಯತ್ಯಾಸ ಕುತೂಹಲವನ್ನು ಕೆರಳಿಸಿರಲೂ ಬಹುದು.

ಟ್ರೆಂಡಿಂಗ್​ ಸುದ್ದಿ

ಹೌದು, ಇದು ಟೆಕ್ ಸಿಟಿಯನ್ನು 'ಹಾರ್ಟ್ ಸ್ಮಾರ್ಟ್ ಸಿಟಿ' ಆಗಿ ಪರಿವರ್ತಿಸುವುದಕ್ಕೆ ಪ್ರೋತ್ಸಾಹಿಸುವ ಪ್ರಯತ್ನ. ಹೀಗಾಗಿಯೇ ಬೆಂಗಳೂರಿನ ರಸ್ತೆಗಳಲ್ಲಿನ ಕೆಲವು ಟ್ರಾಫಿಕ್ ಲೈಟ್‌ಗಳು ಹೃದಯದ ಆಕಾರಕ್ಕೆ ತಿರುಗಿವೆ.

ಹೃದಯಾಕಾರದ ಟ್ರಾಫಿಕ್ ಲೈಟ್‌ ಫೋಟೋ ಇಂಟರ್‌ನಟ್‌ ಜಗತ್ತನ್ನು ಬೆರಗುಗೊಳಿಸಿವೆ. ಅನೇಕರು ಈ ಹೊಸ ಸಿಗ್ನಲ್‌ ಫೋಟೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರ ಸಮನ್ವಯದಲ್ಲಿ ಮಣಿಪಾಲ್ ಹಾಸ್ಪಿಟಲ್ಸ್‌ ಈ ಹೃದಯಾಕಾರದ ಕೆಂಪು ದೀಪಗಳನ್ನು ಸ್ಥಾಪಿಸಿವೆ. ವಿಶ್ವ ಹೃದಯ ದಿನದ ಅಭಿಯಾನದ ಭಾಗವಾಗಿ ಮಹಾನಗರದಲ್ಲಿ 15 ಸಿಗ್ನಲ್‌ಗಳನ್ನು ಈ ರೀತಿಯಾಗಿ ಪುನರ್‌ನಿರ್ಮಾಣ ಮಾಡಲಾಗಿದೆ ಎನ್ನುತ್ತಿವೆ ವರದಿಗಳು.

ಆಸ್ಪತ್ರೆಯ ಟ್ವಿಟರ್ ಹ್ಯಾಂಡಲ್‌ನಲ್ಲಿರುವ ಪೋಸ್ಟ್‌ನಲ್ಲಿ, “#WorldHeartDay ಸಂದರ್ಭದಲ್ಲಿ, ಮಣಿಪಾಲ್ ಹಾಸ್ಪಿಟಲ್ಸ್‌ ಬೆಂಗಳೂರನ್ನು 'ಹಾರ್ಟ್ ಸ್ಮಾರ್ಟ್ ಸಿಟಿ' ಎಂದು ನಿರೂಪಿಸಲು ಇನ್ನೋವೇಶನ್ಸ್‌ ಅನ್ನು ಸ್ಥಾಪಿಸಿವೆ. ಇವುಗಳಲ್ಲಿ ಕೆಂಪು ಸಿಗ್ನಲ್ ಹೃದಯದ ಆಕಾರದಲ್ಲಿದೆ. ಹೃದಯದ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಆಡಿಯೊ ಸಂದೇಶಗಳು ಮತ್ತು ತುರ್ತು ಸೇವೆಗಳಿಗೆ ಕರೆ ಮಾಡಲು ಸಂಖ್ಯೆಯನ್ನು ಡಯಲ್ ಮಾಡುವ ಬದಲು ಸುಲಭವಾಗಿ ಪ್ರವೇಶಿಸಲು ಕ್ಯೂಆರ್ ಕೋಡ್‌ಗಳನ್ನು ಒಳಗೊಂಡಿದೆ. ಅದರ ಕೆಲವು ಸ್ನ್ಯಾಪ್‌ಗಳು ಇಲ್ಲಿವೆ.

ಹೊಸದಾಗಿ ಅಳವಡಿಸಲಾದ ಈ ದೀಪಗಳ ಜತೆಗೆ, ಮಣಿಪಾಲ್ ಆಸ್ಪತ್ರೆಯ ಆಡಳಿತವು ಟ್ರಾಫಿಕ್ ಸಿಗ್ನಲ್‌ಗಳ ಬಳಿ ಕ್ಯೂಆರ್ ಕೋಡ್‌ಗಳನ್ನು ಸ್ಥಾಪಿಸಿದೆ. ಸ್ಕ್ಯಾನ್ ಮಾಡಿದಾಗ, ಈ ಕೋಡ್‌ಗಳು ಹೃದಯ ಸಮಸ್ಯೆ ಪೀಡಿತ ವ್ಯಕ್ತಿಯನ್ನು ತುರ್ತು ಸಂಖ್ಯೆಗೆ ಸಂಪರ್ಕಿಸುತ್ತದೆ ಮತ್ತು ಒಂದೇ ಕ್ಲಿಕ್‌ನಲ್ಲಿ ಆಂಬ್ಯುಲೆನ್ಸ್ ಸೇವೆಗಳಿಗೆ ಮರುನಿರ್ದೇಶಿಸಲಾಗುತ್ತದೆ. ವೈದ್ಯಕೀಯ ಸಹಾಯಕ್ಕಾಗಿ ಹಲವಾರು ಸ್ಥಳಗಳಿಗೆ ಕರೆ ಮಾಡಲು ಮತ್ತು ಪರಿಶೀಲಿಸಲು ಸಾಧ್ಯವಾಗದೇ ಇದ್ದಾಗ ತುರ್ತು ಸಂದರ್ಭಗಳಲ್ಲಿ ಬಟನ್‌ನ ಕ್ಲಿಕ್‌ನಲ್ಲಿ ಸಹಾಯವನ್ನು ಒದಗಿಸುವುದು ಈ ಆಲೋಚನೆಯ ಉದ್ದೇಶವಾಗಿದೆ.

IPL_Entry_Point