ಕನ್ನಡ ಸುದ್ದಿ  /  Karnataka  /  Hubballi Varanasi Special Train Special Express Trains Between Hubballi And Varanasi To Be Run From March 27

Hubballi - Varanasi Special train: ಕಾಶಿಗೆ ಹೊರಟ್ರಾ? ಮಾ.27 ರಿಂದ ಹುಬ್ಬಳ್ಳಿ - ವಾರಾಣಸಿ ವಿಶೇಷ ರೈಲು ಸಂಚಾರ ಶುರುವಾಗುತ್ತೆ ನೋಡಿ..

Hubballi - Varanasi Special train ಕಾಶಿಗೆ ಹೋಗಬೇಕು ಅನ್ನೋ ಪ್ಲಾನ್‌ ಏನಾದರೂ ಇದೆಯಾ? ಮಾ.27 ರಿಂದ ಹುಬ್ಬಳ್ಳಿ - ವಾರಾಣಸಿ ವಿಶೇಷ ರೈಲು ಸಂಚಾರ ಶುರುವಾಗಲಿದೆ ನೋಡಿ. ಇದು ಬೇಸಿಗೆ ವಿಶೇಷ ರೈಲು ಸೇವೆಯಾಗಿದ್ದು, ವೇಳಾಪಟ್ಟಿ, ಎಲ್ಲೆಲ್ಲಿ ನಿಲುಗಡೆ ಮತ್ತು ಇತರೆ ವಿವರ ಇಲ್ಲಿದೆ ಗಮನಿಸಿ.

ಭಾರತೀಯ ರೈಲ್ವೆ (ಸಾಂಕೇತಿಕ ಚಿತ್ರ)
ಭಾರತೀಯ ರೈಲ್ವೆ (ಸಾಂಕೇತಿಕ ಚಿತ್ರ) (MINT_PRINT)

ಬೆಂಗಳೂರು: ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಹುಬ್ಬಳ್ಳಿ ಮತ್ತು ವಾರಾಣಸಿ ನಡುವೆ ಬೇಸಿಗೆಯ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಬೇಸಿಗೆ ರಜೆಯಲ್ಲಿ ಹೆಚ್ಚುವರಿ ಜನ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಈ ನಿಲ್ಧಾಣಗಳ ನಡುವೆ ಒಂದು ಟ್ರಿಪ್‌ಗೆ ಬೇಡಿಕೆ ಬಂದಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಇದೇ ಮಾರ್ಚ್‌ 27ರಿಂದ ಈ ವಿಶೇಷ ರೈಲು ಸಂಚಾರ ಶುರುವಾಗಲಿದೆ. ನೈಋತ್ಯ ರೈಲ್ವೆ ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 07347 ಮಾರ್ಚ್‌ 27ರಂದು ರಾತ್ರಿ 8.30ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡಲಿದೆ. ಮಾರ್ಚ್ 29 ರಂದು ಬೆಳಗ್ಗೆ 9.10ಕ್ಕೆ ಉತ್ತರ ಪ್ರದೇಶದ ಬನಾರಸ್ ತಲುಪುತ್ತದೆ. ಇದಕ್ಕೆ ಪ್ರತಿಯಾಗಿ, ಮಾರ್ಚ್ 29 ರಂದು ರಾತ್ರಿ 8:40 ಕ್ಕೆ, ರೈಲು ಸಂಖ್ಯೆ 07348 ಬನಾರಸ್ ನಿಂದ ಹೊರಟು ಹುಬ್ಬಳ್ಳಿಗೆ ಹೊರಡಲಿದೆ. ಮಾರ್ಚ್ 31ರಂದು ಬೆಳಗ್ಗೆ 11:45ಕ್ಕೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದೆ.

ಎರಡೂ ದಿಕ್ಕುಗಳಲ್ಲಿ ಸಂಚರಿಸುವ ಈ ಎಕ್ಸ್‌ಪ್ರೆಸ್‌ ರೈಲು, ಮಾರ್ಗ ಮಧ್ಯೆ ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರಸ್ತೆ, ವಿಜಯಪುರ, ಇಂಡಿ ರಸ್ತೆ, ಸೊಲ್ಲಾಪುರ, ದೌಂಡ್, ಅಹಮದ್‌ನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ಪಿಪಾರಿಯಾ, ಜಬಲ್‌ಪುರ, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್‌ಪುರ, ಪ್ರಯಾಗರಾಜ್ ಛೋಕಿ ಜಂಕ್ಷನ್ ಮತ್ತು ವಾರಣಾಸಿ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ವಿಶೇಷ ಎಕ್ಸ್‌ಪ್ರೆಸ್‌ ರೈಲಿನಲ್ಲಿ 21 ಕೋಚ್‌ಗಳಿದ್ದು, ಎಸಿ ಟು-ಟೈರ್ (1), ಎಸಿ ತ್ರೀ-ಟೈರ್ (1), ಸ್ಲೀಪರ್ ಕ್ಲಾಸ್ (7), ಸಾಮಾನ್ಯ ಎರಡನೇ ದರ್ಜೆ (10), ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳು/ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ (2) ಇರಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಗಮನಿಸಬಹುದಾದ ಸುದ್ದಿಗಳು

ನೊಬೆಲ್‌ ಪುರಸ್ಕಾರಕ್ಕೆ ಮೋದಿ ಹೆಸರು; ಸುಳ್ಳು ಸುದ್ದಿ ಎಂದ ನೊಬೆಲ್‌ ಕಮಿಟಿ ಮೆಂಬರ್‌; ಹಾಗಾದರೆ ತೋಜೆ ಹೇಳಿದ್ದೇನು?

Nobel Peace Prize: ನೊಬೆಲ್‌ ಶಾಂತಿ ಪುರಸ್ಕಾರ ಸಂಬಂಧಿಸಿ ನಾವು ಬಹಿರಂಗವಾಗಿ ಚರ್ಚಿಸುವಂತೆ ಇಲ್ಲ ಅಥವಾ ಅಂತಹ ವದಂತಿಗಳಿಗೆ ಪುಷ್ಟಿ ನೀಡುವಂತೆಯೂ ಇಲ್ಲ. ನನ್ನ ಹೇಳಿಕೆ ಎಂಬುದನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ ಎಂದು ತೋಜೆ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ತೋಜೆಯ ಮಾತುಗಳು ನೊಬೆಲ್‌ ಪುರಸ್ಕಾರದ ವಿಚಾರದಲ್ಲಿ ಸಾರ್ವಜನಿಕ ಸಂಚಲನ ಮೂಡಿಸಿದ್ದು ವಾಸ್ತವ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಇಂದು ವಿಶ್ವ ನಿದ್ರಾ ದಿನ; ಥೀಮ್‌, ಇತಿಹಾಸ ಮತ್ತು ಮಹತ್ವ ಹೀಗಿದೆ ಗಮನಿಸಿ

World Sleep Day 2023: ಇಂದು ವಿಶ್ವ ನಿದ್ರಾ ದಿನ. ನಿದ್ರಾ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶ. ಈ ದಿನಾಚರಣೆಯ ಇತಿಹಾಸ, ಮಹತ್ವ ಮತ್ತು ಇತರೆ ವಿವರ ಇಲ್ಲಿದೆ.

ಸುಖ ನಿದ್ರೆಗೆ ಪಂಚ ಸೂತ್ರ

ವಿಶ್ವ ನಿದ್ರಾ ದಿನವು ನಿದ್ರೆಯ ಪ್ರಾಮುಖ್ಯತೆ ಮತ್ತು ನಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ನಿದ್ರೆಯ ಅಸ್ವಸ್ಥತೆಗಳ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ನಿದ್ರಾಹೀನತೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ, ಅದೇ ರೀತಿ ಅವರ ಜೀವನ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನಿದ್ರಾಹೀನತೆಗೆ ಕಾರಣವಾಗುವ ಆಹಾರ ಮತ್ತು ಜೀವನಶೈಲಿಯ ಆಯ್ದ ಬದಲಾವಣೆಗಳ ವಿವರ ಇಲ್ಲಿವೆ.

IPL_Entry_Point