ಕನ್ನಡ ಸುದ್ದಿ  /  ಕರ್ನಾಟಕ  /  Bengaluru Metro Pillar Collapse: ಬೆಂಗಳೂರು ಮೆಟ್ರೋ ಪಿಲ್ಲರ್‌ ದುರಂತಕ್ಕೆ ಕಾರಣವೇನು? ಐಐಟಿ ತಜ್ಞರ ತಂಡ ನೀಡಿದ ವರದಿಯಲ್ಲೇನಿದೆ?

Bengaluru Metro Pillar Collapse: ಬೆಂಗಳೂರು ಮೆಟ್ರೋ ಪಿಲ್ಲರ್‌ ದುರಂತಕ್ಕೆ ಕಾರಣವೇನು? ಐಐಟಿ ತಜ್ಞರ ತಂಡ ನೀಡಿದ ವರದಿಯಲ್ಲೇನಿದೆ?

Bengaluru Metro Pillar Collapse: ಇಂತಹ ಬೃಹತ್‌ ಕಬ್ಬಿಣದ ಪಿಲ್ಲರ್‌ ನಿರ್ಮಾಣ ಮಾಡುವಾಗ ಅದಕ್ಕೆ ಸರಿಯಾದ ರೀತಿಯಲ್ಲಿ ಬೆಂಬಲ ನೀಡಬೇಕು. ಆದರೆ, ದುರಂತಕ್ಕೆ ಕಾರಣವಾದ ಪಿಲ್ಲರ್‌ಗೆ ರಾಡ್‌ ಹಾಗೂ ಇತರೆ ವಸ್ತುಗಳ ಸರಿಯಾದ ಬೆಂಬಲ ಇರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Bengaluru Metro Pillar Collapse: ಬೆಂಗಳೂರು ಮೆಟ್ರೋ ಪಿಲ್ಲರ್‌ ದುರಂತಕ್ಕೆ ಕಾರಣವೇನು? ಐಐಟಿ ತಜ್ಞರ ತಂಡ ನೀಡಿದ ವರದಿಯಲ್ಲೇನಿದೆ?
Bengaluru Metro Pillar Collapse: ಬೆಂಗಳೂರು ಮೆಟ್ರೋ ಪಿಲ್ಲರ್‌ ದುರಂತಕ್ಕೆ ಕಾರಣವೇನು? ಐಐಟಿ ತಜ್ಞರ ತಂಡ ನೀಡಿದ ವರದಿಯಲ್ಲೇನಿದೆ?

ಬೆಂಗಳೂರು: ಇತ್ತೀಚೆಗೆ ನಿರ್ಮಾಣಹಂತದ ಮೆಟ್ರೋ ಪಿಲ್ಲರ್‌ ಬಿದ್ದು ತಾಯಿ ಮಗು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಹೈದರಾಬಾದ್‌ ತಜ್ಞರ ತಂಡವು ಬೆಂಗಳೂರು ಪೊಲೀಸರಿಗೆ ವರದಿ ನೀಡಿದ್ದು, ಪಿಲ್ಲರ್‌ ದುರಂತಕ್ಕೆ ತಾಂತ್ರಿಕ ಕಾರಣಗಳೇನು ಎನ್ನುವ ಮಾಹಿತಿ ದೊರಕಿದೆ.

ಟ್ರೆಂಡಿಂಗ್​ ಸುದ್ದಿ

ಇಂತಹ ಬೃಹತ್‌ ಕಬ್ಬಿಣದ ಪಿಲ್ಲರ್‌ ನಿರ್ಮಾಣ ಮಾಡುವಾಗ ಅದಕ್ಕೆ ಸರಿಯಾದ ರೀತಿಯಲ್ಲಿ ಬೆಂಬಲ ನೀಡಬೇಕು. ಆದರೆ, ದುರಂತಕ್ಕೆ ಕಾರಣವಾದ ಪಿಲ್ಲರ್‌ಗೆ ರಾಡ್‌ ಹಾಗೂ ಇತರೆ ವಸ್ತುಗಳ ಸರಿಯಾದ ಬೆಂಬಲ ಇರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಮರ್ಪಕ ಬೆಂಬಲವಿಲ್ಲದ ಕಾರಣದಿಂದ ಈ ಪಿಲ್ಲರ್‌ ಬಿದ್ದಿದೆ ಎಂದು ವರದಿ ತಿಳಿಸಿದೆ. ಪೊಲೀಸರಿಗೆ ನೀಡಿದ ವರದಿಯ ಸಂಪೂರ್ಣ ವಿವರ ಇನ್ನಷ್ಟೇ ಲಭಿಸಬೇಕಿದೆ.

ಮೆಟ್ರೊ ಪಿಲ್ಲರ್‌ ಕುಸಿಯಲು ಎಂಜಿನಿಯರ್‌ಗಳ ನಿರ್ಲಕ್ಷ್ಯವೇ ಕಾರಣ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಚಂದ್ರ ಕಿಶನ್‌ ಅಭಿಪ್ರಾಯವನ್ನು ಮಾಧ್ಯಮ ವರದಿಯೊಂದು ಉಲ್ಲೇಖಿಸಿದೆ.

ಅವಘಡ ಕುರಿತಂತೆ ಈಗಾಗಲೇ ಶೇ.80ರಷ್ಟು ತಾಂತ್ರಿಕ ತನಿಖೆ ಪೂರ್ಣಗೊಂಡಿದೆ. ಗುತ್ತಿಗೆದಾರರು ಮತ್ತು ಎಂಜಿನಿಯರ್‌‍ಗಳ ವೈಫಲ್ಯವೇ ಪ್ರಮುಖ ಕಾರಣ ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ. ಕೆಲವೇ ದಿನಗಳಲ್ಲಿ ತನಿಖಾ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈಗಾಗಲೇ ಈ ಕುರಿತು ಕರ್ನಾಟಕ ಹೈಕೋಟ್‌ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಮಾಧ್ಯಮ ವರದಿಗಳನ್ನು ಆಧರಿಸಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್‌, ಈ ಪ್ರಕರಣದಲ್ಲಿ ರಾಜ್ಯಸರ್ಕಾರ, ಬಿಎಂಆರ್‌ಸಿಎಲ್‌ ಮತ್ತು ಬಿಬಿಎಂಪಿಯನ್ನು ಪ್ರತಿವಾದಿಗಳನ್ನಾಗಿ ಮಾಡಿತ್ತು. ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರಿದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ಪೂರ್ತಿ ವರದಿ ಓದಿ

ಬೆಂಗಳೂರಿನ ಕಲ್ಯಾಣ್ ನಗರದಿಂದ ಹೆಚ್‌ಆರ್‌ಬಿಆರ್ ಲೇಔಟ್‌ಗೆ ಹೋಗುವ ರಸ್ತೆಯಲ್ಲಿ ನಾಗವಾರ ಸಮೀಪ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ಕಬ್ಬಿಣದ ರಾಡ್‌ಗಳು ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದು ತಾಯಿ- ಮಗು ಮೃತಪಟ್ಟಿದ್ದರು. ಲೋಹಿತ್‌ ಕುಮಾರ್‌ ಮತ್ತು ತೇಜಸ್ವಿನಿ ದಂಪತಿ ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿತ್ತು.

ಇತರೆ ಸಂಕ್ಷಿಪ್ತ ಸುದ್ದಿಗಳು

ಕೇರಳದಲ್ಲಿ ಮಾಸ್ಕ್‌ ಕಡ್ಡಾಯ

ಕೇರಳ: ಕೇರಳ ರಾಜ್ಯದ ಎಲ್ಲಾ ಜನರು ಎಲ್ಲಾ ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು ಮತ್ತು ಸಭೆ-ಸಮಾರಂಭಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕೇರಳ ಸರ್ಕಾರ ಸೂಚಿಸಿದೆ.

ಕೇರಳದಲ್ಲಿ ಕೊವಿಡ್ -19 ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರವು ನಿರ್ದೇಶಿಸಿದೆ. ಕೋವಿಡ್ ವೈರಸ್ ದಾಳಿಯಿಂದ ಜನ ಸುರಕ್ಷತೆಯನ್ನು ಹೊಂದಲು ಕೈ ತೊಳೆಯುವ ಮತ್ತು ಸ್ಯಾನಿಟೈಸರ್‌ಗಳನ್ನು ಬಳಸುವ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲು ಅಂಗಡಿಗಳು, ಚಿತ್ರಮಂದಿರಗಳು ಮತ್ತು ವಿವಿಧ ಕಾರ್ಯಕ್ರಮಗಳ ಸಂಘಟಕರಿಗೆ ಸರ್ಕಾರ ಸೂಚಿಸಿದೆ.

ಸಹಾಯಧನಕ್ಕೆ ಅರ್ಜಿ ಆಹ್ವಾನ

ಕೊಡಗು: ಕುಶಲಕರ್ಮಿಗಳಿಗೆ ಸಾಲ ಸಹಾಯಧನ ಕಾರ್ಯಕ್ರಮವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಕುಶಲಕರ್ಮಿಗಳು ತಮ್ಮ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಲು ಬ್ಯಾಂಕ್ನಿಂದ ಸಾಲ ಪಡೆದಲ್ಲಿ, ಇಲಾಖಾ ವತಿಯಿಂದ ಶೇ.30 ರಷ್ಟು ಹಾಗೂ ಗರಿಷ್ಟ ರೂ. 15 ಸಾವಿರಗಳ ವರೆಗೆ ಸಹಾಯಧನ ನೀಡಲಾಗುತ್ತದೆ.

ಕುಶಲ ಕರ್ಮಿಯು 18 ವರ್ಷ ವಯಸ್ಸಾಗಿರಬೇಕು ಹಾಗೂ ಇಲಾಖೆ ನಿಗಧಿಪಡಿಸಿದ ಯಾವುದಾದರೂ ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡಿರಬೇಕು. ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್, ಪ್ರಾದೇಶಿಕ ಬ್ಯಾಂಕ್ ವತಿಯಿಂದ ಸಾಲ (ಅವಧಿ ಹಾಗೂ ದುಡಿಮೆ ಬಂಡವಾಳ) ಪಡೆಯಬೇಕು. ಅಭ್ಯರ್ಥಿಯು ನಿಗಧಿ ಪಡಿಸಿದ ಅರ್ಜಿಯ ಜೊತೆಗೆ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಕುಶಲಕರ್ಮಿ ವೃತ್ತಿಯ ಬಗ್ಗೆ ಧೃಡೀಕರಣ ಪತ್ರಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಕಚೇರಿಯನ್ನು (08272-228431 / 228746) ಸಂಪರ್ಕಿಸಬಹುದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

IPL_Entry_Point

ವಿಭಾಗ