ಕನ್ನಡ ಸುದ್ದಿ  /  ಕರ್ನಾಟಕ  /  Kalburgi News: ಕಲಬುರಗಿಗೆ ಬಂದಿವೆ ಹತ್ತೇ ನಿಮಿಷದಲ್ಲಿ 50 ಕ್ಕೂ ಹೆಚ್ಚು ಪರೀಕ್ಷೆ ಮಾಡುವ ಎಟಿಎಂ

Kalburgi News: ಕಲಬುರಗಿಗೆ ಬಂದಿವೆ ಹತ್ತೇ ನಿಮಿಷದಲ್ಲಿ 50 ಕ್ಕೂ ಹೆಚ್ಚು ಪರೀಕ್ಷೆ ಮಾಡುವ ಎಟಿಎಂ

Health ATM in Kalburgi ಕಲಬುರಗಿಯಲ್ಲಿ ಆರೋಗ್ಯ ತಪಾಸಣೆಯನ್ನು ಬೇಗನೇ ಮಾಡಿ ನಂತರ ವರದಿ ನೀಡುವ ಕಿಯೋಸ್ಕ್‌ಗಳನ್ನು ಅಳವಡಿಸಲಾಗಿದೆ. ಕಡಿಮೆ ದರದಲ್ಲಿ ಸೇವೆ ನೀಡುವ ಇವು ನಿಖರ ವರದಿ ನೀಡುತ್ತವೆ. ಸಿಎಂ ಸಿದ್ದರಾಮಯ್ಯ ಈ ಕಿಯೋಸ್ಕ್‌ ಬಳಕೆಗೆ ಚಾಲನೆ ನೀಡಿದ್ದಾರೆ.

ಕಲಬುರಗಿಯಲ್ಲಿ ಆರೋಗ್ಯ ತಪಾಸಣೆ ಕಿಯೋಸ್ಕ್‌ಗಳನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.
ಕಲಬುರಗಿಯಲ್ಲಿ ಆರೋಗ್ಯ ತಪಾಸಣೆ ಕಿಯೋಸ್ಕ್‌ಗಳನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಕಲಬುರಗಿ: ಕಲಬುರಗಿ ಭಾಗದ ಜನ ತಮ್ಮ ಆರೋಗ್ಯವನ್ನು ತತ್‌ಕ್ಷಣವೇ ತಪಾಸಣೆ ಮಾಡಿಸಿಕೊಂಡು ವರದಿ ಪಡೆಯಬಲ್ಲಂತಹ ಆರೋಗ್ಯ ಎಟಿಎಂ ಅನ್ನು ಆರಂಭಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಸ್ಮಾರ್ಟ್ ಹೆಲ್ತ್ ಕಿಯೋಸ್ಕ್ ಗಳ ಮೂಲಕ ತಪಾಸಣೆ ಮತ್ತು ಶೀಘ್ರ ರೋಗ ಪತ್ತೆ ಹಾಗೂ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಸಿ ವಿಶಿಷ್ಟ ಹೆಲ್ತ್ ಎಟಿಎಂ ಜಾರಿ ಒದಗಿಸಲಾಗಿದೆ. ಕಲ್ಯಾಣ ಕರ್ನಾಟಕ ಉತ್ಸವದ ಸಡಗರದಲ್ಲಿದ್ದ ಕಲಬುರಗಿಯಲ್ಲಿ ಆರೋಗ್ಯ ಮಿತ್ರ ಯೋಜನೆಯಡಿ ವಿಭಿನ್ನ ಕಿಯೋಸ್ಕ್‌ಗಳನ್ನು ಸಾರ್ವಜನಿಕ ಬಳಕೆಗೆ ಅರ್ಪಿಸಲಾಗಿದೆ.

ಬರೀ ಹತ್ತೇ ನಿಮಿಷದಲ್ಲಿ 50+ ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಬಹುದು. ತ್ವರಿತವಾಗಿ ನಿಮ್ಮ ಆರೋಗ್ಯದ ವರದಿಯನ್ನು ನೀಡುವುದು ಈ ಕಿಯೋಸ್ಕ್‌ ವಿಶೇಷ. ಆರೋಗ್ಯಕ್ಕೆ ಅಗತ್ಯವಿರುವ ಆಹಾರದ ಮಾಹಿತಿಯನ್ನು ನೀಡುವುದು ಇದರ ಮತ್ತೊಂದು ವಿಶೇಷ.

ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ವತಿಯಿಂದ ಜಿಲ್ಲೆಯಲ್ಲಿ 'ಆರೋಗ್ಯ ಮಿತ್ರ' ಯೋಜನೆಯನ್ನು ಜಾರಿ ಮಾಡಲಾಗಿದೆ.

ಇದರಡಿ ಕಲಬುರಗಿ ಜಿಲ್ಲೆಗೆ ಹೆಚ್.ಪಿ ಎಂಟರ್‌ಪ್ರೈಸಸ್ ವತಿಯಿಂದ 25 ಹೆಲ್ತ್ ಎಟಿಎಂ ಘಟಕಗಳನ್ನು CSR ಅನುದಾನದ ಅಡಿಯಲ್ಲಿ ಪಡೆದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ವೇಳೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದ್ದಾರೆ.

ಈಗಾಗಲೇ ಈ ಕಿಯೋಸ್ಕ್‌ಗಳ ಬಳಕೆಯೂ ಶುರುವಾಗಿದೆ. ಕಲಬುರಗಿ ಮಾತ್ರವಲ್ಲದೇ ರಾಯಚೂರು, ಯಾದಗಿರಿ, ಬಳ್ಳಾರಿ. ವಿಜಯಪುರ ಭಾಗದಿಂದಲೂ ಕಲಬುರಿಗೆಗೆ ಆಗಮಿಸುವವರು ಇದರ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆಯ ಮೂಲಕ ಕಿಯೋಸ್ಕ್‌ಗಳ ಬಳಕೆ ಕುರಿತು ಜಾಗೃತಿ ಕೂಡ ಮೂಡಿಸಲಾಗುತ್ತಿದೆ.

ಹೆಲ್ತ್ ಎಟಿಎಂನ ಪ್ರಯೋಜನೆಗಳು

ಜನಸಂದಣಿ ಪ್ರದೇಶಗಳಲ್ಲಿ ಆರೋಗ್ಯ ಎಟಿಎಂಗಳ ಮೂಲಕ ಸರಳವಾದ ಆರೋಗ್ಯ ಸೇವೆಗಳ ಲಭ್ಯತೆಗೆ ಒತ್ತು ನೀಡಲಾಗಿದೆ. ನಿಖರವಾದ ವೈದ್ಯಕೀಯ ಪರೀಕ್ಷೆ ಮತ್ತು ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಅರೋಗ್ಯ ಎಟಿಎಂಗಳನ್ನೂ ಬಳಸುವುದರಿಂದ ಸಮಯ ಮತ್ತು ಹಣ ಉಳಿತಾಯ ಮಾಡಲು ಸಹಕಾರಿಯಾಗಲಿದೆ.

ಸಮಗ್ರ ಆರೋಗ್ಯ ಸೇವೆಗಳಿಂದ ತುರ್ತು ಸ್ಪಂದನೆ ರೋಗಿಗಳಿಗೆ ಆತ್ಮಸ್ಟೈರ್ಯ ತುಂಬುವುದರ ಮೂಲಕ ಉತ್ತಮ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮ ಲಭ್ಯತೆಗೆ ದಾರಿಯಾಗಲಿದೆ.

ನಿರಂತರ ಆರೋಗ್ಯ ತಪಾಸಣೆ ಮತ್ತು ಮೇಲ್ವಿಚಾರಣೆಯ ಮೂಲಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ತಡೆಗಟ್ಟಲು ಸಹಕಾರಿ. ಇಲ್ಲಿ ಪಡೆಯುವ ರೋಗಿಯ ದಾಖಲೆಗಳನ್ನು ಸುರಕ್ಷಿತಾಗಿ ಮತ್ತು ಗೋಪ್ಯವಾಗಿ ಇಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಡಿಮೆ ದರದಲ್ಲಿ ಸೇವೆ

ನಗರ ಪ್ರದೇಶಗಳಲ್ಲಿ ಜನರ ಜೀವನ ಶೈಲಿಗೆ ಅನುಗುಣವಾಗಿ, ಕಡಿಮೆ ಸಮಯದಲ್ಲಿ ಪರೀಕ್ಷೆಗಳನ್ನು ಮಾಡುವ ಮೂಲಕ ಸಮಯ ಮತ್ತು ಹಣವನ್ನು ಉಳಿಸಬಹುದು.

ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವ ಆರೋಗ್ಯ ಸಿಬ್ಬಂದಿ ಅಂತರವನ್ನು ಕಡಿಮೆ ಮಾಡಿ ದುರ್ಗಮ ಪ್ರದೇಶಗಳಿಗೂ ಕೂಡ ಆರೋಗ್ಯ ಸೇವೆಗಳನ್ನು ತಲುಪಿಸಬಹುದು.

ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸ್ ನೀಡುವ ಮೂಲಕ ಸಮಯದ ಹಿಂದುಳಿದ ವರ್ಗವನ್ನು ಸಬಲೀಕರಣಗೊಳಿಸುವುದು ಹೆಲ್ತ್ ಎಟಿಎಂ ಗುರಿಯಾಗಿದೆ.

ಆರೋಗ್ಯ ಎಟಿಎಂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ತಂತ್ರಜ್ಞಾನವಾಗಿದ್ದು ಪ್ರಾಥಮಿಕ ಮತ್ತು ತಡೆಗಟ್ಟಬಹುದಾದ ಆರೋಗ್ಯ ಸೇವೆಗಳನ್ನು ಸುಲಭವಾಗಿ ಹಾಗೂ ಕೈಗಟುಕುವ ದರದಲ್ಲಿ ಒದಗಿಸುತ್ತದೆ.

ಜನರ ಆರೋಗ್ಯ ಕಾಪಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಕಲಬುರಗಿ ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ಮುಂದುವರೆಯಲಿದೆ ಎನ್ನುವುದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ.

( ವರದಿ: ಎಸ್‌ .ಬಿ.ರೆಡ್ಡಿ. ಕಲಬುರಗಿ)

IPL_Entry_Point

ವಿಭಾಗ