ಕನ್ನಡ ಸುದ್ದಿ  /  Karnataka  /  Karnataka Election Result Winners And Losers Of Muslim Candidates From Congress, Jds Details In Kannada Rst

Karnataka Election Result: ಕಾಂಗ್ರೆಸ್‌, ಜೆಡಿಎಸ್‌ನಿಂದ ಕಣಕ್ಕಿಳಿದ ಮುಸ್ಲಿಂ ಅಭ್ಯರ್ಥಿಗಳಲ್ಲಿ ಗೆದ್ದವರು, ಸೋತವರು; ಹೀಗಿದೆ ವಿವರ

Karnataka Election Result: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ನಿಂದ ಹಲವು ಮಂದಿ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ ಒಬ್ಬ ಅಭ್ಯರ್ಥಿಯು ಗೆಲುವು ಸಾಧಿಸಿಲ್ಲ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದವರಲ್ಲಿ ಕೆಲವರು ಸೋತರೆ, ಇನ್ನೂ ಕೆಲವರು ಗೆಲುವಿನ ಹಾದಿ ಹಿಡಿದಿದ್ದಾರೆ.

ಕಾಂಗ್ರೆಸ್‌ ಜೆಡಿಎಸ್‌ನಿಂದ ಕಣಕ್ಕಿಳಿದ ಮುಸ್ಲಿಂ ಅಭ್ಯರ್ಥಿಗಳು
ಕಾಂಗ್ರೆಸ್‌ ಜೆಡಿಎಸ್‌ನಿಂದ ಕಣಕ್ಕಿಳಿದ ಮುಸ್ಲಿಂ ಅಭ್ಯರ್ಥಿಗಳು

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು 22 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ 15 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ 9 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪಕ್ಷವು ಒಬ್ಬರಿಗೂ ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಮತ್ತು ಗೆದ್ದವರ ವಿವರ ಇಲ್ಲಿದೆ.

ಕಾಂಗ್ರೆಸ್‌ನಿಂದ ಟಿಕೆಟ್ ಪಡೆದ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು

ಗೆದ್ದವರು

ಗುಲ್ಬರ್ಗ ಉತ್ತರ: ಕನೀಜ್ ಫಾತಿಮಾ

ಬೀದರ್‌: ರಹೀಮ್ ಖಾನ್

ಶಿವಾಜಿನಗರ: ರಿಜ್ವಾನ್ ಅರ್ಷದ್

ಶಾಂತಿನಗರ: ಎನ್‌.ಎ. ಹ್ಯಾರಿಸ್‌

ಚಾಮರಾಜಪೇಟೆ: ಜಮೀರ್‌ ಅಹಮದ್ ಖಾನ್‌

ರಾಮನಗರ: ಇಕ್ಬಾಲ್ ಹುಸೇನ್‌ ಎಚ್‌.ಎ.

ಮಂಗಳೂರು: ಯು.ಟಿ. ಖಾದರ್‌

ನರಸಿಂಹರಾಜ: ತನ್ವೀರ್ ಸೇಠ್‌

ಬೆಳಗಾವಿ ಉತ್ತರ: ಆಸಿಫ್ ಸೇಟ್

ಸೋತವರು

ಶಿಗ್ಗಾಂವಿ: ಯಾಸೀರ್ ಅಹ್ಮದ್ ​ಖಾನ್​ ಪಠಾಣ್

ಮಂಗಳೂರು ನಗರ ಉತ್ತರ: ಇನಾಯತ್ ಅಲಿ

ಬಿಜಾಪುರ ನಗರ: ಅಬ್ದುಲ್ ಹಮೀದ್ ಮುಶ್ರೀಫ್

ರಾಯಚೂರು ನಗರ; ಮೊಹಮ್ಮದ್ ಶಾಲಂ

ಗಂಗಾವತಿ: ಇಕ್ಬಾಲ್ ಅನ್ಸಾರಿ

ತುಮಕೂರು ನಗರ: ಇಕ್ಬಾಲ್ ಅಹಮದ್

ಜೆಡಿಎಸ್‌ನಿಂದ ಟಿಕೆಟ್ ಪಡೆದ ಮುಸ್ಲಿಂ ಅಭ್ಯರ್ಥಿಗಳ ಪಟ್ಟಿ

ಜೆಡಿಎಸ್ ಪಕ್ಷವು ಒಟ್ಟು 22 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದು, ಒಬ್ಬ ಅಭ್ಯರ್ಥಿಯು ಗೆಲುವು ಸಾಧಿಸಿಲ್ಲ.

ಖಾನಾಪುರ- ನಾಸೀರ್ ಬಾಪುಲಸಾಬ್ ಭಗವಾನ್, ಜಮಖಂಡಿ-ಯಾಕೂಬ್‌ ಬಾಬಾಲಾಲ್‌ ಕಪಡೇವಾಲ್, ಬೀಳಗಿ- ರುಕ್ಮುದ್ದೀನ್‌ ಸೌದಗರ್, ಬಿಜಾಪುರ ನಗರ- ಬಂದೇ ನವಾಜ್‌ ಮಾಬರಿ, ಗುಲ್ಬರ್ಗ ಉತ್ತರ- ನಾಸಿರ್ ಹುಸೇನ್ ಉಸ್ತಾದ್, ಬಸವಕಲ್ಯಾಣ-ಎಸ್. ವೈ ಖಾದ್ರಿ, ಹುಮ್ನಾಬಾದ್- ಸಿಎಂ ಫಯಾಜ್, ಭಾಲ್ಕಿ-ರೌಫ್ ಪಟೇಲ್, ರೋಣ-ಮುಗದಮ್‌ ಸಾಬ್‌ ಮುದೋಳ, ಕುಂದಗೋಳ- ಹಜರತ್‌ ಅಲಿ ಅಲ್ಲಾಸಾಬ್, ಹರಪನಹಳ್ಳಿ - ಎನ್. ಎಂ. ನೂರ್ ಅಹಮದ್, ದಾವಣಗೆರೆ ದಕ್ಷಿಣ- ಅಮಾನುಲ್ಲಾ ಖಾನ್, ಸಾಗರ- ಜಾಕೀರ್‌, ಬೈಂದೂರು- ಮನ್ಸೂರ್ ಇಬ್ರಾಹಿಂ, ಕಾಪು- ಸಬೀನಾ ಸಮದ್, ಹೆಬ್ಬಾಳ- ಮೊಹಿದ್ ಅಲ್ತಾಫ್, ಸರ್ವಜ್ಞನಗರ- ಮೊಹಮ್ಮದ್ ಮುಷ್ತಾಕ್, ಚಿಕ್ಕಪೇಟೆ- ಇಮ್ರಾನ್‌ಪಾಷ, ಬೆಳ್ತಂಗಡಿ- ಅಶ್ರಫ್ ಅಲಿ ಕುಂಞ, ಮಂಗಳೂರು ಉತ್ತರ- ಮೊಯಿದ್ದೀನ್ ಬಾವಾ, ವಿರಾಜಪೇಟೆ- ಮನ್ಸೂರ್‌ ಆಲಿ, ನರಸಿಂಹರಾಜ- ಅಬ್ದುಲ್‌ ಖಾದರ್ ಶಾಹಿದ್

ಇದನ್ನೂ ಓದಿ

Why JDS Lost: 24 ವರ್ಷದ ನಂತರ ಮತ್ತೊಮ್ಮೆ ಅಸ್ತಿತ್ವ ಉಳಿಸಿಕೊಳ್ಳುವ ಆತಂಕದಲ್ಲಿ ಜೆಡಿಎಸ್, ಎಡವಿದ್ದೆಲ್ಲಿ ನಾಯಕತ್ವ; ರಾಜಕೀಯ ವಿಶ್ಲೇಷಣೆ

Political Analysis: ಈಗಿನ ಜೆಡಿಎಸ್ ಸೋಲು ಕುಮಾರಸ್ವಾಮಿ ನಾಯಕತ್ವ ಹಾಗೂ ತಂತ್ರಗಾರಿಕೆಯ ಸೋಲು. ಅಷ್ಟೇ ಅಲ್ಲ, ಸಿದ್ಧಾಂತವನ್ನು ಮರೆತು, ನಿರ್ದಿಷ್ಟ ಪ್ರಾದೇಶಿಕ ಭಾಗಕ್ಕೆ ಹಾಗೂ ಜಾತಿಗೆ ಸೀಮಿತವಾದಲ್ಲಿ ಏನಾಗುತ್ತದೆ ಎಂಬುದಕ್ಕೆ ನಿದರ್ಶನ ಕೂಡ ಹೌದು.

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದಿಂದ ತೀರಾ ದೊಡ್ಡ ಮಟ್ಟದ ಹಿನ್ನಡೆ ಆಗಿರುವುದು ಜೆಡಿಎಸ್‌ಗೆ ಹಾಗೂ ಕುಮಾರಸ್ವಾಮಿಗೆ. ಇಪ್ಪತ್ತು ಸ್ಥಾನಗಳಿಗಿಂತ ಕೆಳಗೆ ಕುಸಿಯುವುದರೊಂದಿಗೆ 1999ರ ನಂತರದಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ಇದಾಗಿದೆ. ಯಾವ ಜಿಲ್ಲೆಗಳನ್ನು ಜೆಡಿಎಸ್ ನ ಭದ್ರಕೋಟೆ ಎನ್ನಲಾಗುತ್ತಿತ್ತೋ ಅಲ್ಲೆಲ್ಲ ಕಾಂಗ್ರೆಸ್ ರಾರಾಜಿಸುತ್ತಿದೆ. ರಾಮನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಸಹ ಗೆಲ್ಲಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗಿಲ್ಲ. ಇಂಥ ದುರಿತ ಕಾಲದಲ್ಲೂ ಕುಮಾರಸ್ವಾಮಿ ಅವರ ಅದೃಷ್ಟ ಏನೆಂದರೆ, ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನ ಸ್ವರೂಪ್ ಗೆದ್ದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಕನಿಷ್ಠ ಕುಟುಂಬದ ಒಳಗಾದರೂ ಮರ್ಯಾದೆ ಉಳಿದುಕೊಂಡಿದೆ.

IPL_Entry_Point