Kaveri theerthodbhava 2022: ತಲಕಾವೇರಿಯಲ್ಲಿ ತೀರ್ಥಸ್ವರೂಪಿಣಿಯಾಗಿ ಕಾವೇರಿ ತೀರ್ಥೋದ್ಭವ; ಸಹಸ್ರ ಭಕ್ತರಿಂದ ವೀಕ್ಷಣೆ
ಕನ್ನಡ ಸುದ್ದಿ  /  ಕರ್ನಾಟಕ  /  Kaveri Theerthodbhava 2022: ತಲಕಾವೇರಿಯಲ್ಲಿ ತೀರ್ಥಸ್ವರೂಪಿಣಿಯಾಗಿ ಕಾವೇರಿ ತೀರ್ಥೋದ್ಭವ; ಸಹಸ್ರ ಭಕ್ತರಿಂದ ವೀಕ್ಷಣೆ

Kaveri theerthodbhava 2022: ತಲಕಾವೇರಿಯಲ್ಲಿ ತೀರ್ಥಸ್ವರೂಪಿಣಿಯಾಗಿ ಕಾವೇರಿ ತೀರ್ಥೋದ್ಭವ; ಸಹಸ್ರ ಭಕ್ತರಿಂದ ವೀಕ್ಷಣೆ

ರಾಜ್ಯದ ಜೀವನದಿ ಕಾವೇರಿಯ ಜನ್ಮ ಸ್ಥಳ ತಲಕಾವೇರಿಯಲ್ಲಿಂದು ನಡೆದ ತೀರ್ಥೋದ್ಭವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಸಂಜೆ 7 ಗಂಟೆ 23 ನಿಮಿಷಕ್ಕೆ ಮೇಷ ಲಗ್ನದಲ್ಲಿ ತೀರ್ಥೋದ್ಭವ ಜರುಗಿತು.

<p>ತಲಕಾವೇರಿಯಲ್ಲಿ ತೀರ್ಥಸ್ವರೂಪಿಣಿಯಾಗಿ ಬಂದ ಕಾವೇರಿ ತೀರ್ಥೋದ್ಭವವನ್ನು ಕಂಣ್ತುಂಬಿಕೊಂಡ ಭಕ್ತರು.&nbsp;</p>
ತಲಕಾವೇರಿಯಲ್ಲಿ ತೀರ್ಥಸ್ವರೂಪಿಣಿಯಾಗಿ ಬಂದ ಕಾವೇರಿ ತೀರ್ಥೋದ್ಭವವನ್ನು ಕಂಣ್ತುಂಬಿಕೊಂಡ ಭಕ್ತರು.&nbsp;

ಕೊಡಗು: ರಾಜ್ಯದ ಜೀವನದಿ, ತೀರ್ಥೋದ್ಭವದ ಪವಿತ್ರ ಕ್ಷೇತ್ರ ಹಾಗೂ ಕಾವೇರಿಯ ಜನ್ಮ ಸ್ಥಳ ತಲಕಾವೇರಿಯಲ್ಲಿಂದು ತೀರ್ಥೋದ್ಭವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಸಂಜೆ 7 ಗಂಟೆ 23 ನಿಮಿಷಕ್ಕೆ ಮೇಷ ಲಗ್ನದಲ್ಲಿ ತೀರ್ಥೋದ್ಭವ ಜರುಗಿತು. ಎರಡು ನಿಮಿಷ ತಡವಾಗಿ ಬ್ರಹ್ಮ ಕುಂಡಿಕೆಯಲ್ಲಿ ಜೀವ ನದಿ ಕಾವೇರಿ ತೀರ್ಥಸ್ವರೂಪಿಣಿಯಾಗಿ ಮೂರು ಬಾರಿ ಉಕ್ಕಿದಳು. ತೀರ್ಥೋದ್ಭವ ಆಗುತ್ತಿದ್ದಂತೆ ಭಕ್ತರು ತೀರ್ಥವನ್ನು ತುಂಬಿಕೊಳ್ಳಲು ಮುಗಿಬಿದ್ದರು.

ಮಹಾ ಸಂಕಲ್ಪ ಸೇರಿದಂತೆ ವಿವಿಧ ರೀತಿಯ ಪೂಜೆಗಳ ಬಳಿಕ ತೀರ್ಥಸ್ವರೂಪಿಣಿ ಬಂದ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳುತ್ತಿದ್ದಂತೆ ಭಕ್ತರ ಹರ್ಷೋದ್ಘಾರಗಳು ಮೊಳಗಿತು.

ವರ್ಷಕ್ಕೊಮ್ಮೆ ನಡೆಯುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನಾಡಿನ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ತೀರ್ಥೋದ್ಭವದ ಸ್ಥಳವನ್ನು ವಿವಿಧ ಬಣ್ಣದ ಹೂಗಳಿಂದ ಸಿಂಗಾರ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು.

ಒಂದು ತಿಂಗಳ ಕಾಲ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಕೊಡಗು ಜಿಲ್ಲಾಡಳಿತ ಸಕಲಸಿದ್ಧತೆಗಳನ್ನು ಮಾಡಿಕೊಂಡಿತ್ತು.

Whats_app_banner