ಕನ್ನಡ ಸುದ್ದಿ  /  Karnataka  /  Kodagu Earthquake Today Kodagu Rain And Weather News

Kodagu News: ಮಡಿಕೇರಿಯ ಚೆಂಬು ಗ್ರಾಮದಲ್ಲಿ ಮತ್ತೆ ಭೂಕಂಪನ, ಹಲವೆಡೆ ಗುಡ್ಡ ಕುಸಿತ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಜನರು ಮತ್ತೆ ಆತಂಕದಿಂದ ಇದ್ದಾರೆ. ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಗುಡ್ಡ ಕುಸಿತ ಕಂಡಿದ್ದು, ಗುಡ್ಡದ ಬಳಿಯಿರುವ ಮನೆಯವರು ಆತಂಕದಲ್ಲಿದ್ದಾರೆ. ದಬ್ಬಡ್ಕ, ಕೊಪ್ಪ, ನಾಕಲ್‌ಮೊಟ್ಟೆ ಸೇರಿದಂತೆ ವಿವಿಧೆಡೆ ಗುಡ್ಡ ಕುಸಿತ ಸಂಭವಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಜನರು ಮತ್ತೆ ಆತಂಕದಿಂದ ಇದ್ದಾರೆ. ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಗುಡ್ಡ ಕುಸಿತ ಕಂಡಿದ್ದು, ಗುಡ್ಡದ ಬಳಿಯಿರುವ ಮನೆಯವರು ಆತಂಕದಲ್ಲಿದ್ದಾರೆ. ದಬ್ಬಡ್ಕ, ಕೊಪ್ಪ, ನಾಕಲ್‌ಮೊಟ್ಟೆ ಸೇರಿದಂತೆ ವಿವಿಧೆಡೆ ಗುಡ್ಡ ಕುಸಿತ ಸಂಭವಿಸಿದೆ.

ಕೊಡಗು ಜಿಲ್ಲೆಯ ಚೆಂಬುವಿನಲ್ಲಿ ಭೂಕಂಪನವಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ಹಲವು ದಿನಗಳಿಂದ ಭೂಮಿ ಕಂಪಿಸುತ್ತಲೇ ಇದ್ದು, ಜನರು ಆತಂಕದಿಂದಲೇ ದಿನ ದೂಡುತ್ತಿದ್ದಾರೆ. ಜೂನ್‌ 23ರಂದು ಹಾಸನ ಮೈಸೂರು ಗಡಿಯಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಗೆ ಸೋಮವಾರೆ ಪೇಟೆ ಮತ್ತು ಮಡಿಕೇರಿ ತಾಲೂಕಿನ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿತ್ತು.

ಇಂದು ಕೊಪ್ಪ ಗ್ರಾಮದ ಬಾಲಕೃಷ್ಣ ಎಂಬವರ ಮನೆ ಬಳಿ ಗುಡ್ಡ ಕುಸಿದಿದೆ. ಕೂದಲೆಳೆ ಅಂತರದಲ್ಲಿ ಬಾಲಕೃಷ್ಣ ಕುಟುಂಬ ಪಾರಾಗಿದ್ದು, ಗುಡ್ಡದ ಬಳಿ ಇರುವ ಇತರೆ ಕುಟುಂಬದವರೂ ಆತಂಕಕ್ಕೆ ಈಡಾಗಿದ್ದಾರೆ. ನಿನ್ನೆ ರಾತ್ರಿಯೇ ಬಾಲಕೃಷ್ಣ ಕುಟುಂಬ ಭಯದಿಂದ ಮನೆ ಬಿಟ್ಟು ಹೋಗಿ ಬೆಟ್ಟದ ಮೇಲೆ ರಕ್ಷಣೆ ಪಡೆದಿದ್ದಾರೆ.

ಜೂನ್‌ 25ರಂದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ಸುಮಾರು ಐದು ಕಿ;ಮೀ. ದೂರದಲ್ಲಿ 1.8 ತೀವ್ರತೆಯ ಭೂಕಂಪನವಾಗಿತ್ತು. ಅಂದಿನಿಂದ ಪದೇಪದೇ ಭೂಮಿ ಕಂಪಿಸುತ್ತಲೇ ಇದೆ. ಕರಿಕೆ, ಚೆಂಬು, ಪೆರಾಜೆ, ಗೂನಡ್ಕ ಮುಂತಾದ ಕಡೆಗಳಲ್ಲಿ ಭೂಕಂಪನವಾಗುತ್ತಿದೆ. ಜುಲೈ 27ರಂದು ಚೆಂಬು ಗ್ರಾಮದಲ್ಲಿ 3.0 ತೀವ್ರತೆಯ ಭೂಕಂಪನವು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿತ್ತು. ಈ ಭೂಕಂಪನದಲ್ಲಿ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದವು.

2018ರ ಭೂಕುಸಿತದ ಘಟನೆಯ ಭಯ ಜನರಲ್ಲಿ ಇನ್ನೂ ಹೋಗಿಲ್ಲ. ಆ ಸಮಯದಲ್ಲಿ ಭೂಕುಸಿತ ಸಂಭವಿಸುವ ಮೊದಲೂ ಇದೇ ರೀತಿಯ ಭೂಕಂಪನವಾಗಿತ್ತು ಎಂದು ಅಲ್ಲಿನ ಜನರು ಈಗಲೂ ಆತಂಕದಿಂದ ನೆನಪಿಸಿಕೊಳ್ಳುತ್ತಿದ್ದಾರೆ. ಭೂಕಂಪನದ ಜತೆ ಇಂದು ಮಳೆಯೂ ಹೆಚ್ಚಾಗಿದ್ದು, ಜನರ ಭಯ ಹೆಚ್ಚಿಸಿದೆ. ಮುಂದೆ ಏನು ಕಾದಿದೆಯೋ ಎಂಬ ಆತಂಕದಲ್ಲಿ ಜನರಿದ್ದಾರೆ.

ಭೂಕಂಪ ಎಂದರೇನು?

ಭೂಕಂಪ ಭೂಮಿಯ ಹೊರಪದರದ ಕಂಪನದಿಂದ ಉಂಟಾಗುವ ವಿದ್ಯಮಾನ. ಭೂಕಂಪ, ಭೂಮಿಯ ಕೆಳ ಮೇಲ್ಮೈಯಲ್ಲಿ ಹಠಾತ್ ನಡುಕ, ಇದರಿಂದಾಗಿ ಭೂಮಿಯ ಮೇಲ್ಮೈಯ ಪದರಗಳಲ್ಲಿನ ಅನಿಲಗಳ ಅಸಮತೋಲನ, ಅದೇ ವೇಗಗಳಿಂದ ಉತ್ಪತ್ತಿಯಾಗುವ ವೇಗ, ಸಂಕೋಚನ ಉತ್ಪತ್ತಿಯಾಗುತ್ತದೆ. ಮತ್ತು ಚಲನೆಯು ಭೂಮಿಯ ಮೇಲಿನ ಮೇಲ್ಮೈಯಲ್ಲಿ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ, ವೇಗಗಳ ವೇಗಕ್ಕೆ ಅನುಗುಣವಾಗಿ, ಭೂಮಿಯ ಮೇಲಿನ ಮೇಲ್ಮೈ ಸ್ಫೋಟಗೊಳ್ಳಲು ಪ್ರಾರಂಭವಾಗುತ್ತದೆ ಮತ್ತು ಕ್ರಮೇಣ ಕಡಿಮೆಯಾಗುತ್ತದೆ. ಕೆಲವೊಮ್ಮೆ ಭೂಕಂಪದ ತೀವ್ರತೆಯ ವೇಗವು ಕಟ್ಟಡವು ಕುಸಿಯುತ್ತದೆ. ಜಲಾಶಯಗಳಲ್ಲಿ ಭರಾಟೆ ಇದೆ ಮತ್ತು ಕೆಲವೊಮ್ಮೆ ಭೂಕಂಪಗಳು ಸಹ ಸುನಾಮಿ ಮತ್ತು ಭೂಕುಸಿತಕ್ಕೆ ಕಾರಣವಾಗುತ್ತವೆ.

ಭೂಕಂಪದಿಂದ ರಕ್ಷಣೆ ಹೇಗೆ?

ಎಲ್ಲಾದರೂ ನೀವಿರುವ ಸ್ಥಳದಲ್ಲಿ ಭೂಕಂಪನದ ಅನುಭವವಾದಗ ತಕ್ಷಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

- ಭೂಮಿಯ ಕೊಂಚ ನಡುಕದ ಅನುಭವ ಉಂಟಾದ ತಕ್ಷಣ ಮನೆ, ಕಚೇರಿ ಅಥವಾ ಮುಚ್ಚಿದ ಕಟ್ಟಡದ ಹೊರಗೆ ಬನ್ನಿ. ರಸ್ತೆಯಲ್ಲಿ ಅಥವಾ ತೆರೆದ ಮೈದಾನದಲ್ಲಿ ನಿಂತುಕೊಳ್ಳಿ.

- ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಆಫ್‌ ಮಾಡಿ ಮತ್ತು ವಿದ್ಯುತ್ ಮುಖ್ಯ ಸ್ವಿಚ್ ಆಫ್‌ ಮಾಡಿ.

- ವಾಹನವನ್ನು ಓಡಿಸಬೇಡಿ , ವಾಹನಗಳಲ್ಲಿ ಪ್ರಯಾಣಿಸಬಾರದು.

- ಸುರಕ್ಷಿತ ಮತ್ತು ತೆರೆದ ಸ್ಥಳದಲ್ಲಿ ನಿಂತುಕೊಳ್ಳಿ. ಮರಗಳ ಅಡಿ ನಿಲ್ಲಬೇಡಿ.

- ಯಾವುದೇ ಆಳವಾದ ಸ್ಥಳ, ಬಾವಿ, ಕೊಳ, ನದಿ, ಸಮುದ್ರ ಮತ್ತು ದುರ್ಬಲ ಮತ್ತು ಹಳೆಯ ಮನೆಯ ಸಮೀಪ ನಿಲ್ಲಬೇಡಿ.

IPL_Entry_Point