ಕನ್ನಡ ಸುದ್ದಿ  /  ಕರ್ನಾಟಕ  /  ಕಾಂಗ್ರೆಸ್ ಸ್ವಯಂ ಸ್ಫೋಟದ ಅನಿವಾರ್ಯ ಹಾದಿಯಲ್ಲಿದೆ; ವಂಶ ರಾಜಕಾರಣದ ವಿರುದ್ಧ ಸಿಟ್ಟು ಕಾರಿದ ನಟ ಚೇತನ್ ಅಹಿಂಸ

ಕಾಂಗ್ರೆಸ್ ಸ್ವಯಂ ಸ್ಫೋಟದ ಅನಿವಾರ್ಯ ಹಾದಿಯಲ್ಲಿದೆ; ವಂಶ ರಾಜಕಾರಣದ ವಿರುದ್ಧ ಸಿಟ್ಟು ಕಾರಿದ ನಟ ಚೇತನ್ ಅಹಿಂಸ

ವಿವಾದಾತ್ಮಕ ಹೇಳಿಕೆ, ಪೋಸ್ಟರ್‌ಗಳ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಿದ್ದ ನಟ ಚೇತನ್ ಅಹಿಂಸ ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಫ್‌ಬಿ ಪೋಸ್ಟ್ ಹಾಕಿದ್ದಾರೆ.

ನಟ ಚೇತನ್ ಅಹಿಂಸ
ನಟ ಚೇತನ್ ಅಹಿಂಸ

ಬೆಂಗಳೂರು: ಸಾಮಾಜಿಕ ನ್ಯಾಯ, ಆರ್ಥಿಕ ಶಕ್ತಿ, ಶಿಕ್ಷಣ, ಸಂವಿಧಾನ ಹಾಗೂ ರಾಜಕೀಯ ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ಉಳ್ಳವರ ವಿರುದ್ಧ ಸದಾ ವಾಗ್ದಾಳಿ ನಡೆಸುವ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ (Chetan Ahimsa) ಆಗಾಗ ವಿವಾದಾತ್ಮಕ ಹೇಳಿಕೆ, ಪೋಸ್ಟರ್‌ಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ (Karnataka Lok Sabha Election 2024) ಕಾಂಗ್ರೆಸ್ ಟಿಕೆಟ್ (Congress Ticket) ವಿಚಾರ ಸಂಬಂಧ ಆ ಪಕ್ಷದ ವಿರುದ್ಧ ಗುಡುಗಿದ್ದಾರೆ. ಪ್ರಮುಖ ರಾಜಕಾರಣಿಗಳ ಕುಟುಂಬದವರಿಗೆ ಈ ಬಾರಿಯ ಲೋಕಸಭಾ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿರುವ ಅವರು, ಕಾಂಗ್ರೆಸ್ ಸ್ವಯಂ ಸ್ಫೋಟದ ಅನಿವಾರ್ಯ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಚೇತನ್, 2024ರ ಕರ್ನಾಟಕ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿಗಳ ದೊಡ್ಡ ಭಾಗವು ಇಂದಿನ ಆಡಳಿತ ಕುಟುಂಬಗಳ ನಿಕಟ ಸಂಬಂಧಿಕರಾಗಿದ್ದಾರೆ. ಪಕ್ಷವು ಅರ್ಹತೆಗಿಂತ ವಂಶಾವಳಿಯನ್ನು ಹೇಗೆ ಆದ್ಯತೆ ನೀಡುತ್ತದೆ ಎಂಬುದನ್ನು ಇದು ಮತ್ತೊಮ್ಮೆ ಬಹಿರಂಗಪಡಿಸುತ್ತದೆ. ಅತ್ಯಂತ ಬದ್ಧ ಮತ್ತು ನೆಚ್ಚಿನ ಪಕ್ಷದ ಕಾರ್ಯಕರ್ತರು ಬೆಳೆಯುವ ಸ್ವಾಭಾವಿಕ ವ್ಯವಸ್ಥೆಯನ್ನು ವಂಶಪಾರಂಪರ್ಯ ರಾಜಕೀಯವು ಅಡ್ಡಿಪಡಿಸುತ್ತದೆ. ಕಾಂಗ್ರೆಸ್ ಸ್ವಯಂ-ಸ್ಫೋಟದ ಅನಿವಾರ್ಯ ಹಾದಿಯಲ್ಲಿದೆ ಎಂದು ಎಫ್‌ಬಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅಹಮದಾಬಾದ್‌ನಲ್ಲಿ ಕಳೆದ ವರ್ಷ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೋಲು ಅನುಭವಿಸಿತ್ತು. ಈ ಬಗ್ಗೆ ಕಾಮೆಂಟ್ ಮಾಡಿದ್ದ ಚೇತನ್, ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಫೈನಲ್‌ನಲ್ಲಿ ಕಪ್ ಗೆಲ್ಲುತ್ತಿತ್ತು ಎಂದಿದ್ದರು. ತೆರಿಗೆದಾರರ ಕೋಟಿ ಕೋಟಿ ಹಣ ಅಂಬರೀಷ್ ಅವರ ಸ್ಮಾರಕ್ಕೆ ಹೋಯ್ತು ಎಂದು ನಟಿ ಕಂ ರಾಜಕಾರಣಿ ಸುಮಲತಾ ಅವರ ವಿರುದ್ಧವೂ ಚೇತನ್ ಗುಡುಗಿದ್ದರು.

ಧಾರ್ಮಿಕ ವಿಚಾರದಲ್ಲೂ ಆಗಾಗ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಅಹಿಂಸಾ, ಶಾಲೆಗಳಲ್ಲಿ ದೇವರ ಪೂಜೆ ಬೇಕಾಗಿಲ್ಲ ಎಂದು ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ಮಾಡಿದ್ದರ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದರು. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಅವರ ಹೆಸರಿಡುವುದೇ ಸೂಕ್ತ ಎಂಬ ಹೇಳಿಕೆಯೂ ಮೂಲಕ ಇವರು ಸುದ್ದಿಯಾಗಿದ್ದರು.

IPL_Entry_Point