ಕನ್ನಡ ಸುದ್ದಿ  /  ಕರ್ನಾಟಕ  /  Malnad Gidda Cow: ಮಲೆನಾಡು ಗಿಡ್ಡತಳಿಯ ರಾಸುಗಳಿಗೆ ವಿಮೆ; ಅಗತ್ಯ ಕ್ರಮದ ಭರವಸೆ ನೀಡಿದ ಸಚಿವ ಪ್ರಭು ಚವ್ಹಾಣ

Malnad gidda cow: ಮಲೆನಾಡು ಗಿಡ್ಡತಳಿಯ ರಾಸುಗಳಿಗೆ ವಿಮೆ; ಅಗತ್ಯ ಕ್ರಮದ ಭರವಸೆ ನೀಡಿದ ಸಚಿವ ಪ್ರಭು ಚವ್ಹಾಣ

Malnad gidda cow: ಟೆಂಡರ್ ಪ್ರಕ್ರಿಯೆಯ ಪೂರ್ಣಗೊಂಡ ನಂತರ ಮತ್ತು ಕಾರ್ಯಕ್ರಮ ಅನುಷ್ಠಾನಕ್ಕೆ ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆ ಆಗಲಿದೆ. ಅದಾದ ತಕ್ಷಣ ಮಲೆನಾಡು ಗಿಡ್ಡತಳಿಯ ರಾಸುಗಳನ್ನು ವಿಮೆಗೆ ಒಳಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ತಿಳಿಸಿದರು.

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ
ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ

ಬೆಂಗಳೂರು: ಮಲೆನಾಡು ಗಿಡ್ಡತಳಿಯ ರಾಸುಗಳಿಗೆ ವಿಮೆ ಒದಗಿಸುವ ಪ್ರಸ್ತಾವನೆ ಇದೆ. ಇದರಂತೆ, ಮಲೆನಾಡು ಗಿಡ್ಡತಳಿಯ ರಾಸುಗಳನ್ನು ವಿಮೆಗೆ ಒಳಪಡಿಸಲು ಕ್ರಮವಹಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ವಿಧಾನಸಭೆಗೆ ಇಂದು ತಿಳಿಸಿದರು.

ಅವರು ಸೋಮವಾರ ವಿಧಾನಸಭೆಯಲ್ಲಿ ಸದಸ್ಯ ಯು.ಟಿ.ಖಾದರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಪ್ರಕಾರ 2022-23ನೇ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ಹಾಲುಹಿಂಡುವ ರಾಸುಗಳ ವಿಮೆಯೊಂದಿಗೆ ಎತ್ತು, ಹೋರಿ, ಮಣಕ, ಕೋಣ, ಕುರಿ, ಮೊಲ, ಹಂದಿ, ದೇಶಿ ತಳಿ ರಾಸುಗಳನ್ನು ವಿಮೆಗೊಳಪಡಿಸುವ ತೀರ್ಮಾನ ತೆಗೆದುಕೊ‍ಳ್ಳಲಾಗಿದೆ. ಇದರಂತೆ, ವಿಮಾಸಂಸ್ಥೆಯನ್ನು ಗುರುತಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇದಕ್ಕಾಗಿ 14 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ ವಿವರಿಸಿದರು.

ಟೆಂಡರ್ ಪ್ರಕ್ರಿಯೆಯ ಪೂರ್ಣಗೊಂಡ ನಂತರ ಮತ್ತು ಕಾರ್ಯಕ್ರಮ ಅನುಷ್ಠಾನಕ್ಕೆ ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆ ಆಗಲಿದೆ. ಅದಾದ ತಕ್ಷಣ ಮಲೆನಾಡು ಗಿಡ್ಡತಳಿಯ ರಾಸುಗಳನ್ನು ವಿಮೆಗೆ ಒಳಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಟಿ. ಜಾನ್ ನಿಧನಕ್ಕೆ – ಉಭಯ ಸದನಗಳಲ್ಲಿ ಸಂತಾಪ

ವಿಧಾನ ಪರಿಷತ್ತಿನ ಮಾಜಿ ಸದಸ್ಯ, ಮಾಜಿ ಸಚಿವ ಟಿ. ಜಾನ್ ರವರು ಫೆಬ್ರವರಿ 10 ರಂದು ನಿಧನರಾದರು. ಈ ವಿಚಾರವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನದ ಗಮನಕ್ಕೆ ತಂದು ಸಂತಾಪ ವ್ಯಕ್ತಪಡಿಸಿದರು.

ಟಿ. ಜಾನ್‌ ಅವರು 1931ರ ಅಕ್ಟೋಬರ್ 19 ರಂದು ಕೇರಳ ರಾಜ್ಯದ ಕೊಟ್ಟಾಯಂನಲ್ಲಿ ವೈಕಂ ತಾಲೂಕಿನಲ್ಲಿ ಜನಿಸಿದರು. 1998 ರಿಂದ 2004 ರವರೆಗೆ ಹಾಗೂ 2010 ರಿಂದ 2016 ರವರೆಗೆ ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಎಸ್.ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ಮೂಲ ಸೌಕರ್ಯ ಮತ್ತು ನಾಗರಿಕ ವಿಮಾನಯಾನ ಸಚಿವರಾಗಿ ಕಾರ್ಯನಿರ್ವಹಿಸಿರುತ್ತಾರೆ. ಅಬಕಾರಿ ಉದ್ಯಮ, ಕಾಫಿ ಪ್ಲಾಂಟೇಶನ್‌, ರೆಸಾರ್ಟ್‍ಗಳನ್ನು ಆರಂಭಿಸಿದ ಖ್ಯಾತ ಉದ್ಯಮಿಯೂ ಆಗಿದ್ದರು. ಕೊಡುಗೈ ದಾನಿಯೆಂದೇ ಖ್ಯಾತರಾಗಿದ್ದ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಸೇವೆಗಳಲ್ಲೂ ಗುರುತಿಸಿಕೊಂಡಿದ್ದರು. ಅವರ ನಿಧನದಿಂದಾಗಿ ರಾಜ್ಯವು ಒಬ್ಬ ಹಿರಿಯ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು. ನಂತರ ಒಂದು ನಿಮಿಷಗಳ ಕಾಲ ಸದನದಲ್ಲಿ ಮೃತರ ಗೌರವಾರ್ಥ ಮೌನಾಚರಣೆ ಮಾಡಲಾಯಿತು.

ವಿಧಾನಸಭೆಯಲ್ಲಿಂದು - ಗಮನಿಸಬಹುದಾದ ಸುದ್ದಿಗಳು

ಹೊಸ ತಾಲೂಕುಗಳಿಗೆ ಆಡಳಿತ ಸೌಧ ನಿರ್ಮಾಣ; ತಲಾ 10 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ- ವಿವರ ನೀಡಿದ ಸಚಿವ ಅಶೋಕ

Karnataka assembly session: ಹೊಸದಾಗಿ ರಚನೆಯಾದ ಕೆಜಿಎಫ್, ಮೂಡಬಿದರೆ,ಕಡಬ,ಮೂಲ್ಕಿ, ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿ, ಕುರುಗೋಡು, ಕಂಪ್ಲಿ, ಬಬಲೇಶ್ವರ, ತಿಕೋಟಾ ತಾಲೂಕುಗಳಲ್ಲಿ ತಲಾ 10 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕು ಆಡಳಿತ ಸೌಧಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸಚಿವ ಆರ್. ಅಶೋಕ ತಿಳಿಸಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ವಿವಿಧ ವಸತಿ ಯೋಜನೆಗಳಲ್ಲಿ 3200 ಕೋಟಿ ರೂಪಾಯಿಗೂ ಅಧಿಕ ಅನುದಾನ; ಸದನಕ್ಕೆ ಸಚಿವ ವಿ.ಸೋಮಣ್ಣ ಮಾಹಿತಿ

Karnataka housing scheme: ವಸತಿ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ವಿವಿಧ ವಸತಿ ಯೋಜನೆಗಳಿಗೆ ಪ್ರಸಕ್ತ ಆರ್ಥಿಕ ವರ್ಷ ಅಂದರೇ 2022-23ನೇ ಸಾಲಿನಲ್ಲಿ 3218.84 ಕೋಟಿ ರೂಪಾಯಿ ಅನುದಾನವನ್ನು ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point