Hubli airport: ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾದ ಹುಬ್ಬಳ್ಳಿ ಏರ್‌ಪೋರ್ಟ್; ಸಚಿವರಿಂದ ಶ್ಲಾಘನೆ
“ನಮ್ಮ ಹುಬ್ಬಳ್ಳಿ ವಿಮಾನ ನಿಲ್ದಾಣದ ಹಿರಿಮೆಗೆ ಮತ್ತೊಂದು ಗರಿ. 2030ರ ವೇಳೆಗೆ ನವೀಕರಿಸಬಹುದಾದ ಇಂಧನದಿಂದ 50% ಇಂಧನ ಉತ್ಪಾದಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಲು, ಈಗ ಹುಬ್ಬಳ್ಳಿ ವಿಮಾನ ನಿಲ್ದಾಣವು 100% ಹಸಿರು ವಿಮಾನ ನಿಲ್ದಾಣವಾಗಿ ಮಾರ್ಪಟ್ಟಿದೆ” ಎಂದು ಕೇಂದ್ರ ಸಚಿವರು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ವಾಣಿಜ್ಯ ನಗರಿ ಹುಬ್ಬಳಿಯ ವಿಮಾನ ನಿಲ್ದಾಣ ಪಾತ್ರವಾಗಿದೆ. ‘ದಿನದಿಂದ ದಿನಕ್ಕೆ ಹೊಸ ಹೊಸ ಸಂಪರ್ಕಗಳನ್ನು ಜೋಡಿಸುತ್ತಿರುವ ನಮ್ಮ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ ಹಸಿರು ವಿಮಾನ ನಿಲ್ದಾಣವಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
2030ರ ವೇಳೆಗೆ ನವೀಕರಿಸಬಹುದಾದ ಮೂಲಗಳಿಂದ 50 ಪ್ರತಿಶತದಷ್ಟು ವಿದ್ಯುತ್ ಉತ್ಪಾದಿಸುವ ಗುರಿಯನ್ನು ಭಾರತ ಸಾಧಿಸುವ ಹಾದಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಜಿ20 ಶೃಂಗಸಭೆಯಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾನುವಾರ ಟ್ವೀಟ್ ಮಾಡಿ ರಾಜ್ಯದ ಜನತೆಗೆ ಶುಭಸುದ್ದಿ ನೀಡಿದ್ದಾರೆ.
“ನಮ್ಮ ಹುಬ್ಬಳ್ಳಿ ವಿಮಾನ ನಿಲ್ದಾಣದ ಹಿರಿಮೆಗೆ ಮತ್ತೊಂದು ಗರಿ. 2030ರ ವೇಳೆಗೆ ನವೀಕರಿಸಬಹುದಾದ ಇಂಧನದಿಂದ 50% ಇಂಧನ ಉತ್ಪಾದಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಲು, ಈಗ ಹುಬ್ಬಳ್ಳಿ ವಿಮಾನ ನಿಲ್ದಾಣವು 100% ಹಸಿರು ವಿಮಾನ ನಿಲ್ದಾಣವಾಗಿ ಮಾರ್ಪಟ್ಟಿದೆ” ಎಂದು ಕೇಂದ್ರ ಸಚಿವರು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
“ಸುಮಾರು 8MWp ಸೌರಶಕ್ತಿಯಿಂದ ವಿದ್ಯುತ್ ಶಕ್ತಿ ಉತ್ಪಾದಿಸುವ ಘಟಕದ ಸ್ಥಾಪನೆ ನಮ್ಮ ವಿಮಾನ ನಿಲ್ದಾಣದಲ್ಲಿ ಆರಂಭವಾಗಿದ್ದು, ಅದರ ಶೇಖರಣೆಯು ಹುಬ್ಬಳ್ಳಿಯಲ್ಲಿಯೇ ಆಗಲಿದೆ. ಶೇಖರಿಸಿದ ವಿದ್ಯುತ ಶಕ್ತಿಯನ್ನು ಬೆಳಗಾವಿ, ಮೈಸೂರು, ಬಳ್ಳಾರಿ, ಬೆಂಗಳೂರು ಹಾಗೂ ಇನ್ನಿತರ ವಿಮಾನ ನಿಲ್ದಾಣಗಳಿಗೆ ಸರಬರಾಜು ಮಾಡಲಾಗುವುದು,” ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2030ರ ವೇಳೆಗೆ ನವೀಕರಿಸಬಹುದಾದ ಮೂಲಗಳಿಂದ 50 ಪ್ರತಿಶತದಷ್ಟು ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿಮಾನನಿಲ್ದಾಣ ಈಗಾಗಲೇ ಸಂಪೂರ್ಣ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ರಾಜ್ಯದ ಪ್ರಥಮ ವಿಮಾನ ನಿಲ್ದಾಣವಾಗಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿಸುವ ನನ್ನ ಅಭಿಲಾಶೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ಸಹಕರಿಸಿದ ದೇಶದ ವಿಮಾನಯಾನ ಸಚಿವರಾದ ಜ್ಯೀತಿರಾದಿತ್ಯ ಸಿಂಧಿಯಾ ಅವರಿಗೆ ಧನ್ಯವಾದಗಳು ಎಂದು ಜೋಶಿ ಹೇಳಿದ್ದಾರೆ.