ಕನ್ನಡ ಸುದ್ದಿ  /  ಕರ್ನಾಟಕ  /  Pradhan Mantri Udyog Yojana: ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಅರ್ಜಿ ಆಹ್ವಾನ

Pradhan mantri udyog yojana: ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಅರ್ಜಿ ಆಹ್ವಾನ

ಆನ್‍ಲೈನ್ ಮೂಲಕ www.kvic.org.in (pmegp online application)ರಲ್ಲಿ ಅರ್ಜಿ ಸಲ್ಲಿಸುವಾಗ AGENCY CODE KVIB) ಎಂದು ಅರ್ಜಿಯಲ್ಲಿ ನಮೂದಿಸಬೇಕು.

Pradhan mantri udyog yojana: ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಅರ್ಜಿ ಆಹ್ವಾನ
Pradhan mantri udyog yojana: ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಅರ್ಜಿ ಆಹ್ವಾನ

ಪ್ರಸಕ್ತ(2022-23) ಸಾಲಿನ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (ಪಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಉತ್ಪಾದನ/ ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಸ್ವಉದ್ಯೋಗ ಮಾಡಿಕೊಳ್ಳುವವರಿಗೆ ಪಟ್ಟಣ, ನಗರ, ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50. ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಟ ಶೇ.25 ರಿಂದ 35 ವರೆಗೆ ಸಹಾಯಧನವನ್ನು ನೀಡಲಾಗುವುದು. ಈ ವರ್ಷದಲ್ಲಿ ಹಸು, ಕುರಿ, ಮೇಕೆ, ಎಮ್ಮೆ, ಕೋಳಿ, ಬಾತು ಕೋಳಿ, ಟರ್ಕಿ ಕೋಳಿ, ಮೀನು ಸಾಕಾಣಿಕೆ ಹಾಗೂ ಹೋಟೆಲ್ ಮತ್ತು ಇತರೆ 250ಕ್ಕೂ ಅಧಿಕ ಉದ್ದಿಮೆಗಳಿಗೆ ಸಾಲ ಸಹಾಯಧನ ನೀಡಲಾಗುವುದು.

ಈ ಸೌಲಭ್ಯವನ್ನು ಪಡೆಯಲು ಆನ್‍ಲೈನ್ ಮೂಲಕ www.kvic.org.in (pmegp online application)ರಲ್ಲಿ ಅರ್ಜಿ ಸಲ್ಲಿಸುವಾಗ AGENCY CODE KVIB) ಎಂದು ಅರ್ಜಿಯಲ್ಲಿ ಅಳವಡಿಸಿ ಅದರ 02 ಪ್ರತಿಯನ್ನು ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ಖಾದಿ ಮಂಡಳಿಯ ಕಚೇರಿಗೆ ಕಳುಹಿಸಬೇಕು.

ಇತರೆ ಸಂಕ್ಷಿಪ್ತ ಸುದ್ದಿಗಳು

ಅಂಧರ ಟಿ20 ವಿಶ್ವಕಪ್‍: ಭಾರತ ತಂಡಕ್ಕೆ ಅಭಿನಂದನೆ

ಬೆಂಗಳೂರು: ಭಾರತದಲ್ಲಿ ನಡೆದ ಮೂರನೇ ಅಂಧರ ಟಿ20 ವಿಶ್ವಕಪ್‍ನಲ್ಲಿ ಭಾರತದ ಅಂಧರ ತಂಡ ಬಾಂಗ್ಲಾದೇಶವನ್ನು 120 ರನ್‍ಗಳ ಬೃಹತ್‍ ಅಂತರದಿಂದ ಸೋಲಿಸಿ ಹ್ಯಾಟ್ರಿಕ್‍ ಸಾಧನೆ ಮಾಡಿರುವ ಅಂಧರ ಕ್ರಿಕೆಟ್‍ ತಂಡ ದೇಶದ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಪೂರ್ತಿ ಎಂದು ಮಾನ್ಯ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಚಿವರಾದ ಹಾಲಪ್ಪ ಆಚಾರ್‌ ಪ್ರಶಂಸಿದ್ದಾರೆ.

ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಅಭೂತಪೂರ್ವ ಸಾಧನೆಯನ್ನು ತಂಡ ಮಾಡಿದೆ. ಅದರಲ್ಲೂ ಬೃಹತ್‍ ಅಂತರದಿಂದ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಹ್ಯಾಟ್ರಿಕ್‍ ಸಾಧನೆಯನ್ನು ಮಾಡಿದ್ದೀರಿ. ಈ ಮೂಲಕ ನಮ್ಮ ದೇಶದ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿ ಹೊರಹೊಮ್ಮಿದ್ದೀರಿ ಎಂದು ಪ್ರಶಂಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಿ ಎಂದು ಅವರು ಹಾರೈಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಅಂಧರ ಟಿ20 ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 120 ರನ್‌ಗಳ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 2 ವಿಕೆಟ್ ನಷ್ಟಕ್ಕೆ 277 ರನ್ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಟೀಂ ಇಂಡಿಯಾ ಅಂಧರ ಟಿ20 ವಿಶ್ವಕಪ್ 2022 ವಶಪಡಿಸಿಕೊಂಡಿತ್ತು.

ಡಿ.28, 29 ಮತ್ತು 30 ರಂದು ಕ್ರೀಡಾ ಶಾಲೆ/ ಕ್ರೀಡಾ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ

ಮಡಿಕೇರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಸುತ್ತಿರುವ ರಾಜ್ಯ ವಲಯದ ಕ್ರೀಡಾ ಶಾಲೆ/ ಕ್ರೀಡಾ ನಿಲಯಗಳಿಗೆ 2023-24 ನೇ ಸಾಲಿಗೆ 8ನೇ ತರಗತಿ ಹಾಗೂ ಪ್ರಥಮ ಪಿ.ಯು.ಸಿ. ಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆಯು ಡಿಸೆಂಬರ್, 28 ರಂದು ಮಡಿಕೇರಿ ತಾಲ್ಲೂಕಿಗೆ ಮಡಿಕೇರಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ, ಡಿಸೆಂಬರ್, 29 ರಂದು ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿಗೆ ಕೂಡಿಗೆ ಸರ್ಕಾರಿ ಕ್ರೀಡಾ ಶಾಲಾ ಕ್ರೀಡಾಂಗಣದಲ್ಲಿ ಹಾಗೂ ಡಿಸೆಂಬರ್, 30 ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿಗೆ ಪೊನ್ನಂಪೇಟೆಯ ತಾಲ್ಲೂಕು ಮಿನಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 08272-228985 ಮತ್ತು 9480032712 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಡಿ.19 ರಂದು ಗೃಹರಕ್ಷಕರ ದಿನಾಚರಣೆ

ಕೊಡಗು ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಗೃಹರಕ್ಷಕರ ದಿನಾಚರಣೆಯು ಡಿಸೆಂಬರ್, 19 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ನಡೆಯಲಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಜಿಲ್ಲಾ ಪೊಲೀಸ್ ಉಪಾಧೀಕ್ಷಕರು ಮತ್ತು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಜಿ.ಎಸ್.ಗಜೇಂದ್ರ ಪ್ರಸಾದ್, ವಿರಾಜಪೇಟೆ ಪೊಲೀಸ್ ಉಪಾಧೀಕ್ಷಕರಾದ ಎನ್.ನಿರಂಜನ್ ರಾಜೇ ಅರಸ್, ಸೋಮವಾರಪೇಟೆ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಆರ್.ವಿ.ಗಂಗಾಧರಪ್ಪ ಇತರರು ಪಾಲ್ಗೊಳ್ಳಲಿದ್ದಾರೆ.

IPL_Entry_Point