ಕನ್ನಡ ಸುದ್ದಿ  /  ಕರ್ನಾಟಕ  /  Exit Poll Result: ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದ ಜೀ ಮ್ಯಾಟ್ರೀಜ್‌; ರಾಜ್ಯದಲ್ಲಿ ಅತಂತ್ರ ಎಂದ ಇತರೆ ಸಮೀಕ್ಷೆಗಳು

Exit Poll Result: ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದ ಜೀ ಮ್ಯಾಟ್ರೀಜ್‌; ರಾಜ್ಯದಲ್ಲಿ ಅತಂತ್ರ ಎಂದ ಇತರೆ ಸಮೀಕ್ಷೆಗಳು

ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಜೀ ಮ್ಯಾಟ್ರೀಜ್ ಚುನಾವಣೋತ್ತರ ಸಮೀಕ್ಷೆ ಹೇಳಿದೆ. ಇತರೆ ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಅಂತ ಹೇಳಿವೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳು (Karnataka Exit Poll Result) ಬಹಿರಂಗವಾಗಿದ್ದು ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಜೀ ಮ್ಯಾಟ್ರೀಜ್ ಸ ಸಮೀಕ್ಷೆ ಹೇಳಿದೆ. ಉಳಿದ ಸಮೀಕ್ಷೆಗಳು ಕರ್ನಾಟಕದಲ್ಲಿ ಮತ್ತೆ ಅತಂತ್ರ ಅಂತ ಹೇಳಿವೆ.

ಜೀ ಮ್ಯಾಟ್ರೀಜ್‌ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ (Congress) 108 ರಿಂದ 118 ಸ್ಥಾನಗಳನ್ನು ಪಡೆಯಲಿದೆ ಅಂತ ಹೇಳಿದೆ. ಬಿಜೆಪಿ (BJP) 79-89 ಸ್ಥಾನಗಳನ್ನು ಪಡೆಯಲಿದೆ ಎಂದಿದೆ. ಅದೇ ರೀತಿಯಾಗಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ (JDS) 25-35 ಸ್ಥಾನಗಳು, ಇತರರು 2 ರಿಂದ 4 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದ ಸಮೀಕ್ಷೆ ಹೇಳಿದೆ.

ಇತರೆ ಸಮೀಕ್ಷೆಗಳು ಇಲ್ಲಿದೆ.

ಟಿವಿ9 ಕನ್ನಡ ಮತ್ತು ಸಿ-ವೋಟರ್ಸ್ ಸಮೀಕ್ಷೆ

ಕಾಂಗ್ರೆಸ್: 100-112

ಬಿಜೆಪಿ: 89-95

ಜೆಡಿಎಸ್: 21-29

ಇತರೆ: 2-6

ಟಿವಿ9- ಪೋಲ್‌ಸ್ಟಾರ್ಟ್

ಕಾಂಗ್ರೆಸ್: 99-110

ಬಿಜೆಪಿ: 88-98

ಜೆಡಿಎಸ್: 21-26

ಇತರೆ: 0-4

ರಿಪಬ್ಲಿಕ್ ಪಿಎಂಎಆರ್‌ಕ್ಯೂ

ಬಿಜೆಪಿ: 85-100

ಕಾಂಗ್ರೆಸ್: 94-108

ಜೆಡಿಎಸ್: 24-32

ಈ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಮುಂದಿದ್ದರೂ ಯಾರಿಗೂ ಕೂಡ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಈ ಸಮೀಕ್ಷೆ ನಿಜವೇ ಆದರೆ ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆಗಲಿದೆ.

IPL_Entry_Point