ಕನ್ನಡ ಸುದ್ದಿ  /  ಜೀವನಶೈಲಿ  /  ಗೂಗಲ್‌ನಿಂದಲೂ ಸಿಗುತ್ತೆ ಪಿಎಚ್‌ಡಿ ಫೆಲೋಶಿಪ್; ಆಯ್ಕೆ ಪ್ರಕ್ರಿಯೆ, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ

ಗೂಗಲ್‌ನಿಂದಲೂ ಸಿಗುತ್ತೆ ಪಿಎಚ್‌ಡಿ ಫೆಲೋಶಿಪ್; ಆಯ್ಕೆ ಪ್ರಕ್ರಿಯೆ, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ

ಪಿಎಚ್‌ಡಿ ವಿದ್ಯಾರ್ಥಿ ನೀವಾಗಿದ್ದರೆ ಗೂಗಲ್‌ನಿಂದ ಫೆಲೋಶಿಪ್ ಪಡೆಯಬಹುದು. ಇದಕ್ಕೆ ಏನೆಲ್ಲಾ ಅರ್ಹತೆ, ಮಾನದಂಡಗಳಿವೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನ ಇಲ್ಲಿ ನೀಡಲಾಗಿದೆ

ಗೂಗಲ್ ಪಿಎಚ್‌ಡಿ ಫಿಲೋಶಿಪ್‌ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ
ಗೂಗಲ್ ಪಿಎಚ್‌ಡಿ ಫಿಲೋಶಿಪ್‌ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ

ಜಗತ್ತಿನ ದೈತ್ಯ ಸರ್ಚ್ ಇಂಜಿನ್ ಗೂಗಲ್ ಸಂಸ್ಥೆ ಪಿಎಚ್‌ಡಿ ಫಿಲೋಶಿಪ್ ಕಾರ್ಯಕ್ರಮವನ್ನು ಆರಂಭಿಸಿದ್ದು, ಭಾರತದ ಸೇರಿದಂತೆ ಜಗತ್ತಿನಾದ್ಯಂತ ಕಂಪ್ಯೂಟರ್ ಸೈನ್ಸ್ ಮತ್ತು ಇದಕ್ಕೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಪಿಎಚ್‌ಡಿ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭವಿಷ್ಯದ ಆಧುನಿಕ ತಂತ್ರಜ್ಞಾನದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುವ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ, ಬೆಂಬಲ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಟ್ರೆಂಡಿಂಗ್​ ಸುದ್ದಿ

ಗೂಗಲ್ ಸಂಸ್ಥೆ ನಿಗದಿ ಪಡಿಸಿರುವ ಅರ್ಹತೆ, ಮಾನದಂಡಗಳು ನಿಮ್ಮಲ್ಲಿ ಇದ್ದರೆ ನೀವು ಕೂಡ ಅರ್ಜಿ ಸಲ್ಲಿಸಬಹುದು. ಪಿಎಚ್‌ಡಿ ಫಿಲೋಶಿಪ್ ಪಡೆಯಲು ಏನೆಲ್ಲಾ ಅರ್ಹತೆಯ ಮಾನದಂಡಗಳಿವೆ ಅನ್ನೋದನ್ನು ನೋಡೋಣ.

ಗೂಗಲ್ ಪಿಚ್‌ಡಿ ಫಿಲೋಶಿಪ್ ಅರ್ಹತೆಯ ಮಾನದಂಡಗಳು

  • ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಎಚ್‌ಡಿಗೆ ದಾಖಲಾಗಿರಬೇಕು
  • ಕಂಪ್ಯೂಟರ್ ವಿಜ್ಞಾನ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸಂಶೋಧನೆ ಮಾಡುತ್ತಿರಬೇಕು

ಗೂಗಲ್ ಪಿಚ್‌ಡಿ ಫಿಲೋಶಿಪ್‌ಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ

ಗೂಗಲ್ ಪಿಎಚ್‌ಡಿ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಪ್ರತಿ ವರ್ಷದಂತೆ ಮಾರ್ಚ್‌ನಿಂದ ಏಪ್ರಿಲ್ ವರೆಗೆ ಅವಕಾಶ ಇರುತ್ತದೆ

ಅರ್ಜಿ ಸಲ್ಲಿಸಲು ಪಿಎಚ್‌ಡಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಮೂಲ ವಿವರಗಳನ್ನು ಸಲ್ಲಿಸಬೇಕಾಗುತ್ತದೆ

ಗೂಗಲ್ ಪಿಚ್‌ಡಿ ಫಿಲೋಶಿಪ್‌ಗೆ ಸಂಬಂಧಿಸಿದ ಪ್ರಮುಖ ಮಾಹಿತಿ

  • ಗೂಗಲ್‌ನಿಂದ ಆರ್ಥಿಕ ನೆರವು ಪಡೆಯುವವರು ತಮ್ಮ ಸಂಶೋಧನಾ ವೆಚ್ಚಗಳು ಮತ್ತು ಜೀವನ ವೆಚ್ಚಗಳನ್ನು ನಿರ್ವಹಿಸಲು ನಾಲ್ಕು ವರ್ಷಗಳ ವರೆಗೆ ವಾರ್ಷಿಕವಾಗಿ 50,000 ಡಾಲರ್ ಅನುದಾನ ನೀಡಲಾಗುತ್ತದೆ
  • ಅಭ್ಯರ್ಥಿಗಳು ತಮ್ಮ ಪಿಎಚ್‌ಡಿ ಅಧ್ಯಯನದ ಸಮಯದಲ್ಲಿ ಏನಾದರೂ ಸಹಾಯ, ಸಲಹೆಗಳು ಬೇಕಾದರೆ ಗೂಗಲ್ ಸಂಸ್ಥೆಯ ಸಂಶೋಧನಾ ಮಾರ್ಗದರ್ಶಕರು ನೆರವಾಗುತ್ತಾರೆ
  • ಒಂದು ವೇಳೆ ನೀವೇನಾದರೂ ಗೂಗಲ್ ಪಿಎಚ್‌ಡಿ ಫೆಲೋಶಿಪ್‌ಗೆ ಆಯ್ಕೆಯಾದರೆ ವಿಶ್ಯಾದ್ಯಂತ ಇರುವ ಗೂಗಲ್ ಸಂಶೋಧನಾ ಕಚೇರಿಗಳಿಗೆ ಭೇಟಿ ನೀಡುವ ಅವಕಾಶ ಇರುತ್ತದೆ. ಸಮ್ಮೇಳನಗಳಿದ್ದರೆ ಅಲ್ಲಿಗೂ ನಿಮ್ಮನ್ನು ಆಹ್ವಾನಿಸುತ್ತಾರೆ
  • ಜಗತ್ತಿನಾದ್ಯಂತ ಗೂಗಲ್ ಪಿಎಚ್‌ಡಿ ಫೆಲೋಶಿಪ್ ಪಡೆಯುವ ಇತರೆ ಅಭ್ಯರ್ಥಿಗಳೊಂದಿಗೆ ನೀವು ಸಕ್ರಿಯವಾಗಿ ಭಾಗವಹಿಸುವ ಅವಕಾಶ ಇರುತ್ತದೆ

ಈ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುತ್ತಿರುವವರು ಫೆಲೋಶಿಪ್‌ಗೆ ಅರ್ಹರು

ಅಲ್ಗೊರಿದಮ್, ಆಪ್ಟಿಮೈಸೇಷನ್‌, ಮಾರುಕಟ್ಟೆ

ಕಂಪ್ಯೂಟೇಷನಲ್ ನ್ಯೂರಲ್ ಮತ್ತು ಕಂಗ್ನಿಟೀವ್ ಸೈನ್ಸ್

ಆರೋಗ್ಯ ಸಂಶೋಧನೆ

ಮಾನವ-ಕಂಪ್ಯೂಟರ್ ಪರಸ್ಪರ ಕ್ರಿಯೆ

ಯಂತ್ರ ಕಲಿಕೆ

ಯಂತ್ರ ಗ್ರಹಿಕೆ, ಭಾಷಣತಂತ್ರಜ್ಞಾನ ಮತ್ತು ಕಂಪ್ಯೂಟರ್ ವಿಷನ್

ಮೊಬೈಲ್ ಕಂಪ್ಯೂಟಿಂಗ್

ನೈಸರ್ಗಿಕ ಭಾಷಾ ಸಂಸ್ಕರಣೆ

ಗೌಪ್ಯತೆ ಮತ್ತು ಭದ್ರತೆ

ಹೆಚ್ಚಿನ ಮಾಹಿತಿಗಾಗಿ ಗೂಗಲ್‌ ರಿಸರ್ಚ್ ಇಲ್ಲಿಗೆ ಭೇಟಿ ನೀಡಿ ಮತ್ತಷ್ಟು ಮಾಹಿತಿಯನ್ನು ಪಡೆಯಿರಿ.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in