ಕನ್ನಡ ಸುದ್ದಿ  /  ಜೀವನಶೈಲಿ  /  Kadai Paneer: ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ರೆಸ್ಟೋರೆಂಟ್​ ಶೈಲಿಯ ಕಡಾಯಿ ಪನೀರ್‌

Kadai Paneer: ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ರೆಸ್ಟೋರೆಂಟ್​ ಶೈಲಿಯ ಕಡಾಯಿ ಪನೀರ್‌

Kadai Paneer: ಪ್ರೊಟೀನ್​ ಅಂಶವನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವ ಪನೀರ್‌ ಒಂದು ವಿಶೇಷ ಆಹಾರ ಪದಾರ್ಥವಾಗಿದ್ದು ಇದರಿಂದ ತಯಾರಾದ ಖಾದ್ಯಗಳನ್ನು ಇಷ್ಟಪಡದೆ ಇರುವವರು ಇಲ್ಲ. ಸಸ್ಯಾಹಾರಿಗಳಿಗಂತೂ ಪನೀರ್‌, ಪ್ರೋಟೀನ್‌ ಮೂಲವಾಗಿದೆ. ಭಾರತೀಯ ಆಹಾರ ಪದಾರ್ಥಗಳು ಮಾತ್ರವಲ್ಲದೇ ಚೈನೀಸ್​ ಆಹಾರ ಪದಾರ್ಥಗಳಲ್ಲಿಯೂ ಪನೀರ್‌ ಬಳಕೆಯಾಗುತ್ತದೆ. ​

ಕಡಾಯಿ ಪನೀರ್‌ ರೆಸಿಪಿ
ಕಡಾಯಿ ಪನೀರ್‌ ರೆಸಿಪಿ (PC: Unsplash)

ರೆಸ್ಟೋರೆಂಟ್​ಗಳಿಗೆ ತೆರಳಿದರೆ ನಿಮಗೆ ಶಾಹಿ ಪನ್ನೀರ್​, ಪನೀರ್​ ಬಟರ್​ ಮಸಾಲಾ, ಪನೀರ್​ ಟಿಕ್ಕಾ, ಪನೀರ್​ ಚಿಲ್ಲಿ ಹೀಗೆ ನಾನಾ ರೀತಿಯ ಪನ್ನೀರಿನ ಖಾದ್ಯಗಳು ಸಿಗುತ್ತವೆ. ಹೋಟೆಲ್​ಗಳಲ್ಲಿ ಸಿಗುವ ಕಡಾಯಿ ಪನ್ನೀರ್​ ಖಾದ್ಯವು ಬಾಯಲ್ಲಿ ನೀರೂರಿಸುತ್ತದೆ. ಆದರೆ ಇದನ್ನು ಮನೆಯಲ್ಲಿಯೇ ಅತ್ಯಂತ ಸುಲಭವಾಗಿ ತಯಾರಿಸಬಹುದಾಗಿದೆ. ಕೇವಲ ಅರ್ಧ ಗಂಟೆಗಳಲ್ಲಿ ತಯಾರಾಗುವ ಕಡಾಯಿ ಪನ್ನೀರ್​ ರೆಸಿಪಿ ಮಾಡುವ ವಿಧಾನ ಇಲ್ಲಿದೆ ನೋಡಿ.

ಟ್ರೆಂಡಿಂಗ್​ ಸುದ್ದಿ

ಪ್ರೊಟೀನ್​ ಅಂಶವನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವ ಪನ್ನೀರ್‌ ಒಂದು ವಿಶೇಷ ಆಹಾರ ಪದಾರ್ಥವಾಗಿದ್ದು ಇದರಿಂದ ತಯಾರಾದ ಖಾದ್ಯಗಳನ್ನು ಇಷ್ಟಪಡದೆ ಇರುವವರು ಇಲ್ಲ. ಸಸ್ಯಾಹಾರಿಗಳಿಗಂತೂ ಪ್ರೊಟೀನ್​ನ ಮೂಲವೇ ಪನ್ನೀರಾಗಿದೆ. ಭಾರತೀಯ ಆಹಾರ ಪದಾರ್ಥಗಳು ಮಾತ್ರವಲ್ಲದೇ ಚೈನೀಸ್​ ಆಹಾರ ಪದಾರ್ಥಗಳಲ್ಲಿಯೂ ಪನ್ನೀರಿನ ಬಳಕೆಯಾಗುತ್ತದೆ. ​ ರೆಸ್ಟೋರೆಂಟ್​ಗಳಿಗೆ ತೆರಳಿದರೆ ನಿಮಗೆ ಶಾಹಿ ಪನ್ನೀರ್​, ಪನೀರ್​ ಬಟರ್​ ಮಸಾಲಾ, ಪನೀರ್​ ಟಿಕ್ಕಾ, ಪನೀರ್​ ಚಿಲ್ಲಿ ಹೀಗೆ ನಾನಾ ರೀತಿಯ ಪನ್ನೀರಿನ ಖಾದ್ಯಗಳು ಸಿಗುತ್ತವೆ .

ಇಂದು ನಾವು ಕಡಾಯಿ ಪನ್ನೀರ್​ ರೆಸಿಪಿಯನ್ನು ಅತ್ಯಂತ ಸುಲಭವಾಗಿ ಹಾಗೂ ಬೇಗ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇದು ಪನ್ನೀರಿನಿಂದ ತಯಾರಿಸುವ ಇತರೆ ಖಾದ್ಯಗಳ ತಯಾರಿಕೆಗಿಂತ ಸ್ವಲ್ಪ ಭಿನ್ನವಾಗಿ ಇರುತ್ತದೆ. ಥೇಟ್​​ ರೆಸ್ಟೋರೆಂಟ್​ನ ರುಚಿಯಂತೇ ನೀವು ಮನೆಯಲ್ಲೇ ಕಡಾಯಿ ಪನ್ನೀರನ್ನು ತಯಾರಿಸಬಹುದಾಗಿದೆ.

ಮಸಾಲೆ ಹಾಗೂ ಕ್ಯಾಪ್ಸಿಕಂನ್ನು ಬಳಸಿ ಖಾರ ಖಾರವಾಗಿ ಕಡಾಯಿ ಪನ್ನೀರ್‌ ತಯಾರಿಸಬಹುದು. ಉತ್ತರ ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ಕೂಡಾ ಕಡಾಯಿ ಪನೀರನ್ನು ಹೆಚ್ಚು ತಯಾರಿಸಲಾಗುತ್ತದೆ.

ಮಸಾಲಾ​ ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ಕೊತ್ತಂಬರಿ ಬೀಜ - 1 1/2 ಚಮಚ
 • ಜೀರಿಗೆ - 2 ಚಮಚ
 • ಕಾಶ್ಮೀರಿ ಕೆಂಪು ಮೆಣಸು - 4 ರಿಂದ 5
 • ಒಣಮೆಣಸಿಕ ಕಾಳು - 1 1/2 ಚಮಚ
 • ಉಪ್ಪು 1 ಚಮಚ

ಕಡಾಯಿ ಪನ್ನೀರ್​ ತಯಾರಿಸಲು ಬೇಕಾಗುವ ಸಾಮಗ್ರಿಗಳು

 • ಎಣ್ಣೆ 1 ಟೇಬಲ್​ ಚಮಚ
 • ಜೀರಿಗೆ 1 ಚಮಚ
 • ಶುಂಠಿ 1 ಇಂಚು
 • ಈರುಳ್ಳಿ 2 ದೊಡ್ಡದು
 • ಶುಂಠಿ ಬೆಳ್ಳುಳ್ಳಿ ಪೇಸ್ಟ್​ 1 ಚಮಚ
 • ಅರಿಶಿಣ 1/2 ಚಮಚ
 • ಖಾರದ ಪುಡಿ 1 ಚಮಚ
 • ಕೊತ್ತಂಬರಿ ಪುಡಿ 1 ಚಮಚ

ಪೇಸ್ಟ್​ ಮಾಡಿಕೊಳ್ಳಲು

 • 2 ದೊಡ್ಡ ಟೊಮ್ಯಾಟೋ
 • ಉಪ್ಪು ರುಚಿಗೆ ತಕ್ಕಷ್ಟು
 • ತುಪ್ಪ 1 ಚಮಚ
 • ಮಧ್ಯಮ ಗಾತ್ರದ ಒಂದು ಈರುಳ್ಳಿ
 • ಕ್ಯಾಪ್ಸಿಕಮ್​ 1/2
 • ಕತ್ತರಿಸಿದ ಟೊಮ್ಯಾಟೋ 1
 • ಪನೀರ್‌ 250 ಗ್ರಾಂ
 • ಕಾಶ್ಮೀರಿ ಚಿಲ್ಲಿ ಪೌಡರ್​ 1 ಚಮಚ
 • ಕಡಾಯಿ ಮಸಾಲಾ ಪೌಡರ್​ 1 ಚಮಚ

ಕಡಾಯಿ ಪನ್ನೀರ್ ತಯಾರಿಸುವ ವಿಧಾನ

ಒಂದು ಪಾತ್ರೆಯಲ್ಲಿ ಕೊತ್ತಂಬರಿ ಬೀಜ ಜೀರಿಗೆ, ಕಾಶ್ಮೀರಿ ಮೆಣಸು, ಒಣಮೆಣಸು ಹಾಗೂ ಉಪ್ಪನ್ನು ಹಾಕಿಕೊಂಡು ಹುರಿದುಕೊಳ್ಳಿ.

ಹಸಿ ವಾಸನೆ ಹೋದ ಬಳಿಕ ಇದನ್ನು ತಣ್ಣಗಾಗಲು ಬಿಟ್ಟು ಬಳಿಕ ಮಿಕ್ಸಿಯಲ್ಲಿ ಚೆನ್ನಾಗಿ ಗ್ರೈಂಡ್​ ಮಾಡಿಕೊಳ್ಳಿ. ಈಗ ನಿಮ್ಮ ಕಡಾಯಿ ಮಸಾಲೆ ಮಿಶ್ರಣ ರೆಡಿಯಾಗಿದೆ.

ಈಗ ಇನ್ನೊಂದು ಪಾತ್ರೆಗೆ ಎಣ್ಣೆ ಅಥವಾ ತುಪ್ಪ ಸೇರಿಸಿ ಬಿಸಿ ಮಾಡಿಕೊಳ್ಳಿ

ಇದಕ್ಕೆ ಜೀರಿಗೆ ಹಾಗೂ ಸಣ್ಣದಾಗಿ ತುರಿದುಕೊಂಡ ಶುಂಠಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ.

ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್​ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ

ಇದೇ ಮಿಶ್ರಣಕ್ಕೆ ಅರಿಶಿಣ, ಕಾರದ ಪುಡಿ , ಕೊತ್ತಂಬರಿ ಪುಡಿ ಹಾಕಿ. ಬಳಿಕ ಇದಕ್ಕೆ ಟೊಮ್ಯಾಟೋ ಪೇಸ್ಟ್​ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೆಲವು ನಿಮಿಷಗಳ ಕಾಲ ಕುಕ್‌ ಆಗಲು ಬಿಡಿ

ಮತ್ತೊಂದು ಪಾತ್ರೆಯಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿಕೊಳ್ಳಿ.

ಬಳಿಕ ಕತ್ತರಿಸಿಟ್ಟ ಈರುಳ್ಳಿ, ಟೊಮೆಟೋ ಹಾಗೂ ಕ್ಯಾಪ್ಸಿಕಂ ಸೇರಿಸಿ ಕೆಲವು ನಿಮಿಷಗಳ ಕಾಲ ಹುರಿಯಿರಿ. ಇದಕ್ಕೆ ಪನ್ನೀರಿನ ತುಂಡುಗಳನ್ನು ಹಾಕಿ.ಇದಕ್ಕೆ ನೀವು ಮೊದಲೇ ತಯಾರು ಮಾಡಿಟ್ಟುಕೊಂಡ ಕಡಾಯಿ ಮಸಾಲಾ ಪೌಡರ್​ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಇದರೊಂದಿಗೆ ಗ್ರೇವಿಯನ್ನೂ ಮಿಕ್ಸ್​ ಮಾಡಿ. ಕೊನೆಯ ಹಂತದಲ್ಲಿ ನೀವು ಬೇಕಿದ್ದರೆ ಕ್ರೀಮ್​ನ್ನು ಸೇರಿಸಬಹುದು.

ಕೊನೆಯದಾಗಿ ನೀವು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಪನ್ನೀರ್​ ಕಡಾಯಿಯನ್ನು ಸರ್ವ್​ ಮಾಡಬಹುದಾಗಿದೆ.

ಪನೀರ್‌ ಕಡಾಯಿ ಜೀರಾ ರೈಸ್​, ಚಪಾತಿ, ನಾನ್​, ಅಥವಾ ಪರಾಟಾಗಳ ಜೊತೆ ಒಳ್ಳೆಯ ಕಾಂಬಿನೇಷನ್​. ಮಧ್ಯಾಹ್ನದ ಊಟ, ರಾತ್ರಿ ಊಟಕ್ಕೆ ಇದು ಒಳ್ಳೆಯ ಆಯ್ಕೆ.

ವಿಭಾಗ