ಕನ್ನಡ ಸುದ್ದಿ  /  Lifestyle  /  Health Benefits Of Corn Including Skin And Hair Care

Benefits of Corn: ಚರ್ಮ ಸುಕ್ಕುಗಟ್ಟದಂತೆ ತಡೆಯುವುದು, ಮಲಬದ್ಧತೆ ನಿವಾರಣೆ...ಇದ್ರಿಂದ ಇನ್ನೂ ಏನೆಲ್ಲಾ ಅದ್ಭುತ ಪ್ರಯೋಜನಗಳಿವೆ ನೋಡಿ

ಮುಸುಕಿನ ಜೋಳ ಸೇವಿಸುವುದರಿಂದ ಚರ್ಮಕ್ಕೆ ಕೂಡಾ ಒಳ್ಳೆಯದು. ಜೋಳದಲ್ಲಿ ಹೇರಳವಾಗಿರುವ ಆ್ಯಂಟಿ ಆಕ್ಸಿಡೆಂಟ್ ತ್ವಚೆಯನ್ನು ಕಾಂತಿಯುತವಾಗಿರಿಸುವುದು ಮಾತ್ರವಲ್ಲದೆ ಚರ್ಮದ ಸುಕ್ಕುಗಳನ್ನು ತಡೆಯುತ್ತದೆ.

ಮುಸುಕಿನ ಜೋಳ ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಮುಸುಕಿನ ಜೋಳ ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. (PC: Freepik.com)

ಉತ್ತಮ ಆರೋಗ್ಯ ನೀಡುವಲ್ಲಿ ಮುಸುಕಿನ ಜೋಳ ಕೂಡಾ ಒಂದು. ಸಾಮಾನ್ಯವಾಗಿ ಇದನ್ನು ಬೆಂಕಿಯಲ್ಲಿ ಸುಟ್ಟು ಅಥವಾ ಬೇಯಿಸಿ ತಿನ್ನಲಾಗುತ್ತದೆ. ಇದು ತುಂಬಾ ಪೌಷ್ಟಿಕ ಆಹಾರವಾಗಿದೆ. ಜೋಳ ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಕೇವಲ ಸ್ಕಾಕ್ಸ್‌ ಆಗಿ ಮಾತ್ರ ತಿನ್ನಲು ಮಾತ್ರವಲ್ಲ, ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಾಕಾರಿ.

ಜೋಳದಲ್ಲಿ ಲಿನೋಲಿಕ್ ಆಮ್ಲ, ವಿಟಮಿನ್ ಇ, ಬಿ1, ಬಿ6, ನಿಯಾಸಿನ್, ಫೋಲಿಕ್ ಆಸಿಡ್ ಮತ್ತು ರೈಬೋಫ್ಲಾವಿನ್ ಮುಂತಾದ ವಿಟಮಿನ್ ಗಳು ಸಮೃದ್ಧವಾಗಿವೆ. ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಹೇಳುವ ಪ್ರಕಾರ ಮುಸುಕಿನ ಜೋಳಕ್ಕೆ ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ಇದೆ. ಮುಸುಕಿನ ಜೋಳದಲ್ಲಿ ಪಿಹೆಚ್‌ ಹೇರಳವಾಗಿದೆ. ಇದು ಜೀರ್ಣಕ್ರಿಯೆ ಬಹಳ ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಅಂಶ ಇರುವ ಕಾರಣ ಮಲಬದ್ಧತೆ ಬರದಂತೆ ತಡೆಯುತ್ತದೆ. ಕರುಳಿನ ಕ್ಯಾನ್ಸರನ್ನು ಕೂಡಾ ತಡೆಯುತ್ತದೆ. ಕಾರ್ನ್‌ನಲ್ಲಿ ತಾಮ್ರ, ಕಬ್ಬಿಣ, ಖನಿಜದಂತ ಪೋಷಕಾಂಶಗಳು ಮೂಳೆಗಳಿಗೆ ಬಲ ನೀಡುತ್ತದೆ. ಕಿಡ್ನಿಗಳ ಆರೋಗ್ಯಕ್ಕೆ ಕೂಡಾ ಈ ಇದು ಬಹಳ ಒಳ್ಳೆಯದು.

ಮುಸುಕಿನ ಜೋಳ ಸೇವಿಸುವುದರಿಂದ ಚರ್ಮಕ್ಕೆ ಕೂಡಾ ಒಳ್ಳೆಯದು. ಜೋಳದಲ್ಲಿ ಹೇರಳವಾಗಿರುವ ಆ್ಯಂಟಿ ಆಕ್ಸಿಡೆಂಟ್ ತ್ವಚೆಯನ್ನು ಕಾಂತಿಯುತವಾಗಿರಿಸುವುದು ಮಾತ್ರವಲ್ಲದೆ ಚರ್ಮದ ಸುಕ್ಕುಗಳನ್ನು ತಡೆಯುತ್ತದೆ.

ಜೋಳದ ಕಾಳುಗಳಿಂದ ತೆಗೆದ ಎಣ್ಣೆ ಚರ್ಮದ ರೋಗಗಳಿಗೆ ಉತ್ತಮ ಔಷಧವಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಲಿನೋಲಿಕ್ ಆಮ್ಲವು ಚರ್ಮದ ಉರಿಯೂತ ಮತ್ತು ದದ್ದುಗಳನ್ನು ಕಡಿಮೆ ಮಾಡುತ್ತದೆ. ರಕ್ತಹೀನತೆ ಇರುವವರಿಗೆ ಮುಸುಕಿನ ಜೋಳ ಅದ್ಭುತ ಆಹಾರವಾಗಿದೆ. ಜೋಳದಲ್ಲಿರುವ ಫೋಲಿಕ್ ಆಮ್ಲವು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.

ಮುಸುಕಿನ ಜೋಳ, ಹೃದಯದ ಆರೋಗ್ಯಕ್ಕೆ ಕೂಡಾ ಒಳ್ಳೆಯದು. ರಕ್ತ ಕಣಗಳಲ್ಲಿನ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೃದಯಾಘಾತ, ಪಾರ್ಶ್ವವಾಯು, ಬಿಪಿ ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಪ್ರತಿನಿತ್ಯ ಜೋಳ ತಿನ್ನುವವರ ಕೂದಲು ದೃಢವಾಗಿರುತ್ತದೆ. ಕಾರ್ನ್‌ನಲ್ಲಿರುವ ವಿಟಮಿನ್ ಸಿ, ಕೂದಲನ್ನು ರೇಷ್ಮೆಯಂತೆ ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಬಿಪಿ, ಶುಗರ್, ಹೃದ್ರೋಗಗಳಿಗೆ ಜೋಳ ಅತ್ಯುತ್ತಮ ಆಹಾರ. ಇಷ್ಟೆಲ್ಲಾ ಪ್ರಯೋಜನಗಳನ್ನು ತಿಳಿದ ನಂತರ ಇನ್ಮುಂದೆ ತಪ್ಪದೆ ಕಾರ್ನ್‌ ತಿನ್ನಿ, ಅದ್ಭುತ ಪ್ರಯೋಜನಗಳನ್ನು ಪಡೆಯಿರಿ.