ಕನ್ನಡ ಸುದ್ದಿ  /  ಜೀವನಶೈಲಿ  /  Pcos In Adolescents: ಹದಿ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಹೆಚ್ಚುತ್ತಿದೆ ಪಿಸಿಓಎಸ್‌ ಸಮಸ್ಯೆ; ರೋಗಲಕ್ಷಣಗಳು, ನಿರ್ವಹಣೆಯ ಮಾಹಿತಿ ಇಲ್ಲಿದೆ

PCOS In Adolescents: ಹದಿ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಹೆಚ್ಚುತ್ತಿದೆ ಪಿಸಿಓಎಸ್‌ ಸಮಸ್ಯೆ; ರೋಗಲಕ್ಷಣಗಳು, ನಿರ್ವಹಣೆಯ ಮಾಹಿತಿ ಇಲ್ಲಿದೆ

ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಪಿಸಿಓಎಸ್‌ ಕೂಡ ಒಂದು. ಇತ್ತೀಚೆಗೆ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಪಿಸಿಓಎಸ್‌ ಸಮಸ್ಯೆ ಹೆಚ್ಚುತ್ತಿದೆ. ಹದಿವಯಸ್ಸಿನ ಬದಲಾವಣೆಯ ಲಕ್ಷಣಗಳು ಪಿಸಿಓಎಸ್‌ ಲಕ್ಷಣಗಳು ಒಂದೇ ರೀತಿ ಆಗಿರುವ ಕಾರಣ ರೋಗನಿರ್ಣಯ ಕಷ್ಟವಾಗುತ್ತಿದೆ. ಈ ಕೆಲವು ಲಕ್ಷಣಗಳನ್ನು ಗುರುತಿಸಿ, ವೈದ್ಯರ ಬಳಿ ಸಲಹೆ ಪಡೆಯುವುದು ಉತ್ತಮ.

ಪಿಸಿಓಎಸ್‌ ಸಮಸ್ಯೆ
ಪಿಸಿಓಎಸ್‌ ಸಮಸ್ಯೆ

ಇತ್ತೀಚೆಗೆ ಹೆಣ್ಣುಮಕ್ಕಳನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಪಿಸಿಓಎಸ್‌ ಕೂಡ ಒಂದು. ಇದೊಂದು ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಪ್ರಪಂಚದಾದ್ಯಂತ 10 ಲಕ್ಷಕ್ಕೂ ಅಧಿಕ ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹಾರ್ಮೋನ್‌ಗಳ ವ್ಯತ್ಯಯದಿಂದ ಉಂಟಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹದಿವಯಸ್ಸಿನವರಲ್ಲಿ ಪಿಸಿಓಎಸ್‌ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಕೆಲವೊಮ್ಮೆ ಹದಿಹರೆಯದಲ್ಲಿ ಕಾಣಿಸುವ ಪಿಸಿಓಎಸ್‌ ರೋಗಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಯಾಕೆಂದರೆ ಹದಿಹರೆಯದಲ್ಲಿ ಉಂಟಾಗುವ ಬದಲಾವಣೆಗಳು ಇದೇ ರೀತಿ ಲಕ್ಷಣಗಳನ್ನು ಹೊಂದಿರುತ್ತದೆ. ಅಲ್ಲದೆ ಆ ಸಮಯದಲ್ಲಿ ರೋಗ ನಿರ್ಣಯ ಮಾಡುವುದು ಕಷ್ಟವಾಗುತ್ತದೆ. ಜಡ ಜೀವನಶೈಲಿ, ದೈಹಿಕ ಚಟುವಟಿಕೆಗಳು ಇಲ್ಲದೇ ಇರುವುದು, ಸಮರ್ಪಕ ಊಟ ಸೇವನೆ ಮಾಡದೇ ಇರುವುದು, ಸರಿಯಾದ ಸಮಯದಲ್ಲಿ ನಿದ್ದೆ ಮಾಡದೇ ಇರುವುದು ಈ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಹದಿಹರೆಯದವರಲ್ಲಿ ಪಿಸಿಓಎಸ್‌ ಸಮಸ್ಯೆಯನ್ನು ಕೆಲವು ರೋಗಲಕ್ಷಣಗಳಿಂದ ಕಂಡುಹಿಡಿಯಬಹುದು. ಅವುಗಳಲ್ಲಿ ಕೆಲವು ಹೀಗಿವೆ.

  • ಅನಿಯಮಿತ ಮುಟ್ಟಿನ ಅವಧಿ
  • ಮೊಡವೆ ಹಾಗೂ ತೂಕ ಹೆಚ್ಚಳ
  • ಬೊಜ್ಜು
  • ಮುಖ ಹಾಗೂ ದೇಹದ ಇತರ ಭಾಗಗಳಲ್ಲಿ ಅತಿಯಾಗಿ ಕೂದಲು ಬೆಳೆಯುವುದು.

ಅನಿಯಮಿತ ಮುಟ್ಟಿನ ಅವಧಿ

ಹದಿಹರೆಯದವರಲ್ಲಿ ಸಮಯಕ್ಕೆ ಸರಿಯಾಗಿ ಮುಟ್ಟಾಗದೇ ಇರುವುದು ಸಾಮಾನ್ಯ ಸಂಗತಿಯಾಗಿದೆ. ಇದು ಹೆಣ್ಣು ಋತುಮತಿಯಾದ ಮೂರು ವರ್ಷಗಳ ಬಳಿಕ ಸ್ಥಿರವಾಗುತ್ತದೆ. ಅದಾಗ್ಯೂ, ಸ್ತ್ರೀರೋಗತಜ್ಞರೊಂದಿಗೆ ನಿರಂತರ ಸಮಾಲೋಚನೆ ನಡೆಸುವುದು ಮುಖ್ಯವಾಗುತ್ತದೆ. ಪಿಸಿಓಎಸ್‌ ಸಮಸ್ಯೆ ಹೊಂದಿರುವವರು ಸಾಮಾನ್ಯವಾಗಿ ಅನಿರೀಕ್ಷಿತ ಋತುಚಕ್ರವನ್ನು ಅನುಭವಿಸುತ್ತಾರೆ (15 ದಿನಕ್ಕೊಮ್ಮೆ ಈ ರೀತಿ), ಮುಟ್ಟಿನ ಸಮಯದಲ್ಲಿ ವಿಪರೀತ ನೋವು, ಭಾರೀ ರಕ್ತಸ್ರಾವ ಉಂಟಾಗುತ್ತದೆ. ಇದು ಅವರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮುಟ್ಟಿನ ಅವಧಿಯಲ್ಲಿ ವ್ಯತ್ಯಯವಿದ್ದರೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಮೊಡವೆ ಹಾಗೂ ತೂಕ ಹೆಚ್ಚಳ

ಜಡ ಜೀವನಶೈಲಿ ಹಾಗೂ ದೈಹಿಕ ಚಟುವಟಿಕೆಯ ಕೊರತೆಯು ಹದಿ ಹರೆಯದವರಲ್ಲಿ ಹಲವು ರೀತಿ ಆರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತಿದೆ. ಅದರಲ್ಲೂ ಪಿಸಿಓಎಸ್‌ ಸಮಸ್ಯೆ ಇರುವವರು ಮೊಡವೆ ಸಮಸ್ಯೆ, ಬೊಜ್ಜು ಹಾಗೂ ದೇಹ ತೂಕದಲ್ಲಿನ ಹೆಚ್ಚಳ ಈ ರೀತಿಯ ಸಮಸ್ಯೆಗಳನ್ನು ಎದುರಿಸಬಹುದು. ಮೊಡವೆಯಂತಹ ಚರ್ಮದ ಸಮಸ್ಯೆಗಳಿಗೆ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಉತ್ತಮ. ಆದರೆ ತೂಕ ನಿರ್ವಹಣೆಗೆ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವು ಅವಶ್ಯವಾಗುತ್ತದೆ. ಸ್ತ್ರೀರೋಗ ತಜ್ಞರು ಹಾಗೂ ತಜ್ಞ ವೈದ್ಯರ ಸಹಾಯದಿಂದ ಪಿಸಿಓಎಸ್‌ ಸಮಸ್ಯೆಗೆ ಸಮಗ್ರ ಪರಿಹಾರಗಳನ್ನು ಕಂಡುಕೊಳ್ಳಬಹುದು.

ಮುಖ ಹಾಗೂ ದೇಹದ ಇತರ ಭಾಗಗಳಲ್ಲಿ ಅತಿಯಾದ ಕೂದಲು ಬೆಳೆಯುವುದು

ಹಿರ್ಸುಟಿಸಮ್‌ ಅಥವಾ ಮುಖ ಹಾಗೂ ದೇಹದ ಇತರ ಭಾಗಗಳಲ್ಲಿ ಅತಿಯಾಗಿ ಕೂದಲು ಬೆಳೆಯುವುದು ಹದಿಹರೆಯದಲ್ಲಿ ಕಾಡುವ ಪಿಸಿಓಎಸ್‌ ಸಮಸ್ಯೆಯು ಇನ್ನೊಂದು ಪ್ರಮುಖ ಲಕ್ಷಣವಾಗಿದೆ. ಇದು ಹದಿಹರೆಯದವರಲ್ಲಿ ಮಾನಸಿಕ ಯಾತನೆ ಮತ್ತು ಸ್ವಾಭಿಮಾನದ ಕೊರತೆಗೆ ಕಾರಣವಾಗಬಹುದು. ಪಿಸಿಓಎಸ್‌ ಸಮಸ್ಯೆ ಹೊಂದಿರುವ ಹದಿಹರೆಯದವರ ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಈ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವುದು ಮುಖ್ಯವಾಗುತ್ತದೆ.

ಪೋಷಕರ ಪಾತ್ರ

ಹದಿಹರೆಯದವರಲ್ಲಿ ಕಾಣಿಸುವ ಪಿಸಿಓಎಸ್‌ ಸಮಸ್ಯೆಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ದೀರ್ಘಾವಧಿ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸಬಹುದು. ಈ ರೋಗಲಕ್ಷಣಗಳನ್ನು ನಿಯಂತ್ರಿಸಲು, ಸಮಸ್ಯೆಗಳನ್ನು ತಪ್ಪಿಸಲು ಹಾಗೂ ಒಟ್ಟಾರೆ ಜೀವನಶೈಲಿಯನ್ನು ಸುಧಾರಿಸಲು ಪೋಷಕರು ಹೆಚ್ಚು ಗಮನ ನೀಡಬೇಕು.

ಹದಿಹರೆಯದವರಲ್ಲಿ ಪಿಸಿಓಎಸ್‌ ಅನ್ನು ನಿರ್ವಹಿಸಲು ಬಲವಾದ ಬೆಂಬಲದ ಅಗತ್ಯವಿದೆ. ನಿರ್ವಹಿಸುವುದು ಎಂದರೆ ಕೇವಲ ವೈದ್ಯಕೀಯ ಬೆಂಬಲ ಮಾತ್ರವಲ್ಲ, ಇದಕ್ಕೆ ಶೈಕ್ಷಣಿಕ ಹಾಗೂ ಭಾವನಾತ್ಮಕ ಬೆಂಬಲವೂ ಅವಶ್ಯವಾಗುತ್ತದೆ. ಹದಿಹರೆಯದವರಲ್ಲಿ ಪಿಸಿಓಎಸ್ ಬಗ್ಗೆ ಜಾಗೃತಿ ಮೂಡಿಸಲು ಪೋಷಕರು, ಶಿಕ್ಷಕರು ಮತ್ತು ಆರೋಗ್ಯ ಪೂರೈಕೆದಾರರು ಒಟ್ಟಾಗಿ ಕೆಲಸ ಮಾಡಬೇಕು.

ಇದನ್ನೂ ಓದಿ

PCOS Awareness Month: ಹೆಣ್ಣುಮಕ್ಕಳಲ್ಲಿ ಹೆಚ್ಚುತ್ತಿದೆ ಪಿಸಿಓಎಸ್‌ ಸಮಸ್ಯೆ; ಆರಂಭಿಕ ಹಂತದಲ್ಲೇ ತಿಳಿಯಲು ನೆರವಾಗುವ ರೋಗಲಕ್ಷಣಗಳಿವು

ಇತ್ತೀಚೆಗೆ ಹೆಣ್ಣುಮಕ್ಕಳನ್ನು ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಪಿಸಿಓಡಿ ಅಗ್ರಸ್ಥಾನದಲ್ಲಿದೆ. ಈ ಸಮಸ್ಯೆಯು ದೇಹದಲ್ಲಿ ಇತರ ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಪಿಸಿಓಡಿ ಸಮಸ್ಯೆಯು ಬಂಜೆತನಕ್ಕೂ ಕಾರಣವಾಗಬಹುದು. ಇದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್‌ ತಿಂಗಳನ್ನು ಪಿಸಿಓಡಿ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ. ಇದನ್ನು ʼವಿಶ್ವ ಪಿಸಿಓಎಸ್‌ ಡೇ ಆಫ್‌ ಯೂನಿಟಿʼ ಎಂದೂ ಸಹ ಕರೆಯುಲಾಗುತ್ತದೆ. ಪಿಸಿಓಎಸ್ ಚಾಲೆಂಜ್: ದಿ ನ್ಯಾಷನಲ್ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಸೋಸಿಯೇಷನ್ ಈ ದಿನವನ್ನು ಆಚರಿಸುತ್ತದೆ.

ವಿಭಾಗ