ಕನ್ನಡ ಸುದ್ದಿ  /  Lifestyle  /  Here Is Common Causes Of Red Eyes

Red Eye: ಕಣ್ಣುಗಳು ಯಾವ ಕಾರಣಕ್ಕೆ ಕೆಂಪಗಾಗುತ್ತವೆ? ಅಪಾಯಗಳೇನು?

ಕೆಲವೊಮ್ಮೆ ಕೋವಿಡ್ ಲಕ್ಷಣಗಳು ಶ್ವಾಸಕೋಶ ಮಾತ್ರವಲ್ಲದೆ ಕಣ್ಣುಗಳಲ್ಲಿಯೂ ಕಂಡುಬರುತ್ತದೆ. ಅಂತಹ ಸಮಯದಲ್ಲಿ ಕಣ್ಣುಗಳೂ ಕೆಂಪಗಾಗುತ್ತವೆ. ಕೋವಿಡ್ ಕಣ್ಣಿನ ಮೂಲಕ ದೇಹವನ್ನು ಪ್ರವೇಶಿಸಿ ಕಣ್ಣಿನ ಹಿಂಭಾಗದ ಮೆದುಳಿಗೆ ತಲುಪುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಣ್ಣು ಕೆಂಪಗಾಗುವುದು ಏಕೆ?
ಕಣ್ಣು ಕೆಂಪಗಾಗುವುದು ಏಕೆ? (freepik)

ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುವುದು ಬಹುತೇಕ ಹಲವು ಬಾರಿ ಸಾಮಾನ್ಯ ಸಮಸ್ಯೆಯಾಗಬಹುದು. ನೀವು ಅಗತ್ಯ ಪ್ರಮಾಣದಲ್ಲಿ ನಿದ್ರೆ ಮಾಡದಿದ್ದಾಗ ಅಥವಾ ತುಂಬಾ ದಣಿದಿದ್ದಾಗಲೂ ನಿಮ್ಮ ಕಣ್ಣುಗಳು ಕೆಂಪಾಗಿ ಕಾಣುತ್ತವೆ. ಅಂತಹ ಸಂದರ್ಭಗಳಲ್ಲಿ ಹೆಚ್ಚು ಚಿಂತಿಸಬೇಕಾಗಿಲ್ಲ. ಆದರೆ ತುರಿಕೆ, ಉರಿ ಅಥವಾ ಕಣ್ಣಿನಿಂದ ನೀರು ಬರುವುದರ ಜತೆಗೆ ಕಣ್ಣು ಕೆಂಪಗಾಗುವುದು ಮುಂತಾದ ಲಕ್ಷಣಗಳು ಕಂಡುಬಂದರೆ ಎಚ್ಚರಿಕೆಯಿಂದಿರಬೇಕು. ಹೀಗಾಗಿ ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.

ಈ ರೀತಿ ಕಣ್ಣುಗಳಲ್ಲಿ ಕಿರಿಕಿರಿಯುಂಟಾಗಲು ಪ್ರಮುಖ ಕಾರಣವೆಂದರೆ ಕಣ್ಣಿನ ಪೊರೆ ಅಥವಾ ಕಾಂಜಂಕ್ಟಿವಿಟಿಸ್. ಇದು ಇತರರಿಗೆ ತ್ವರಿತವಾಗಿ ಹರಡುವ ಕಣ್ಣಿನ ಸೋಂಕು. ಇದಕ್ಕೆ ನಾಲ್ಕೈದು ದಿನಗಳ ಚಿಕಿತ್ಸೆ ಮತ್ತು ಜನರಿಂದ ಪ್ರತ್ಯೇಕವಾಗಿರುವುದು ಅಗತ್ಯ. ಇದಲ್ಲದೆ ಇನ್ನೂ ಕೆಲವು ಗಂಭೀರ ಕಾರಣಗಳಿಂದ ಕಣ್ಣು ಕೆಂಪಗಾಗಬಹುದು ಎಂದು ಹೇಳಲಾಗುತ್ತದೆ.

ಕೆಲವು ರೀತಿಯ ಬ್ಯಾಕ್ಟೀರಿಯಾದ ಸೋಂಕುಗಳು ಕಣ್ಣುಗಳು ಊದಿಕೊಂಡು ಕೆಂಪಾಗಲು ಕಾರಣವಾಗಬಹುದು. ವೈರಸ್‌ನಿಂದ ಸೋಂಕು ಉಂಟಾದರೆ, ಕಣ್ಣುಗಳಲ್ಲಿ ನೀರು ಸುರಿಯುತ್ತದೆ. ಇಂತಹ ಸಂದರ್ಭದಲ್ಲಿ ಎಚ್ಚರ ಅಗತ್ಯ.

ಕೆಲವೊಮ್ಮೆ ಕೋವಿಡ್ ಲಕ್ಷಣಗಳು ಶ್ವಾಸಕೋಶ ಮಾತ್ರವಲ್ಲದೆ ಕಣ್ಣುಗಳಲ್ಲಿಯೂ ಕಂಡುಬರುತ್ತದೆ. ಅಂತಹ ಸಮಯದಲ್ಲಿ ಕಣ್ಣುಗಳೂ ಕೆಂಪಗಾಗುತ್ತವೆ. ಕೋವಿಡ್ ಕಣ್ಣಿನ ಮೂಲಕ ದೇಹವನ್ನು ಪ್ರವೇಶಿಸಿ ಕಣ್ಣಿನ ಹಿಂಭಾಗದ ಮೆದುಳಿಗೆ ತಲುಪುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬ್ಲೆಫರಿಟಿಸ್ ಎಂಬುದು ಕಣ್ಣುಗುಡ್ಡೆಯ ಸಾಮಾನ್ಯ ಸೋಂಕುಗಳಲ್ಲಿ ಒಂದು. ಇದು ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು. ಇದರಿಂದ ಕಣ್ಣು ಕೆಂಪಾಗುವುದೂ ಉಂಟು. ಇದು ಸಾಮಾನ್ಯವಾಗಿ ಅವಧಿ ಮೀರಿದ ಅಥವಾ ಅಶುಚಿಯಾದ ಕಣ್ಣಿನ ಸೌಂದರ್ಯವರ್ಧಕದಿಂದ ಬರತ್ತದೆ.

ಕೆಲವು ಜನರು ಕೆಲವು ರೀತಿಯ ಅಲರ್ಜಿಗಳಿಂದ ತೊಂದರೆಗೊಳಗಾಗುತ್ತಾರೆ. ಉದಾಹರಣೆಗೆ ಹೂವುಗಳಿಂದ ಪರಾಗವು ಕಣ್ಣು ಪ್ರವೇಶಿಸಿ ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದರಿಂದಲೂ ಕಣ್ಣುಗಳು ಕೆಂಪಾಗುತ್ತವೆ.

ಕಣ್ಣಿಗೆ ಬಳಸುವ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಸೋಂಕು ಕಣ್ಣಿನೊಳಗೆ ಪ್ರವೇಶಿಸಿ ಕಣ್ಣಿನ ತೊಂದರೆಗೆ ಕಾರಣವಾಗುತ್ತದೆ. ಹೊಸ ಸಂಶೋಧನೆಯ ಪ್ರಕಾರ ರಾತ್ರಿಯಿಡೀ ಅವುಗಳನ್ನು ಧರಿಸುವುದು ಮತ್ತು ಸ್ನಾನ ಮಾಡುವಾಗ ಅವುಗಳನ್ನು ತೆಗೆಯದೆ ನಿರ್ಲಕ್ಷ್ಯ ತೋರುವುದರಿಂದ ಅಕಾಂತಮೋಬಾ ಕೆರಾಟೈಟಿಸ್ ಎಂಬ ಸೋಂಕಿಗೆ ಕಾರಣವಾಗಬಹುದು.

ಕಣ್ಣುಗಳು ಬಹಳ ಸೂಕ್ಷ್ಮವಾದ ಇಂದ್ರಿಯ. ಇವುಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಅಲರ್ಜಿಯಿಂದ ಬಳಲುತ್ತಿರುವವರು ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವವರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಇದರ ಜತೆಗೆ ಅನಾವಶ್ಯಕವಾಗಿ ಕೈಗಳನ್ನು ಕಣ್ಣುಗಳಿಗೆ ಮುಟ್ಟಿಸುವುದು, ಕೈಗಳಿಂದ ಕಣ್ಣನ್ನು ಉಚ್ಚುವುದು ಮಾಡಬಾರದು. ಮುಖದಂತೆ, ಕಣ್ಣುಗಳನ್ನು ಕೂಡಾ ಆಗಗ ಶುದ್ಧ ನೀರಿನಿಂದ ತೊಳೆಯಬೇಕು.

ಕೆಲವೊಂದು ಕಣ್ಣಿನ ಸೋಂಕುಗಳು ಬೇಗನೆ ಇತರರಿಗೆ ಹರಡುತ್ತವೆ. ಅಂತಹ ಸಂದರ್ಭದಲ್ಲಿ ಜನರಿಂದ ದೂರ ಉಳಿಯುವುದು ಒಳ್ಳೆಯದು. ವೈದ್ಯರು ಶಿಫಾರಸ್ಸು ಮಾಡಿದ ಕನ್ನಡಕ ಇದ್ದರೆ ಅದನ್ನು ಧರಿಸುವುದು ಸರಿಯಾದ ಕ್ರಮ. ಹೀಗಾಗಿ ಬೇರೆಯವರ ದೃಷ್ಟಿ ನೇರವಾಗಿ ನಿಮ್ಮ ಕಣ್ಣುಗಳಿಗೆ ಬೀಳುವುದು ತಪ್ಪುತ್ತದೆ. ನಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳುವ ಜತೆಗೆ ಬೇರೆಯವರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ವಿಭಾಗ