Kannada News  /  Photo Gallery  /  In Pics Potato Peel Benefits Details Inside Check It Here

Potato Peel Benefits: ನೀವು ಆಲೂಗಡ್ಡೆ ಸಿಪ್ಪೆ ಬಿಸಾಡ್ತೀರಾ? ಅದರ ಪ್ರಯೋಜನ ಒಮ್ಮೆ ತಿಳಿದರೆ, ಇನ್ಯಾವತ್ತೂ ನೀವು ಆ ತಪ್ಪು ಮಾಡಲ್ಲ..

16 January 2023, 18:27 IST HT Kannada Desk
16 January 2023, 18:27 , IST

Potato Peel Benefits: ಪ್ರತಿಯೊಬ್ಬರ ಮನೆಯಲ್ಲಿ ಆಲೂಗಡ್ಡೆ ಇಲ್ಲದೆ ಖಾದ್ಯ ತಯಾರಾಗುವುದಿಲ್ಲ. ಈ ಆಲೂಗಡ್ಡೆ ಬಳಸಿ ಏನಾದರೂ ಮಾಡುವಾಗ ಮೊದಲು ಮಾಡುವ ಕೆಲಸ ಅದರ ಮೇಲಿನ ಸಿಪ್ಪೆಯನ್ನು ತೆಗೆಯುವುದು. ಆದರೆ, ಆ ಸಿಪ್ಪೆಯ ಪ್ರಯೋಜನ ನಿಮಗೆ ತಿಳಿದರೆ, ನೀವು ಇನ್ಯಾವತ್ತೂ ಅದನ್ನು ಬಿಸಾಡುವುದಿಲ್ಲ.

ಆಲೂಗಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಪೊಟ್ಯಾಸಿಯಮ್, ಕಬ್ಬಿಣ ಮತ್ತು ಫೈಬರ್ ಸಮೃದ್ಧವಾಗಿದೆ. ವಿಟಮಿನ್ B3 ಅನ್ನು ಹೊಂದಿರುತ್ತದೆ. ಆಹಾರದ ಫೈಬರ್ ಜೊತೆಗೆ ಉತ್ಕರ್ಷಣ ನಿರೋಧಕಗಳು, ಫೀನಾಲಿಕ್ ಸಂಯುಕ್ತಗಳು ಮತ್ತು ಖನಿಜಗಳು ಸಹ ಲಭ್ಯವಿದೆ ಎಂದು ಹಲವು ಅಧ್ಯಯನಗಳು ಹೇಳಿವೆ.  

(1 / 7)

ಆಲೂಗಡ್ಡೆ ಸಿಪ್ಪೆಗಳು ಹೆಚ್ಚಿನ ಆಹಾರದ ಫೈಬರ್ ಅಂಶದಿಂದಾಗಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಆಲೂಗೆಡ್ಡೆ ಸಿಪ್ಪೆಯಲ್ಲಿನ ಪೊಟ್ಯಾಸಿಯಮ್ ಅಂಶವು ಹೃದ್ರೋಗವನ್ನು ನಿಯಂತ್ರಿಸುತ್ತದೆ.

(2 / 7)

ಕಣ್ಣಿನ ಕೆಳಗೆ ಕಪ್ಪು ಕಲೆಗಳು ಉಂಟಾಗಿದ್ದರೆ ಅಥವಾ ಸೂರ್ಯನ ಬೆಳಕಿನಲ್ಲಿ ಚರ್ಮವು ಕಂದು ಬಣ್ಣವಾಗಿದ್ದರೆ, ಆಲೂಗಡ್ಡೆಯ ಸಿಪ್ಪೆಯನ್ನು ಜಜ್ಜಿ ಅದರ ರಸವನ್ನು ಮುಖಕ್ಕೆ ಹಚ್ಚಿ. ಕಪ್ಪು ಬೇಗ ಮಾಯವಾಗುತ್ತದೆ.

(3 / 7)

ಆಲೂಗಡ್ಡೆಯನ್ನು ಸಿಪ್ಪೆ ಸಮೇತ ತಿನ್ನುವುದರಿಂದ ರಕ್ತಹೀನತೆ ನಿಯಂತ್ರಣಕ್ಕೆ ಬರಲಿದೆ. ಆಲೂಗೆಡ್ಡೆ ಸಿಪ್ಪೆಯಲ್ಲಿ ಕಬ್ಬಿಣದ ಅಂಶ ಇರಲಿದೆ. ಇದು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.  

(4 / 7)

ಆಲೂಗೆಡ್ಡೆಯ ಸಿಪ್ಪೆಯಲ್ಲಿ ವಿಟಮಿನ್ ಬಿ3 ಸಮೃದ್ಧವಾಗಿದೆ. ಸಿಪ್ಪೆಯಲ್ಲಿನ ನಿಯಾಸಿನ್ ಕಾರ್ಬೋ ಹೈಡ್ರೇಟ್‌ಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.

(5 / 7)

ನಾವು ಸೇವಿಸುವ ಆಹಾರವು ಸ್ವಲ್ಪ ಪ್ರಮಾಣದ ಫೈಬರ್ ಅಂಶ ಹೊಂದಿರಬೇಕು. ಆಲೂಗಡ್ಡೆ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಅದರ ಸಿಪ್ಪೆಯಲ್ಲಿಯೂ ಫೈಬರ್‌ ಅಂಶ ಹೇರಳಾವಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹ ಕೆಲಸ ಮಾಡುತ್ತದೆ.

(6 / 7)

ನೀವು ಕೂಡ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ, 1 ಬೌಲ್ ಆಲೂಗಡ್ಡೆ ಸಿಪ್ಪೆಯನ್ನು ಅರ್ಧ ಲೀಟರ್ ನೀರಿನಲ್ಲಿ ಕುದಿಸಿ. ಆ ನೀರನ್ನು ನಿಮ್ಮ ಕೂದಲಿಗೆ ಹಚ್ಚಿ. ನೀವು ಇದನ್ನು ಹಲವಾರು ಬಾರಿ ಮಾಡಿದರೆ, ಪ್ರಯೋಜನ ಕಾಣಬಹುದು. 

(7 / 7)

ಇತರ ಗ್ಯಾಲರಿಗಳು