ಕನ್ನಡ ಸುದ್ದಿ  /  ಜೀವನಶೈಲಿ  /  Leadership Quality: ನಾಯಕನಾದವನು ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡಾಗ ಚಮತ್ಕಾರವನ್ನೇ ಮಾಡಬಲ್ಲ; ಆದರೆ ಒಪ್ಪಿಕೊಳ್ಳುವ ಮನಸ್ಸಿರಬೇಕಷ್ಟೆ

Leadership Quality: ನಾಯಕನಾದವನು ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡಾಗ ಚಮತ್ಕಾರವನ್ನೇ ಮಾಡಬಲ್ಲ; ಆದರೆ ಒಪ್ಪಿಕೊಳ್ಳುವ ಮನಸ್ಸಿರಬೇಕಷ್ಟೆ

ನಾಯಕ ಎಂದಿಗೂ ಸೋಲುವುದಿಲ್ಲ, ಎಲ್ಲವನ್ನು ಬಲ್ಲವನ್ನಷ್ಟೇ ನಾಯಕನಾಗಲು ಸಾಧ್ಯ, ನಾಯಕನಾದವನು ಎಂದಿಗೂ ತಪ್ಪು ಮಾಡುವುದಿಲ್ಲ ಹೀಗೆ ನಾಯಕನ ಬಗ್ಗೆ ಹಲವು ಕಲ್ಪನೆಗಳು ನಮ್ಮ ತಲೆಯಲ್ಲಿ ಕುಳಿತಿರುತ್ತದೆ. ಹಾಗಾದರೆ ನಾಯಕನು ಮನುಷ್ಯನಲ್ಲವೇ? ನಿಜವಾದ ನಾಯಕ ಎನ್ನಿಸಿಕೊಳ್ಳಬೇಕು ಎಂದರೆ ಅವನು ಹೇಗಿರಬೇಕು?

ದೌರ್ಬಲ್ಯವನ್ನು ಒಪ್ಪಿಕೊಳ್ಳುವವನೇ ನಿಜವಾದ ನಾಯಕ
ದೌರ್ಬಲ್ಯವನ್ನು ಒಪ್ಪಿಕೊಳ್ಳುವವನೇ ನಿಜವಾದ ನಾಯಕ

ಉತ್ತಮ ನಾಯಕನೆಂದರೆ ಹೇಗಿರಬೇಕು, ಬಹುಶಃ ಈ ಪ್ರಶ್ನೆ ಅನಾದಿ ಕಾಲದಿಂದಲೂ ಜನರ ಮನಸ್ಸಿನಲ್ಲಿ ಕೊರೆಯುತ್ತಿರಬಹುದು. ನಾಯಕ ಎಂದರೆ ಬಲಶಾಲಿ, ನಾಯಕ ತಪ್ಪು ಮಾಡಲು ಸಾಧ್ಯವಿಲ್ಲ, ನಾಯಕ ಎಂದರೆ ಎಂದಿಗೂ ಸೋಲುವುದಿಲ್ಲ, ಎಲ್ಲವನ್ನು ಬಲ್ಲವನ್ನಷ್ಟೇ ನಾಯಕನಾಗಲು ಸಾಧ್ಯ… ಹೀಗೆ ಹಲವು ಕಲ್ಪನೆಗಳು ನಾಯಕ ವಿಷಯದಲ್ಲಿ ನಮ್ಮ ತಲೆಯಲ್ಲಿ ಕುಳಿತಿರುತ್ತದೆ. ಹಾಗಾದರೆ ಉತ್ತಮ ನಾಯಕ ಎನ್ನಿಸಿಕೊಳ್ಳಲು ಏನಿರಬೇಕು?

ಟ್ರೆಂಡಿಂಗ್​ ಸುದ್ದಿ

ನಾಯಕನ ಕುರಿತ ವಾಸ್ತವ

ʼಉತ್ತಮ ನಾಯಕತ್ವ ಗುಣ ಹೊಂದಿರುವವರು ದೃಢ ನಿರ್ಣಯ ತೆಗೆದುಕೊಳ್ಳಬಲ್ಲರು, ಬಲಶಾಲಿಗಳು ಮತ್ತು ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳನ್ನು ತಿಳಿದಿರುವವರು’ ಎಂಬ ನಾಯಕತ್ವಕ್ಕೆ ಸಂಬಂಧಿಸಿದ ಪರಂಪರಾಗತ ಮಿಥ್ಯಾ ಕಲ್ಪನೆಯೊಂದು ವ್ಯಾಪಕವಾಗಿ ಪ್ರಚಲಿತದಲ್ಲಿದೆ. ಹಲವಾರು ಯಶಸ್ವಿ ನಾಯಕರ ಶೈಲಿಗಳನ್ನು ಗಮನಿಸಿದ ನಂತರ, ಈ ಮಿಥ್ಯೆಗಳನ್ನು ತ್ಯಜಿಸಬೇಕೆಂದು ನಾನು ಭಾವಿಸುತ್ತೇನೆ. ನಾಯಕರಾದವರು ಎಲ್ಲವನ್ನೂ ಬಗೆಹರಿಸುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಕಾರ್ಯ ನಿರ್ವಹಿಸುತ್ತಾ ನಿರ್ವಹಿಸುತ್ತಾ ಅವರು ಒಟ್ಟಿನಲ್ಲಿ ಹೇಗೋ ಅದನ್ನು ಮಾಡಿ ಮುಗಿಸುತ್ತಾರೆ, ಅವರೂ ಮನುಷ್ಯರೇ ತಾನೇ. ನಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಹಿಳಾ ಬಾಸ್‌ ಒಬ್ಬರು ಒಮ್ಮೆ ನನಗೆ 'ಕೆಲವು ನಾಯಕರು ತಾವು ಎಲ್ಲದರಲ್ಲಿಯೂ ಜಗತ್ತಿನ ತುತ್ತ ತುದಿಯಲ್ಲಿದ್ದೇವೆ ಎಂಬಂತೆ ಬೀಗುತ್ತಾರೆ; ಆದರೆ ವಾಸ್ತವದಲ್ಲಿ, ಅವರ ಬಗೆಗೆ ಅವರಿಗೇ ಸಾಕಷ್ಟು ಅನುಮಾನಗಳು ಇಲ್ಲದೇ ಹೋದರೆ ಅವರು ತಮ್ಮ ಅವರು ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳದಿರುವ ಸಾಧ್ಯತೆಗಳೇ ಹೆಚ್ಚು ಎಂದಿದ್ದರು.

ಹಾಗಾದರೆ, ನಾಯಕತ್ವ ಗುಣ ಹೊಂದಿರುವವರು ತಮ್ಮ ದೌರ್ಬಲ್ಯವನ್ನು ಮರೆ ಮಾಚಲು ಏಕೆ ಬಯಸುತ್ತಾರೆ? ಅವರು ಹೇಗಿದ್ದಾರೋ ಹಾಗೆ ಇತರರಿಗೆ ಕಾಣಿಸಿಕೊಳ್ಳಲು ಅವರು ಇಷ್ಟ ಪಡುವುದಿಲ್ಲ. ಅವರು ನಿಷ್ಠುರವಾದಿಯ ಮುಖವಾಡ ಧರಿಸಲು ಬಯಸುತ್ತಾರೆ ಮತ್ತು ತಮ್ಮ ಶ್ರೇಷ್ಠತೆಯನ್ನು ಉತ್ಕೃಷ್ಟವಾಗಿಯೇ ಪ್ರಸ್ತುತಪಡಿಸಿಕೊಳ್ಳುತ್ತಾರೆ. ತಮ್ಮ ಪರಿಸರದಲ್ಲಿ ತಾವೇ ಪ್ರಮುಖ ವ್ಯಕ್ತಿಗಳಾಗಿ ಕಾಣಲು ಬಯಸುತ್ತಾರೆ.

ಸರ್ವಶಕ್ತರು ಅಪಾಯಕಾರಿಯಾಗಬಹುದು

ಆದರೆ, ಅವರೊಡನೆ ಕೆಲಸ ಮಾಡುವ ಜನರು ತಮ್ಮ ನಾಯಕರ ನೈಜ ಮುಖ ನೋಡಲು ಬಯಸುತ್ತಾರೆಯೇ ಹೊರತು, ನಾಯಕರು ತಮ್ಮದೆಂದು ಬಿಂಬಿಸುವ (ಅವರ ಹುಸಿ) ಚಿತ್ರವನ್ನಲ್ಲ. ತಮ್ಮ ತಂಡಗಳಿಗೆ ತಾವು ಬದ್ಧರಾಗಿರುವ ನಾಯಕರು ತಮ್ಮ ದುರ್ಬಲತೆ ಮತ್ತು ಅಪೂರ್ಣತೆಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುತ್ತಾರೆ. ತಮ್ಮ ಭಯ, ವಿಷಾದ ಮತ್ತು ಮುಜುಗರವನ್ನು ಬಹಿರಂಗವಾಗಿ ವ್ಯಕ್ತಪಡಿಸುವ ನಾಯಕರು ಇತರರಿಗೆ ವಿಶ್ವಾಸಾರ್ಹ ವ್ಯಕ್ತಿಗಳಾಗಿ ಕಾಣುತ್ತಾರೆ. ಅವರು ತಮ್ಮ ಸವಾಲುಗಳು, ವೈಫಲ್ಯಗಳು ಮತ್ತು ಅನಿಶ್ಚಿತತೆಗಳನ್ನು ಹಂಚಿಕೊಂಡಾಗ, ಅವರ ತಂಡದ ಸದಸ್ಯರು ತಮ್ಮ ಪ್ರತಿಕ್ರಿಯೆ, ಆಲೋಚನೆಗಳು ಮತ್ತು ಭರವಸೆಗಳನ್ನು ಹಂಚಿಕೊಳ್ಳಲು ಹೆಚ್ಚಿನ ಧೈರ್ಯ ಪಡೆದುಕೊಳ್ಳುತ್ತಾರೆ. ಇದು ತಂಡಗಳಲ್ಲಿ ಲವಲವಿಕೆ ಮತ್ತು ಸಂತೋಷವನ್ನು ತುಂಬುತ್ತದೆ. ಜನರು ತಮ್ಮ ನಾಯಕರಲ್ಲಿರುವ ಕೌಶಲಗಳಿಗಾಗಿ ಅವರನ್ನು ಮೆಚ್ಚುತ್ತಾರೆ ಮತ್ತು ಅವರಲ್ಲಿರುವ ದುರ್ಬಲತೆಗಳಿಗಾಗಿ ಅವರನ್ನು ಪ್ರೀತಿಸುತ್ತಾರೆ. ಪ್ರೊಫೆಸರ್, ಲೇಖಕಿ ಮತ್ತು ಪಾಡ್‌ಕಾಸ್ಟ್ಹೋಸ್ಟ್ ಆಗಿರುವ ಕಸಾಂಡ್ರಾ ಬ್ರೆನೆಬ್ರೌನ್ (ಟೆಕ್ಸಾಸ್‌ ವಿಶ್ವವಿದ್ಯಾಲಯ, ಆಸ್ಟಿನ್), ಅವಮಾನ, ದುರ್ಬಲತೆ ಮತ್ತು ನಾಯಕತ್ವ ಕುರಿತಾದ ತಮ್ಮ ಬರಹಗಳಿಗೆ ಹೆಸರುವಾಸಿಯಾಗಿದ್ದಾರೆ, 'ಸರ್ವಶಕ್ತರು ಅಪಾಯಕಾರಿಯಾಗಬಹುದು' ಎಂದು ಆಕೆ ಹೇಳುತ್ತಾರೆ. ಇತಿಹಾಸವು ಜಗತ್ತನ್ನು ದುರಂತದ ಕಡೆಗೆ ಕೊಂಡೊಯ್ದ ನಿರ್ಭೀತ ಮತ್ತು ಲಜ್ಜೆಗೆಟ್ಟ ನಾಯಕರಿಂದ ತುಂಬಿದೆ.

ನಷ್ಟದಲ್ಲಿದ್ದ ಫೋರ್ಡ್ಮೋಟಾರ್ಕ್‌ ಕಂಪನಿಯನ್ನು ಉಳಿಸಿದ ಕೀರ್ತಿಗೆ ಪಾತ್ರರಾದ ಆಲೆನ್ಮಲಾಲಿ, ಅದನ್ನು ದಿವಾಳಿತನದ ಅಂಚಿನಿಂದ ಮರಳಿ ತಂದು ಸತತ ಹತ್ತೊಂಬತ್ತು ಬಾರಿ ತ್ರೈಮಾಸಿಕ ಲಾಭವನ್ನು ಪಡೆಯುವಂತೆ ಮಾಡುವ ಮೂಲಕ ಮುಕ್ತ ಮತ್ತು ದೌರ್ಬಲ್ಯಕ್ಕೆ ಮಾದರಿಯಾಗಿದ್ದಾರೆ. 2001 ಮತ್ತು 2023 ರ ನಡುವೆ ಅಮೆರಿಕನ್ ಏರ್‌ ಲೈನ್ಸ್‌ನ ಸಿಇಒ ಆಗಿದ್ದ ಡಗ್ಪಾರ್ಕರ್, ದುರ್ಬಲತೆಯನ್ನು ಉತ್ಕೃಷ್ಟತೆಯಾಗಿ ಪರಿವರ್ತಿಸಿದ ಯಶಸ್ವಿ ನಾಯಕನ ಮತ್ತೊಂದು ಮಾದರಿ. ಸತತವಾಗಿ ಐದು ವರ್ಷಗಳ ಕಾಲ ಭಾರತೀಯ ತಂತ್ರಜ್ಞಾನ ಕಂಪನಿಯೊಂದರ ಚುಕ್ಕಾಣಿ ಹಿಡಿದ ದಾಖಲೆ ಬರೆದಿರುವ ಸಿಇಒ ಒಬ್ಬರು, ನನ್ನೊಂದಿಗೆ ಒಮ್ಮೆ, ನಾನು ಪ್ರತಿ ತ್ರೈಮಾಸಿಕ ಬೋರ್ಡ್‌ ಮೀಟಿಂಗ್‌ಗೆ ಪ್ರವೇಶಿಸುವಾಗ ಪ್ರತಿ ಸಲವೂ ಇದು ನನ್ನ ಕೊನೆಯ ಮೀಟಿಂಗ್‌ ಎಂದು ಭಾವಿಸುತ್ತಿದ್ದೆʼ ಎಂದಿದ್ದರು.

ದೌರ್ಬಲ್ಯವು ನಾಯಕನ ನ್ಯೂನತೆಯಲ್ಲ

ಈ ನಾಯಕರು ತಮ್ಮ ದೌರ್ಬಲ್ಯವನ್ನೇ ಹೇಗೆ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ? ಹೊಸಬರಿಗೆ ಕಿವಿ ಮಾತು ಹೇಳುವುದಾದರೆ, ಇವರುಗಳಿಗೆ ತಮಗೆ ಏನು ತಿಳಿದಿಲ್ಲ ಎಂಬುದರ ಅರಿವಿರುತ್ತದೆ. ಸಹಾಯಕ್ಕಾಗಿ ಇತರರನ್ನು ಕೇಳಲು ಇವರು ಯಾವತ್ತು ಹಿಂಜರಿಯುವುದಿಲ್ಲ. ಅವರು ತಿಳಿದಿರುವುದಕ್ಕಿಂತ ಹೆಚ್ಚಾಗಿ ಅವರಿಗೆ ತಿಳಿದಿಲ್ಲದಿರುವುದರ ಬಗ್ಗೆ ಮಾತನಾಡುತ್ತಾರೆ. ಅವರು ಇತರರ ಮಾತುಗಳನ್ನು ಗಮನವಿಟ್ಟು ಆಲಿಸುತ್ತಾರೆ ಮತ್ತು ತಮ್ಮ ಯೋಜನೆಗಳನ್ನು ಸುಧಾರಿಸಲು ಇಲ್ಲಿ ಕಲಿತದ್ದನ್ನು ಬಳಸಿಕೊಳ್ಳುತ್ತಾರೆ. ಅವರು ತಮ್ಮ ಜ್ಞಾನದ ಕೊರತೆಯನ್ನು (ನಿಜವಾದ ದುರ್ಬಲತೆಯನ್ನು) ಕಠಿಣ ಪರಿಶ್ರಮದಿಂದಲೇ ನಿವಾರಿಸುತ್ತಾರೆ. ಸಂಕೀರ್ಣತೆ ಹೆಚ್ಚುತ್ತಿರುವ ಪ್ರಪಂಚದಲ್ಲಿ ಉತ್ತಮ ಪರಿಹಾರಗಳನ್ನು ರೂಪಿಸಲು ಸಹಾಯ ಮಾಡುವಂತೆ ಉತ್ತಮ ಪ್ರಶ್ನೆಗಳನ್ನು ಕೇಳಲು ದುರ್ಬಲತೆ ಅವರಿಗೆ ಸಹಾಯ ಮಾಡುತ್ತದೆ. ವಾಸ್ತವವಾಗಿ, ಅತ್ಯುತ್ತಮ ನಾಯಕರು ತಮ್ಮ ದೌರ್ಬಲ್ಯವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೆ.

ದೌರ್ಬಲ್ಯವು ನಾಯಕತ್ವದ ಗುಣಹೊಂದಿರುವವರ ನ್ಯೂನತೆಯಲ್ಲ. ದೌರ್ಬಲ್ಯವು ಅನಿರೀಕ್ಷಿತತೆ ಅಥವಾ ವಂಚನೆಗಿಂತ ಭಿನ್ನವಾಗಿದೆ. ಇದು ಥೆರಪಿಯ ಸಂದರ್ಭದ ಭಾವನಾತ್ಮಕ ಹೊರಹರಿವು ಅಲ್ಲ. 1991 ರಲ್ಲಿ, ಕಾಂಟಿನೆಂಟಲ್ ಏರ್‌ಲೈನ್ಸ್‌ನ, ಆಗಿನ ಸಿಇಒ ಆಗಿದ್ದ ಹಾಲಿಸ್ಯ ಹಾರಿಸ್‌ ಅವರು ತಮ್ಮ 42,000 ಉದ್ಯೋಗಿಗಳಿಗೆ ‘ಕಂಪನಿಯು ಕಷ್ಟದ ಸಮಯದಲ್ಲಿದೆ, ಭವಿಷ್ಯವು ಮಂಕಾಗಿದೆ ಮತ್ತು ಕಂಪನಿಯ ಭವಿಷ್ಯಕ್ಕಾಗಿ ನೌಕರರು ಪ್ರಾರ್ಥಿಸಬೇಕುʼ ಎಂದು ಹೇಳಿದರು. ಆ ರೀತಿ ಹೇಳಿಕೆ ನೀಡಿದ ಮರು ದಿನವೇ ಅವರನ್ನು ವಜಾ ಮಾಡಲಾಯಿತು. ಹಾಲಿಸ್‌ ನಿಸ್ಸಂದೇಹವಾಗಿ, ದೌರ್ಬಲ್ಯವನ್ನು ಪ್ರದರ್ಶಿಸಿದರು. ಆದರೆ ನಾಯಕತ್ವದ ಬದಲಿಗೆ, ಅವರು ತೋರಿಸಿದ್ದು ಅಸಹಾಯಕತೆ. ಇದರ ಬದಲಾಗಿ, ಅವರು ತಮ್ಮ ಮುಕ್ತತೆಯನ್ನು ಸಕಾರಾತ್ಮಕ ಫಲಿತಾಂಶಗಳನ್ನು ಸೃಷ್ಟಿಸುವ ಕ್ರಿಯಾಯೋಜನೆಯೊಂದಿಗೆ ಸಂಯೋಜಿಸಿದ್ದರೆ ಯಶಸ್ವಿಯಾಗುತ್ತಿದ್ದರು. ನಾಯಕರು ಜಾಗೃತರಾಗಿರಬೇಕು – ಅವರು ಗಮನಾರ್ಹವಾಗಿ ಪ್ರಭಾವ ಮತ್ತು ಪರಿಣಾಮ ಬೀರುವ ಸ್ಥಾನಗಳಲ್ಲಿರುತ್ತಾರೆ –ಪಿಸುಮಾತೂ ಗಟ್ಟಿಯಾಗಿ ಕೇಳಿಸುತ್ತದೆ.

ಜೂನ್14, 2017 ರ ಮುಂಜಾನೆ, ಲಂಡನ್‌ನ ಗ್ರೆನ್‌ ಫೆಲ್ಟವರ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಅಗ್ನಿಶಾಮಕದಳದ ಕಮಿಷನರ್‌ ಡೆನಿಕಾಟನ್ ಅದನ್ನು ನಿಭಾಯಿಸುವಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸಿದರು. ಆ ಸಂಜೆ ತನ್ನ ಮೊದಲ ಸಾರ್ವಜನಿಕ ಸಭೆಯಲ್ಲಿ ಆಕೆ, ಅಗ್ನಿಶಾಮಕದಳದವರು (ಆಕೆಯನ್ನೂ ಒಳಗೊಂಡಂತೆ) ನಿಸ್ಸಂದೇಹವಾಗಿ ಸದೃಢರು, ಬಲಶಾಲಿಗಳು ಆಗಿದ್ದರೂ, ಅವರೂ ಸಹ ಮಾನವರು ಮತ್ತು ದುರ್ಬಲರು ಎಂದು ವಿವರಿಸುವಾಗ ಅವರ ಮಾತುಗಳಲ್ಲಿ ನೋವು ತುಂಬಿತ್ತು. ಇಷ್ಟೊಂದು ಪ್ರಮಾಣದಲ್ಲಿ ಯಾರೂ ಈ ಮಟ್ಟದ ಯಾತನೆಯನ್ನು ನೋಡಿರಲಿಲ್ಲ ಮತ್ತು ತನ್ನ ತಂಡದ ಮಾನಸಿಕ ಯೋಗಕ್ಷೇಮವು ತನ್ನ ಆದ್ಯತೆಯಾಗಿದ್ದು, ಅವರು ಈ ಆಘಾತದಿಂದ ಹೊರಬರಲು ಅವರಿಗೆ ಆಪ್ತ ಸಮಾಲೋಚನೆ ಒದಗಿಸಲಾಗುವುದು ಎಂದರು. ಆಕೆ ತುಂಬಾ ಮೃದುವಾದರೇ? ದೌರ್ಬಲ್ಯಕ್ಕೂ ಲಿಂಗಕ್ಕೂ ಏನಾದರೂ ಸಂಬಂಧವಿದೆಯೇ? ಈ ಪ್ರಶ್ನೆಗಳು ಹೆಚ್ಚಿನ ಅಧ್ಯಯನಕ್ಕೆ, ಆದರೆ ಪುರುಷ ನಾಯಕರನ್ನು ಸುತ್ತುವರೆದಿರುವ ರೂಢಿ ಗತನಿರೀಕ್ಷೆಗಳ ಸೆರೆಯಲ್ಲಿ ಆಕೆ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ನಾಯಕತ್ವಕ್ಕೆ ಆಕೆ ಹೊಸ ಮಾನದಂಡವನ್ನು ನಿಗದಿ ಪಡಿಸಿದರು ಮತ್ತು ಅದಕ್ಕಾಗಿ, ತನ್ನ ತಂಡದಿಂದ ಅಪಾರ ಗೌರವ, ಬೆಂಬಲ ಮತ್ತು ಸಹಕಾರವನ್ನು ಪಡೆದರು.

ನಾಯಕರ ಪಾತ್ರವು ಕಾರ್ಯತಂತ್ರದ ಚಿಂತನೆ, ಅದರ ಚಾಲನೆಯ ಕಾರ್ಯಕ್ಷಮತೆ, ನಿರ್ಣಯ ಮತ್ತು ಸ್ಥಿತಿ ಸ್ಥಾಪಕತ್ವವನ್ನು ಮೀರಿ ವಿಸ್ತರಿಸುತ್ತದೆ. ದುರ್ಬಲತೆಯು ನಾಯಕತ್ವದ ಗುಣಕ್ಕೆ ಉತ್ತಮ ಮಿಶ್ರಣವಾಗಿರುತ್ತದೆ ಮತ್ತು ನಾಯಕರನ್ನು ಮಾನವೀಯಗೊಳಿಸುತ್ತದೆ!

ಬರಹ: ಸುಧೀಶ್ ವೆಂಕಟೇಶ್ (ಮುಖ್ಯ ಸಂವಹನ ಅಧಿಕಾರಿ, ಅಜೀಂ ಪ್ರೇಮ್‌ಜಿ ಫೌಂಡೇಷನ್‌)

ವಿಭಾಗ