ಮಾಘ ಮಾಸದಿಂದ ಸಂಕಷ್ಟ ಚತುರ್ಥಿವರೆಗೆ; 2024ರ ಫೆಬ್ರವರಿಯಲ್ಲಿರುವ ಹಬ್ಬಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮಾಘ ಮಾಸದಿಂದ ಸಂಕಷ್ಟ ಚತುರ್ಥಿವರೆಗೆ; 2024ರ ಫೆಬ್ರವರಿಯಲ್ಲಿರುವ ಹಬ್ಬಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಮಾಘ ಮಾಸದಿಂದ ಸಂಕಷ್ಟ ಚತುರ್ಥಿವರೆಗೆ; 2024ರ ಫೆಬ್ರವರಿಯಲ್ಲಿರುವ ಹಬ್ಬಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಫೆಬ್ರವರಿ ತಿಂಗಳಲ್ಲಿ ಪುಷ್ಯ ಮಾಸ ಬಹುಳ (ಕೃಷ್ಣ ಪಕ್ಷ) ದಿಂದ ಸಂಕಷ್ಟ ಚತುರ್ಥಿವರೆಗೆ ಏನೆಲ್ಲಾ ಆಚರಣೆಗಳು, ಹಬ್ಬಗಳಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಫೆಬ್ರವರಿ ತಿಂಗಳಲ್ಲಿ ಬರುವ ಹಬ್ಬಗಳ ಸಂಪೂರ್ಣ ವಿವರ ಇಲ್ಲಿದೆ
ಫೆಬ್ರವರಿ ತಿಂಗಳಲ್ಲಿ ಬರುವ ಹಬ್ಬಗಳ ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ಹಿಂದೂ ಕ್ಯಾಲೆಂಡರ್ ಪ್ರಕಾರ 2024ರ ಫೆಬ್ರವರಿ ತಿಂಗಳು ಮಾಸ ಬಹುಳ (ಕೃಷ್ಣ ಪಕ್ಷ) ಹಾಗೂ ಷಷ್ಠಿ ತಿಥಿಯೊಂದಿಗೆ ಆರಂಭವಾಗುತ್ತದೆ. ಫಾಲ್ಗುಣಿ ಕೃಷ್ಣ ಪಕ್ಷದ ಪಂಚಮಿ ತಿಥಿ ಮತ್ತು ಸ್ವಾತಿ ನಕ್ಷತ್ರದೊಂದಿಗೆ ತಿಂಗಳು ಕೊನೆಗೊಳ್ಳುತ್ತದೆ. ಈ ವರ್ಷದ ಫೆಬ್ರವರಿಯಲ್ಲಿ 29 ದಿನಗಳು ಬಂದಿರುವುದು ವಿಶೇಷ. ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳೆಂದರೆ ಬಸಂತ್ ಪಂಚಮಿ ಮತ್ತು ಮಾಘ ಪೂರ್ಣಿವೆ. ಇವುಗಳ ಜೊತೆಗೆ ತಿಂಗಳಲ್ಲಿ ಸಂಕಷ್ಟ ಚತುರ್ಥಿ ಸೇರಿದಂತೆ ಇತರೆ ಉಪವಾಸಗಳು, ವ್ರತ ಹಾಗೂ ಹಬ್ಬಗಳೂ ಇವೆ.

ಫೆಬ್ರವರಿಯಲ್ಲಿ ಜನಿಸಿದವರು ವಿಶಿಷ್ಟ ವ್ಯಕ್ತಿತ್ವದಿಂದ ಎಲ್ಲರನ್ನು ಮೋಡಿ ಮಾಡುತ್ತಾರೆ. ಎಲ್ಲರನ್ನು ತಮ್ಮತ್ತ ಸೆಳೆಯುತ್ತಾರೆ. ಇವರು ಕೋಮಲವಾದ ಹೃದಯವಂತರಾಗಿದ್ದು, ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. ಇವರಲ್ಲಿ ಇರುವ ಸಹಾನುಭೂತಿಯ ಸ್ವಭಾವವು ಜೀವನದಲ್ಲಿ ವಿವಿಧ ಸವಾಲುಗಳನ್ನು ಎದುರಿಸಲು ಕಾರಣವಾಗುತ್ತದೆ. ಕಷ್ಟಗಳನ್ನು ಎದುರಿಸಿ ಕೊನೆಯಲ್ಲಿ ಜಯದ ನಗೆ ಬೀರುತ್ತಾರೆ.

ಈ ತಿಂಗಳಲ್ಲಿ ಇರುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಫೆಬ್ರವರಿ 1, 2024, ಗುರುವಾರ - ಪುಷ್ಯ ಮಾಸ ಬಹುಳ (ಕೃಷ್ಣ ಪಕ್ಷ)

ಫೆಬ್ರವರಿ 6, 2024, ಮಂಗಳವಾರ - ಷಟ್‌ತಿಲಾ ಏಕಾದಶಿ

ಫೆಬ್ರವರಿ 7, 2024, ಬುಧವಾರ - ಪ್ರದೋಷ ವ್ರತ (ಕೃಷ್ಣ ಪಕ್ಷ)

ಫೆಬ್ರವರಿ 8, 2024, ಗುರುವಾರ - ಮಾಸ ಶಿವರಾತ್ರಿ

ಫೆಬ್ರವರಿ 9, 2024, ಶುಕ್ರವಾರ - ಅವರಾತ್ರಿ ಅಮವಾಸ್ಯ (ಮಾಘ ಅಮವಾಸ್ಯೆ)

ಫೆಬ್ರವರಿ 10,2024, ಶನಿವಾರ - ಮಾಘ ಮಾಸ ಶುದ್ಧ (ಶುಕ್ಲ ಪಕ್ಷ)

ಫೆಬ್ರವರಿ 12, 2024, ಸೋಮವಾರ - ಮೌನಗೌರಿ ವ್ರತ

ಫೆಬ್ರವರಿ 13, 2024, ಮಂಗಳವಾರ - ಕಂದ ಚತುರ್ಥಿ

ಫೆಬ್ರವರಿ 14, 2024, ಬುಧವಾರ - ಬಸಂತ್ ಪಂಚಮಿ, ಸರಸ್ವತಿ ಪೂಜೆ

ಫೆಬ್ರವರಿ 15, 2024, ಗುರುವಾರ - ಕುಮಾರ ಷಷ್ಠಿ

ಫೆಬ್ರವರಿ 16, 2024, ಶುಕ್ರವಾರ - ರಥ ಸಪ್ತಮಿ

ಫೆಬ್ರವರಿ 17, 2024, ಶನಿವಾರ - ಭೀಷ್ಮಾಷ್ಠಮಿ

ಫೆಬ್ರವರಿ 18, 2024, ಭಾನುವಾರ - ಮಧ್ವ ನವಮಿ

ಫೆಬ್ರವರಿ 20, 2024, ಮಂಗಳವಾರ - ಜಯ ಏಕಾದಶಿ, ಕುಂಭ ಸಂಕ್ರಾಂತಿ

ಫೆಬ್ರವರಿ 21, 2024, ಬುಧವಾರ - ಪ್ರದೋಷ ವ್ರತ (ಶುಕ್ಲ ಪಕ್ಷ)

ಫೆಬ್ರವರಿ 24, 2024, ಶನಿವಾರ - ಮಾಘ ಪೂರ್ಣಿಮಾ ವ್ರತ, ಮಾಘಸ್ನಾನ ಸಮಾಪ್ತಿ

ಫೆಬ್ರವರಿ 25, 2024, ಭಾನುವಾರ - ಮಾಘ ಮಾಸ ಬಹುಳ (ಕೃಷ್ಣ ಪಕ್ಷ)

ಫೆಬ್ರವರಿ 28, 2024, ಬುಧವಾರ - ಸಂಕಷ್ಟ ಚತುರ್ಥಿ

(This copy first appeared in Hindustan Times Kannada website. To read more like this please logon to kannada.hindustantime.com).

Whats_app_banner