ಕನ್ನಡ ಸುದ್ದಿ  /  ಜೀವನಶೈಲಿ  /  Papaya Recipes: ಬೇಸಿಗೆಯಲ್ಲಿ ಪರಂಗಿಹಣ್ಣು ಸೇವಿಸಿ ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗಿ: ಇಲ್ಲಿದೆ 8 ಬಗೆಯ ಪಪ್ಪಾಯಿ ಬ್ರೇಕ್‌ಫಾಸ್ಟ್‌ ರೆಸಿಪಿ

Papaya Recipes: ಬೇಸಿಗೆಯಲ್ಲಿ ಪರಂಗಿಹಣ್ಣು ಸೇವಿಸಿ ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗಿ: ಇಲ್ಲಿದೆ 8 ಬಗೆಯ ಪಪ್ಪಾಯಿ ಬ್ರೇಕ್‌ಫಾಸ್ಟ್‌ ರೆಸಿಪಿ

Summer Food Recipes: ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಯುಂಟಾಗುತ್ತದೆ. ಇದರಿಂದ ಪಾರಾಗಲು ಪಪ್ಪಾಯಿ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಬೆಳಗಿನ ಉಪಹಾರಕ್ಕೆ ಇದನ್ನು ಸೇವಿಸುವುದರಿಂದ ದಿನವಿಡೀ ನಿಮ್ಮನ್ನು ಫ್ರೆಶ್ ಆಗಿರುವಂತೆ ಮಾಡುತ್ತದೆ. 8 ಬಗೆಯ ಪಪ್ಪಾಯಿ ಬ್ರೇಕ್‌ಫಾಸ್ಟ್‌ ಮಾಡುವ ವಿಧಾನ ತಿಳಿದುಕೊಳ್ಳಿ.

ಬೇಸಿಗೆಯಲ್ಲಿ ತಯಾರಿಸಬಹುದಾದ ಪರಂಗಿಹಣ್ಣಿನ ಬ್ರೇಕ್‌ಫಾಸ್ಟ್‌ ರೆಸಿಪಿಗಳು
ಬೇಸಿಗೆಯಲ್ಲಿ ತಯಾರಿಸಬಹುದಾದ ಪರಂಗಿಹಣ್ಣಿನ ಬ್ರೇಕ್‌ಫಾಸ್ಟ್‌ ರೆಸಿಪಿಗಳು (PC: Unsplash)

ಮಧ್ಯ ಅಮೆರಿಕ ಮತ್ತು ದಕ್ಷಿಣ ಮೆಕ್ಸಿಕೋದಲ್ಲಿ ಹುಟ್ಟಿಕೊಂಡ ಪಪ್ಪಾಯಿ ಹಣ್ಣು ಈಗ ಪ್ರಪಂಚದ ಹಲವೆಡೆ ಬೆಳೆಸಲಾಗುತ್ತದೆ. ಭಾರತದಲ್ಲಿ ಕಾಯಿ ಪಪ್ಪಾಯಿ ಅನ್ನು ತರಕಾರಿ ಸಾಂಬಾರ್ ಮಾಡಲು ಕೂಡ ಉಪಯೋಗಿಸುತ್ತಾರೆ. ಆದರೆ, ಗರ್ಭಿಣಿಯರು ಇದನ್ನು ಸೇವಿಸಿದರೆ ಗರ್ಭಪಾತವಾಗುವ ಅಪಾಯವಿರುತ್ತದೆ. ಉಳಿದಂತೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದರಲ್ಲೂ ಬೇಸಿಗೆಯಲ್ಲಿ ಇದರ ಸೇವನೆ ಆರೋಗ್ಯಕ್ಕೆ ಉತ್ತಮ. ಹೀಗಾಗಿ ಗರ್ಭಿಣಿಯರು ಪಪ್ಪಾಯಿ ಸೇವನೆಯಿಂದ ದೂರವಿರುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಪಪ್ಪಾಯಿಯಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್‌ನಂತಹ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಪರೀತ ಬಿಸಿಲಿನಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗಬಹುದು. ಹೀಗಾಗಿ ಪಪ್ಪಾಯಿ ಸೇವನೆಯು ನಿರ್ಜಲೀಕರಣ ಸಮಸ್ಯೆಯಿಂದ ದೇಹವನ್ನು ರಕ್ಷಿಸುತ್ತದೆ. ಪಪ್ಪಾಯಿಯು ಪಪೈನ್ ಎಂಬ ಕಿಣ್ವವನ್ನು ಹೊಂದಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಈ ಬೇಸಿಗೆ ಸಮಯದಲ್ಲಿ ಬೆಳಗಿನ ಉಪಾಹಾರವಾಗಿ ಪಪ್ಪಾಯಿಯನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂದು ನಂಬಲಾಗಿದೆ. ಬೇಸಿಗೆಯ ಬಿಸಿಲಿನ ತಾಪ ಹೆಚ್ಚಿರುವುದರಿಂದ ಪಪ್ಪಾಯಿ ಸೇವನೆಯು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಕಾರಿಯಾಗಿದೆ.

ಪಪ್ಪಾಯಿಯಿಂದ ಮಾಡಬಹುದಾದ ಉಪಹಾರಗಳ ಪಟ್ಟಿ ಇಲ್ಲಿದೆ

1. ಹಸಿ ಪಪ್ಪಾಯಿ ಪೋಹಾ (ಅವಲಕ್ಕಿ)

ಅವಲಕ್ಕಿಗೆ ಹಸಿ ಪಪ್ಪಾಯಿಯನ್ನು ಮಿಶ್ರಣ ಮಾಡಿ ಬೆಳಗಿನ ಉಪಹಾರಕ್ಕೆ ತಿನ್ನಲು ಯೋಗ್ಯವಾಗಿದೆ. ಅವಲಕ್ಕಿಯೊಂದಿಗೆ ಪಪ್ಪಾಯಿಯ ಈ ವಿಶಿಷ್ಟ ಮಿಶ್ರಣವು ಆಮ್ಲೀಯ ಗುಣಗಳನ್ನು ಹೊಂದಿದೆ. ತಿನ್ನಲು ಕೂಡ ರುಚಿಕರವಾಗಿರುತ್ತದೆ. ಒಗ್ಗರಣೆ ಹಾಕಿ ಹಸಿ ಪಪ್ಪಾಯಿಯನ್ನು ಸೇರಿಸಿ ನಂತರ ಅವಲಕ್ಕಿ ಸೇರಿಸಿ ಮಿಶ್ರಣ ಮಾಡಿದರೆ ಸಾಕು ಹಸಿ ಪಪ್ಪಾಯಿ ಅವಲಕ್ಕಿ ಸವಿಯಲು ರೆಡಿ. ಈ ಬೇಸಿಗೆಯಲ್ಲಿ ಇದರ ಸೇವನೆಯು ಜೀರ್ಣಕ್ರಿಯೆಗೂ ಸಹಕಾರಿ. ದೇಹವನ್ನು ಹೈಡ್ರೀಕರಿಸುವುದಲ್ಲದೆ, ದಿನಪೂರ್ತಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.

2. ಪಪ್ಪಾಯಿ ಸ್ಮೂಥಿ

ಪಪ್ಪಾಯಿಯು ಸಿಹಿಯಾಗಿರುತ್ತದೆ. ಇದರ ಸ್ಮೂಥಿ ತಯಾರಿಸಿ ಕುಡಿಯಬಹುದು. ಇದನ್ನು ತಯಾರಿಸಲು, ತಾಜಾ ಪಪ್ಪಾಯಿಯನ್ನು ಮೊಸರು, ಹಾಲು ಅಥವಾ ತೆಂಗಿನ ನೀರಿನೊಂದಿಗೆ ಮಿಶ್ರಣ ಮಾಡಿ. ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆ ರಸವನ್ನು ಸಹ ಸೇರಿಸಬಹುದು. ಈ ಸ್ಮೂಥಿಯು ಬೇಸಿಗೆಯ ಬೆಳಗಿನ ಬ್ರೇಕ್ ಫಾಸ್ಟ್‌ಗೆ ಉತ್ತಮವಾಗಿದೆ. ಇದು ಹೈಡ್ರೇಟಿಂಗ್ ಅಂಶ, ವಿಟಮಿನ್‌ಗಳು ಮತ್ತು ಖನಿಜಗಳನ್ನು ಹೊಂದಿರುವುದರಿಂದ ದೇಹಕ್ಕೆ ಅಗಾಧವಾದ ಪೌಷ್ಠಿಕಾಂಶಗಳನ್ನು ನೀಡುತ್ತದೆ.

3. ಪಪ್ಪಾಯಿ ಹಲ್ವಾ

ಮಾಗಿದ ಪಪ್ಪಾಯಿಯಿಂದ ಮಾಡಿದ ಪಪ್ಪಾಯಿ ಹಲ್ವಾ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಹಣ್ಣಾದ ಪಪ್ಪಾಯಿಯನ್ನು ತುರಿದು, ತುಪ್ಪ, ಸಕ್ಕರೆ ಮತ್ತು ಹಾಲಿನೊಂದಿಗೆ ದಪ್ಪವಾಗುವವರೆಗೆ ಬೇಯಿಸಬೇಕು. ಇದರ ಸೇವನೆಯು ದೇಹವನ್ನು ತಂಪಾಗಿರಿಸುತ್ತದೆ. ಇದರಲ್ಲಿರುವ ನೀರಿನ ಅಂಶ, ಹೇರಳ ಮಿಟಮಿನ್‌ ಅಂಶ ದೇಹವನ್ನು ನಿರ್ಜಲೀಕರಣ ಸಮಸ್ಯೆಯಿಂದ ಪಾರು ಮಾಡುತ್ತದೆ.

4. ಹಸಿ ಪಪ್ಪಾಯಿ ಸಲಾಡ್

ಹಸಿ ಪಪ್ಪಾಯಿಯನ್ನು ಕತ್ತರಿಸಿ ಅದಕ್ಕೆ ಸ್ವಲ್ಪ ಮಸಾಲೆ ಪದಾರ್ಥ, ಮೆಣಸಿನ ಹುಡಿಯನ್ನು ಸೇರಿಸಬೇಕು. ಅಲ್ಲದೆ, ಹಸಿ ಪಪ್ಪಾಯಿಗೆ ನಿಂಬೆ ರಸ, ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಕಡಲೆಕಾಯಿಗಳನ್ನು ಮಿಶ್ರಣ ಮಾಡಿ ಸಲಾಡ್ ಸವಿಯಬಹುದು. ಈ ಸಲಾಡ್, ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದೆ. ಇದು ನಿಮ್ಮ ದೇಹವನ್ನು ಶಕ್ತಿಯುತವಾಗಿಸುವುದಲ್ಲದೆ, ಬೇಸಿಗೆ ಉಪಹಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.

5. ಹಸಿ ಪಪ್ಪಾಯಿ ಕಬಾಬ್

ಹಸಿ ಪಪ್ಪಾಯಿಯ ಕತ್ತರಿಸಿ ಅದಕ್ಕೆ ಜೀರಿಗೆ, ಕೊತ್ತಂಬರಿ ಮತ್ತು ಮೆಣಸಿನ ಪುಡಿ ಜೊತೆ ಮಸಾಲೆ ಪದಾರ್ಥಗಳನ್ನು ಸೇರಿಸಬೇಕು. ಜೊತೆಗೆ ಕಡ್ಲೆಹಿಟ್ಟನ್ನು ಕೂಡಾ ಸೇರಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಬೇಯಿಸಬಹುದು ಅಥವಾ ಚಿಕನ್ ಕಬಾಬ್‌ನಂತೆ ಎಣ್ಣೆಯಲ್ಲಿ ಹುರಿಯಬಹುದು. ತಿನ್ನಲು ರುಚಿಕರವಾಗಿರುವುದರಿಂದ ಈ ಕಬಾಬ್ ಸೇವನೆ ದೇಹಕ್ಕೂ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ.

6. ಪಪ್ಪಾಯಿ ಮೊಸರು ಮಿಶ್ರಣ

ಒಂದು ಬೌಲ್ ಮೊಸರಿಗೆ ಪಪ್ಪಾಯಿಯನ್ನು ಮಿಶ್ರಣ ಮಾಡಿ ಸವಿಯುವುದರಿಂದ ದೇಹವನ್ನು ತಂಪಾಗಿಸುತ್ತದೆ. ಮೊಸರು ಕೂಡ ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಇವೆರಡರ ಸೇವನೆಯ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಹಣ್ಣಾದ ಪಪ್ಪಾಯಿನ್ನು ಕತ್ತರಿಸಿ, ಅದಕ್ಕೆ ಮೊಸರು, ಗ್ರಾನೋಲಾ, ಡ್ರೈ ಫ್ರೂಟ್ಸ್ ಅಥವಾ ಜೇನುತುಪ್ಪ ಮುಂತಾದವನ್ನು ಮಿಶ್ರಣ ಮಾಡಿ ಸವಿಯಬಹುದು.

7. ಪಪ್ಪಾಯಿ ಪರಾಟ

ಹಸಿ ಪಪ್ಪಾಯಿ ಪರಾಟಾವು ವಿಶಿಷ್ಟವಾದ ಸುವಾಸನೆ ಹೊಂದಿದ್ದು, ರುಚಿಕರವಾದ ಭಕ್ಷ್ಯವಾಗಿದೆ. ಗೋಧಿ ಹಿಟ್ಟನ್ನು ಚಪಾತಿಯಂತೆ ಮಾಡುವಂತೆಯೇ ಲಟ್ಟಿಸಬೇಕು. ಮಧ್ಯಕ್ಕೆ ತುರಿದ ಹಸಿ ಪಪ್ಪಾಯಿಯನ್ನು ಹಾಕಿ ರೋಲ್ ಮಾಡಿ ಬೇಯಿಸಬೇಕು. ಈ ಪೌಷ್ಠಿಕ ಪರಾಟವು ಬೇಸಿಗೆಯ ಉಪಹಾರಕ್ಕೆ ಸೂಕ್ತವಾಗಿದೆ. ಇದರ ಸೇವನೆಯು ದಿನವಿಡೀ ನಿಮ್ಮ ಶಕ್ತಿ ಮತ್ತು ಚೈತನ್ಯವನ್ನು ವೃದ್ಧಿಸುತ್ತದೆ.

8. ಪಪ್ಪಾಯಿ-ಚಿಯಾ ಮಿಶ್ರಣ

ಕೇವಲ 10 ನಿಮಿಷಗಳಲ್ಲಿ ತಿನ್ನಲು ಸಿದ್ಧವಾಗುವ ಡೈರಿ-ಮುಕ್ತ ಪಪ್ಪಾಯಿ ಚಿಯಾ ಪಡ್ಡಿಂಗ್ ಅನ್ನು ಬಾದಾಮಿ ಹಾಲು, ಪಪ್ಪಾಯಿ, ಚಿಯಾ ಬೀಜಗಳು, ಸಣ್ಣನೆ ತುರಿದ ಮತ್ತು ದಾಲ್ಚಿನ್ನಿ ಮತ್ತು ಏಲಕ್ಕಿಯಂತಹ ಕೆಲವು ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಲಘು ಉಪಹಾರಕ್ಕೆ ಇದು ಉತ್ತಮವಾಗಿದೆ.

ಈ ಬೇಸಿಗೆಯ ಸೂರ್ಯನ ಶಾಖಕ್ಕೆ ನೀವು ಖಂಡಿತಾ ಬಳಲಿರುತ್ತೀರಿ. ಕಳೆದ ವರ್ಷದ ಮಳೆ ಕೊರತೆ ಹಾಗೂ ಈ ವರ್ಷ ವಿಪರೀತ ಬಿಸಿಲು ಜನತೆಯನ್ನು ಕಂಗೆಡಿಸಿದೆ. ಇಂಥ ಸಮಯದಲ್ಲಿ ದೇಹದಲ್ಲಿ ನಿರ್ಜಲೀಕರಣ ಮುಂತಾದ ಅನಾರೋಗ್ಯ ಸಮಸ್ಯೆಯಾಗುವುದು ಸಾಮಾನ್ಯ. ಹೀಗಾಗಿ ಪಪ್ಪಾಯಿ ಸೇವನೆಯು ದೇಹವನ್ನು ನಿರ್ಜಲೀಕರಣ ಮುಂತಾದವುಗಳಿಂದ ಕಾಪಾಡುವುದರಲ್ಲಿ ಅನುಮಾನವೇ ಇಲ್ಲ.