ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 11ರಲ್ಲಿ 11 ಗುಣಿಸಿದ್ರೆ 4 ಆದ್ರೆ, 33ರಲ್ಲಿ 33 ಗುಣಿಸಿದ್ರೆ ಎಷ್ಟಾಗುತ್ತೆ? 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: 11ರಲ್ಲಿ 11 ಗುಣಿಸಿದ್ರೆ 4 ಆದ್ರೆ, 33ರಲ್ಲಿ 33 ಗುಣಿಸಿದ್ರೆ ಎಷ್ಟಾಗುತ್ತೆ? 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತದ ಪಜಲ್‌ಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುವ ಜೊತೆಗೆ ಮನಸ್ಸಿಗೂ ಖುಷಿ ನೀಡುತ್ತವೆ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಬ್ರೈನ್‌ ಟೀಸರ್‌ಗಳು ಭಾರಿ ವೈರಲ್‌ ಆಗುತ್ತವೆ. ಇಲ್ಲೊಂದು ಅಂಥದ್ದೇ ಪಜಲ್‌ ಇದೆ. ಇದಕ್ಕೆ 20 ಸೆಕೆಂಡ್‌ನಲ್ಲಿ ಉತ್ತರ ಹುಡುಕಲು ಟ್ರೈ ಮಾಡಿ.

11ರಲ್ಲಿ 11 ಗುಣಿಸಿದ್ರೆ 4 ಆದ್ರೆ, 33ರಲ್ಲಿ 33 ಗುಣಿಸಿದ್ರೆ ಎಷ್ಟಾಗುತ್ತೆ? 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
11ರಲ್ಲಿ 11 ಗುಣಿಸಿದ್ರೆ 4 ಆದ್ರೆ, 33ರಲ್ಲಿ 33 ಗುಣಿಸಿದ್ರೆ ಎಷ್ಟಾಗುತ್ತೆ? 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತದ ಪಜಲ್‌ ಬಿಡಿಸುವ ಹವ್ಯಾಸ ನಿಮಗಿದ್ದರೆ ನಿಮಗಾಗಿ ಇಲ್ಲೊಂದು ಪಜಲ್‌ ಇದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆಗಿರುವ ಈ ಪಜಲ್‌ ನೋಡಿದಾಗ ಇದೇನು ಮಹಾ ಎನ್ನಿಸಿದರೂ ಇದಕ್ಕೆ ಉತ್ತರ ಕಂಡು ಹಿಡಿಯುವುದು ನಿಜಕ್ಕೂ ಕಷ್ಟ ಎನ್ನಿಸಬಹುದು. ಗಣಿತದಲ್ಲಿ ಶಾರ್ಪ್‌ ಇದ್ದರೆ ಈ ಬ್ರೈನ್‌ ಟೀಸರ್‌ಗೆ ನೀವು ಉತ್ತರ ಕಂಡುಕೊಳ್ಳಬಹುದು. ಆದರೆ ಕೇವಲ 20 ಸೆಕೆಂಡ್‌ನಲ್ಲಿ ಇದಕ್ಕೆ ಉತ್ತರ ಕಂಡುಹಿಡಿಯಬೇಕು.

ʼEasy Daily Quizʼ ಎಂಬ ಎಕ್ಸ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿದೆ. ಈ ಪುಟದಲ್ಲಿ ಆಗಾಗ ಬ್ರೈನ್‌ ಟೀಸರ್‌ ಹಾಗೂ ಗಣಿತದ ಪಜಲ್‌ಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಇಂದಿನ ಪಜಲ್‌ಗೆ ʼಇಂದಿನ ಸುಲಭ ಪಜಲ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ?ʼ ಎಂದು ಶೀರ್ಷಿಕೆ ಬರೆದುಕೊಂಡು ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಚಿತ್ರದಲ್ಲಿ ಮಿಸ್‌ ಆಗಿರುವ ಸಂಖ್ಯೆ ಯಾವುದು ಎಂದು ಇದರಲ್ಲಿ ಪ್ರಶ್ನೆ ಕೇಳಿದ್ದಾರೆ. ಇಲ್ಲಿರುವ ಚಿತ್ರದಲ್ಲಿ ಒಂದು ವೇಳೆ 11*11=>4, 22*22=>16 ಆದರೆ, 33*33=> ಎಷ್ಟು? ಎಂಬುದು ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದು ನಿಮಗಿರುವ ಸವಾಲು.

ಇಂದು ಬೆಳಿಗ್ಗೆ ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿದ್ದು, ಈಗಾಗಲೇ 880ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಲೈಕ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼಉತ್ತರ 36ʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼ81ʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼ36ʼ ಮೂರನೇ ವ್ಯಕ್ತಿ ಕೂಡ ಕಾಮೆಂಟ್‌ ಮಾಡಿದ್ದಾರೆ.

ʼ11x11 = 121. 1+2+1 = 4.

22x22 = 484. 4+8+4 = 16

33x33 = 1089. 1+0+8+9 = 18.

(1+1)x(1+1) = 4.

(2+2)x(2+2) = 16.

(3+3)x(3+3) = 36ʼ ಎಂದು ಉತ್ತರವನ್ನು ಬಿಡಿಸಿ ತೋರಿಸುವ ಮೂಲಕ ಕಾಮೆಂಟ್‌ ಮಾಡಿದ್ದಾರೆ ಎಕ್ಸ್‌ ಬಳಕೆದಾರರು.

ಹಲವು ಎಕ್ಸ್‌ ಬಳಕೆದಾರರು ಈ ಬ್ರೈನ್‌ ಟೀಸರ್‌ಗೆ 36 ಎಂದು ಉತ್ತರ ಹೇಳಿದ್ದಾರೆ. ಸರಿ ಅವರೆಲ್ಲರ ಉತ್ತರ ಬಿಡಿ. ಇದಕ್ಕೆ ನಿಮ್ಮ ಉತ್ತರವೇನು ಕಾಮೆಂಟ್‌ ಮಾಡಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

 Brain Teaser: ಇಲ್ಲಿರುವ ಬಾಕ್ಸ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು, ಕ್ಯಾಲ್ಕುಲೆಟರ್‌ ಬಳಸದೇ ಈ ಪಜಲ್‌ಗೆ ಉತ್ತರ ಹೇಳಿ

ಇಲ್ಲೊಂದು ಬಾಕ್ಸ್‌ ಇದೆ. ಇದರಲ್ಲಿ ಒಂದಿಷ್ಟು ನಂಬರ್‌ಗಳಿವೆ. ಕೊನೆಯ ಬಾಕ್ಸ್‌ನಲ್ಲಿ ಮಾತ್ರ ನಂಬರ್‌ ಇಲ್ಲ. ಮಿಸ್‌ ಆಗಿರುವ ಆ ನಂಬರ್‌ ಯಾವುದು ಎಂಬುದನ್ನು ಕಂಡುಹಿಡಯಬೇಕಾಗಿರುವುದು ನಿಮಗಿರುವ ಸವಾಲು. ಹಾಗಂತ ಕ್ಯಾಲ್ಕುಲೆಟರ್‌ ಬಳಸಿ ಲೆಕ್ಕಾಚಾರ ಮಾಡುವಂತಿಲ್ಲ.

Brain Teaser: ಪಜಲ್‌ ಪ್ರಿಯರಿಗಾಗಿ ಇಲ್ಲಿದೆ ಹೊಸ ಚಾಲೆಂಜ್‌, ಎ,ಬಿ,ಸಿಯ ಮೌಲ್ಯವೆಷ್ಟು; ಕ್ಯಾಲ್ಕುಲೇಟರ್‌ ಬಳಸದೇ ಉತ್ತರ ಹೇಳಿ

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ವೈರಲ್‌ ಸುಡುಕೊ ಒಂದಕ್ಕೆ ಉತ್ತರ ಕಂಡುಹಿಡಿಯಲು ನೆಟ್ಟಿಗರು ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ. ನೋಡಲು ಸರಳ ಎನ್ನಿಸುವ ಈ ಪಜಲ್‌ಗೆ ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಕಂಡುಹಿಡಿಯಬೇಕು, ನಿಮ್ಮಿಂದ ಸಾಧ್ಯವೇ ನೋಡಿ.

ವಿಭಾಗ