Brain Teaser: ಪಜಲ್‌ ಪ್ರಿಯರಿಗಾಗಿ ಇಲ್ಲಿದೆ ಹೊಸ ಚಾಲೆಂಜ್‌, ಎ,ಬಿ,ಸಿಯ ಮೌಲ್ಯವೆಷ್ಟು; ಕ್ಯಾಲ್ಕುಲೇಟರ್‌ ಬಳಸದೇ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಪಜಲ್‌ ಪ್ರಿಯರಿಗಾಗಿ ಇಲ್ಲಿದೆ ಹೊಸ ಚಾಲೆಂಜ್‌, ಎ,ಬಿ,ಸಿಯ ಮೌಲ್ಯವೆಷ್ಟು; ಕ್ಯಾಲ್ಕುಲೇಟರ್‌ ಬಳಸದೇ ಉತ್ತರ ಹೇಳಿ

Brain Teaser: ಪಜಲ್‌ ಪ್ರಿಯರಿಗಾಗಿ ಇಲ್ಲಿದೆ ಹೊಸ ಚಾಲೆಂಜ್‌, ಎ,ಬಿ,ಸಿಯ ಮೌಲ್ಯವೆಷ್ಟು; ಕ್ಯಾಲ್ಕುಲೇಟರ್‌ ಬಳಸದೇ ಉತ್ತರ ಹೇಳಿ

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ವೈರಲ್‌ ಸುಡುಕೊ ಒಂದಕ್ಕೆ ಉತ್ತರ ಕಂಡುಹಿಡಿಯಲು ನೆಟ್ಟಿಗರು ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ. ನೋಡಲು ಸರಳ ಎನ್ನಿಸುವ ಈ ಪಜಲ್‌ಗೆ ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಕಂಡುಹಿಡಿಯಬೇಕು, ನಿಮ್ಮಿಂದ ಸಾಧ್ಯವೇ ನೋಡಿ.

ಎ,ಬಿ,ಸಿಯ ಮೌಲ್ಯವೆಷ್ಟು?
ಎ,ಬಿ,ಸಿಯ ಮೌಲ್ಯವೆಷ್ಟು?

ಇತ್ತೀಚಿನ ದಿನಗಳಲ್ಲಿ ಹಲವರು ಗಣಿತದ ಪಜಲ್‌ಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೋಲ್‌ ಮಾಡುತ್ತಿರುತ್ತಾರೆ. ಯಾಕೆಂದರೆ ಒಮ್ಮೆ ನೀವು ಪಜಲ್‌ ಬಿಡಿಸುವ ಹವ್ಯಾಸ ರೂಢಿಸಿಕೊಂಡರೆ ಅದು ನಿಮಗೆ ಮತ್ತೆ ಮತ್ತೆ ಬಿಡಿಸಬೇಕು ಎನ್ನಿಸುತ್ತದೆ. ನಾವು ಇದನ್ನು ಬಿಡಿಸುವ ಜೊತೆಗೆ ಸ್ನೇಹಿತರು, ಸಂಬಂಧಿಕರಿಗೂ ಕಳುಹಿಸಿ ಅವರಿಂದಲೂ ಉತ್ತರ ಹುಡುಕುವಂತೆ ಕೇಳಿಕೊಳ್ಳುತ್ತೇವೆ. ನೀವು ಕೂಡ ಪಜಲ್‌ ಪ್ರೇಮಿಯಾಗಿದ್ದರೆ, ನಿಮಗಾಗಿ ಇಲ್ಲೊಂದು ಹೊಸ ಚಾಲೆಂಜ್‌ ಬಿಡಿ. ಇಲ್ಲೊಂದು ಸುಡುಕೊ ಇದೆ. ಇದಕ್ಕೆ ಉತ್ತರ ಹುಡುಕಬೇಕು. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ಈ ಸುಡುಕೊಗೆ ಕ್ಯಾಲ್ಕುಲೇಟರ್‌ ಬಳಸದೇ ನೀವು ಉತ್ತರ ಕಂಡುಹಿಡಿಯಬೇಕು. ನೀವು ಗಣಿತದಲ್ಲಿ ಶಾರ್ಪ್‌ ಅಂದ್ರೆ ಖಂಡಿತ ಇದಕ್ಕೆ ಕ್ಯಾಲ್ಕುಲೇಟರ್‌ ಇಲ್ಲದೇ ಉತ್ತರ ಹುಡುಕುತ್ತೀರಿ.

ʼಕ್ಯಾಲ್ಕುಲೇಟರ್‌ ಇಲ್ಲದೇ ಲೆಕ್ಕ ಮಾಡಿʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್‌ ಟೀಸರ್‌ ಅನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಇದರಲ್ಲಿ 4 ಬಾಕ್ಸ್‌ಗಳಿವೆ. ಅದರೊಳಗೆ ನಾಲ್ಕು ಚೌಕಗಳಿದ್ದು, ಪ್ರತಿ ಚೌಕದಲ್ಲೂ ಒಂದೊಂದು ಸಂಖ್ಯೆಯನ್ನು ಬರೆಯಲಾಗಿದೆ. ಉಳಿದ 3 ಚೌಕಗಳನ್ನು ಗಮನಿಸಿ, ನಾಲ್ಕನೇ ಚೌಕದಲ್ಲಿರುವ ಎ,ಬಿ,ಸಿಯ ಮೌಲ್ಯವೆಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು. ಆದರೆ ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಕಂಡುಹಿಡಿಯೋದು ಸ್ವಲ್ಪ ಕಷ್ಟಾನೇ ಬಿಡಿ, ಹಾಗಂತ ನೀವು ಗಣಿತದಲ್ಲಿ ಶಾರ್ಪ್‌ ಇದ್ರೆ ಇದೇನು ನಿಮಗೆ ಕಷ್ಟ ಅನ್ನಿಸೊಲ್ಲ, ಸರಿ ಇನ್ನೇಕೆ? ಉತ್ತರ ಹುಡುಕಲು ಟ್ರೈ ಮಾಡಿ.

ಈ ಬ್ರೈನ್‌ ಟೀಸರ್‌ ಅನ್ನು ಏಪ್ರಿಲ್‌ 17 ರಂದು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಹಲವರು ಲೈಕ್ಸ್‌, ಕಾಮೆಂಟ್‌ ಮಾಡಿದ್ದಾರೆ.

ಕಾಮೆಂಟ್‌ಗಳು ಹೀಗಿವೆ ನೋಡಿ

18+36+15=69ʼ ಎಂದು ಎಕ್ಸ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼ165ʼ ಎಂದು ಇನ್ನೊಬ್ಬರು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ. ʼ23ʼ ಸರಿಯಾದ ಉತ್ತರ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಎ=18, ಬಿ=36, ಸಿ=3ʼ ಎಂದು ನಾಲ್ಕನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ಅವರ ಕಥೆ ಬಿಡಿ, ನೀವು ಹೇಳಿ ಈ ಸುಡುಕೊದಲ್ಲಿ ಎ, ಬಿ ಹಾಗೂ ಸಿಯ ಮೌಲ್ಯವೆಷ್ಟು?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಈ ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ನಿಮ್ಮ ಮೆದುಳು ಶಾರ್ಪ್‌ ಇದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಹಂಚಿಕೊಳ್ಳಲಾದ ಬ್ರೈನ್‌ ಟೀಸರ್‌ವೊಂದು ನಿಮ್ಮ ಜಾಣ್ಮೆಯನ್ನು ಪರೀಕ್ಷಿಸುವುದು ಸುಳ್ಳಲ್ಲ. ಇಲ್ಲೊಂದು ವೃತ್ತವಿದ್ದು, ವೃತ್ತದಲ್ಲಿ ಒಂದಿಷ್ಟು ನಂಬರ್‌ಗಳಿವೆ. ಆದರೆ ಒಂದು ನಂಬರ್‌ ಮಾತ್ರ ಮಿಸ್ಸಿಂಗ್‌, ಆ ನಂಬರ್‌ ಯಾವುದು ಕಂಡುಹಿಡಿಯಬೇಕು, ಅದೂ ಕೇವಲ 20 ಸೆಕೆಂಡ್‌ನಲ್ಲಿ.

Brain Teaser: 18ರಲ್ಲಿ 9 ಕಳೆದು ಎ ಯಿಂದ ಭಾಗಿಸಿ 2 ಕೂಡಿಸಿ, 18 ಕಳೆದು ಎ ಯಿಂದ ಭಾಗಿಸಿದ್ರೆ ಉತ್ತರ 11, ಹಾಗಿದ್ರೆ ಎ ಮೌಲ್ಯವೆಷ್ಟು?

ಗಣಿತದ ಪಜಲ್‌ ಬಿಡಿಸುವುದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ಇಲ್ಲಿದೆ ನಿಮಗಾಗಿ ಒಂದು ಮೆದುಳಿಗೆ ಹುಳ ಬಿಡುವ ಲೆಕ್ಕಾಚಾರ. ಈ ಗಣಿತದ ಪಜಲ್‌ಗೆ ನೀವು ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಬೇಕು. ಗಣಿತದಲ್ಲಿ ಬುದ್ಧಿವಂತರಾದ್ರೆ ಎಯ ಮೌಲ್ಯವೆಷ್ಟು ಕಂಡುಹಿಡಿಯಿರಿ.

Whats_app_banner