ಕನ್ನಡ ಸುದ್ದಿ  /  Lifestyle  /  What Are The Causes Of Stage Zero Cancer

Stage Zero Cancer: ಸ್ಟೇಜ್‌ ಝೀರೋ ಕ್ಯಾನ್ಸರ್‌ ಎಂದರೇನು...ಈ ಕ್ಯಾನ್ಸರ್‌ ಲಕ್ಷಣಗಳು, ಚಿಕಿತ್ಸೆ ಏನು..?

ಸ್ಟೇಜ್‌ ಝೀರೋ ಕ್ಯಾನ್ಸರ್‌ಗೆ ಪೀಡಿತ ಪ್ರದೇಶದಿಂದ ಕ್ಯಾನ್ಸರ್ ಕೋಶವನ್ನು ತೆಗೆಯುವುದು ಆರಂಭಿಕ ಚಿಕಿತ್ಸೆಯಾಗಿದೆ. ಕೆಲವು ಸಂದರ್ಭಗಳಲ್ಲಿ ಹಾರ್ಮೋನ್ ಥೆರಪಿ ಅಥವಾ ರೇಡಿಯೇಷನ್ ​​ಥೆರಪಿ ಮಾಡಲಾಗುತ್ತದೆ.

ಸ್ಟೇಜ್‌ ಝೀರೋ ಕ್ಯಾನ್ಸರ್‌ ಲಕ್ಷಣಗಳು ಹಾಗೂ ಚಿಕಿತ್ಸೆ
ಸ್ಟೇಜ್‌ ಝೀರೋ ಕ್ಯಾನ್ಸರ್‌ ಲಕ್ಷಣಗಳು ಹಾಗೂ ಚಿಕಿತ್ಸೆ

ಕ್ಯಾನ್ಸರ್ ಒಂದು ಭಯಾನಕ ರೋಗ. ಆದರೂ ಆರಂಭಿಕ ಹಂತದಲ್ಲಿ ಈ ರೋಗ ಪತ್ತೆಯಾದರೆ, ಬದುಕುಳಿಯುವ ಸಾಧ್ಯತೆಗಳು ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಕ್ಯಾನ್ಸರ್ ವಿವಿಧ ಹಂತಗಳನ್ನು ಹೊಂದಿದೆ. ಅದರಲ್ಲಿ ಸ್ಟೇಜ್‌ ಝೀರೋ ಕೂಡಾ ಒಂದು. ಕ್ಯಾನ್ಸರ್ ಎಷ್ಟು ಬೆಳೆದಿದೆ ಎಂಬುದರ ಆಧಾರದ ಮೇಲೆ ಇದನ್ನು ಹೇಳಲಾಗುತ್ತದೆ. ಸ್ಟೇಜ್‌ ಝೀರೋ, ಕ್ಯಾನ್ಸರ್‌ನ ಆರಂಭಿಕ ಹಂತವಾಗಿದೆ.

ಕ್ಯಾನ್ಸರ್‌ನಂತೆ ಕಾಣುವ ಅಸಹಜ ಜೀವಕೋಶಗಳು ಪತ್ತೆಯಾದಾಗ ಕ್ಯಾನ್ಸರನ್ನು ಸ್ಟೇಜ್‌ ಝೀರೋ ಎಂದು ನಿರ್ಣಯಿಸಬಹುದು. ಈ ಹಂತದ ಕ್ಯಾನ್ಸರ್‌ಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಸ್ಟೇಜ್‌ ಝೀರೋ ಹೊಂದಿರುವ ಜನರು ಇತರ ಹಂತದ ಕ್ಯಾನ್ಸರ್‌ ಹೊಂದಿರುವರಿಗಿಂತ ಐದು ವರ್ಷಗಳ ಕಾಲ ಹೆಚ್ಚು ಬದುಕಬಹುದು.

ವೈದ್ಯಕೀಯ ಭಾಷೆಯಲ್ಲಿ, ಕಾರ್ಸಿನೋಮ ಇನ್ ಸಿಟು ಎಂಬುದು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುವ ಮತ್ತು ದೇಹದ ಇತರ ಭಾಗಗಳಿಗೆ ಹರಡದ ಕ್ಯಾನ್ಸರ್ ಆಗಿದೆ. ಇದು ಕ್ಯಾನ್ಸರ್‌ನ ಪ್ರಾಥಮಿಕ ಹಂತವಾಗಿದೆ. ಆರಂಭಿಕ ಹಂತದಲ್ಲಿ ತಿಳಿದು ಬಂದರೆ ಕನಿಷ್ಠ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಇವುಗಳಲ್ಲಿ ಯಾವುದೂ ಮಾರಣಾಂತಿಕ ಗೆಡ್ಡೆಯನ್ನು ಹೊಂದಿರುವುದಿಲ್ಲ. ಈ ಹಂತದಲ್ಲಿ ಅಸಹಜ ಜೀವಕೋಶಗಳು ಕ್ಯಾನ್ಸರ್ ಆಗಿ ರೂಪಾಂತರಗೊಳ್ಳುವ ಸಾಧ್ಯತೆ ಹೆಚ್ಚು. ಅಂದರೆ ಕ್ಯಾನ್ಸರ್ ಆಗಿ ರೂಪಾಂತರಗೊಳ್ಳಲು ಸ್ವಲ್ಪ ಸಮಯ ಹಿಡಿಯಬಹುದು ಎಂದು ಅಪೊಲೊ ಕ್ಯಾನ್ಸರ್ ಸೆಂಟರ್ ಕನ್ಸಲ್ಟೆಂಟ್ ಮೆಡಿಕಲ್ ಆಂಕೊಲಾಜಿ ಡಾ. ತೇಜಿಂದರ್ ಸಿಂಗ್ ವಿವರಿಸಿದ್ದಾರೆ.

ಗಡ್ಡೆ, ಚರ್ಮದಲ್ಲಿ ಬದಲಾವಣೆ, ಅಸಹಜ ಯೋನಿ ರಕ್ತಸ್ರಾವ, ಬ್ರೆಸ್ಟ್‌ ನಿಪ್ಪಲ್‌ಗಳಿಂದ ಕ್ಯೂ ಬರುವುದು, ಆಹಾರವನ್ನು ನುಂಗುವಾಗ ನೋವಾಗುವುದು, ಮೂತ್ರಕೋಶ ಅಥವಾ ಕರುಳಿನಲ್ಲಿ ಸಮಸ್ಯೆ ಇವು ಸ್ಟೇಜ್‌ ಝೀರೋ ಕ್ಯಾನ್ಸರ್‌ನ ಲಕ್ಷಣಗಳಾಗಿವೆ. ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಅಂಕಿ ಅಂಶಗಳ ಪ್ರಕಾರ, ಸ್ಟೇಜ್‌ ಝೀರೋ ಕ್ಯಾನ್ಸರ್‌ ಪತ್ತೆಯಾದ ಸಮಯದಿಂದ, 99 ಪ್ರತಿಶತ ಪ್ರಕರಣಗಳು ಐದು ವರ್ಷಗಳವರೆಗೆ ಬದುಕುಳಿಯಬಹುದು ಎನ್ನಲಾಗಿದೆ.

ಸ್ಟೇಜ್‌ ಝೀರೋ ಕ್ಯಾನ್ಸರ್‌ಗೆ ಪೀಡಿತ ಪ್ರದೇಶದಿಂದ ಕ್ಯಾನ್ಸರ್ ಕೋಶವನ್ನು ತೆಗೆಯುವುದು ಆರಂಭಿಕ ಚಿಕಿತ್ಸೆಯಾಗಿದೆ. ಕೆಲವು ಸಂದರ್ಭಗಳಲ್ಲಿ ಹಾರ್ಮೋನ್ ಥೆರಪಿ ಅಥವಾ ರೇಡಿಯೇಷನ್ ​​ಥೆರಪಿ ಮಾಡಲಾಗುತ್ತದೆ. ಇಲ್ಲಿ ತಿಳಿಸಿದ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಮತ್ತಷ್ಟು ಲೈಫ್‌ಸ್ಟೈಲ್‌ ಸುದ್ದಿಗಳು ಇಲ್ಲಿವೆ

ಹೆಚ್ಚು ದ್ರವ ಸೇವಿಸದಿದ್ರೂ ಆಗ್ಗಾಗ್ಗೆ ಮೂತ್ರ ವಿಸರ್ಜಿಸಬೇಕು ಅನ್ನಿಸುತ್ತಾ? ನಿಮಗೆ ಈ ತೊಂದರೆ ಇರಬಹುದು!

ಮಧುಮೇಹವು ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಉಂಟುಮಾಡುತ್ತದೆ. ಅವರು ಹೆಚ್ಚು ಗ್ಲೂಕೋಸ್ ಫಿಲ್ಟರ್ ಮಾಡಲು ಮೂತ್ರಪಿಂಡದ ಮೇಲೆ ಒತ್ತಡವನ್ನು ಹಾಕುತ್ತದೆ. ಇದರಿಂದ ನೀವು ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ, ಮೂತ್ರಪಿಂಡಗಳ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರುವ ಅಪಾಯವಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

ದುರ್ಬಲ ಮೂತ್ರಪಿಂಡಕ್ಕೆ ಈ ಆಹಾರಗಳು ಬಹಳ ಸಹಾಯಕ..ಅಗತ್ಯವಿರುವವರಿಗೆ ತಿಳಿಸಿಕೊಡಿ

ಮೂತ್ರಪಿಂಡಗಳು 55 ಗ್ಯಾಲನ್ ರಕ್ತವನ್ನು ಫಿಲ್ಟರ್ ಮಾಡುತ್ತವೆ ಮತ್ತು ಪ್ರತಿದಿನ ಅದರಿಂದ ತ್ಯಾಜ್ಯವನ್ನು ತೆಗೆದುಹಾಕುತ್ತವೆ. ಮೂತ್ರಪಿಂಡಗಳು ದೇಹದಲ್ಲಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಸಂಗ್ರಹಿಸುವುದನ್ನು ತಡೆಯುತ್ತದೆ. ಮತ್ತಷ್ಟು ಮಾಹಿತಿಗೆ ಈ ಲಿಂಕ್‌ ಒತ್ತಿ.

ವಿಭಾಗ