ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Imran Khan: ದೇಶದ್ರೋಹ ಆರೋಪದಡಿ 10 ವರ್ಷ ನನ್ನ ಜೈಲಿನಲ್ಲಿ ಇಡಲು ಸೇನೆ ಪ್ಲಾನ್ ಮಾಡಿತ್ತು; ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್

Imran Khan: ದೇಶದ್ರೋಹ ಆರೋಪದಡಿ 10 ವರ್ಷ ನನ್ನ ಜೈಲಿನಲ್ಲಿ ಇಡಲು ಸೇನೆ ಪ್ಲಾನ್ ಮಾಡಿತ್ತು; ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್

ನನ್ನ ರಕ್ತದ ಕೊನೆಯ ಹನಿ ಇರುವವರಿಗೆ ಹಖೀಕಿ ಆಜಾದಿ (ನಿಜವಾದ ಸ್ವತಂತ್ರ)ಗಾಗಿ ಹೋರಾಡುತ್ತೇನೆ. ಇದು ಪಾಕಿಸ್ತಾನದ ಜನತೆಗೆ ನನ್ನ ಸಂದೇಶ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ವಂಚಕರ ಗುಲಾಮರಾಗುವುದಕ್ಕಿಂತ ಸಾವೇ ಮೇಲು ಅಂತ ಹೇಳಿದ್ದಾರೆ.

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ (REUTERS)
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ (REUTERS)

ನವದೆಹಲಿ: ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಬಂಧನವಾಗಿ ನಂತರ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan), ಅಲ್ಲಿನ ಸೇನೆ (Pakistan Army) ಹಾಗೂ ಪ್ರಧಾನಿ ಶೆಹಬಾಜ್ ಷರೀಫ್ (Pakistan PM Shehbaz Sharif) ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಂದು (ಮೇ 15, ಸೋಮವಾರ) ಬೆಳಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಇಮ್ರಾನ್ ಖಾನ್, ದೇಶದ್ರೋಹ ಆರೋಪದಡಿಯಲ್ಲಿ ನನ್ನನ್ನು ಮುಂದಿನ 10 ವರ್ಷಗಳ ಕಾಲ ಜೈಲಿನಲ್ಲಿ ಇರಿಸಲು ದೇಶದ ಸೇನೆ ಪ್ಲಾನ್ ಮಾಡಿಕೊಂಡಿದೆ. ಇದೀಗ ಸಂಪೂರ್ಣ ಲಂಡನ್ ಪ್ಲಾನ್ ಹೊರಬಂದಿದೆ ಎಂದು ಆರೋಪಿಸಿದ್ದಾರೆ.

ನಾನು ಜೈಲಿನೊಳಗೆ ಇದ್ದಾಗ ವಿಚಾರಣೆಯ ನೆಪವನ್ನು ಬಳಸಿಕೊಂಡು ಅವರೇ ನ್ಯಾಯಧೀಶರು, ತೀರ್ಪುಗಾರರು ಹಾಗೂ ಮರಣದಂಡನೆ ವಿಧಿಸುವ ಪಾತ್ರಧಾರಿಗಳಂತೆ ವರ್ತಿಸಿದ್ದಾರೆ.

ಬುಶ್ರಾ ಬೇಗಂ (ಇಮ್ರಾನ್ ಖಾನ್ ಪತ್ನಿ) ಅವರನ್ನೂ ಜೈಲಿಗೆ ಹಾಕಿ ಮುಂದಿನ 10 ವರ್ಷಗಳ ಕಾಲ ನನ್ನನ್ನು ಒಳಗೆ ಇಡಲು ಕೆಲವು ದೇಶದ್ರೋಹದ ಕಾನೂನನ್ನು ಬಳಸಿಕೊಂಡು ಅವಮಾನಿಸುವುದು ಇವರ ಯೋಜನೆಯಾಗಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ದೂರಿದ್ದಾರೆ.

100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಇರುವ 70 ವರ್ಷದ ನಾಯಕ ಇಮ್ರಾನ್ ಖಾನ್, ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ. ದೇಶದ ನಾಗರಿಕರು ಹಾಗೂ ಪಿಟಿಐ ಕಾರ್ಯಕರ್ತರ ಮೇಲಿನ ಉದ್ದೇಶಪೂರ್ವಕ ಭಯೋತ್ಪಾದನೆ ಆರೋಪವನ್ನು ಸಾಬೀತು ಮಾಡಬೇಕಿದೆ.

ಎರಡನೇಯದಾಗಿ ಮಾಧ್ಯಮಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದ್ದು, ಅವರ ಮೂಗು ಮಚ್ಚಲಾಗಿದೆ. ಚಾದರ್ ಮತ್ತು ಚಾರ್ ದೇವಾರಿಯ ಪ್ರವಿತ್ರತೆಯನ್ನು ಉಲ್ಲಂಘಿಸಿರುವ ಅಪರಾಧ ಮಾಡಿರುವಂತೆ ಬಿಂಬಿಸಲಾಗುತ್ತಿದೆ. ಆದರೆ ಇದನ್ನು ಉಲ್ಲಂಘಿಸಿಲ್ಲ ಎಂದು ಇಮ್ರಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಇದು ಉದ್ದೇಶಪೂರ್ವಕವಾಗಿದ್ದು, ಜನರಲ್ಲಿ ತುಂಬಾ ಭಯವನ್ನು ಹುಟ್ಟುಹಾಕುವ ಪ್ರಯತ್ನವಾಗಿದೆ. ಅವರು ನಾಳೆ ನನ್ನನ್ನು ಬಂಧಿಸಲು ಬಂದಾಗ ಜನರು ಮನೆಯಿಂದ ಹೊರಗಡೆ ಬರುವುದಿಲ್ಲ. ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುತ್ತಾರೆ. ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುತ್ತಾರೆ. ಇದರ ಜೊತೆಗೆ ನಾವು ಮಾತನಾಡುವಾಗ ಮನೆಗಳನ್ನು ಒಡೆಯಲಾಗುತ್ತದೆ. ನಾಚಿಕೆ ಇಲ್ಲದೆ ಪೊಲೀಸರು ಮನೆಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ತಮ್ಮ ಲಾಹೋರ್ ನಿವಾಸದಲ್ಲಿ ತಮ್ಮ ಪಕ್ಷವಾಗಿರುವ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕರ ಸಭೆ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಪಾಕಿಸ್ತಾನದ ಜನತೆಗೆ ತಮ್ಮ ಸಂದೇಶವನ್ನು ನೀಡಿರುವ ಖಾನ್, ನನ್ನ ರಕ್ತದ ಕೊನೆಯ ಹನಿ ಇರುವವರಿಗೆ ಹಖೀಕಿ ಆಜಾದಿ (ನಿಜವಾದ ಸ್ವತಂತ್ರ)ಗಾಗಿ ಹೋರಾಡುತ್ತೇನೆ. ಯಾಕೆಂದರೆ ಈ ವಂಚಕರ ಗುಲಾಮರಾಗುವುದಕ್ಕಿಂತ ಸಾವು ನನಗೆ ಯೋಗ್ಯವಾಗಿದೆ ಎಂದು ಹೇಳಿದ್ದಾರೆ.

ನಾವು ಒಬ್ಬನಿಗೆ (ಅಲ್ಲಾ) ಹೊರತುಪಡಿಸಿ ಯಾರಿಗೂ ನಮಸ್ಕಾರ ಮಾಡೋದಿಲ್ಲ. ನಾವು ಭಯದ ಮೂರ್ತಿಗೆ ಸಲಾಂ ಹಾಕಿದರೆ ಮುಂದಿನ ಪೀಳಿಗೆಗೆ ಅವಮಾನ ಆಗುತ್ತೆ. ಅನ್ಯಾಯ ಹಾಗೂ ಕಾಡಿನ ಕಾನೂನು ಜಾರಿಯಲ್ಲಿರುವ ದೇಶಗಳು ಹೆಚ್ಚುಕಾಲ ಉಳಿಯೋದಿಲ್ಲ ಎಂದು ಇಮ್ರಾನ್ ಖಾನ್ ಅಲ್ಲಿನ ಸೇನೆ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಶುಕ್ರವಾರ (ಮೇ 12) ಜಾಮೀನು ಪಡೆದಿದ್ದರೂ ಇಮ್ರಾನ್ ಖಾನ್‌ಗೆ ಮತ್ತೆ ಬಂಧನದ ಭೀತಿ ತಪ್ಪಿಲ್ಲ. ಇಸ್ಲಾಮಾಬಾದ್ ಹೈಕೋರ್ಟ್‌ ಆವರಣದಲ್ಲೇ ಕೆಲವು ಗಂಟೆಗಳ ಕಾಲ ಇದ್ದ ಇಮ್ರಾನ್ ಖಾನ್ ಶನಿವಾರ ಲಾಹೋರ್‌ನಲ್ಲಿರುವ ತಮ್ಮ ಮನೆಗೆ ವಾಪಸ್ ಆಗಿದ್ದಾರೆ.

IPL_Entry_Point

ವಿಭಾಗ