Billionaires in Bengaluru: ಶತಕೋಟ್ಯಧಿಪತಿಗಳ ಕಾರುಬಾರು ಮುಂಬೈನಲ್ಲೇ ಹೆಚ್ಚು; ಮತ್ತೆ ದೆಹಲಿ, ಬೆಂಗಳೂರುಗಳದ್ದೇನು ಕಥೆ!?
Billionaires in Bengaluru: ಎಂ3ಎಂ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2023 ಪ್ರಕಟವಾಗಿದ್ದು, ಮುಂಬೈನಲ್ಲಿ ಅತಿಹೆಚ್ಚು 66 ಶತಕೋಟ್ಯಧಿಪತಿಗಳಿದ್ದಾರೆ. ನಂತರದ ಸ್ಥಾನದಲ್ಲಿ ನವದೆಹಲಿ ಮತ್ತು ಬೆಂಗಳೂರು ಇವೆ. ನವದೆಹಲಿ 39 ಬಿಲಿಯನೇರ್‌ಗಳನ್ನು ಹೊಂದಿದ್ದರೆ, ಬೆಂಗಳೂರು 21 ಬಿಲಿಯನೇರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ
ಎಂ3ಎಂ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2023 ಪ್ರಕಟವಾಗಿದ್ದು, ಭಾರತದಲ್ಲಿ 187 ಶತಕೋಟ್ಯಧಿಪತಿಗಳು ಇರುವುದನ್ನು ಬಹಿರಂಗಪಡಿಸಿದೆ. ಇದು ವಾರ್ಷಿಕ ಪಟ್ಟಿಯಾಗಿದ್ದು, ಶತಕೋಟ್ಯಧಿಪತಿಗಳ ಸಂಖ್ಯೆ ವಿಚಾರದಲ್ಲಿ ಜಾಗತಿಕಮಟ್ಟದಲ್ಲಿ ಭಾರತ 6ನೇ ಸ್ಥಾನದಲ್ಲಿದೆ.
ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ ಮುಂಬೈ 66 ಬಿಲಿಯನೇರ್‌ಗಳಿಗೆ ನೆಲೆಯಾಗಿದೆ. ಇದು ಭಾರತದಲ್ಲಿನ ಅಮೆರಿಕನ್ ಡಾಲರ್ ಬಿಲಿಯನೇರ್‌ಗಳ ಶ್ರೇಯಾಂಕವಾಗಿದೆ. ಮುಂಬೈ ನಂತರದ ಸ್ಥಾನದಲ್ಲಿ ನವದೆಹಲಿ ಮತ್ತು ಬೆಂಗಳೂರು ಇವೆ. ನವದೆಹಲಿ 39 ಬಿಲಿಯನೇರ್‌ಗಳನ್ನು ಹೊಂದಿದ್ದರೆ, ಬೆಂಗಳೂರು 21 ಬಿಲಿಯನೇರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಭಾರತದಲ್ಲಿ 187 ಶತಕೋಟ್ಯಧಿಪತಿಗಳು ಒಟ್ಟು 24 ನಗರ/ಪಟ್ಟಣಗಳಲ್ಲಿ ನೆಲೆಸಿದ್ದಾರೆ. ಬಿಲಿಯನೇರ್ ನೆಲೆಸಿದ ನಗರಗಳ ಸಂಖ್ಯೆಯನ್ನು ಆಧರಿಸಿ, ಭಾರತವು ವಿಶ್ವದಲ್ಲಿ 6 ನೇ ಸ್ಥಾನದಲ್ಲಿದೆ. ಈ ಕೋಷ್ಟಕವು ಭಾರತದಲ್ಲಿ ನಗರೀಕರಣ ಮತ್ತು ಅದರ ಪರಿಣಾಮವಾಗಿ ಸಂಪತ್ತಿನ ಸೃಷ್ಟಿಗೆ ಅವಕಾಶವನ್ನು ತೋರಿಸುತ್ತದೆ. 2023 ರ M3M ಹುರುನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಉತ್ಪಾದಿಸುವ ಟಾಪ್ 25 ಜಾಗತಿಕ ನಗರಗಳಲ್ಲಿ ಮುಂಬೈ, ನವದೆಹಲಿ ಮತ್ತು ಬೆಂಗಳೂರು ಕಾಣಿಸಿಕೊಂಡಿವೆ.
ಗಮನಿಸಬಹುದಾದ ಸುದ್ದಿಗಳು
ಯೂತ್ ಫಾರ್ ಇಂಡಿಯಾ ಫೆಲೋಷಿಪ್‌ಗೆ ಅರ್ಜಿ ಆಹ್ವಾನ
Youth for India Fellowship: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ 11ನೇ ಆವೃತ್ತಿಯ ಯೂತ್ ಫಾರ್ ಇಂಡಿಯಾ ಫೆಲೋಷಿಪ್‌ಗೆ ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣ (youthforindia.org)ಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
ನೇಣುಬಿಗಿದು ಮರಣದಂಡನೆ ವಿಧಿಸುವುದು ಮಾನವ ಘನತೆಗೆ ಸೇರಿದ್ದಲ್ಲ!; ಸುಪ್ರೀಂ ಕೋರ್ಟ್ ಹೇಳಿರುವುದೇನು?
Hanging Death penalty: ʻಮಾನವ ಘನತೆಗೆ ಹೆಚ್ಚು ಆದ್ಯತೆʼ ನೀಡುವಂತಹ, ಕಡಿಮೆ ನೋವು ಕೊಡುವಂತಹ ವಿಭಿನ್ನ ವೈಜ್ಞಾನಿಕ ಮರಣದಂಡನೆ ವಿಧಾನಗಳು ಇದೆ ಎಂದು ಹೇಳುವುದಾದರೆ, ನೇಣುಬಿಗಿದು ಮರಣದಂಡನೆ ವಿಧಿಸುವುದು ಅಸಾಂವಿಧಾನಿಕ ಎಂದು ಘೋಷಿಸಬಹುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
ವೋಟರ್ ಐಡಿ- ಆಧಾರ್ ಸಂಖ್ಯೆ ಜೋಡಣೆಗೆ ಡೆಡ್‌ಲೈನ್ ವಿಸ್ತರಣೆ
Voter ID-Aadhaar Linking: ಬಳಕೆದಾರರು ತಮ್ಮ ಆಧಾರ್ ಜತೆಗೆ ವೋಟರ್ ಐಡಿ ಜೋಡಿಸುವ ಕೆಲಸವನ್ನು ಆನ್‌ಲೈನ್ ಮೂಲಕ ಅಥವಾ ಎಸ್‌ಎಂಎಸ್ ಮೂಲಕ 2024ರ ಮಾರ್ಚ್ 31ರ ಒಳಗೆ ಪೂರ್ಣಗೊಳಿಸಬೇಕು. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ ಅದನ್ನು ರದ್ದುಗೊಳಿಸುವುದಕ್ಕೆ ಇದು ನೆರವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಪೂರ್ಣ ವರದಿ ಇಲ್ಲಿದೆ ಕ್ಲಿಕ್ ಮಾಡಿ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ5000 ಅಪ್ರೆಂಟೀಸ್ ಹುದ್ದೆಗಳು; ಅರ್ಜಿ ಸಲ್ಲಿಸಲು ಏ.3 ಕೊನೇ ದಿನ
Central Bank Apprentice: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸದ್ಯ 5000 ಅಪ್ರೆಂಟೀಸ್ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ ಮಾರ್ಚ್ 20. ಅಂದರೆ ಈಗಾಗಲೇ ಅರ್ಜಿ ಸಲ್ಲಿಸುವಿಕೆ ಪ್ರಕ್ರಿಯೆ ಶುರುವಾಗಿದ್ದು, ಏಪ್ರಿಲ್ 3 ಕೊನೇ ದಿನ. ಏಪ್ರಿಲ್ ಎರಡನೇ ವಾರದಲ್ಲಿ ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ