ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Voter Id-aadhaar Linking: ವೋಟರ್‌ ಐಡಿ- ಆಧಾರ್‌ ಸಂಖ್ಯೆ ಜೋಡಣೆಗೆ ಡೆಡ್‌ಲೈನ್‌ ವಿಸ್ತರಣೆ

Voter ID-Aadhaar Linking: ವೋಟರ್‌ ಐಡಿ- ಆಧಾರ್‌ ಸಂಖ್ಯೆ ಜೋಡಣೆಗೆ ಡೆಡ್‌ಲೈನ್‌ ವಿಸ್ತರಣೆ

Voter ID-Aadhaar Linking: ಬಳಕೆದಾರರು ತಮ್ಮ ಆಧಾರ್‌ ಜತೆಗೆ ವೋಟರ್‌ ಐಡಿ ಜೋಡಿಸುವ ಕೆಲಸವನ್ನು ಆನ್‌ಲೈನ್‌ ಮೂಲಕ ಅಥವಾ ಎಸ್‌ಎಂಎಸ್‌ ಮೂಲಕ 2024ರ ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸಬೇಕು. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ ಅದನ್ನು ರದ್ದುಗೊಳಿಸುವುದಕ್ಕೆ ಇದು ನೆರವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಆಧಾರ್‌ (ಸಾಂಕೇತಿಕ ಚಿತ್ರ)
ಆಧಾರ್‌ (ಸಾಂಕೇತಿಕ ಚಿತ್ರ) (HT)

ವೋಟರ್‌ ಐಡಿ ಮತ್ತು ಆಧಾರ್‌ ಜೋಡಿಸುವುದಕ್ಕೆ ಇದ್ದ ಅಂತಿಮ ಗಡುವನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಂತೆ, ಈ ವರ್ಷ ಏಪ್ರಿಲ್‌ 1ಕ್ಕೆ ಇದ್ದ ಕೊನೇ ದಿನ 2024ರ ಮಾರ್ಚ್‌ 31ರ ತನಕ ವಿಸ್ತರಣೆ ಆಗಿದೆ. ಮತದಾರರು ಈ ಅವಧಿಯನ್ನು ಸದುಪಯೋಗ ಮಾಡಿಕೊಂಡು ತಮ್ಮ ಮತದಾರರ ಚೀಟಿ ಮತ್ತು ಆಧಾರ್‌ ಜೋಡಿಸುವ ಕೆಲಸವನ್ನು ಮಾಡಬೇಕು ಎಂದು ಸರ್ಕಾರ ಕೇಳಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಬಳಕೆದಾರರು ತಮ್ಮ ಆಧಾರ್‌ ಜತೆಗೆ ವೋಟರ್‌ ಐಡಿ ಜೋಡಿಸುವ ಕೆಲಸವನ್ನು ಆನ್‌ಲೈನ್‌ ಮೂಲಕ ಅಥವಾ ಎಸ್‌ಎಂಎಸ್‌ ಮೂಲಕ 2024ರ ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸಬೇಕು. ಆಧಾರ್‌ ಜತೆಗೆ ವೋಟರ್‌ ಐಡಿ ಜೋಡಿಸುವ ಕೆಲಸ ಕಡ್ಡಾಯ ಅಲ್ಲದೇ ಹೋದರೂ, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ ಅದನ್ನು ರದ್ದುಗೊಳಿಸುವುದಕ್ಕೆ ಇದು ನೆರವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

"ಕೇಂದ್ರ ಸರ್ಕಾರವು ಈ ಮೂಲಕ ಕಾನೂನು ಮತ್ತು ನ್ಯಾಯ ಸಚಿವಾಲಯ (ಶಾಸಕಾಂಗ ಇಲಾಖೆ), ಸಂಖ್ಯೆ S.O.2893(E), ದಿನಾಂಕ 17ನೇ ಜೂನ್ 2022 ರಲ್ಲಿ ಭಾರತ ಸರ್ಕಾರದ ಅಧಿಸೂಚನೆಯಲ್ಲಿ ಈ ಕೆಳಗಿನ ತಿದ್ದುಪಡಿಯನ್ನು ಮಾಡುತ್ತದೆ. ಅವುಗಳೆಂದರೆ: - ಈ ಅಧಿಸೂಚನೆಯಲ್ಲಿ, ಪದಗಳು ಮತ್ತು ಅಂಕಿಅಂಶಗಳು, "1ನೇ ಏಪ್ರಿಲ್ 2023" ಪದಗಳು ಮತ್ತು ಅಂಕಿಅಂಶಗಳಿಗೆ, "31 ಮಾರ್ಚ್ 2024" ಅನ್ನು ಬದಲಿಸಲಾಗುತ್ತದೆ," ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ಲೋಕಸಭೆಯಲ್ಲಿ 2021ರ ಡಿಸೆಂಬರ್‌ನಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ ನಂತರ ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದನ್ನು ಅಧಿಕೃತಗೊಳಿಸಲಾಗಿದೆ.

ಆನ್‌ಲೈನ್‌ನಲ್ಲಿ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆಯ ನೋಟ ಇಲ್ಲಿದೆ:

ಸ್ಟೆಪ್‌ 1 - ನ್ಯಾಷನಲ್‌ ವೋಟರ್ಸ್‌ ಸರ್ವೀಸ್‌ ಪೋರ್ಟಲ್‌ (ಎನ್‌ವಿಎಸ್‌ಪಿ)ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ. ಅದಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

ಸ್ಟೆಪ್‌ 2 - ಆ ಪೋರ್ಟಲ್‌ಗೆ ಲಾಗ್‌ ಇನ್‌ ಆಗಿ

ಸ್ಟೆಪ್‌ 3 - “ಸರ್ಚ್‌ ಇನ್‌ ಇಲೆಕ್ಟೋರಲ್‌ ರೋಲ್‌” ಆಪ್ಶನ್‌ಗೆ ಹೋಗಿ

ಸ್ಟೆಪ್‌ 4 - ಅಲ್ಲಿ ವಿವರ ತುಂಬಿ ಮತ್ತು ಆಧಾರ್‌ ನಂಬರ್‌ ಎಂಟರ್‌ ಮಾಡಿ

ಸ್ಟೆಪ್‌ 5 - ಆಗ ಬಳಕೆದಾರರ ನೋಂದಾಯಿತ ಮೊಬೈಲ್‌ಗೆ ಅಥವಾ ನೋಂದಾಯಿತ ಇಮೇಲ್‌ಗೆ ಒಂದು ಒಟಿಪಿ ಬರುತ್ತದೆ. ಇದನ್ನು ಉಪಯೋಗಿಸಿಕೊಂಡು ಖಾತೆ ದೃಢೀಕರಣ ಮಾಡಬೇಕು.

ಸ್ಟೆಪ್‌ 6 - ಒಟಿಪಿ ಎಂಟರ್‌ ಮಾಡಿ. ಇದರೊಂದಿಗೆ ನಿಮ್ಮ ವೋಟರ್‌ ಐಡಿ ಮತ್ತು ಆಧಾರ್‌ ಸಂಖ್ಯೆ ಜೋಡಣೆ ಪ್ರಕ್ರಿಯೆ ಪೂರ್ತಿಯಾಗುತ್ತದೆ.

IPL_Entry_Point