Central Bank Apprentice: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ5000 ಅಪ್ರೆಂಟೀಸ್‌ ಹುದ್ದೆಗಳು; ಅರ್ಜಿ ಸಲ್ಲಿಸಲು ಏ.3 ಕೊನೇ ದಿನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Central Bank Apprentice: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ5000 ಅಪ್ರೆಂಟೀಸ್‌ ಹುದ್ದೆಗಳು; ಅರ್ಜಿ ಸಲ್ಲಿಸಲು ಏ.3 ಕೊನೇ ದಿನ

Central Bank Apprentice: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ5000 ಅಪ್ರೆಂಟೀಸ್‌ ಹುದ್ದೆಗಳು; ಅರ್ಜಿ ಸಲ್ಲಿಸಲು ಏ.3 ಕೊನೇ ದಿನ

Central Bank Apprentice: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸದ್ಯ 5000 ಅಪ್ರೆಂಟೀಸ್‌ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ ಮಾರ್ಚ್‌ 20. ಅಂದರೆ ಈಗಾಗಲೇ ಅರ್ಜಿ ಸಲ್ಲಿಸುವಿಕೆ ಪ್ರಕ್ರಿಯೆ ಶುರುವಾಗಿದ್ದು, ಏಪ್ರಿಲ್‌ 3 ಕೊನೇ ದಿನ. ಏಪ್ರಿಲ್‌ ಎರಡನೇ ವಾರದಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಯಲಿದೆ.

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ
ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನಲ್ಲಿರುವ ಅಪ್ರೆಂಟೀಸ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧಿಕೃತ ಜಾಲತಾಣ ʻcentralbankofindia.co.inʼ ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸದ್ಯ 5000 ಅಪ್ರೆಂಟೀಸ್‌ ಹುದ್ದೆಗಳು ಖಾಲಿ ಇವೆ.

ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ ಮಾರ್ಚ್‌ 20. ಅಂದರೆ ಈಗಾಗಲೇ ಅರ್ಜಿ ಸಲ್ಲಿಸುವಿಕೆ ಪ್ರಕ್ರಿಯೆ ಶುರುವಾಗಿದ್ದು, ಏಪ್ರಿಲ್‌ 3 ಕೊನೇ ದಿನ. ಏಪ್ರಿಲ್‌ ಎರಡನೇ ವಾರದಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಯಲಿದೆ. ಅದಾದ ಬಳಿಕ ಮುಂದಿನ ಹಂತದ ನೇಮಕ ಪ್ರಕ್ರಿಯೆ ನಡೆಯಲಿದೆ.

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳ ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳು ಹೀಗಿವೆ -

ಅರ್ಹತಾ ಮಾನದಂಡ

ಬ್ಯಾಂಕಿನ ಅಪ್ರೆಂಟೀಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ವಿದ್ಯಾರ್ಹತೆಗಳನ್ನು ಹೊಂದಿರಬೇಕು. ಅಭ್ಯರ್ಥಿಯ ವಯೋಮಿತಿ 20 ವರ್ಷದಿಂದ 28 ವರ್ಷಗಳ ನಡುವೆ ಇರಬೇಕು.

ಆಯ್ಕೆ ಪ್ರಕ್ರಿಯೆ

ಬ್ಯಾಂಕಿನ ಅಪ್ರೆಂಟೀಸ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಸ್ಥಳೀಯ ಭಾಷೆಯ ಪುರಾವೆಯನ್ನು ಹೊಂದಿರುತ್ತದೆ. ಆನ್‌ಲೈನ್ ಲಿಖಿತ ಪರೀಕ್ಷೆಯು ಐದು ಭಾಗಗಳನ್ನು ಒಳಗೊಂಡಿರುತ್ತದೆ ಅಂದರೆ -

1. ಕ್ವಾಂಟಿಟೇಟಿವ್, ಸಾಮಾನ್ಯ ಇಂಗ್ಲಿಷ್, ಮತ್ತು ರೀಸನಿಂಗ್ ಆಪ್ಟಿಟ್ಯೂಡ್ ಮತ್ತು ಕಂಪ್ಯೂಟರ್ ಜ್ಞಾನ

2. ಮೂಲ ಚಿಲ್ಲರೆ ಹೊಣೆಗಾರಿಕೆ ಉತ್ಪನ್ನಗಳು

3. ಮೂಲ ಚಿಲ್ಲರೆ ಆಸ್ತಿ ಉತ್ಪನ್ನಗಳು

4. ಮೂಲ ಹೂಡಿಕೆ ಉತ್ಪನ್ನಗಳು

5. ಮೂಲ ವಿಮಾ ಉತ್ಪನ್ನಗಳು

ಅರ್ಜಿ ಶುಲ್ಕ

ಅರ್ಜಿ ಶುಲ್ಕ ವಿವರ ಹೀಗಿದೆ - ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 400 ರೂಪಾಯಿ ಮತ್ತು ಜಿಎಸ್‌ಟಿ, ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳಿಗೆ 600 ರೂಪಾಯಿ ಮತ್ತು ಜಿಎಸ್‌ಟಿ ಮತ್ತು ಇತರೆ ಅಭ್ಯರ್ಥಿಗಳಿಗೆ 800 ರೂಪಾಯಿ ಮತ್ತು ಜಿಎಸ್‌ಟಿ ಇದೆ.

ಗಮನಿಸಬಹುದಾದ ಸುದ್ದಿಗಳು

ಪಶ್ಚಿಮ ಬಂಗಾಳದಲ್ಲಿ ಇಸ್ಲಾಂಗೆ ಬಲವಂತದ ಮತಾಂತರ ಪ್ರಕರಣ; ತನಿಖೆ ಶುರುಮಾಡಿದೆ ಸಿಬಿಐ

Religious conversions: ಕಲ್ಕತ್ತಾ ಹೈಕೋರ್ಟ್‌ನ ಆದೇಶದ ಮೇರೆಗೆ ಸಿಬಿಐ ಈ ಕಾರ್ಯಾಚರಣೆ ನಡೆಸಿದೆ. ಮಾಲ್ಡಾದ ಕಾಲಿಯಾಚಕ್ ಪ್ರದೇಶದ ಇಬ್ಬರು ಮಹಿಳೆಯರು ಮಾಡಿರುವ ಆರೋಪಗಳನ್ನು ತನಿಖೆ ಮಾಡುವಂತೆ ಹೈಕೋರ್ಟ್‌ ನ್ಯಾಯಪೀಠ ಸಿಬಿಐಗೆ ಸೂಚಿಸಿದೆ. ವಿವರ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರು ಯುವತಿಯ ನಂಬರ್‌ನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ; ಏನು ವಿಷಯ?!

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮತ್ತೊಮ್ಮೆ ಬೆದರಿಕೆ ಬಂದಿದೆ. ಕರೆ ಮಾಡಿದವರು ಅವರ ಮನೆ ಮತ್ತು ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕರೆ ಮಾಡಿದ ವ್ಯಕ್ತಿ ತನ್ನ ಹೆಸರನ್ನು ಜಯೇಶ್ ಪೂಜಾರಿ ಎಂದು ಪರಿಚಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಇಂದು ಯುಗಾದಿ ಸಂಭ್ರಮ; ಏರಿದ ಬೆಳ್ಳಿ ಬಂಗಾರ

Gold and silver Price Today March 22: ಇಂದು ಯುಗಾದಿ ಸಂಭ್ರಮ. ಹೊಸ ವರ್ಷದ ಮೊದಲ ದಿನ. ಬೆಳ್ಳಿ ಬಂಗಾರದ ಬೆಲೆ ಕೂಡ ಏರಿದೆ. ಚಿನ್ನ, ಬೆಳ್ಳಿ ದರ ಇಂದು ಯಾವ ಊರಲ್ಲಿ ಎಷ್ಟು? ಇಲ್ಲಿದೆ ವಿವರ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.