ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India As Vishwa Guru: ವಿಜ್ಞಾನ, ತಂತ್ರಜ್ಞಾನದಲ್ಲಿ ʻವಿಶ್ವಗುರುʼವಾಗಿ ಭಾರತ; Isro, Ichr ವಿಶೇಷ ಪ್ರಾಜೆಕ್ಟ್‌- ಇಲ್ಲಿದೆ ಸಮಗ್ರ ವರದಿ

India as Vishwa Guru: ವಿಜ್ಞಾನ, ತಂತ್ರಜ್ಞಾನದಲ್ಲಿ ʻವಿಶ್ವಗುರುʼವಾಗಿ ಭಾರತ; ISRO, ICHR ವಿಶೇಷ ಪ್ರಾಜೆಕ್ಟ್‌- ಇಲ್ಲಿದೆ ಸಮಗ್ರ ವರದಿ

India as Vishwa Guru: ಈ ಯೋಜನೆಯು 1.5 ಕೋಟಿ ರೂಪಾಯಿ ವೆಚ್ಚದ್ದು. ಆರು ಸಂಪುಟಗಳ ಸಂಶೋಧನಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇದರಲ್ಲಿ ತಲಾ 2 ಸಂಪುಟ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಅವಧಿಗಳಿಗೆ ಮೀಸಲು. ವಿವರ ವರದಿ ಇಲ್ಲಿದೆ.

"ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸ"ಎಂಬ ಶೀರ್ಷಿಕೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲು ICHR ಮತ್ತು ISRO ಶೀಘ್ರದಲ್ಲೇ ತಿಳಿವಳಿಕೆ ಪತ್ರಕ್ಕೆ (MOU) ಸಹಿ ಮಾಡಲಿವೆ.
"ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸ"ಎಂಬ ಶೀರ್ಷಿಕೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲು ICHR ಮತ್ತು ISRO ಶೀಘ್ರದಲ್ಲೇ ತಿಳಿವಳಿಕೆ ಪತ್ರಕ್ಕೆ (MOU) ಸಹಿ ಮಾಡಲಿವೆ. (AFP File Photo)

ಜಾಗತಿಕವಾಗಿ ಭಾರತದ ಛಾಪನ್ನು ಬಲಪಡಿಸುವ ಮತ್ತು ವೈಜ್ಞಾನಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ʻವಿಶ್ವಗುರುʼ ಎಂಬುದನ್ನು ಸಾಬೀತುಮಾಡುವ ಉದ್ದೇಶದೊಂದಿಗೆ ಪ್ರಾಚೀನ ಗ್ರಂಥಗಳ ಪುರಾವೆಗಳನ್ನು ಬಳಸಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆಯ ಇತಿಹಾಸವನ್ನು ಪತ್ತೆಹಚ್ಚಲು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿವೆ.

ಟ್ರೆಂಡಿಂಗ್​ ಸುದ್ದಿ

"ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸ"ಎಂಬ ಶೀರ್ಷಿಕೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲು ICHR ಮತ್ತು ISRO ಶೀಘ್ರದಲ್ಲೇ ತಿಳಿವಳಿಕೆ ಪತ್ರಕ್ಕೆ (MOU) ಸಹಿ ಮಾಡಲಿವೆ. ಈ ಯೋಜನೆಯು 1.5 ಕೋಟಿ ರೂಪಾಯಿ ವೆಚ್ಚದ್ದು. ಆರು ಸಂಪುಟಗಳ ಸಂಶೋಧನಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇದರಲ್ಲಿ ತಲಾ 2 ಸಂಪುಟ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಅವಧಿಗಳಿಗೆ ಮೀಸಲು.

ಐಸಿಎಚ್‌ಆರ್‌ ಸದಸ್ಯ ಕಾರ್ಯದರ್ಶಿ ನೀಡಿದ ವಿವರ ಹೀಗಿದೆ

ನಮ್ಮ ಪುರಾತನ ಧರ್ಮ ಗ್ರಂಥಗಳಲ್ಲಿ (ಧಾರ್ಮಿಕ ಗ್ರಂಥಗಳಲ್ಲಿ) ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ಶ್ರೀಮಂತ ಇತಿಹಾಸದ ಬಗ್ಗೆ ಹೆಚ್ಚಿನ ಪ್ರಮಾಣದ ಮಾಹಿತಿ ಲಭ್ಯವಿದೆ ಆದರೆ, ದುರದೃಷ್ಟವಶಾತ್, ಅದನ್ನು ನಿರಾಕರಿಸುವ ಮತ್ತು ಪುರಾಣ ಎಂದು ಕರೆಯುವ ಇತಿಹಾಸಕಾರರಿಂದ ಇದುವರೆಗೂ ಟ್ಯಾಪ್ ಮಾಡಲಾಗಿಲ್ಲ. ನಾವು ಪಠ್ಯಗಳನ್ನು ಸರಿಯಾಗಿ ಓದುತ್ತೇವೆ ಮತ್ತು ಅವುಗಳ ಐತಿಹಾಸಿಕ ಮತ್ತು ವೈಜ್ಞಾನಿಕ ವಿಷಯವನ್ನು ಅರ್ಥಮಾಡಿಕೊಳ್ಳುತ್ತೇವೆ. ಈ ಯೋಜನೆಯಲ್ಲಿ ವಿಜ್ಞಾನದ ಶಿಕ್ಷಣ ತಜ್ಞರು ಮತ್ತು ಇತಿಹಾಸಕಾರರು ಕೆಲಸ ಮಾಡುತ್ತಾರೆ ಎಂದು ಐಸಿಎಚ್‌ಆರ್ ಸದಸ್ಯ ಕಾರ್ಯದರ್ಶಿ ಉಮೇಶ್ ಅಶೋಕ್ ಕದಂ ವಿವರಿಸಿದ್ದಾರೆ.

ಐಸಿಎಚ್‌ಆರ್‌ ಉದ್ದೇಶಗಳ ಬಗ್ಗೆ ಸಂದೇಹ ಬೇಡ

“ಐಸಿಎಚ್‌ಆರ್ ಸಂಪೂರ್ಣವಾಗಿ ಶಿಕ್ಷಣ ತಜ್ಞರಿಗೆ ಮೀಸಲಾಗಿರುವ ಸಂಸ್ಥೆ. ಇದು ರಾಜಕೀಯದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ನಮ್ಮ ಸಂಶೋಧನಾ ಫಲ ಪ್ರಕಟವಾಗಲಿ. ನಂತರ ಜನರೇ ನಿರ್ಧರಿಸಲಿ. ನಮ್ಮ ಕೆಲಸವನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಅದು ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಹೋದರೆ, ಜನರು ಅದನ್ನು ಸ್ವೀಕರಿಸಲಾರರು. ICHR ಅನ್ನು "ರಾಜಕೀಯವಾಗಿ ನಡೆಸಲಾಗುತ್ತಿದೆ" ಎಂದು ಆರೋಪಿಸುವವರು "ಪೊಲಿಟ್‌ಬ್ಯುರೋಗಳಿಗೆ" ಸೇರಿದ್ದಾರೆ" ಎಂದು ಉಮೇಶ್‌ ಅಶೋಕ್‌ ಕದಂ ಹೇಳಿದರು. "ಭಾರತ: ಪ್ರಜಾಪ್ರಭುತ್ವದ ತಾಯಿ" ಎಂಬ ICHR ನ ಪರಿಕಲ್ಪನೆಯ ಟಿಪ್ಪಣಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನ ಪಾಲಿಟ್‌ಬ್ಯೂರೋದ ನವೆಂಬರ್ 18 ರ ಹೇಳಿಕೆ ಉಲ್ಲೇಖಿಸಿ ಅವರು ಈ ರೀತಿ ಹೇಳಿದ್ದು.

ಯೋಜನೆ ಬಗ್ಗೆ ಇಸ್ರೋ ಕೂಡ ಒಲವು

ಇಸ್ರೋದ ಉನ್ನತ ಅಧಿಕಾರಿಯೊಬ್ಬರು ಈ ಕ್ರಮವನ್ನು ಶ್ಲಾಘಿಸಿದರು. ಯೋಜನೆಯು ಆಧುನಿಕ ಮತ್ತು ಪ್ರಾಚೀನ ಜ್ಞಾನವನ್ನು ಒಟ್ಟಿಗೆ ತರುತ್ತದೆ. ನಾವು ಇತ್ತೀಚೆಗೆ ಸಮ್ಮೇಳನವನ್ನು ಆಯೋಜಿಸಿದ್ದೆವು. ಅಲ್ಲಿ ನಾವು ವಿಜ್ಞಾನದ ಆಧುನಿಕ ಜ್ಞಾನ ಮತ್ತು ಪ್ರಾಚೀನ ಜ್ಞಾನವನ್ನು ಒಟ್ಟಿಗೆ ತರುವ ನಮ್ಮ ಗುರಿಯನ್ನು ಚರ್ಚಿಸಿದ್ದೇವೆ. ಇದೇ ನಮ್ಮನ್ನು ಪ್ರಪಂಚದ ಇತರ ಭಾಗಗಳಿಂದ ಪ್ರತ್ಯೇಕಿಸುತ್ತದೆ ಮತ್ತು ನಾವು ನಮ್ಮ ಇತಿಹಾಸವನ್ನು ಅಳವಡಿಸಿಕೊಳ್ಳಬೇಕು ಎಂದು ಹೆಸರು ಹೇಳಲು ಇಚ್ಛಿಸದ ಇಸ್ರೋ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ಭಾಷಾ ಮೂಲ ಇತಿಹಾಸ ಆಧರಿಸಿ ಭಾರತದ ಇತಿಹಾಸ ಮರುರಚನೆ; ಮಾರ್ಚ್‌ನಲ್ಲಿ 1ನೇ ಸಂಪುಟ ಬಿಡುಗಡೆ ಎಂದ ICHR

ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ICHR) ಭಾರತದ ಇತಿಹಾಸ "ಮರುರಚನೆ" ಪ್ರಾರಂಭಿಸಿದೆ. ಸಿಂಧೂ ಕಣಿವೆಯ ನಾಗರೀಕತೆಯ ಕಾಲದಿಂದ ಇಂದಿನವರೆಗಿನ ಇತಿಹಾಸ ಸ್ಥಳೀಯ ಭಾಷೆಗಳು ಮತ್ತು ಲಿಪಿಗಳಲ್ಲಿ ಲಭ್ಯವಿರುವ ಮೂಲಗಳನ್ನು ಬಳಸಿಕೊಂಡು ಈ ಕೆಲಸ ಮಾಡಲಿದೆ. ಇತಿಹಾಸದ ಪುಟಗಳಲ್ಲಿ ತಪ್ಪಿ ಹೋಗಿರುವ ರಾಜವಂಶ ಮತ್ತು ಯುರೋಪ್‌ ಕೇಂದ್ರಿತ ಮನಸ್ಥಿತಿಯಿಂದ ರಚಿಸುವಾಗ ತಪ್ಪಾಗಿರುವ ವಾಸ್ತವಾಂಶಗಳನ್ನು ಸರಿಪಡಿಸುವ ಕೆಲಸ ಈ ಯೋಜನೆಯಲ್ಲಿ ನಡೆಯಲಿದೆ ಎಂದು ಐಸಿಎಚ್‌ಆರ್‌ ಮೂಲಗಳು ಇತ್ತೀಚೆಗೆ ತಿಳಿಸಿವೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

IPL_Entry_Point