ಭಯೋತ್ಪಾದಕ ದಾಳಿಗೆ ಕೆಲವು ವಾರಗಳ ಮೊದಲು ಪಹಲ್ಗಾಮ್‌ನ ಉಪಗ್ರಹ ಚಿತ್ರಗಳಿಗೆ ಅಮೆರಿಕದ ಸಂಸ್ಥೆಯಲ್ಲಿ ಬೇಡಿಕೆ ಹೆಚ್ಚಾಗಿತ್ತು ಎಂದು ದಿ ಪ್ರಿಂಟ್ ವರದಿ ತಿಳಿಸಿದೆ. ಅಲ್ಲದೆ, ಪ್ರತಿ ಉಪಗ್ರಹ ಚಿತ್ರದ ಮೂಲ ಬೆಲೆ 3 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ, ಚಿತ್ರದ ರೆಸಲ್ಯೂಶನ್ ಅನ್ನು ಅವಲಂಬಿಸಿ ದರದಲ್ಲಿ ವ್ಯತ್ಯಾಸವಾಗುತ್ತದೆ ಎಂದು ಅದು ಹೇಳಿದೆ.