ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Irctc Booking Down: ಸರ್ವರ್‌ ಡೌನ್‌ನಿಂದ ರೈಲ್ವೆ ಮುಂಗಡ ಬುಕ್ಕಿಂಗ್‌ಗೆ ಸಮಸ್ಯೆ: ಸಹಜವಾಯ್ತು ಪ್ರಕ್ರಿಯೆ, ತೊಂದರೆಯಾದರೆ ಪರ್ಯಾಯ ಹೀಗಿದೆ

IRCTC Booking Down: ಸರ್ವರ್‌ ಡೌನ್‌ನಿಂದ ರೈಲ್ವೆ ಮುಂಗಡ ಬುಕ್ಕಿಂಗ್‌ಗೆ ಸಮಸ್ಯೆ: ಸಹಜವಾಯ್ತು ಪ್ರಕ್ರಿಯೆ, ತೊಂದರೆಯಾದರೆ ಪರ್ಯಾಯ ಹೀಗಿದೆ

ಐಆರ್‌ಸಿಟಿಸಿ ಸರ್ವರ್ ಡೌನ್ ನಿಂದ ಭಾರತದ ನಾಲ್ಕು ಸಾವಿರಕ್ಕೂ ಅಧಿಕ ರೈಲ್ವೆ ಮುಂಗಡ ಬುಕ್ಕಿಂಗ್‌ ಕೇಂದ್ರಗಳ ಕಾರ್ಯ ಸ್ಥಗಿತಗೊಂಡಿತ್ತು. ಕರ್ನಾಟಕದ ರೈಲು ನಿಲ್ದಾಣಗಳಲ್ಲಿರುವ ಮುಂಗಡ ಟಿಕೆಟ್ ಕೇಂದ್ರಗಳಲ್ಲಿ ಜನಸಂದಣಿ ಉಂಟಾಗಿತ್ತು. ಈಗ ಸಮಸ್ಯೆ ಬಗೆಹರಿದಿದ್ದರೂ ಬುಕ್ಕಿಂಗ್‌ ಪ್ರಮಾಣ ಕಡಿಮೆ ಇದೆ. ಟಿಕೆಟ್ ಬುಕಿಂಗ್‌ಗೆ ಇರುವ ಪರ್ಯಾಯ ಉಪಾಯಗಳೇನು? ಇಲ್ಲಿದೆ ವಿವರ..

ಐಆರ್‌ಸಿಟಿಸಿ ಸರ್ವರ್‌ ಸಮಸ್ಯೆಯಿಂದ ರೈಲ್ವೆ ಮುಂಗಡ ಬುಕ್ಕಿಂಗ್‌ ಸಮಸ್ಯೆಯಾಗಿ ಈಗ ಸಹಜ ಸ್ಥಿತಿಗೆ ಬಂದಿದೆ.
ಐಆರ್‌ಸಿಟಿಸಿ ಸರ್ವರ್‌ ಸಮಸ್ಯೆಯಿಂದ ರೈಲ್ವೆ ಮುಂಗಡ ಬುಕ್ಕಿಂಗ್‌ ಸಮಸ್ಯೆಯಾಗಿ ಈಗ ಸಹಜ ಸ್ಥಿತಿಗೆ ಬಂದಿದೆ.

ಬೆಂಗಳೂರು: ಮುಖ್ಯ ಸರ್ವರ್‌ ಸಮಸ್ಯೆಯಿಂದ ದೇಶಾದ್ಯಂತ ಐಆರ್‌ಸಿಟಿಸಿ ( IRCTC)ರೈಲ್ವೆ ಮುಂಗಡ ಬುಕ್ಕಿಂಗ್‌ಗೆ ಮಂಗಳವಾರ ದಿನವಿಡೀ ಸಮಸ್ಯೆಯಾಯಿತು. ಇದರಿಂದ ದೇಶದ ರೈಲ್ವೆ ನಿಲ್ದಾಣ ಹಾಗೂ ಹೊರಗಡೆ ಇರುವ ಬುಕ್ಕಿಂಗ್‌ ಸೇವೆಯನ್ನು ಸಂಪೂರ್ಣ ಬಂದ್‌ ಮಾಡಲಾಗಿತ್ತು. ಈಗ ಸರ್ವರ್‌ ಸಮಸ್ಯೆ ಬಗೆಹರಿದಿದ್ದು ಬುಧವಾರ ಬೆಳಿಗ್ಗೆಯಿಂದ ಐಆರ್‌ಸಿಟಿಸಿ ಮುಂಗಡ ಬುಕ್ಕಿಂಗ್‌ ಸಹಜ ಸ್ಥಿತಿಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಆದರೂ ರೈಲ್ವೆ ಇಲಾಖೆಯ ಬುಕ್ಕಿಂಗ್‌ಗೆ ತೊಂದರೆಯಾದರೂ ಖಾಸಗಿಯಾಗುವ ಮಾಡುವ ಬುಕ್ಕಿಂಗ್‌ ಕೇಂದ್ರಗಳಲ್ಲಿ ಮುಂಗಡ ಬುಕ್ಕಿಂಗ್‌ ಸಹಜವಾಗಿತ್ತು. ಅಲ್ಲಿ ಕೆಲವರು ಸೇವೆ ಪಡದರೆ ಪ್ರವಾಸಕ್ಕೆಇನ್ನೂ ಸಮಯವಿರುವವರು ಇನ್ನೊಂದು ದಿನ ಬುಕ್ಕಿಂಗ್‌ ಆಗಮಿಸುವುದಾಗಿ ಹೇಳಿ ತೆರಳಿದರು.

ಸಮಸ್ಯೆಗೆ ಕಾರಣವಾದರೂ ಏನು?

ಇಂಡಿಯನ್‌ ರೈಲ್ವೆ ಕ್ಯಾಟರಿಂಗ್‌ ಅಂಡ್‌ ಟೂರಿಸಂ ಕಾರ್ಪೋರೇಷನ್‌( IRCTC) ಅಡಿ ದೇಶಾದ್ಯಂತ ರೈಲ್ವೆ ಮುಂಗಡ ಪ್ರಯಾಣ ಬುಕ್ಕಿಂಗ್‌ ಗೆ ಅವಕಾಶ ಮಾಡಿಕೊಡಲಾಗಿದೆ.

ಭಾರತೀಯ ರೈಲ್ವೆ ಇಲಾಖೆಯ ನಿಗಮವಾಗಿರುವ ಐಆರ್‌ಸಿಟಿಸಿ ಅಡಿ ದೇಶದ ನಾಲ್ಕು ಸಾವಿರಕ್ಕೂ ಅಧಿಕ ಕಡೆ ಬುಕ್ಕಿಂಗ್‌ ಸೇವೆಯಿದೆ. ಅಲ್ಲದೇ ಭಾರತೀಯ ರೈಲ್ವೆ ಇಲಾಖೆಯೇ ನಿಗಮ ಹೊರತುಪಡಿಸಿ ನಿಲ್ದಾಣಗಳಲ್ಲೂ ಮುಂಗಡ ಸೇವೆ ನೀಡುತ್ತದೆ.‌ ಆನ್‌ಲೈನ್‌ ಮೂಲಕ ಜನ ರೈಲ್ವೆ ಬುಕ್ಕಿಂಗ್‌ ಮಾಡಿಕೊಳ್ಳುತ್ತಾರೆ.

ದೆಹಲಿಯಲ್ಲೀ ಈ ಸೇವೆಯ ಮುಖ್ಯ ಸರ್ವರ್‌ ಇದೆ. ಅಲ್ಲದೇ ಚೆನ್ನೈ, ಕೋಲ್ಕತ್ತಾ, ಮುಂಬೈ ಸೇರಿದಂತೆ ಪ್ರಾದೇಶಿಕ ಭಾಗಗಳಲ್ಲೂ ಸರ್ವರ್‌ ಒದಗಿಸಲಾಗಿದೆ. ಆದರೂ ದೆಹಲಿಯಲ್ಲೇ ಮುಖ್ಯ ಸರ್ವರ್‌ ಇರುವುದರಿಂದ ಅಲ್ಲಿಂದಲೇ ನಿರ್ವಹಣೆ ಮಾಡಲಾಗುತ್ತದೆ. ಮಂಗಳವಾರ ಬೆಳಿಗ್ಗೆ ಕೆಲಸ ಆರಂಭಿಸಿದ ಕೆಲ ಹೊತ್ತಿನಲ್ಲೇ ಸರ್ವರ್‌ ಡೌನ್‌ ಆದ ಕಾರಣ ಎಲ್ಲಾ ನಾಲ್ಕು ಸಾವಿರಕ್ಕೂ ಅಧಿಕ ಕೇಂದ್ರಗಳಲ್ಲಿ ಮುಂಗಡ ಬುಕ್ಕಿಂಗ್‌ ಸ್ಥಗಿತಗೊಂಡಿದೆ. ಕೆಲವೇ ಹೊತ್ತಿನಲ್ಲೇ ಸರಿ ಹೋಗಬಹುದು ಎಂದು ಸಿಬ್ಬಂದಿ ನಿರೀಕ್ಷಿಸಿದರೂ ಬಗೆಹರಿಯಲೇ ಇಲ್ಲ.

ಕೇಂದ್ರ ಕಚೇರಿಯಲ್ಲೂ ನಿವರ್ಹಣೆ ಮುಗಿಯಬಹುದು ಎನ್ನುವ ಸೂಚನೆ ಬಂದರೂ ಮಧ್ಯಾಹ್ನವಾದರೂ ಸರ್ವರ್‌ ಸಮಸ್ಯೆ ಬಗೆಹರಿಯಲೇ ಇಲ್ಲ. ಇದರಿಂದ ರೈಲ್ವೆ ಮುಂಗಡ ಬುಕ್ಕಿಂಗ್‌ ಕೇಂದ್ರಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು.

ಬುಕ್ಕಿಂಗ್‌ ರದ್ದು ಮಾಡುವ ಸೂಚನೆಯೂ ಬಾರದೇ ಇದ್ದುದರಿಂದ ಆಗಮಿಸಿದ್ದ ಬಹುತೇಕರು ಕಾಯುವಂತಾಯಿತು. ಮಧ್ಯಾಹ್ನದ ನಂತರ ಬುಕ್ಕಿಂಗ್‌ ಸೇವೆ ರದ್ದುಪಡಿಸಿರುವುದನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಮಂಗಳವಾರ ದಿನವಿಡೀ ಬುಕ್ಕಿಂಗ್‌ ಇರಲಿಲ್ಲ.ಮಳೆಯಿಂದ ಫೈಬರ್‌ ಕಡಿತಗೊಂಡು ಹೀಗೆ ಆಗಿರಬಹುದು ಎನ್ನಲಾಗುತ್ತಿದೆ.

ಸರಿಯಾದ ಸರ್ವರ್‌

ಈ ನಡುವೆ ರೈಲ್ವೆ ಇಲಾಖೆಯ ತಾಂತ್ರಿಕ ವಿಭಾಗದ ನಿರಂತರ ಪ್ರಯತ್ನದ ಫಲವಾಗಿ ಸರ್ವರ್‌ ಸಮಸ್ಯೆ ಬಗೆಹರಿದಿದೆ. ಇದರಿಂದಾಗಿ ಬುಧವಾರ ಬೆಳಿಗ್ಗೆಯಿಂದಲೇ ಎಂದಿನಂತೆ ಬುಕ್ಕಿಂಗ್‌ ಚಟುವಟಿಕೆ ಐಆರ್‌ಸಿಟಿಸಿ ಕೇಂದ್ರಗಳಲ್ಲಿ ಶುರುವಾಗಿದೆ. ಆದರೆ ಮಂಗಳವಾರದ ಸಮಸ್ಯೆಯಿಂದಾಗಿ ಬುಧವಾರ ಬೆಳಿಗ್ಗೆಯೇ ಅಷ್ಟಾಗಿ ಗ್ರಾಹಕರು ಆಗಮಿಸಲಿಲ್ಲ. ಬುಧವಾರ ಮಧ್ಯಾಹ್ನದ ನಂತರ ಇಡೀ ಪ್ರಕ್ರಿಯೆ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ.

ಈ ರೀತಿ ದಿನವಿಡೀ ಸರ್ವರ್‌ ಡೌನ್‌ ಆಗಿ ಬುಕ್ಕಿಂಗ್‌ ನಿಂತಿದ್ದು ಇದೇ ಮೊದಲ ಬಾರಿ. ಹಿಂದೆಲ್ಲಾ ಅರ್ಧ ಗಂಟೆ ಅಥವಾ ಒಂದು ಗಂಟೆಯೊಳಗೆ ಸಮಸ್ಯೆ ಸರಿಯಾಗುತ್ತಿತ್ತು. ಇದರಿಂದ ಬುಕ್ಕಿಂಗ್‌ ರದ್ದಿನ ಪ್ರಕಟಣೆ ಹೊರಡಿಸಿದ್ದೆವು. ಇಂದು ಸೇವೆ ಸರಿಯಾಗಿದೆ ಎಂದು ಮೈಸೂರು ರೈಲ್ವೆ ನಿಲ್ದಾಣ ಮುಖ್ಯ ಬುಕ್ಕಿಂಗ್‌ ಅಧಿಕಾರಿ ಸತೀಶ್‌ ಖಚಿತಪಡಿಸಿದರು.

ಬುಕ್ಕಿಂಗ್‌ಗೆ ಬರುವವರಲ್ಲಿ ಬಹುತೇಕರು ಮುಂದಿನ ತಿಂಗಳು, ವಾರದ ಪ್ರಯಾಣಿಸುವವರೇ ಹೆಚ್ಚು. ಇದರಿಂದ ಅವರಿಗೆ ಏನು ತೊಂದರೆಯಾಗಿಲ್ಲ. ತುರ್ತು ಹೋಗಬೇಕಿದ್ದವರು ಖಾಸಗಿ ಸೇವೆ ಪಡೆದಿದ್ದಾರೆ ಎನ್ನುವುದು ಅವರ ವಿವರಣೆ

ಪರ್ಯಾಯ ಏನು?

ಹೀಗೆ ರೈಲ್ವೆ ಮುಖ್ಯ ಸರ್ವರ್‌ ಡೌನ್‌ ಆಗಿ ಮುಂಗಡ ಬುಕ್ಕಿಂಗ್‌ ಸಮಸ್ಯೆಯಾದರೆ ಪರ್ಯಾಯ ಮಾರ್ಗಗಳು ಹಲವು ಇವೆ. ರೈಲ್ವೆ ನಿಲ್ದಾಣದಲ್ಲಿಯೇ ಮುಂಗಡ ಬುಕ್ಕಿಂಗ್‌ ಸೇವೆಗಳನ್ನು ಪ್ರತ್ಯೇಕ ಕೌಂಟರ್‌ ಮೂಲಕ ಒದಗಿಸಲಾಗುತ್ತದೆ. ಬಹುತೇಕ ಪ್ರಮುಖ ನಿಲ್ದಾಣಗಳಲ್ಲಿ ಈ ಸೇವೆ ಇದೆ. ಅಲ್ಲಿ ಪಡೆಯಲು ಅವಕಾಶವಿದೆ. ಇದಲ್ಲದೇ ಖಾಸಗಿಯಾಗಿಯೂ ಹಲವು ವೆಬ್‌ಸೈಟ್‌ ಮೂಲಕವೂ ಮೇಕ್‌ ಮೈ ಟ್ರಿಪ್‌ , ಅಮೆಜಾನ್‌ ಸಹಿತ ಹಲವು ಸಂಸ್ಥೆಗಳು ಬುಕ್ಕಿಂಗ್‌ ಮಾಡುತ್ತವೆ. ಅಲ್ಲಿಯೂ ಸೇವೆ ಪಡೆಯಬಹುದು. ರೈಲ್ವೆ ನಿಲ್ದಾಣದಲ್ಲಿಯೂ ತೀರಾ ಅನಿವಾರ್ಯವಾದಾಗ ಮ್ಯಾನ್ಯುಯಲ್‌ ಮೂಲಕವೂ ಟಿಕೆಟ್‌ ನೀಡುವ ಅವಕಾಶಗಳೂ ಇವೆ. ಇಲ್ಲದೇ ಇದ್ದರೆ ತುರ್ತು ಹೋಗುವವರು ಇದ್ದಾಗ ನಿಲ್ದಾಣಗಳಲ್ಲಿ ಸಾಮಾನ್ಯ ಟಿಕೆಟ್‌ ಪಡೆದು ರೈಲಿನಲ್ಲಿ ಟಿಟಿ ಭೇಟಿ ಮಾಡಿ ಪ್ರಯಾಣಿಸುವ ಸೀಟು ಪಕ್ಕಾ ಮಾಡಿಕೊಳ್ಳಬಹುದು. ಇದಕ್ಕೂ ಅವಕಾಶಗಳುಂಟು ಎಂದು ನಿವೃತ್ತ ರೈಲ್ವೆ ಅಧಿಕಾರಿ ವಿ.ರವಿಚಂದ್ರ ಹೇಳುತ್ತಾರೆ.

IPL_Entry_Point