ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India's Air Pollution: ವಾಯು ಮಾಲಿನ್ಯ; ಜಾಗತಿಕ ಮಟ್ಟದಲ್ಲಿ 8ನೇ ಸ್ಥಾನದಲ್ಲಿದೆ ಭಾರತ; ಟಾಪ್‌ 20ರಲ್ಲಿ 15 ಭಾರತದ ನಗರಗಳು

India's Air Pollution: ವಾಯು ಮಾಲಿನ್ಯ; ಜಾಗತಿಕ ಮಟ್ಟದಲ್ಲಿ 8ನೇ ಸ್ಥಾನದಲ್ಲಿದೆ ಭಾರತ; ಟಾಪ್‌ 20ರಲ್ಲಿ 15 ಭಾರತದ ನಗರಗಳು

India's Air Pollution: ಸ್ವಿಸ್ ಏರ್ ಕ್ವಾಲಿಟಿ ಟೆಕ್ನಾಲಜಿ ಕಂಪನಿ IQAir ಪ್ರಕಟಿಸಿದ ವಾರ್ಷಿಕ ವಿಶ್ವ ವಾಯು ಗುಣಮಟ್ಟದ ವರದಿಯ ಪ್ರಕಾರ, ವಿಶ್ವದ ಟಾಪ್ 20 ಅತ್ಯಂತ ಕಲುಷಿತ ನಗರಗಳಲ್ಲಿ 15 ಭಾರತೀಯ ನಗರಗಳು. ವಿವರಕ್ಕೆ ಮುಂದೆ ಓದಿ.

ವಾಯು ಮಾಲಿನ್ಯ (ಸಾಂಕೇತಿಕ ಚಿತ್ರ)
ವಾಯು ಮಾಲಿನ್ಯ (ಸಾಂಕೇತಿಕ ಚಿತ್ರ) (PTI)

ವಾಯುಮಾಲಿನ್ಯ ಸೂಚ್ಯಂಕ 2022ರ ಪ್ರಕಾರ ಭಾರತದ ವಾಯುಮಾಲಿನ್ಯ ಪರಿಸ್ಥಿತಿ ಕೆಟ್ಟದಾಗಿದೆ. ಆದಾಗ್ಯೂ, ಹಿಂದಿನ ವರ್ಷದ ಪಟ್ಟಿಗಿಂತ ಈ ವರ್ಷ ಮೂರು ಸ್ಥಾನಗಳಷ್ಟು ಸುಧಾರಿಸಿಕೊಂಡಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಟ್ರೆಂಡಿಂಗ್​ ಸುದ್ದಿ

ವಾಯುಮಾಲಿನ್ಯ ಸೂಚ್ಯಂಕ ಪಟ್ಟಿಯಲ್ಲಿ ಭಾರತವು ಎಂಟನೇ ಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕಿಂತ ಮೂರು ಸ್ಥಾನ ಕುಸಿದಿದೆ. ಚಾಡ್, ಇರಾಕ್, ಪಾಕಿಸ್ತಾನ, ಬಹ್ರೇನ್ ಮತ್ತು ಬಾಂಗ್ಲಾದೇಶವು 2022 ರ ಐದು ಹೆಚ್ಚು ವಾಯುಮಾಲಿನ್ಯ ಪೀಡಿತ ದೇಶಗಳಾಗಿವೆ.

ಸ್ವಿಸ್ ಏರ್ ಕ್ವಾಲಿಟಿ ಟೆಕ್ನಾಲಜಿ ಕಂಪನಿ IQAir ಪ್ರಕಟಿಸಿದ ವಾರ್ಷಿಕ ವಿಶ್ವ ವಾಯು ಗುಣಮಟ್ಟದ ವರದಿಯ ಪ್ರಕಾರ, ವಿಶ್ವದ ಟಾಪ್ 20 ಅತ್ಯಂತ ಕಲುಷಿತ ನಗರಗಳಲ್ಲಿ 15 ಭಾರತೀಯ ನಗರಗಳು.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರವಾಗಿದೆ. ವಿಶ್ವದ ಅತ್ಯಂತ ಕಲುಷಿತ ದೇಶಗಳ ಪಟ್ಟಿಯಲ್ಲಿ ಭಾರತವು 8 ನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಅತ್ಯಂತ ಕಲುಷಿತ 5 ದೇಶಗಳಲ್ಲಿ, ಚಾಡ್ ಮೊದಲ ಸ್ಥಾನದಲ್ಲಿದೆ, ಇರಾಕ್ ಎರಡನೇ ಮತ್ತು ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ. ಬಹ್ರೇನ್ 4 ನೇ ಸ್ಥಾನದಲ್ಲಿದೆ ಮತ್ತು ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶ 5 ನೇ ಸ್ಥಾನದಲ್ಲಿದೆ. ಈ ವರದಿಯ ಪ್ರಕಾರ, ಚಾಡ್‌ನ ನಗರ ಎನ್‌ ಡಿಜಮೇನಾ ವಿಶ್ವದ 8 ನೇ ಅತ್ಯಂತ ಕಲುಷಿತ ನಗರವಾಗಿದೆ. ಮಾಲಿನ್ಯದ ವಿಷಯದಲ್ಲಿ ಚೀನಾದ ಹೊಟಾನ್ ನಗರವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಭಾರತದ ಭಿವಂಡಿ ಮೂರನೇ ಸ್ಥಾನದಲ್ಲಿದೆ.

ಜಗತ್ತಿನ ಟಾಪ್‌ 20 ಅತಿ ಮಾಲಿನ್ಯ ಪೀಡಿತ ನಗರಗಳ ಪಟ್ಟಿ ಇಲ್ಲಿದೆ.

  1. ಲಾಹೋರ್‌, ಪಾಕಿಸ್ತಾನ
  2. ಹೋಟಾನ್, ಚೀನಾ
  3. ಭಿವಂಡಿ, ಭಾರತ
  4. ದೆಹಲಿ, ಭಾರತ
  5. ಪೇಶಾವರ್, ಪಾಕಿಸ್ತಾನ
  6. ದರ್ಭಾಂಗ, ಭಾರತ
  7. ಅಸೋಪುರ್, ಭಾರತ
  8. ಎಂಜಮೆನಾ, ಚಾಡ್
  9. ನವದೆಹಲಿ, ಭಾರತ
  10. ಪಾಟ್ನಾ, ಭಾರತ
  11. ಘಾಜಿಯಾಬಾದ್, ಭಾರತ
  12. ಧೌರಾಹ್ರಾ, ಭಾರತ
  13. ಬಾಗ್ದಾದ್, ಇರಾಕ್
  14. ಚಾಪ್ರಾ, ಭಾರತ
  15. ಮುಜಫರ್‌ನಗರ, ಭಾರತ
  16. ಫೈಸಲಾಬಾದ್, ಭಾರತ
  17. ಗ್ರೇಟರ್ ನೋಯ್ಡಾ, ಭಾರತ
  18. ಬಹದ್ದೂರ್‌ಗಢ, ಭಾರತ
  19. ಫರಿದಾಬಾದ್, ಭಾರತ
  20. ಮುಜಾಫರ್‌ಪುರ, ಭಾರತ

ಗಮನಿಸಬಹುದಾದ ಸುದ್ದಿಗಳು

PM Modi US visit: ಅಮೆರಿಕನ್‌ ಕಾಂಗ್ರೆಸ್‌ ಉದ್ದೇಶಿಸಿ ಪ್ರಧಾನಿ ಮೋದಿ 2ನೇ ಸಲ ಭಾಷಣ; ಇಸ್ರೇಲ್‌ ಪಿಎಂ ನೆತಾನ್ಯಾಹು 3 ಸಲ ಭಾಷಣ ಮಾಡಿದ್ರು

ಭಾರತದ ಪ್ರಧಾನಮಂತ್ರಿಯೊಬ್ಬರನ್ನು ಎರಡನೇ ಸಲ ಅಮೆರಿಕನ್‌ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ಆಹ್ವಾನಿಸುತ್ತಿರುವುದು ಇದೇ ಮೊದಲ ಸಲ. ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತಿರುವ ಈ ಗೌರವ ಉಭಯ ರಾಷ್ಟ್ರಗಳ ನಡುವಿನ ಗೌರವಯುತ ಸಂಬಂಧದ ಪ್ರತೀಕವಾಗಿ ಪರಿಗಣಿಸಲ್ಪಟ್ಟಿದೆ. ಜಾಗತಿಕವಾಗಿ ಗಮನಿಸಿದರೂ, ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್‌ ನೆತಾನ್ಯಾಹು ಅವರನ್ನು ಅಮೆರಿಕನ್‌ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ಮೂರು ಬಾರಿ ಆಹ್ವಾನಿಸಲಾಗಿತ್ತು. ವಿವರ ಓದಿಗೆ ಕ್ಲಿಕ್‌ ಮಾಡಿ - ಅಮೆರಿಕನ್‌ ಕಾಂಗ್ರೆಸ್‌ ಉದ್ದೇಶಿಸಿ ಪ್ರಧಾನಿ ಮೋದಿ 2ನೇ ಸಲ ಭಾಷಣ

ಅರಬ್ಬೀ ಸಮುದ್ರದಲ್ಲಿ ಸೈಕ್ಲೋನ್‌; ಕರಾವಳಿ ಕರ್ನಾಟಕದಲ್ಲಿ ಮಳೆ ನಿರೀಕ್ಷೆ

ಆಗ್ನೇಯ ಅರಬ್ಬೀ ಸಮುದ್ರ (Southeast Arabian Sea)ದಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಬಿಪರ್‌ಜಾಯ್‌ (Biparjoy) ಚಂಡಮಾರುತ ಸೃಷ್ಟಿಯಾಗಿದೆ. ಇದರಿಂದಾಗಿ ಭಾರತದಲ್ಲಿ ಮುಂಗಾರು ಮಳೆ (monsoon in India) ವಿಳಂಬವಾಗುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಮಂಗಳವಾರ ತಿಳಿಸಿದೆ. ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿರುಗಾಳಿಯು ಚಂಡಮಾರುತ ಸ್ವರೂಪ ಪಡೆದು ಉತ್ತರದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಇದರಿಂದಾಗಿ ಕೇರಳಕ್ಕೆ ಮುಂಗಾರು ಪ್ರವೇಶ ನಿಧಾನವಾಗಬಹುದು. ವಿವರ ಓದಿಗೆ - ಕರಾವಳಿ ಕರ್ನಾಟಕದಲ್ಲಿ ಮಳೆ ನಿರೀಕ್ಷೆ

IPL_Entry_Point

ವಿಭಾಗ