ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi Us Visit: ಅಮೆರಿಕನ್‌ ಕಾಂಗ್ರೆಸ್‌ ಉದ್ದೇಶಿಸಿ ಪ್ರಧಾನಿ ಮೋದಿ 2ನೇ ಸಲ ಭಾಷಣ; ಇಸ್ರೇಲ್‌ ಪಿಎಂ ನೆತಾನ್ಯಾಹು 3 ಸಲ ಭಾಷಣ ಮಾಡಿದ್ರು

PM Modi US visit: ಅಮೆರಿಕನ್‌ ಕಾಂಗ್ರೆಸ್‌ ಉದ್ದೇಶಿಸಿ ಪ್ರಧಾನಿ ಮೋದಿ 2ನೇ ಸಲ ಭಾಷಣ; ಇಸ್ರೇಲ್‌ ಪಿಎಂ ನೆತಾನ್ಯಾಹು 3 ಸಲ ಭಾಷಣ ಮಾಡಿದ್ರು

PM Modi US visit: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಮೆರಿಕನ್‌ ಕಾಂಗ್ರೆಸ್‌ನ ಜಂಟಿ ಅಧಿವೇಶನಕ್ಕೆ ಎರಡನೇ ಬಾರಿ ಆಹ್ವಾನಿಸಲಾಗಿದೆ. ಈ ರೀತಿ ಎರಡನೇ ಸಲ ಆಹ್ವಾನ ಪಡೆದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ. ಜಾಗತಿಕ ಮಟ್ಟದಲ್ಲಿ ಇಸ್ರೇಲ್‌ ಪ್ರಧಾನಿ ನೆತಾನ್ಯಾಹು ಮೂರು ಸಲ ಅಮೆರಿಕನ್‌ ಕಾಂಗ್ರೆಸ್‌ ಉದ್ದೇಶಿಸಿ ಮಾತನಾಡಿದ ದಾಖಲೆ ಇದೆ.

ಯುಎಸ್ ಕಾಂಗ್ರೆಸ್ ಜಂಟಿ ಸಭೆಯನ್ನು ಉದ್ದೇಶಿಸಿ 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ ಸಂದರ್ಭದ ಫೈಲ್‌ ಫೋಟೋ.
ಯುಎಸ್ ಕಾಂಗ್ರೆಸ್ ಜಂಟಿ ಸಭೆಯನ್ನು ಉದ್ದೇಶಿಸಿ 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ ಸಂದರ್ಭದ ಫೈಲ್‌ ಫೋಟೋ.

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಅಮೆರಿಕನ್‌ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಐತಿಹಾಸಿಕ ವಿದ್ಯಮಾನ.

ಭಾರತದ ಪ್ರಧಾನಮಂತ್ರಿಯೊಬ್ಬರನ್ನು ಎರಡನೇ ಸಲ ಅಮೆರಿಕನ್‌ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ಆಹ್ವಾನಿಸುತ್ತಿರುವುದು ಇದೇ ಮೊದಲ ಸಲ. ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತಿರುವ ಈ ಗೌರವ ಉಭಯ ರಾಷ್ಟ್ರಗಳ ನಡುವಿನ ಗೌರವಯುತ ಸಂಬಂಧದ ಪ್ರತೀಕವಾಗಿ ಪರಿಗಣಿಸಲ್ಪಟ್ಟಿದೆ.

ಜಾಗತಿಕವಾಗಿ ಗಮನಿಸಿದರೂ, ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್‌ ನೆತಾನ್ಯಾಹು ಅವರನ್ನು ಅಮೆರಿಕನ್‌ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ಮೂರು ಬಾರಿ ಆಹ್ವಾನಿಸಲಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಟ್ವೀಟ್‌ ಮಾಡಿ ಧನ್ಯವಾದ ಹೇಳಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ತಿಂಗಳ ಕೊನೆಗೆ ಅಮೆರಿಕಕ್ಕೆ ಪ್ರವಾಸ ಹೋಗುತ್ತಿದ್ದು, ಜೂನ್ 22 ರಂದು ಅಲ್ಲಿ ಅಮೆರಿಕನ್‌ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.ಇದಕ್ಕಾಗಿ ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಯುಎಸ್‌ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿ ಧನ್ಯವಾದ ತಿಳಿಸಿದ್ದಾರೆ.

"@SpeakerMcCarthy, @LeaderMcConnell, @SenSchumer, ಮತ್ತು @RepJeffries ತಮ್ಮ ಸೌಹಾರ್ದಯುತ ಆಹ್ವಾನಕ್ಕಾಗಿ ಧನ್ಯವಾದಗಳು. ಅಮೆರಿಕನ್‌ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮತ್ತೊಮ್ಮೆ ಮಾತನಾಡುವುದನ್ನು ಎದುರು ನೋಡುತ್ತಿದ್ದೇನೆ. ಈ ಆಹ್ವಾನವನ್ನು ಗೌರವ ಪೂರ್ವಕವಾಗಿ ಸ್ವೀಕರಿಸುತ್ತಿರುವುದಾಗಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

"ಅಮೆರಿಕದೊಂದಿಗಿನ ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯ ಬಗ್ಗೆ ಹೆಮ್ಮೆಪಡುತ್ತೇವೆ. ಪ್ರಜಾಪ್ರಭುತ್ವ ಮೌಲ್ಯಗಳು, ಬಲವಾದ ಜನರ-ಜನರ ಸಂಬಂಧಗಳು ಮತ್ತು ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ಅಚಲವಾದ ಬದ್ಧತೆಯ ಅಡಿಪಾಯದ ಮೇಲೆ ಪರಸ್ಪರರ ವಿಶ್ವಾಸದ ಪಾಲುದಾರಿಕೆ ಏರ್ಪಟ್ಟಿದೆ" ಎಂದು ಅವರು ಹೇಳಿದರು.

"ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೆನೆಟ್‌ನ ಉಭಯ ಪಕ್ಷೀಯ ನಾಯಕತ್ವದ ಪರವಾಗಿ, ಜೂನ್ 22 ರ ಗುರುವಾರದಂದು ಕಾಂಗ್ರೆಸ್‌ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ನಿಮ್ಮನ್ನು (ಪ್ರಧಾನಿ ಮೋದಿ) ಆಹ್ವಾನಿಸುವುದು ನಮಗೆ ಹೆಮ್ಮೆಯ ವಿಚಾರ" ಎಂದು ಅಮೆರಿಕನ್‌ ಕಾಂಗ್ರೆಸ್ ನಾಯಕರು ಆಹ್ವಾನಿಸಿದ ವೇಳೆ ತಿಳಿಸಿದ್ದಾರೆ.

“ಏಳು ವರ್ಷಗಳ ಹಿಂದೆ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ನೀವು ಮಾಡಿದ ಐತಿಹಾಸಿಕ ಭಾಷಣವು ಶಾಶ್ವತವಾದ ಪರಿಣಾಮವನ್ನು ಬೀರಿತು. ಯುಎಸ್ ಮತ್ತು ಭಾರತದ ನಡುವಿನ ಸ್ನೇಹವನ್ನು ಹೆಚ್ಚು ಬಲಪಡಿಸಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕನ್‌ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮೊದಲ ಬಾರಿಗೆ 2016ರಲ್ಲಿ ಮಾತನಾಡಿದ್ದರು. ಅಂದು ಅವರು ಆ ರೀತಿ ಭಾಷಣ ಮಾಡಿದ ಭಾರತದ ಐದನೇ ಪ್ರಧಾನಮಂತ್ರಿ ಎಂಬ ಕೀರ್ತಿಗೆ ಭಾಜನರಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಮೊದಲು ಮನಮೋಹನ್ ಸಿಂಗ್ ( 2005), ಅಟಲ್ ಬಿಹಾರಿ ವಾಜಪೇಯಿ (2000), ಪಿವಿ ನರಸಿಂಹ ರಾವ್ (1994) ಮತ್ತು ರಾಜೀವ್ ಗಾಂಧಿ (1985)

ಪಿಎಂ ಮೋದಿ ಅವರು ಯುಎಸ್ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಎರಡನೇ ಬಾರಿಗೆ ಮಾತನಾಡಲಿದ್ದಾರೆ, ಮೊದಲನೆಯದು 2016 ರಲ್ಲಿ. ಏಳು ವರ್ಷಗಳ ಹಿಂದೆ, ಅವರು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಐದನೇ ಭಾರತೀಯ ಪ್ರಧಾನಿಯಾಗಿದ್ದರು, ಇತರರು ಮನಮೋಹನ್ ಸಿಂಗ್ ( 2005), ಅಟಲ್ ಬಿಹಾರಿ ವಾಜಪೇಯಿ (2000), ಪಿವಿ ನರಸಿಂಹ ರಾವ್ (1994) ಮತ್ತು ರಾಜೀವ್ ಗಾಂಧಿ (1985).


It will be the second time that PM Modi will address a joint meeting of the US Congress, the first being in 2016. Seven years ago, he was the fifth Indian premier to address the joint session of US Congress, the others being Manmohan Singh (2005), Atal Bihari Vajpayee (2000), PV Narasimha Rao (1994) and Rajiv Gandhi (1985).

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.