ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Himanta Biswa Sarma: ಭಾರತ ಈಗಾಗಲೇ ಒಗ್ಗಟ್ಟಾಗಿದೆ: 'ಭಾರತ್‌ ಜೋಡೋ' ಅವಶ್ಯಕತೆಯಿಲ್ಲ ಎಂದ ಅಸ್ಸಾಂ ಸಿಎಂ!

Himanta Biswa Sarma: ಭಾರತ ಈಗಾಗಲೇ ಒಗ್ಗಟ್ಟಾಗಿದೆ: 'ಭಾರತ್‌ ಜೋಡೋ' ಅವಶ್ಯಕತೆಯಿಲ್ಲ ಎಂದ ಅಸ್ಸಾಂ ಸಿಎಂ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಈಗಾಗಲೇ ಒಗ್ಗಟ್ಟಾಗಿದ್ದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡೆಸುತ್ತಿರುವ 'ಭಾರತ್‌ ಜೋಡೋ' ಯಾತ್ರೆಯ ಅವಶ್ಯಕತೆಯಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್‌ನಿಂದ ಅರುಣಾಚಲ ಪ್ರದೇಶದವರೆಗೆ ಇಡೀ ಭಾರತ ಇಂದು ಒಂದಾಗಿದೆ ಎಂದು ಅಸ್ಸಾಂ ಸಿಎಂ ಹೇಳಿದರು.

ಹೀಮಂತ ಬಿಸ್ವಾ ಶರ್ಮಾ (ಸಂಗ್ರಹ ಚಿತ್ರ)
ಹೀಮಂತ ಬಿಸ್ವಾ ಶರ್ಮಾ (ಸಂಗ್ರಹ ಚಿತ್ರ) (ANI)

ಗುವಹಾಟಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಈಗಾಗಲೇ ಒಗ್ಗಟ್ಟಾಗಿದ್ದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡೆಸುತ್ತಿರುವ 'ಭಾರತ್‌ ಜೋಡೋ' ಯಾತ್ರೆಯ ಅವಶ್ಯಕತೆಯಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗುವಹಾಟಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಹೀಮಂತ ಬಿಸ್ವಾ ಶರ್ಮಾ ಅವರು, ರಾಹುಲ್‌ ಗಾಂಧಿ ಅವರು 'ಭಾರತ್‌ ಜೋಡೋ' ಯಾತ್ರೆ ಹೆಸರಿನಲ್ಲಿ ಸುಮ್ಮನೆ ದೇಶ ಸುತ್ತುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೇ ಈ ಯಾತ್ರೆಯಿಂದ ಕಾಂಗ್ರೆಸ್‌ಗೆ ಯಾವ ಪ್ರಯೋಜನವೂ ಆಗದು ಎಂದು ಅಸ್ಸಾಂ ಸಿಎಂ ಅಭಿಪ್ರಾಯಪಟ್ಟರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಗಾಗಲೇ ದೇಶವನ್ನು ಒಗ್ಗೂಡಿಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್‌ನಿಂದ ಅರುಣಾಚಲ ಪ್ರದೇಶದವರೆಗೆ ಇಡೀ ಭಾರತ ಇಂದು ಒಂದಾಗಿದೆ. ಪ್ರಧಾನಿ ಮೋದಿ ನಾಯಕತ್ವದಿಂದಾಗಿ ದೇಶದ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಿದೆ ಎಂದು ಹೀಮಂತ ಬಿಸ್ವಾ ಶರ್ಮಾ ಹೇಳಿದರು.

'ಭಾರತ್‌ ಜೋಡೋ' ಯಾತ್ರೆ ಕುರಿತಂತೆ ರಾಹುಲ್‌ ಗಾಂಧಿ ಅವರ ಪರಿಕಲ್ಪನೆಯೇ ತಪ್ಪಾಗಿದೆ. ರಾಹುಲ್‌ ಅವರ ಯಾತ್ರೆ ಸಾಗಿಬಂದ ರಾಜ್ಯಗಳೆಲ್ಲಾ ಭಾರತದ ಭಾಗವಲ್ಲವೇ ಎಂದು ಪ್ರಶ್ನಿಸಿದ ಹೀಮಂತ ಬಿಸ್ವಾ ಶರ್ಮಾ, 'ಭಾರತ್‌ ಜೋಡೋ' ಬದಲು ರಾಹುಲ್‌ 'ಸ್ವಚ್ಛ ಭಾರತ' ಯಾತ್ರೆ ಮಾಡಬೇಕಿತ್ತು ಎಂದು ಸಲಹೆ ನೀಡಿದ್ದಾರೆ.

ಭಾರತ ಹಿಂದೆಂದಿಗಿಂತಲೂ ಈಗ ಒಗ್ಗಟ್ಟಾಗಿದೆ. ಸರ್ವ ಧರ್ಮಗಳ ಜನರು ಇಲ್ಲಿ ಶಾಂತತಿ ಹಾಗೂ ಸಹಬಾಳ್ವೆಯಿಂದ ನೆಲೆಸಿದ್ದಾರೆ. ಈ ಸನ್ನಿವೇಶದಲ್ಲಿ ಯಾರಾದರೂ ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಯಾತ್ರೆ ಮಾಡುತ್ತೇವೆ ಎಂದರೆ, ಅವರು ಈ ದೇಶಕ್ಕೆ ಅಗೌರವ ತೋರುತ್ತಿದ್ದಾರೆ ಎಂದೇ ಅರ್ಥ ಎಂದು ಹೀಮಂತ ಬಿಸ್ವಾ ಶರ್ಮಾ ಅಸಮಾಧಾನ ಹೊರಹಾಕಿದ್ದಾರೆ.

ಭಾರತ್‌ ಜೋಡೋ ಯಾತ್ರೆಗೆ ಪೂರಕವಾಗಿ ಅಸ್ಸಾಂ ಕಾಂಗ್ರೆಸ್‌ ಘಟಕ ಕೂಡ ಕಳೆದ ನ.೧ರಂದು ಯಾತ್ರೆಯೊಂದನ್ನು ಆರಂಭಿಸಿದ್ದು, ಅಸ್ಸಾಂ-ಪಶ್ಚಿಮ ಬಂಗಾಳ ಗಡಿಗುಂಟ ಈ ಯಾತ್ರೆ ಸಾಗುತ್ತಿದೆ.

ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ಅವರ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿರುವ ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ, ದೇಶದ ಒಗ್ಗಟ್ಟನ್ನು ಮುರಿದ ಪಕ್ಷವೊಂದು ಈಗ ದೇಶವನ್ನು ಒಂದುಗೂಡಿಸುವ ಕುರಿತು ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಹರಿಹಾಯ್ದಿದ್ದಾರೆ.

ಇಂದಿನ ಪ್ರಮುಖ ಸುದ್ದಿಗಳು

PM on G20 Presidency: "ಜಾಗತಿಕ ಮನಸ್ಥಿತಿ ಬದಲಾವಣೆ"ಯ ಸಮಯ: ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನವನ್ನು ವಿಶ್ಲೇಷಿಸಿದ ಮೋದಿ

ಭಾರತವು ಇಂದು(ಡಿ.01-ಗುರುವಾರ) ಔಪಚಾರಿಕವಾಗಿ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಈ ಐತಿಹಾಸಿಕ ಕ್ಷಣ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದು ಎಂದು ಬಣ್ಣಿಸಲಾಗಿದೆ. ಈ ಕುರಿತು ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದನ್ನು "ಜಾಗತಿಕ ಮನಸ್ಥಿತಿಯ ಬದಲಾವಣೆ " ಸಮಯ ಎಂದು ಕರೆದಿದ್ದಾರೆ. ಭಾರತದ ವರ್ಷಾವಧಿಯ ಜಿ20 ಅಧ್ಯಕ್ಷ ಸ್ಥಾನವು, ಎಲ್ಲರನ್ನೂ ಒಳಗೊಳ್ಳಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

PM Modi on Ravan Remark: "ರಾಮಭಕ್ತ"ರ ನಾಡಿನಲ್ಲಿ "ರಾವಣ" ಅನ್ನೋದೆ ಖರ್ಗೆಜೀ?: ತಿರುಗಿಸಿ ಕೊಟ್ರು ನೋಡಿ ಮೋದಿಜೀ..!

ಗುಜರಾತ್‌ನ ಪಂಚಮಹಲ್‌ನ ಕಲೋಲ್‌ನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮನ್ನು "ರಾವಣ" ಎಂದು ಕರೆದ ಮಲ್ಲಿಖಾರ್ಜುನ ಖರ್ಗೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನನಗೆ ವೈಯಕ್ತಿಕವಾಗಿ ಖರ್ಗೆ ಅವರ ಮೇಲೆ ಅಪಾರ ಗೌರವವಿದೆ. ಆದರೆ ರಾಮಭಕ್ತರ ನಾಡಿಗೆ ಬಂದು ಒಬ್ಬರನ್ನು ರಾವಣ ಎಂದು ಕರೆದಿರುವುದು ಖಂಡನೀಯ ಎಂದು ಮೋದಿ ಗುಡುಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

IPL_Entry_Point