ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Salman Rushdie Attacked: ನ್ಯೂಯಾರ್ಕ್‌ನಲ್ಲಿ ಲೇಖಕ ಸಲ್ಮಾನ್‌ ರಶ್ದಿ ಮೇಲೆ ಹಲ್ಲೆ

Salman Rushdie attacked: ನ್ಯೂಯಾರ್ಕ್‌ನಲ್ಲಿ ಲೇಖಕ ಸಲ್ಮಾನ್‌ ರಶ್ದಿ ಮೇಲೆ ಹಲ್ಲೆ

Salman Rushdie stabbed: ಶತಾಕ್ವ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಲೇಖಕ ಸಲ್ಮಾನ್‌ ರಶ್ದಿ ಮೇಲೆ ದಾಳಿ ನಡೆದಿದೆ. ವೇದಿಕೆ ಮೇಲೆ ನುಗ್ಗಿದ ವ್ಯಕ್ತಿಯೊಬ್ಬ ಏಕಾಏಕಿ ಅವರ ಮುಖಕ್ಕೆ ಗುದ್ದಿದ್ದ. ಬಳಿಕ ಇರಿದ. ನೆಲಕ್ಕುರುಳಿದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿ ಪೊಲೀಸ್‌ ವಶದಲ್ಲಿದ್ದಾನೆ.

ವೇದಿಕೆ ಮೇಲೆ ನೆಲಕ್ಕುರುಳಿದ ಸಲ್ಮಾನ್‌ ರಶ್ದಿ ಅವರನ್ನು ಉಪಚರಿಸುತ್ತಿರುವ ಸ್ಥಳೀಯರು
ವೇದಿಕೆ ಮೇಲೆ ನೆಲಕ್ಕುರುಳಿದ ಸಲ್ಮಾನ್‌ ರಶ್ದಿ ಅವರನ್ನು ಉಪಚರಿಸುತ್ತಿರುವ ಸ್ಥಳೀಯರು (AP)

ನ್ಯೂಯಾರ್ಕ್‌: ಪಶ್ಚಿಮ ನ್ಯೂಯಾರ್ಕ್‌ನ ಶತಾಕ್ವ ಇನ್‌ಸ್ಟಿಟ್ಯೂಟ್‌ (Chautauqua Institution) ನಲ್ಲಿ ಕಾರ್ಯಕ್ರಮದಲ್ಲಿ ನಡೆಯುತ್ತಿದ್ದಾಗಲೇ ವೇದಿಕೆಗೆ ನುಗ್ಗಿದ ವ್ಯಕ್ತಿಯೊಬ್ಬ ಸಲ್ಮಾನ್‌ ರಶ್ದಿ ಅವರ ಮೇಲೆ ಏಕಾಕಿಯಾಗಿ ಹಲ್ಲೆ (Salman Rushdie attacked) ನಡೆಸಿ, ಇರಿದ (Salman Rushdie stabbed). ನೆಲಕ್ಕುರುಳಿದ ರಶ್ದಿ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಹಲ್ಲೆಕೋರ ಪೊಲೀಸ್‌ ವಶದಲ್ಲಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಕಾರ್ಯಕ್ರಮದ ವೇದಿಕೆಯಲ್ಲಿ ಅವರನ್ನು ಪರಿಚಯಿಸುತ್ತಿದ್ದ ವೇಳೆ ಈ ದಾಳಿ ನಡೆದಿತ್ತು. ವೇದಿಕೆ ಏರಿದ ವ್ಯಕ್ತಿ ಏಕಾಕಿಯಾಗಿ ಪ್ರಸಿದ್ಧ ಬ್ರಿಟಿಷ್‌ ಲೇಖಕ ಸಲ್ಮಾನ್‌ ರಶ್ದಿ ಅಮರ ಮುಖಕ್ಕೆ ಗುದ್ದಿದ್ದಾನೆ. ಬಳಿಕ ಇರಿದ ಪರಿಣಾಮ ಅವರು ನೆಲಕ್ಕೆ ಉರುಳಿದ್ದರು. ಕೂಡಲೇ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಧಾವಿಸಿದರು. ಅವರನ್ನು ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಲ್ಲೆಕೋರನನ್ನು ಪೊಲೀಸರು ಕೂಡಲೇ ವಶಕ್ಕೆ ತೆಗೆದುಕೊಂಡಿದ್ದಾರೆ.

ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ಅವರ ಬರಹಗಳ ಕಾರಣ ಅವರಿಗೆ ಇರಾನ್‌ನಿಂದ ಅವರಿಗೆ ಕೊಲೆ ಬೆದರಿಕೆಗಳಿದ್ದವು. 1980ರ ದಶಕದಲ್ಲಿನ ಅವರ ಬರಹಗಳು ಇರಾನ್‌ನಲ್ಲಿ ಅವರ ಶತ್ರುಗಳನ್ನು ಹೆಚ್ಚಿಸಿದ್ದವು. ವಿವಾದಗಳು ಪದೇಪದೆ ಅವರನ್ನು ಕಾಡಿವೆ.

"ವೇದಿಕೆಯ ಮೇಲೆ ಓಡಿ ಬಂದ ವ್ಯಕ್ತಿಯೊಬ್ಬ ರಶ್ದಿ ಮತ್ತು ಸಂದರ್ಶಕರ ಮೇಲೆ ಹಲ್ಲೆ ನಡೆಸಿದ. ರಶ್ದಿ ಅವರ ಕುತ್ತಿಗೆಗೆ ಇರಿತದ ಗಾಯವಾಗಿತ್ತು ಮತ್ತು ಹೆಲಿಕಾಪ್ಟರ್ ಮೂಲಕ ಅವರನ್ನು ಪ್ರದೇಶ ಆಸ್ಪತ್ರೆಗೆ ಸಾಗಿಸಲಾಯಿತು. ಅವರ ಸ್ಥಿತಿ ಇನ್ನೂ ತಿಳಿದುಬಂದಿಲ್ಲ" ಎಂದು ಪೊಲೀಸರು ಹೇಳಿದ್ದಾರೆ.

IPL_Entry_Point

ವಿಭಾಗ