ಕನ್ನಡ ಸುದ್ದಿ  /  Nation And-world  /  Ssc Constable Gd Recruitment 2022: Apply For 24369 Posts, Qualification, Salary, Age Limit, Exam And Other Details

SSC GD Constable recruitment 2022: ಸಿಬ್ಬಂದಿ ನೇಮಕಾತಿ ಆಯೋಗದಿಂದ 24,369 ಕಾನ್ಸ್‌ಟೇಬಲ್‌ಗಳ ನೇಮಕ, ಈಗಲೇ ಅರ್ಜಿ ಸಲ್ಲಿಸಿ

ಸಿಬ್ಬಂದಿ ನೇಮಕಾತಿ ಆಯೋಗವು ಜನರಲ್‌ ಡ್ಯೂಟಿ ಕಾನ್ಸ್‌ಟೇಬಲ್‌ ನೇಮಕಕ್ಕೆ (SSC GD Constable recruitment 2022) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌), ಅಸ್ಸಾಂ ರೈಫಲ್ಸ್‌ನಲ್ಲಿ ಎನ್‌ಐಎ, ಎಸ್‌ಎಸ್‌ಎಫ್‌ , ರೈಫಲ್‌ಮೆನ್‌ ಮತ್ತು ನಾರ್ಕೊಟಿಕ್ಸ್‌ ಸೆಂಟ್ರಲ್‌ ಬ್ಯೂರೋದಲ್ಲಿ ಸಫಾಯಿ ಕಾನ್ಸ್‌ಟೇಬಲ್‌ ಹುದ್ದೆಗಳಿವೆ. ಆನ್‌ಲೈನ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸಿಬ್ಬಂದಿ ನೇಮಕಾತಿ ಆಯೋಗದಿಂದ 24,369 ಕಾನ್ಸ್‌ಟೇಬಲ್‌ಗಳ ನೇಮಕ, ಈಗಲೇ ಅರ್ಜಿ ಸಲ್ಲಿಸಿ
ಸಿಬ್ಬಂದಿ ನೇಮಕಾತಿ ಆಯೋಗದಿಂದ 24,369 ಕಾನ್ಸ್‌ಟೇಬಲ್‌ಗಳ ನೇಮಕ, ಈಗಲೇ ಅರ್ಜಿ ಸಲ್ಲಿಸಿ

ಸಿಬ್ಬಂದಿ ನೇಮಕಾತಿ ಆಯೋಗವು ಜನರಲ್‌ ಡ್ಯೂಟಿ ಕಾನ್ಸ್‌ಟೇಬಲ್‌ ನೇಮಕಕ್ಕೆ (SSC GD Constable recruitment 2022) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌), ಅಸ್ಸಾಂ ರೈಫಲ್ಸ್‌ನಲ್ಲಿ ಎನ್‌ಐಎ, ಎಸ್‌ಎಸ್‌ಎಫ್‌ , ರೈಫಲ್‌ಮೆನ್‌ ಮತ್ತು ನಾರ್ಕೊಟಿಕ್ಸ್‌ ಸೆಂಟ್ರಲ್‌ ಬ್ಯೂರೋದಲ್ಲಿ ಸಫಾಯಿ ಕಾನ್ಸ್‌ಟೇಬಲ್‌ ಹುದ್ದೆಗಳಿವೆ. ಆನ್‌ಲೈನ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 24,369 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದರಿಂದ ದೇಶದ ಸಾಕಷ್ಟು ಜನರಿಗೆ ಉದ್ಯೋಗಾವಕಾಶ ದೊರಕಲಿದ್ದು, ನಿಮ್ಮ ಅರ್ಹತೆ, ವಯೋಮಿತಿ ಇತ್ಯಾದಿಗಳನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಕಂಪ್ಯೂಟರ್‌ ಆಧರಿತ ಪರೀಕ್ಷೆ (ಸಿಬಿಇ) ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ನಡೆಯಲಿದೆ. ಈಗಾಗಲೇ ರಾಜ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಈ ಹಿಂದಿನ ಎಸ್‌ಎಸ್‌ಸಿ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸದೆ ಇರುವ ಕುರಿತು ತನ್ನ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಿದ್ದರೂ, ಕನ್ನಡಿಗರ ಕೂಗು ಎಸ್‌ಎಸ್‌ಸಿಗೆ ಇನ್ನೂ ತಲುಪಿದಂತೆ ಕಾಣುತ್ತಿಲ್ಲ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಆರಂಭ: 27-10-2022

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2022

ಆನ್‌ಲೈನ್‌ ಅರ್ಜಿ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳಲು ಕೊನೆಯ ದಿನಾಂಕ: 30-11-2022 (23:00)

ಆಫ್‌ಲೈನ್‌ ಚಲನ್‌ ಸೃಜಿಸಿಕೊಳ್ಳಲು ಕೊನೆಯ ದಿನಾಂಕ: 30-11-2022(23:00)

ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 01-12-2022(23:00)

ಚಲನ್‌ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 01-12-2022- ಬ್ಯಾಂಕ್‌ ಕೆಲಸದ ಅವಧಿಯಲ್ಲಿ

ಕಂಪ್ಯೂಟರ್‌ ಆಧರಿತ ನೇಮಕಾತಿ ಪರೀಕ್ಷೆ ನಡೆಯುವ ನಿರೀಕ್ಷಿತ ದಿನಾಂಕ: ಜನವರಿ, 2023

ವೇತನ ಎಷ್ಟು? (SSC GD Constable recruitment 2022- Salary)

ಎನ್‌ಸಿಬಿ ವಿಭಾಗದ ಸಫಾಯಿ ಹುದೆಗಳಿಗೆ 18,000 to 56,900 ವೇತನ ನೀಡಲಾಗುತ್ತದೆ. ಇತರೆ ವಿಭಾಗದ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ 21,700-69,100 ರೂಪಾಯಿ ವೇತನ ಶ್ರೇಣಿ ಇರುತ್ತದೆ.

ಎಲ್ಲಿ ಎಷ್ಟು ಹುದ್ದೆಗಳಿವೆ?

ಪುರುಷ ಅಭ್ಯರ್ಥಿಗಳಿಗೆ ಲಭ್ಯವಿರುವ ಹುದ್ದೆಗಳು

ಬಿಎಸ್‌ಎಫ್‌-8922, ಸಿಐಎಸ್‌ಎಫ್‌ 90, ಸಿಆರ್‌ಪಿಎಫ್‌ 8380, ಎಸ್‌ಎಸ್‌ಬಿ 1041, ಐಟಿಬಿಪಿ 1371, ಎಆರ್‌ 1697, ಎಸ್‌ಎಸ್‌ಎಫ್‌ 78 ಸೇರಿದಂತೆ ಒಟ್ಟು 21579 ಹುದ್ದೆಗಳನ್ನು ಪುರುಷ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗದ ಹುದ್ದೆಗಳು

ಬಿಎಸ್‌ಎಫ್‌-1575, ಸಿಐಎಸ್‌ಎಫ್‌ 10, ಸಿಆರ್‌ಪಿಎಫ್‌ 531, ಎಸ್‌ಎಸ್‌ಬಿ 243, ಐಟಿಬಿಪಿ 242, ಎಆರ್‌ 0, ಎಸ್‌ಎಸ್‌ಎಫ್‌ 25 ಸೇರಿದಂತೆ ಒಟ್ಟು2626 ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?

01-01-2023 ದಿನಾಂಕಕ್ಕೆ ಅನ್ವಯವಾಗುವಂತೆ 18-23 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂದರೆ 02-01-2000ರ ಮೊದಲು ಮತ್ತು 01-01-2005 ನಂತರ ಜನಿಸಿದವರು ಅರ್ಜಿ ಸಲ್ಲಿಸುವಂತೆ ಇಲ್ಲ. ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ನೀಡಲಾಗುತ್ತದೆ.

ವಿದ್ಯಾರ್ಹತೆ ಏನು?

ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್‌ ಅಥವಾ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಎನ್‌ಸಿಸಿ ಸರ್ಟಿಫಿಕಷೇನ್‌ ಹೊಂದಿರುವವರಿಗೆ (ಸಿ-ಶೇಕಡ 5, ಬಿ- 3 ಮತ್ತು ಎ-2) ಹೊಂದಿರುವವರಿಗೆ ಇನ್ಸೆಂಟಿವ್‌, ಬೋನಸ್‌ ಮಾರ್ಕ್ಸ್‌ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ ಮೋಡ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಜೆಪಿಇಜಿ ಫಾರ್ಮ್ಯಾಟ್‌ನಲ್ಲಿ ಪಾಸ್‌ಪೋರ್ಟ್‌ ಗಾತ್ರದ ಕಲರ್‌ ಫೋಟೊ ಸಿದ್ಧವಾಗಿಟ್ಟುಕೊಳ್ಳಿ. ಅರ್ಜಿ ಸಲ್ಲಿಸಲು ಉದ್ದೇಶಿಸಿರುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಿ ಎಂದು ಎಸ್‌ಎಸ್‌ಸಿ ಸೂಚಿಸಿದೆ. ಇಲ್ಲವಾದರೆ, ವೆಬ್‌ಗೆ ಲಾಗಿನ್‌ ತೊಂದರೆ, ತಾಂತ್ರಿಕ ತೊಂದರೆಗಳು ಎದುರಾಗಬಹುದು.

ಅರ್ಜಿ ಶುಲ್ಕ ಎಷ್ಟು?

100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಶುಲ್ಕ ಪಾವತಿಸಭೇಕಿಲ್ಲ. ಭೀಮ್‌, ಯುಪಿಐ, ನೆಟ್‌ಬ್ಯಾಂಕಿಂಗ್‌ ಇತ್ಯಾದಿ ಆನ್‌ಲೈನ್‌ ಪಾವತಿ ವಿಧಾನಗಳ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರ ಎಲ್ಲಿ?

ಕರ್ನಾಟಕದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಗಳಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಯಲಿದೆ.

ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದಿಕೊಳ್ಳಿ. ಅಧಿಸೂಚನೆಯ ಪಿಡಿಎಫ್‌ ಪ್ರತಿಯನ್ನು ಈ ಕೆಳಗೆ ನೀಡಲಾಗಿದೆ.

IPL_Entry_Point