ಕನ್ನಡ ಸುದ್ದಿ  /  Nation And-world  /  Ugc Net Exams: Ugc Net Phase 3 Exams Tomorrow, Admit Card Out On Ugcnet.nta.nic.in

UGC NET phase 3 exams: ನೆಟ್‌ ಫೇಸ್‌ 3 ಎಕ್ಸಾಂ ನಾಳೆ ಶುರು; ugcnet.nta.nic.in ನಿಂದ ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್‌ ಮಾಡಿ

UGC NET phase 3 exams: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುಜಿಸಿ ನೆಟ್ ಫೇಸ್‌ 3 ಪರೀಕ್ಷೆಗಳನ್ನು ಸೆಪ್ಟೆಂಬರ್ 23 ರಂದು ಅಂದರೆ ನಾಳೆಯಿಂದ ಶುರುಮಾಡುತ್ತಿದೆ. ಈ ಪರೀಕ್ಷೆಯ ಅಡ್ಮಿಟ್‌ ಕಾರ್ಡ್‌ಗಳನ್ನು ತನ್ನ ಅಧಿಕೃತ ವೆಬ್‌ಸೈಟ್ ugcnet.nta.nic.in ನಲ್ಲಿ ಬಿಡುಗಡೆ ಮಾಡಿದೆ.

ಯುಜಿಸಿ ನೆಟ್ ಫೇಸ್‌ 3 ಪರೀಕ್ಷೆಗಳು ಸೆಪ್ಟೆಂಬರ್ 23 ರಂದು ಅಂದರೆ ನಾಳೆಯಿಂದ ಶುರುವಾಗುತ್ತಿದೆ. (Reuters)
ಯುಜಿಸಿ ನೆಟ್ ಫೇಸ್‌ 3 ಪರೀಕ್ಷೆಗಳು ಸೆಪ್ಟೆಂಬರ್ 23 ರಂದು ಅಂದರೆ ನಾಳೆಯಿಂದ ಶುರುವಾಗುತ್ತಿದೆ. (Reuters)

ಯುಜಿಸಿ ನೆಟ್ ಫೇಸ್‌ 3 ಪರೀಕ್ಷೆಗಳು ಸೆಪ್ಟೆಂಬರ್ 23 ರಂದು ಅಂದರೆ ನಾಳೆಯಿಂದ ಶುರುವಾಗುತ್ತಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA)ಯು ಈ ಪರೀಕ್ಷೆಯ ಅಡ್ಮಿಟ್‌ ಕಾರ್ಡ್‌ಗಳನ್ನು ತನ್ನ ಅಧಿಕೃತ ವೆಬ್‌ಸೈಟ್ ugcnet.nta.nic.in ನಲ್ಲಿ ಬಿಡುಗಡೆ ಮಾಡಿದೆ. ನಾಳೆ ಯುಜಿಸಿ ನೆಟ್‌ ಅಸ್ಸಾಮೀಸ್‌, ಬೆಂಗಾಳಿ, ಬೋಡೊ ಮತ್ತು ಉರ್ದು ವಿಷಯಗಳ ಮೇಲೆ ನಡೆಯಲಿದೆ.

ಈ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಅವರ ಅಡ್ಮಿಟ್‌ ಕಾರ್ಡ್‌ಗಳನ್ನು ugcnet.nta.nic.in  ವೆಬ್‌ಸೈಟ್‌ನಲ್ಲಿ ತಮ್ಮ ಲಾಗಿನ್‌ ಕ್ರೆಡೆನ್ಶಿಯಲ್‌ ಬಳಸಿಕೊಂಡು ಡೌನ್‌ಲೋಡ್‌ ಮಾಡಬಹುದು. ಅಲ್ಲದೆ ಪರೀಕ್ಷೆ ಸಂಬಂಧಿತ ಎಲ್ಲ ಮಾಹಿತಿಗಳಿಗೆ ಎನ್‌ಟಿಎಯ ಅಧಿಕೃತ ವೆಬ್‌ಸೈಟ್‌ www.nta.ac.in ಅನ್ನು ಪರಿಶೀಲಿಸುತ್ತಿರಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

ಯುಜಿಸಿ ನೆಟ್‌ ಫೇಸ್‌ 3 ಎಕ್ಸಾಂಗಳು ಸೆ.23, 29, 30 ಮತ್ತು ಅಕ್ಟೋಬರ್‌ 1, 8,10, 11, 12, 13 ಮತ್ತು 14ರಂದು ನಡೆಯಲಿವೆ.

UGC NET ಫೇಸ್‌ 3 ಎಕ್ಸಾಂ: ಪೂರ್ಣ ವೇಳಾಪಟ್ಟಿಗೆ ಇಲ್ಲಿ ಗಮನಿಸಿ

ಸೆ.23 - ಅಸ್ಸಾಮೀಸ್‌, ಬೆಂಗಾಳಿ, ಬೋಡೋ, ಉರ್ದು
ಸೆ.29 - ಕಾಮರ್ಸ್‌, ಇಲೆಕ್ಟ್ರಾನಿಕ್‌ ಸೈನ್ಸ್‌, ವಿಷುವಲ್‌ ಆರ್ಟ್‌ (ಡ್ರಾಯಿಂಗ್‌ & ಪೇಂಟಿಂಗ್‌/ಸ್ಕ್ಲಪ್ಚರ್‌ ಗ್ರಾಫಿಕ್ಸ್‌/ ಅಪ್ಲೈಡ್‌ ಆರ್ಟ್‌/ ಕಲೆಯ ಇತಿಹಾಸ ಸೇರಿ)

ಸೆ. 30 - ಪರಿಸರ ವಿಜ್ಞಾನ, ಹಿಂದಿ, ಮ್ಯಾನೇಜ್‌ಮೆಂಟ್‌ (ಬಿಜಿನೆಸ್‌ ಅಡ್ಮಿನಿಸ್ಟ್ರೇಶನ್‌ ಮ್ಯಾನೇಜ್‌ಮೆಂಟ್‌/ ಮಾರ್ಕೆಟಿಂಘ್‌/ ಮಾರ್ಕೆಟಿಂಗ್‌ ಮ್ಯಾನೇಜ್‌ಮೆಂಟ್‌/ ಇಂಡಸ್ಟ್ರಿಯಲ್‌ ರಿಲೇಶನ್ಸ್‌ ಆಂಡ್‌ ಪರ್ಸನಲ್‌ ಮ್ಯಾನೇಜ್‌ಮೆಂಟ್‌/ ಪರ್ಸನಲ್‌ ಮ್ಯಾನೇಜ್‌ಮೆಂಟ್‌/ ಹಣಕಾಸು ನಿರ್ವಹಣೆ/ ಸಹಕಾರ ನಿರ್ವಹಣೆ ಸೇರಿ)

ಅ.1 - ಕನ್ನಡ, ಮಲಯಾಳಂ, ಮರಾಠಿ, ಪಂಜಾಬಿ, ಸೋಷಿಯಲ್‌ ವರ್ಕ್‌, ಸಮಾಜಶಾಸ್ತ್ರ, ತೆಲುಗು

ಅ. 8 - ಕಂಪ್ಯೂಟರ್ ಸೈನ್ಸ್ ಮತ್ತು ಅಪ್ಲಿಕೇಶನ್ಸ್, ಅರ್ಥಶಾಸ್ತ್ರ / ಗ್ರಾಮೀಣ ಅರ್ಥಶಾಸ್ತ್ರ / ಸಹಕಾರ / ಜನಸಂಖ್ಯಾಶಾಸ್ತ್ರ / ಅಭಿವೃದ್ಧಿ ಯೋಜನೆ / ಅಭಿವೃದ್ಧಿ ಅಧ್ಯಯನಗಳು / ಅರ್ಥಶಾಸ್ತ್ರ / ಅನ್ವಯಿಕ ಅರ್ಥಶಾಸ್ತ್ರ / ಅಭಿವೃದ್ಧಿ ಅರ್ಥಶಾಸ್ತ್ರ / ವ್ಯಾಪಾರ ಅರ್ಥಶಾಸ್ತ್ರ

ಅ. 10 - ಇತಿಹಾಸ

ಅ. 11 - ಮಾನವಶಾಸ್ತ್ರ, ಸಂಗೀತ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ

ಅ. 12 - ಶಿಕ್ಷಣ, ಭೂಗೋಳ, ಒಡಿಯಾ, ತಮಿಳು

ಅ. 13 - ಇಂಗ್ಲಿಷ್

ಅ.14 - ವಯಸ್ಕರ ಶಿಕ್ಷಣ/ಮುಂದುವರಿದ ಶಿಕ್ಷಣ/ ಆಂಡ್ರಾಗೋಗಿ/ಅನೌಪಚಾರಿಕ ಶಿಕ್ಷಣ, ವಿಧಿವಿಜ್ಞಾನ, ಕಾನೂನು, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ತತ್ವಶಾಸ್ತ್ರ, ಸಂಸ್ಕೃತ ಮತ್ತು ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣೆ.

ಈ ಪರೀಕ್ಷೆಯು 2021ರ ಡಿಸೆಂಬರ್ ಮತ್ತು 2022 ಜೂನ್ ಪರೀಕ್ಷೆ ವಿಲೀನಗೊಂಡಿರುವ ಪರೀಕ್ಷೆಯಾಗಿದೆ. ಪರೀಕ್ಷೆಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೋಡ್‌ನಲ್ಲಿ ನಡೆಸಲಾಗುವುದು ಎಂದು ಎನ್‌ಟಿಎ ಪ್ರಕಟಿಸಿದೆ.

UGC NET 2022 ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಮತ್ತು 'JRF ಮತ್ತು ಸಹಾಯಕ ಪ್ರಾಧ್ಯಾಪಕರ ಅರ್ಹತೆ' ಮತ್ತು 'ಅಸಿಸ್ಟೆಂಟ್ ಪ್ರೊಫೆಸರ್'ಗೆ ಪರಿಗಣಿಸಲು, ಅಭ್ಯರ್ಥಿಯು ಎರಡೂ ಪತ್ರಿಕೆಗಳಲ್ಲಿ ಕಾಣಿಸಿಕೊಂಡಿರಬೇಕು ಮತ್ತು ಒಟ್ಟಿಗೆ ತೆಗೆದುಕೊಂಡ ಎರಡೂ ಪತ್ರಿಕೆಗಳಲ್ಲಿ ಕನಿಷ್ಠ 40% ಒಟ್ಟು ಅಂಕಗಳನ್ನು ಗಳಿಸಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳು 35% ಅಂಕಗಳನ್ನು ಗಳಿಸಬೇಕಾಗುತ್ತದೆ.

IPL_Entry_Point